• Home
  • »
  • News
  • »
  • state
  • »
  • Monsoon Effects: ಮಳೆಯಿಂದಾಗಿ ಲೋಕೋಪಯೋಗಿ ಇಲಾಖೆಗೆ ಅಂದಾಜು‌ 80 ಕೋಟಿ ನಷ್ಟ!

Monsoon Effects: ಮಳೆಯಿಂದಾಗಿ ಲೋಕೋಪಯೋಗಿ ಇಲಾಖೆಗೆ ಅಂದಾಜು‌ 80 ಕೋಟಿ ನಷ್ಟ!

ಸಚಿವ ಸಿಸಿ ಪಾಟೀಲ್

ಸಚಿವ ಸಿಸಿ ಪಾಟೀಲ್

ಈ ಬಾರಿಯ ಮಳೆಯಿಂದಾಗಿ ಇಲಾಖೆಗೆ ಸುಮಾರು 80 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಹೆಚ್ಚಿನ ಪರಿಹಾರವನ್ನು ಇಲಾಖೆಗೆ  ಬಿಡುಗಡೆಗೊಳಿಸಲು ಮುಖ್ಯಮಂತ್ರಿಗಳಲ್ಲಿ ವಿನಂತಿಸಲಾಗಿದೆ ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದ್ದಾರೆ.

  • Share this:

ಸುಬ್ರಮಣ್ಯ(ಜು.12): ರಾಜ್ಯದಲ್ಲಿ ಸುಮಾರು 8 ಸಾವಿರ  ಕೋಟಿ ರೂಪಾಯಿ  ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ (Development) ಕೈಗೊಳ್ಳಲಾಗಿದೆ.ಈ ಮೂಲಕ ರಾಜ್ಯದಲ್ಲಿ ಉತ್ತಮ ಗುಣ ಮಟ್ಟದ ರಸ್ತೆಗಳನ್ನು (Road) ನಿರ್ಮಿಸಲಾಗುತ್ತಿದೆ ಎಂದು‌ ರಾಜ್ಯ‌ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ (CC Patil) ಹೇಳಿದರು. ರಾಜ್ಯದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಭೇಟಿ ನೀಡಿ ಸುದ್ಧಿಗಾರರ ಜೊತೆ ಮಾತನಾಡಿದ ಅವರು  ರಾಜ್ಯದಲ್ಲಿ ಕೆಲವೊಂದು ರಸ್ತೆಗಳ ಕಾಮಗಾರಿ ಸಮಾಪ್ತಿಯಾಗಿದೆ. ಕೆಲವು ರಸ್ತೆಗಳ ಅಭಿವೃದ್ಧಿಯು ನಡೆಯುತ್ತಿದೆ. ಮಳೆಗಾಲ ಮುಗಿದ ತಕ್ಷಣ ಮತ್ತಷ್ಟು ರಸ್ತೆಯ ಪ್ರಗತಿ ಕಾರ್ಯ ಆರಂಭಗೊಳ್ಳಲಿದೆ ಎಂದರು.


ಹಂತ ಹಂತವಾಗಿ ರಾಜ್ಯದಲ್ಲಿ ಪ್ರಧಾನ ರಸ್ತೆಗಳು ಮತ್ತು ಉಪ ರಸ್ತೆಗಳು ಅಭಿವೃದ್ಧಿಯಾಗಲಿದೆ. ಉಳಿದಂತೆ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಕೂಡಾ ಇಲಾಖೆಯು ಹೆಚ್ಚಿನ ಒತ್ತನ್ನು ನೀಡುತ್ತಿದೆ ಎಂದರು.


15 ದಿನಕ್ಕೊಮ್ಮೆ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನೆ


ಆರಂಭಗೊಂಡ ರಸ್ತೆಗಳ ಕಾಮಗಾರಿಯ ಪ್ರಗತಿಯ ಕುರಿತು ಪ್ರತಿ 15 ದಿನಕ್ಕೊಮ್ಮೆ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನೆ ಮಾಡಲಾಗುತ್ತಿದೆ. ರಾಜ್ಯದ ಸಮಗ್ರ ರಸ್ತೆಗಳ ಅಭಿವೃದ್ಧಿಗೆ ಪೂರಕವಾಗಿ ಇಲಾಖೆ ಶ್ರಮ ವಹಿಸುತ್ತಿದೆ ಎಂದ ಅವರು  ರಾಜ್ಯದಲ್ಲಿ ಬಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅದರಲ್ಲೂ ಕರಾವಳಿ ಭಾಗದಲ್ಲಿ ಅಧಿಕ ವರ್ಷಧಾರೆ ಆಗುತ್ತಿರುವುದರಿಂದ ಮಳೆಯಿಂದಾಗಿ ರಸ್ತೆಗಳ ಸಮರ್ಪಕತೆ ಬಗ್ಗೆ ಅಧ್ಯಯನ ಮಾಡಲು ಕರಾವಳಿ ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ.


ಬೆಂಗಳೂರು-ಮಂಗಳೂರು ಸಂಪರ್ಕಿಸುವ ಪ್ರಧಾನ ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್ ಕಾಮಗಾರಿ ಮಂದಗತಿಯಲ್ಲಿ ಆಗುತ್ತಿದೆ.ಈ ಬಗ್ಗೆ ಸ್ಥಳಕ್ಕೆ ತೆರಳಿ ಕಾಮಗಾರಿಗೆ ಹೆಚ್ಚಿನ ವೇಗ ನೀಡಲು ಆದೇಶಿಸಿದ್ದೇನೆ. ಶಿರಾಡಿ ಘಾಟ್ ರಸ್ತೆಯ ಕಾಮಗಾರಿ ಶೀಘ್ರ ಸಂಪೂರ್ಣಗೊಳಿಸಲು ಇನ್ನಷ್ಟು ಹೆಚ್ಚಿನ ಒತ್ತನ್ನು ನೀಡಲಾಗುವುದು. ಮಳೆಗಾಲ ನಿಂತ ತಕ್ಷಣ ಕಾಮಗಾರಿಗೆ ವೇಗ ದೊರಕಲಿದೆ. ಮಳೆಯ ನಂತರ ಮತ್ತೆ ಆಗಮಿಸಿ ರಸ್ತೆ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದು ಸಚಿವರು ನುಡಿದರು.


ಇದನ್ನೂ ಓದಿ: ಮಾದಾರ ಗುರುಪೀಠಕ್ಕೆ RSS ಮುಖ್ಯಸ್ಥ ಮೋಹನ್ ಭಾಗವತ್ ಭೇಟಿ


ಗುತ್ತಿಗೆದಾರರ ಆರ್ಥಿಕ ಸಂಕಷ್ಠ ಮತ್ತು ಪ್ರತಿಕೂಲ ವಾತಾವರಣದಿಂದ ಕಾಮಗಾರಿ ಮಂದಗತಿಯಲ್ಲಿ ಸಾಗಿತ್ತು. ಇದೀಗ ಬಾರೀ ಮಳೆಯ ಕಾರಣ ಘಾಟ್ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ಥಿ ಮಾಡಲಾಗುವುದು.ಮಳೆ ನಿಂತ ತಕ್ಷಣ ಸಂಪೂರ್ಣ ಕಾಮಗಾರಿ ಆರಂಭವಾಗಲಿದೆ. ಮುಂದೆ ಕಾಮಗಾರಿಯು ಮತ್ತಷ್ಟು ವೇಗವನ್ನು ಪಡೆದುಕೊಂಡು ಶೀಘ್ರ ಕಾಮಗಾರಿ ಸಮಾಪ್ತಿಯಾಗಲಿದೆ ಎಂದು ಹೇಳಿದರು.


ಘಾಟ್ ರಸ್ತೆ ಶಾಶ್ವತವಾಗಿ ಅಭಿವೃದ್ಧಿ


ಮುಂದಿನ ಮಳೆಗಾಲ ಪ್ರಯಾಣಿಕರಿಗೆ ಇಂತಹ ಸಮಸ್ಯೆಗಳು ಮರುಕಳಿಸದಂತೆ ಘಾಟ್ ರಸ್ತೆ ಶಾಶ್ವತವಾಗಿ ಅಭಿವೃದ್ಧಿ ಮಾಡಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ವಿನೂತನ ಯೋಜನೆಯನ್ನು ಸಿದ್ಧಪಡಿಸಲಾಗುವುದು. ಒಂದೆರೆಡು ಕಡೆ ಇಲ್ಲಿ  ಕಾಮಗಾರಿ ಕಳಪೆ ಆಗಿರುವುದು ಕಂಡು ಬಂದಿದೆ. ಇದನ್ನು ಸಮರ್ಪಕಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.


ಕುಕ್ಕೆ ಕ್ಷೇತ್ರದ ಅಭಿವೃದ್ಧಿಯ ಮಾಸ್ಟರ್ ಪ್ಲಾನ್ ಕಾಮಗಾರಿ


ಕುಕ್ಕೆ ದೇವಳದ ಮಾಸ್ಟರ್ ಪ್ಲಾನ್ ಕಾಮಗಾರಿಗಳು ಲೋಕೋಪಯೋಗಿ ಇಲಾಖೆ ವತಿಯಿಂದ ನಡೆಯುತ್ತಿದೆ. ಮೂರನೇ ಹಂತದ ಕಾಮಗಾರಿಯು ಆರ್ಥಿಕ ಇಲಾಖೆಯ ಒಪ್ಪಿಗೆ ದೊರಕಿದ ತಕ್ಷಣ ಆರಂಭಿಸಲಾಗುವುದು.ಕುಕ್ಕೆ ಕ್ಷೇತ್ರದ ಅಭಿವೃದ್ಧಿಯ ಮಾಸ್ಟರ್ ಪ್ಲಾನ್ ಕಾಮಗಾರಿ ನಡೆಸಲು ಸಲುವಾಗಿ ಲೋಕೋಪಯೋಗಿ ಇಲಾಖೆಯ ಉಪ ವಿಭಾಗ ಕಚೇರಿ  ಆರಂಭಿಸಿದೆ.ಆ ಮೂಲಕ ಕ್ಷೇತ್ರದ ಪ್ರಗತಿ ಕಾಮಗಾರಿಯನ್ನು ಇಲಾಖೆ ನಡೆಸುತ್ತಿದೆ.ಅತ್ಯಂತ ಶೀಘ್ರವಾಗಿ ಕಾಮಗಾರಿ ನಡೆಸಿ ಭಕ್ತರ ಅನುಕೂಲಕ್ಕಾಗಿ ಒದಗಿಸಲು ಇಲಾಖೆ ಹೆಚ್ಚಿನ ಒತ್ತನ್ನು ನೀಡಲಿದೆ ಎಂದು ಸಚಿವರು ಹೇಳಿದರು.


80 ಕೋಟಿ ರೂಪಾಯಿ ನಷ್ಟ


ಈ ಬಾರಿಯ ಮಳೆಯಿಂದಾಗಿ ಇಲಾಖೆಗೆ ಸುಮಾರು 80 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಹೆಚ್ಚಿನ ಪರಿಹಾರವನ್ನು ಇಲಾಖೆಗೆ  ಬಿಡುಗಡೆಗೊಳಿಸಲು ಮುಖ್ಯಮಂತ್ರಿಗಳಲ್ಲಿ ವಿನಂತಿಸಲಾಗಿದೆ. ಮಳೆಯಿಂದಾಗಿ ಹಾನಿಯಾದ ರಸ್ತೆಗಳ ಅಭಿವೃದ್ಧಿಗೆ ಶೀಘ್ರ ಅನುದಾನ ಬಿಡುಗಡೆಗೊಳಿಸಲಾಗುವುದು.


ಈಗಾಗಲೇ ರಾಜ್ಯದ ಅನೇಕ ರಸ್ತೆಗಳು, ಪ್ರಧಾನ ರಸ್ತೆಗಳು ಮತ್ತು ಉಪ ರಸ್ತೆಗಳು ಅಭಿವೃದ್ಧಿಯಾಗಿದೆ. ಮುಂದೆ ಆಗದೆ ಇರುವ ಉಪ ರಸ್ತೆಗಳ ಅಭಿವೃದ್ಧಿಯನ್ನು ಹಂತ ಹಂತವಾಗಿ ನಡೆಸಲಾಗುವುದು. ರಾಜ್ಯದ ರಸ್ತೆಗಳ ಪ್ರಗತಿಯು ಇದೀಗ ಗಣನೀಯವಾಗಿ   ಅಭಿವೃದ್ಧಿಗೊಂಡಿದೆ. ರಸ್ತೆಗಳ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಆ ಪ್ರಕಾರ ರಾಜ್ಯದ ರಸ್ತೆಗಳು ಅಭಿವೃದ್ಧಿ ಕಾಣುತ್ತಿದೆ ಎಂದರು.


ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ


ಗುಡ್ಡಗಾಡು ಪ್ರದೇಶಿರುವುದರಿಂದ ಮಳೆಗಾಲದಲ್ಲಿ  ಶಿರಾಡಿ ಘಾಟ್, ಆಗುಂಬೆ ಘಾಟ್, ಸಂಪಾಜೆ ಘಾಟ್ ರಸ್ತೆಗಳಲ್ಲಿ ಭೂಕುಸಿತ ಉಂಟಾಗಿ ರಸ್ತೆ ಹಾನಿಗೊಳಗಾಗುತ್ತಿದೆ. ಅಧಿಕ ಮಳೆಯು ಇದಕ್ಕೆ ಕಾರಣವಾಗುತ್ತಿದೆ. ಹಾಗಿದ್ದರೂ ಮುಂದೆ ಮಳೆಗಾಲದಲ್ಲಿ ಇಂತಹ ಸಮಸ್ಯೆಗಳು ಮರುಕಳಿಸದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.


ಇದನ್ನೂ ಓದಿ: ಕಡಿಮೆ ಮಕ್ಕಳಿದ್ದರೆ ಕುಟುಂಬದ ಆರ್ಥಿಕ ಪ್ರಗತಿ! ಕುಟುಂಬ ಯೋಜನೆ ಬಗ್ಗೆ ಅರಿವು ಹೆಚ್ಚಲಿ


ಹಾಗಿದ್ದರೂ ಪ್ರಕೃತಿಗೆ ಸಮರ್ಪಕವಾಗಿ ಮಾನವರು ನಡೆಯಬೇಕಾದುದರಿಂದ ಶಾಶ್ವತ ಪರಿಹಾರಕ್ಕೆ ಪ್ರಯತ್ನ ಮಾಡಲಾಗುವುದು. ಪ್ರಕೃತಿಗೆ ಪೂರಕವಾಗಿ ರಸ್ತೆ ನಿರ್ಮಾಣ ಕಾರ್ಯವನ್ನು ನಡೆಸಲಾಗುವುದು. ಹಾಗಿದ್ದರೂ ಮಾನವ ನಿರ್ಮಿತ ಲೋಪದಿಂದಾಗಿ ಸಮಸ್ಯೆ ಉದ್ಬವಿಸಿದರೆ ಲೋಪಕ್ಕೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

Published by:Divya D
First published: