5 ನಿರ್ಣಯಗಳೊಂದಿಗೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ; ಕಲಬುರ್ಗಿಯಲ್ಲಿ ಮುಂದಿನ ಅಕ್ಷರ ಜಾತ್ರೆ

ಮೂರು ದಿನಗಳಿಂದ ನಡದ ಅಕ್ಷರ ಜಾತ್ರೆ ಅದ್ಧೂರಿ ತೆರೆ ಕಂಡಿದೆ. ಸಮ್ಮೇಳನದಲ್ಲಿ ಪ್ರಮುಖವಾಗಿ 5 ನಿರ್ಣಯ ಕೈಗೊಳ್ಳಲಾಯಿತು. ಜತೆಗೆ ವರಕವಿ ದ.ರಾ ಬೇಂದ್ರೆ ಮನೆ ಅಲಂಕರಿಸಿಲ್ಲ ಎಂದು ಅಭಿಮಾನಿಗಳು ಧರಣಿ ನಡೆಸಿದ್ರು..

Vijayasarthy SN | news18india
Updated:January 6, 2019, 11:01 PM IST
5 ನಿರ್ಣಯಗಳೊಂದಿಗೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ; ಕಲಬುರ್ಗಿಯಲ್ಲಿ ಮುಂದಿನ ಅಕ್ಷರ ಜಾತ್ರೆ
ಧಾರವಾಡದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಫಲಕ
Vijayasarthy SN | news18india
Updated: January 6, 2019, 11:01 PM IST
- ಚಂದ್ರಕಾಂತ ಸುಗಂಧಿ / ಪರಶುರಾಮ್ ತಹಶೀಲ್ದಾರ್,

ಧಾರವಾಡ(ಜ. 06): ಪೇಡಾ ನಗರಿ ತುಂಬೆಲ್ಲ ಕನ್ನಡ ಬಾವುಟ, ಫ್ಲೆಕ್ಸ್ ಕಂಡು ಬಂದ್ರೆ, ಕೃಷಿ ವಿವಿಯ ಆವರಣದಲ್ಲಿ ಪುಸ್ತಕ ಮಾರಾಟದ ಭರಾಟೆ ನಡೆಯಿತು. ಇನ್ನು, ಸಮ್ಮೇಳನದ ಮುಖ್ಯ ವೇದಿಕೆ ಅಂಬಿಕಾತನಯದ ದತ್ತ ವೇದಿಕೆಯಲ್ಲಿ ಕನ್ನಡ ಭಾಷೆ, ನಾಡು, ನುಡಿಯ ಬಗ್ಗೆ ಹಲವು ಚಿಂತನ ಮಂಥನ ನಡೆದವು. ಇಂದು ಬೆಳಗ್ಗೆ ಸಾಧಕರಿಗೆ ಸನ್ಮಾನಿಸಲಾಯಿತು. ಮಧ್ಯಾಹ್ನ ಸಮ್ಮೇಳನಾಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಅವರ ಸಂವಾದ ಕಾರ್ಯಕ್ರಮ ನಡೆಯಿತು.

ಸಾಧಕರಿಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಪಾಲ್ಗೊಂಡಿದ್ರು. ಈ ವೇಳೆ ಮಾತನಾಡಿದ ಯಡಿಯೂರಪ್ಪ, ಅಂತರಾಷ್ಟ್ರೀಯ ಭಾಷೆಯಾದ ಇಂಗ್ಲಿಷ್ ಕಲಿಯಬೇಕು. ಆದರೆ, ನಾಡ ಭಾಷೆ ಕನ್ನಡವನ್ನು ಕಡೆಗಣಿಸಬಾರದು. ರಾಜ್ಯದಲ್ಲಿ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಿದೆ. ನಾನು ಸಿಎಂ ಆಗಿದ್ದಾಗ ನಂಜುಂಡಪ್ಪ ವರದಿ ಜಾರಿಯಾಗಿದ್ದೆ. ಸರ್ಕಾರ ಅಖಂಡ ಕರ್ನಾಟಕ ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ: ಅನುಮಾನ ಪಿಶಾಚಿ ಗಂಡನ ಕ್ರೌರ್ಯ: ರಕ್ತದ ಮಡುವಿನಲ್ಲಿ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟ ಮಹಿಳೆ

ಇದೇ ವೇಳೆ, ಧಾರವಾಡದ ವರಕವಿ ದ.ರಾ. ಬೇಂದ್ರೆ ಅವರ ಮನೆಯನ್ನು ಅಲಂಕರಿಸಿ ಎಂದು ಬೇಂದ್ರೆ ಅಭಿಮಾನಿಗಳು ಒತ್ತಾಯಿಸಿದರು. ಸಮ್ಮೇಳನದ ಮುಖ್ಯ ವೇದಿಕೆಯ ಬಳಿಯ ಜಮಾವಣೆಗೊಂದು ಆಯೋಜಕರ ವಿರುದ್ಧ ಘೋಷಣೆ ಹಾಕಿದ್ರು. ಧಾರವಾಡವು ವರಕವಿ ಬೇಂದ್ರೆ ಹುಟ್ಟಿ ಬೆಳೆದ ನಾಡಾಗಿದೆ. ಆದರೇ ಇದೇ ನಾಡಿನಲ್ಲಿ ಸಾಹಿತ್ಯ ಸಮ್ಮೇಳನ ನಡೆದರೂ ಅವರಿಗೆ ಗೌರವ ಸಲ್ಲಿಸಿಲ್ಲ ಎಂದು ಆರೋಪಿಸಿದ್ರು. ಚಿಕ್ಕಮಗಳೂರು ಜಿಲ್ಲೆಯ ಬೇಂದ್ರೆ ಅಭಿಮಾನಿಗಳು ಧರಣಿ ನಡೆಸಿದ್ರು.

ಈ 84ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಐದು ಪ್ರಮುಖ ನಿರ್ಣಯಗಳನ್ನು ಮಂಡಿಸಲಾಗಿದೆ.

1) ಸಮ್ಮೇಳನ ಯಶಸ್ವಿಗೊಳಿಸಿದ ಸರ್ವರಿಗೂ ಹೃತ್ಪೂರ್ವಕ ಅಭಿನಂದನೆ.
Loading...

2) ನಾಡಗೀತೆ ಹಾಡುವ ಅವಧಿಯನ್ನು 2 ನಿಮಿಷ 30ಸೆಕೆಂಡುಗಳಿಗೆ ಸರ್ಕಾರ ನಿಗದಿಪಡಿಸಬೇಕು.
3) ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆ ತೆರೆಯುವ ನಿರ್ಣಯವನ್ನು ಸರ್ಕಾರ ಕೈಬಿಡಬೇಕು.
4) ಕೇಂದ್ರ ಸರ್ಕಾರದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸಬೇಕು.
5) ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣ ಮಾಡಬೇಕು

ಇವೇ ಐದು ನಿರ್ಣಯ ಮಂಡಿಸಲಾಗಿದೆ. ಸಮ್ಮೇಳನಾಧ್ಯಕ್ಷರ ಜತೆಗೆ ಮುಖ್ಯ ವೇದಿಕೆಯಲ್ಲಿ ನಡೆದ ಸಂವಾದದಲ್ಲಿ ಬುದ್ದಿಜೀವಿಗಳ ಹತ್ಯೆಯನ್ನು ಖಂಡಿಸಲಾಯಿತು. ಕುಂಭಮೇಳ ಬಗ್ಗೆ ಸಮ್ಮೇಳನಾಧ್ಯಕ್ಷರಿಗೆ ಪ್ರಶ್ನಿಸಲಾಯಿತು.

ಇದನ್ನೂ ಓದಿ: ರಿಷಭ್ ಪಂತ್ ಮತ್ತೊಬ್ಬ ಗಿಲ್​ಕ್ರಿಸ್ಟ್​: ಲೆಜೆಂಡ್​ ಆಟಗಾರನಿಂದ ಪ್ರಶಂಸೆ

ಇನ್ನು, ಸಮ್ಮೇಳನದಲ್ಲಿ ಲಕ್ಷಾಂತರ ಜನ ಪಾಲ್ಗೊಂಡು ಯಶಸ್ಸಿಗೆ ಶ್ರಮಿಸಿದ್ರು. ಮುಂದಿನ, ಅಂದರೆ 85ನೇ ಸಾಹಿತ್ಯ ಸಮ್ಮೇಳನವು ಕಲಬುರ್ಗಿಯಲ್ಲಿ ನಿಗದಿಯಾಗಿದ್ದು, ಅಲ್ಲಿನ ಸಾಹಿತಿಗಳು ಇಂದು ಕಲಬುರ್ಗಿಗೆ ಸ್ವಾಗತ ಕೋರಿದ್ರು. ಒಟ್ಟಾರೆ ಧಾರವಾಡದಲ್ಲಿ ಚಂದ್ರಶೇಖರ್ ಕಂಬಾರ್ ಅಧ್ಯಕ್ಷತೆಯಲ್ಲಿ ನಡೆದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸು ಕಂಡಿದೆ. ಕುಮಾರಸ್ವಾಮಿ ಅವರು ಉದ್ಘಾಟಿಸಿದ್ದ ಈ ಅಕ್ಷರ ಜಾತ್ರೆಯಲ್ಲಿ ಕನ್ನಡ ನಾಡಿದ ಜ್ವಲಂತ ಸಮಸ್ಯೆಗಳ ಬಗ್ಗೆ ಚಿಂಥನ, ಮಂಥನ ನಡೆಯಿತು.
First published:January 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ