ಬೆಂಗಳೂರು: ಅವರು 80 ವರ್ಷದ ವೃದ್ಧೆ (Grand Mother) ವಯೋಸಹಜ ಕಾಯಿಲೆ ಇಂದ ಬಳಲುತ್ತಿದ್ದ ಅವರು, ಎದ್ದು ಓಡಾಡಲಾಗದೇ ಹಾಸಿಗೆ ಹಿಡಿದಿದ್ದರು. ಆದರೆ ಮನೆಗೆ ಬಂದ ಸೊಸೆ (Daughter in Law) ಎಲ್ಲರ ಮೇಲೂ ವರದಕ್ಷಿಣೆ ಕಿರುಕುಳ ಕೇಸ್ (Dowry Harassment Case) ಹಾಕಿದ್ದಳು. ಎದ್ದು ಓಡಾಡಲಾಗದ 80 ವರ್ಷದ ಅಜ್ಜಿ ಮೇಲೂ ಕೇಸ್ ಬಿದ್ದಿತ್ತು. ಇದೀಗ ಈ ಕೇಸ್ ವಿಚಾರಣೆ ನಡೆಸಿದ ನ್ಯಾಯಾಲಯ (Court) ಡೌರಿ ಕೇಸ್‌ನಿಂದ ಅಜ್ಜಿಗೆ ರಿಲೀಫ್ ನೀಡಿದೆ. ಚಿತ್ರದುರ್ಗ (Chitradurga) ಮೂಲದ ಮೊಹಮ್ಮದ್ ಶಮೀರ್ ಎಂಬುವರು ಮತ್ತು ಅವರ 80 ವರ್ಷದ ಹಾಸಿಗೆ ಹಿಡಿದ ಅಜ್ಜಿ ಸೇರಿದಂತೆ ಅವರ ಕುಟುಂಬ ಸದಸ್ಯರಿಗೆ (Family Member) ಪರಿಹಾರ ನೀಡುವಂತೆ ಕರ್ನಾಟಕ ಹೈಕೋರ್ಟ್ ದಾವಣಗೆರೆ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ ಕ್ರಿಮಿನಲ್ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸಿದೆ.
ಮೊದಲು ಅನ್ಯೋನ್ಯವಾಗಿದ್ದು ನಂತರ ಬೇರೆಯಾದ ದಂಪತಿ
ಚಿತ್ರದುರ್ಗ ಮೂಲದ ಶಮೀರ್ ಹಾಗೂ ಅವರ ಕುಟುಂಬಸ್ಥರ ಮೇಲೆ ಅವರ ಪತ್ನಿ ಜಾಸ್ಮಿನ್ ಎಂಬುವರ ವರದಕ್ಷಿಣೆ ಕಿರುಕುಳ ನೀಡಿದ್ದಾಗಿ ಕೇಸ್ ದಾಖಲಿಸಿದ್ದರು. ಶಮೀರ್ ಮತ್ತು ಜಾಸ್ಮಿನ್ ಇಬ್ಬರು ಅಕ್ಟೋಬರ್ 24, 2020 ರಂದು ವಿವಾಹವಾಗಿದ್ದರು. ಮೊದಲು ಅನ್ಯೋನ್ಯವಾಗೇ ಇದ್ದ ದಂಪತಿ, ಆಮೇಲೆ ದೂರ ದೂರ ಆದರು. ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಪ್ರಾರಂಭವಾದವು . ನಾನು ಗಂಡನ ಮನೆಯಲ್ಲಿ ಇರುವುದಿಲ್ಲ, ಅವನ ಜೊತೆ ಬಾಳುವುದಿಲ್ಲ ಅಂತ ಆಕೆ ತನ್ನ ಹೆತ್ತವರ ಮನೆಗೆ ಮರಳಿದಳು.
ಶಮೀರ್ ಕುಟುಂಬಸ್ಥರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ
ಚಿತ್ರದುರ್ಗದ ಶಮೀರ್ ಅವರ ಪತ್ನಿ ಡಿ.ಎನ್.ಜಾಸ್ಮಿನ್ ಅವರು ನೀಡಿದ ದೂರಿನ ಆಧಾರದ ಮೇಲೆ ಅವರ ವಿರುದ್ಧ ವರದಕ್ಷಿಣೆ ಕಿರುಕುಳ, ಹಲ್ಲೆ ಮತ್ತು ಇತರ ಅಪರಾಧಗಳಿಗಾಗಿ ಭಾರತೀಯ ದಂಡ ಸಂಹಿತೆ ಮತ್ತು ವರದಕ್ಷಿಣೆ ನಿಷೇಧ ಕಾಯಿದೆ, 1961 ರ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ವಿಚಾರಣೆಯನ್ನು ಪ್ರಾರಂಭಿಸಲಾಗಿತ್ತು.
ಜಾಸ್ಮಿನ್ ವಿರುದ್ಧ ಸಿವಿಲ್ ಮೊಕದ್ದಮೆ ಹೂಡಿದ ಶಮೀರ್
ಇತ್ತ ಶಮೀರ್ ಮಾರ್ಚ್ 2021 ರಲ್ಲಿ ಜಾಸ್ಮಿನ್ ವಿರುದ್ಧ ಸಿವಿಲ್ ಮೊಕದ್ದಮೆ ಹೂಡಿದರು . ಈ ವೇಳೆ ನ್ಯಾಯಯಾಲಯವು ಮನೆಯ ವಿಷಯಗಳಲ್ಲಿ ಮಧ್ಯಪ್ರವೇಶಿಸದಂತೆ ನಿರ್ಬಂಧಿಸಿತು. ಮೂರು ತಿಂಗಳ ನಂತರ, ಅವರು ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದರು. ವರದಕ್ಷಿಣೆ ಕಿರುಕುಳದ ಹೊರತಾಗಿ ತನ್ನನ್ನು ಕೊಲ್ಲಲು ಯತ್ನಿಸಿದ್ದಾನೆ ಎಂದು ಜಾಸ್ಮಿನ್ ತನ್ನ ಪತಿ ಮತ್ತು ಆತನ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದಾರೆ.
80 ವರ್ಷದ ಅಜ್ಜಿ ಮೇಲೂ ಬಿದ್ದಿತ್ತು ಕೇಸ್
ಶಮೀರ್ ಕುಟುಂಬಸ್ಥರ ಮೇಲೆ ಕೇಸ್ ಹಾಕಿದ್ದ ಜಾಸ್ಮಿನ್, 80 ವರ್ಷದ ಅಜ್ಜಿ ಹೆಸರನ್ನೂ ಉಲ್ಲೇಖಿಸಿದ್ದರು. ಆದರೆ ಇದರ ವಿಚಾರಣೆಯನ್ನು ಕೋರ್ಟ್ ಕೈಗೆತ್ತಿಕೊಂಡಿತು.
ನೋಟಿಸ್‌ಗೆ ಯಾವುದೇ ಉತ್ತರ ನೀಡದ ಜಾಸ್ಮಿನ್
ದೂರಿನಲ್ಲಿ ಹೆಸರಿಸಲಾದ ಗಂಡನ 80 ವರ್ಷದ ಅಜ್ಜಿಯ ಉದಾಹರಣೆಯನ್ನು ಉಲ್ಲೇಖಿಸಿದ ಅರ್ಜಿದಾರರು, ಕಾನೂನಿನ ಪ್ರಕ್ರಿಯೆಯ ದುರುಪಯೋಗದ ಉತ್ತಮ ಪ್ರಕರಣ ಇರಲು ಸಾಧ್ಯವಿಲ್ಲ ಎಂದು ಹೇಳಿದರು. ನೋಟಿಸ್‌ಗೆ ಜಾಸ್ಮಿನ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಮತ್ತು ಆರೋಪಪಟ್ಟಿ ಸಲ್ಲಿಕೆಯಾಗಿರುವುದರಿಂದ ವಿಚಾರಣಾ ನ್ಯಾಯಾಲಯಕ್ಕೆ ಪ್ರಕರಣದಲ್ಲಿ ಮುಂದುವರಿಯಲು ಅವಕಾಶ ನೀಡಬೇಕು ಎಂದು ಸರ್ಕಾರಿ ವಕೀಲರು ವಾದಿಸಿದರು.
ನ್ಯಾಯಪೀಠ ಹೇಳಿದ್ದೇನು?
ನ್ಯಾಯಮೂರ್ತಿ ಅವರು ಯಾವುದೇ ಆರೋಪಗಳಿಲ್ಲದೆ ಕುಟುಂಬದ ಪ್ರತಿಯೊಬ್ಬ ಸದಸ್ಯರನ್ನು ಈ ಪ್ರಕ್ರಿಯೆಗೆ ಎಳೆದುಕೊಂಡು ಹೋಗಿದ್ದಾರೆ ಮತ್ತು ಆರೋಪಪಟ್ಟಿಯಲ್ಲಿನ ದೂರು ಮತ್ತು ಸಾರಾಂಶದಲ್ಲಿ "ಒಬ್ಬ ಹಾಸಿಗೆ ಹಿಡಿದ ಮಹಿಳೆಯನ್ನು ಅಸ್ಪಷ್ಟ ಹೇಳಿಕೆಗಳ ಮೇಲೆ ಆರೋಪಿಯನ್ನಾಗಿ ಮಾಡಲಾಗಿದೆ ಅಂತ ಹೇಳಿದ್ದಾರೆ.
ಇದನ್ನೂ ಓದಿ: SSLC Results: ಎರಡು ಬಿಬಿಎಂಪಿ ಶಾಲೆಗಳಲ್ಲಿ ಶೂನ್ಯ ಫಲಿತಾಂಶ: ಮುಖ್ಯೋಪಾಧ್ಯಯರಿಗೆ ಶೋಕಾಸ್ ನೋಟಿಸ್, ಶಿಕ್ಷಕರ ವಜಾ
ಅಜ್ಜಿಗೆ ರಿಲೀಫ್ ನೀಡಿದ ನ್ಯಾಯಪೀಠ
ಐಪಿಸಿ ಸೆಕ್ಷನ್ 323 (ಹಲ್ಲೆ) ಅನ್ವಯವಾಗಿದ್ದರೂ, ದೂರುದಾರರನ್ನು ಕೊಲ್ಲುವ ಪ್ರಯತ್ನವನ್ನು ಪತಿ ಮಾಡಿದ್ದಾನೆ ಎಂದು ಸಾಧಿಸಲು ಯಾವುದೇ ಪುರಾವೆಗಳನ್ನು ಒದಗಿಸಲಾಗಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ "ಈ ಆರೋಪವನ್ನು ಹೊರತುಪಡಿಸಿ, ಪತಿ ಮತ್ತು ಇತರ ಕುಟುಂಬದ ಸದಸ್ಯರ ಮೇಲಿನ ಎಲ್ಲಾ ಆರೋಪಗಳು ಸಾಮಾನ್ಯವಾಗಿದೆ. ಅರ್ಜಿದಾರರ ವಿರುದ್ಧ ಯಾವುದೇ ಮುಂದಿನ ಪ್ರಕ್ರಿಯೆಗೆ ಅನುಮತಿ ನೀಡುವುದು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗುತ್ತದೆ..," ಎಂದು ನ್ಯಾಯಮೂರ್ತಿ ಹೇಳಿದ್ದಾರೆ ಅಂತ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ