ಹುಬ್ಬಳ್ಳಿ: ಬೇಸಿಗೆ ರಜೆಯ ನಿಮಿತ್ತ ಅಜ್ಜಿ (Grandmother) ಮನೆಗೆ ಬಂದಿದ್ದ ಬಾಲಕನನ್ನು (Boy) ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣವನ್ನು ಪೊಲೀಸರು (Police) ಬೇಧಿಸಿದ್ದಾರೆ. ಪ್ರಕರಣದಲ್ಲಿ ರವಿ ಬಳ್ಳಾರಿ ಎಂಬ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ ಆರೋಪಿ ಕೇವಲ ಐದು ರೂಪಾಯಿಗಾಗಿ (5 Rupees) ಬಾಲಕನನ್ನು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಆರೋಪಿಯ (Accused) ಹೆಚ್ಚಿನ ವಿಚಾರಣೆಯನ್ನು ಪೊಲೀಸರು ಮುಂದುವರಿಸಿದ್ದಾರೆ.
ಏನಿದು ಪ್ರಕರಣ?
ಕಳೆದ ಎರಡು ದಿನಗಳ ಹಿಂದೆಯಷ್ಟೇ ಹುಬ್ಬಳ್ಳಿಯ ಶ್ರೀನಗರದಲ್ಲಿ 8 ವರ್ಷದ ಬಾಲಕ ನದೀಂನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ತಲೆ ಮೇಲೆ ಹಲ್ಲು ಎತ್ತಿಹಾಕಿ ಬಾಲಕನನ್ನು ಕೊಲೆ ಮಾಡಲಾಗಿತ್ತು. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದರು. ಘಟನಾ ಸ್ಥಳಕ್ಕೆ ಡಿಸಿಪಿ ರಾಜೀವ್ ಎಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲದೆ, ಶೀಘ್ರ ಆರೋಪಿಯನ್ನು ಬಂಧನ ಮಾಡುವುದಾಗಿ ತಿಳಿಸಿದ್ದರು. ಬಾಲಕ ನಾಪತ್ತೆಯಾಗಿದ್ದ ಬಗ್ಗೆ ಪೋಷಕರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ಸಹ ದಾಖಲು ಮಾಡಿದ್ದರು.
ಇದನ್ನೂ ಓದಿ: Siddaramaiah: ಕಾಂಗ್ರೆಸ್‌ನಲ್ಲಿ ಸಿದ್ದು ಮೂಲೆ ಗುಂಪು ಮಾಡುವ ಹುನ್ನಾರ ನಡೀತಿದ್ಯಾ? ಹೈಕಮಾಂಡ್‌ಗೆ ರಮೇಶ್ ಕುಮಾರ್ ವಾರ್ನಿಂಗ್
ಬೇಸಿಗೆ ರಜೆ ಇದ್ದ ಕಾರಣ ಬಾಲಕ ಅಜ್ಜಿಯ ಮನೆಯಲ್ಲಿ ಕೆಲ ದಿನಗಳನ್ನು ಕಳೆಯಲು ಹುಬ್ಬಳಿಯ ಶ್ರೀನಗರದ ಅಜ್ಜಿ ನಿವಾಸಕ್ಕೆ ಬಂದಿದ್ದ. ಅಜ್ಜಿ ಮನೆಗೆ ಬಂದಿದ್ದ ಬಾಲಕ ದೊಡ್ಡಮನಿ ಕಾಲೋನಿಯ ಪಾಳು ಬಿದ್ದ ಜಾಗದಲ್ಲಿ ಶವವಾಗಿ ಪತ್ತೆಯಾಗಿದ್ದ. ಘಟನೆ ನಡೆದ 48 ಗಂಟೆಗಳಲ್ಲಿ ಆರೋಪಿಯನ್ನು ಬೆಂಡಿಗೇರಿ ಪೊಲೀಸರು ಬಂಧಿಸಿದ್ದಾರೆ.
ಆಸಲಿಗೆ ಆಗಿದ್ದೇನು?
ಮೃತ ಬಾಲಕ ಹಾಗೂ ಆರೋಪಿ ರವಿಗೆ ಇಬ್ಬರಿಗೂ ಪರಿಚಯವಿತ್ತು. ಇದೇ ಕಾರಣಕ್ಕೆ ಬಾಲಕ ಆರೋಪಿ ಬಳಿ ಐದು ರೂಪಾಯಿ ಹಣ ಕೇಳಿದ್ದನಂತೆ. ಇದರಂತೆ ಆರೋಪಿ ಕೂಡ ಮೊದಲು ಐದು ರೂಪಾಯಿಯನ್ನು ಬಾಲಕನಿಗೆ ನೀಡಿದ್ದಾನೆ. ಆದರೆ ಮತ್ತೆ ಬಾಲಕ ನದೀಂ ಐದು ರೂಪಾಯಿ ನೀಡುವಂತೆ ಕೇಳಿದ್ದನಂತೆ. ಇದರಿಂದ ಕೋಪಗೊಂಡ ರವಿ, ಬಾಲಕ ಕನ್ನೆಗೆ ಬಾರಿಸಿದ್ದನಂತೆ.
ಆರೋಪಿಯ ಹೊಡೆತದಿಂದ ಬಾಲಕದ ಸ್ಥಳದಲ್ಲೇ ಪ್ರಜ್ಞೆ ತಪ್ಪು ಬಿದ್ದು ಮೂರ್ಚೆ ಹೋಗಿದ್ದಾನೆ. ಇದರಿಂದ ಆತಂಕಗೊಂಡ ಆರೋಪಿ, ಮಗುವನ್ನು ಪಾಳು ಬಿದ್ದ ಸ್ಥಳವೊಂದಕ್ಕೆ ಎತ್ತಿಕೊಂಡು ಹೋಗಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಆ ಬಳಿಕ ಅನುಮಾನ ಬಾರದಂತೆ ಮಾಡಲು ಮಗುವಿನ ಬಟ್ಟೆಗಳನ್ನು ಬಿಚ್ಚಿ, ಸ್ಥಳದಿಂದ ಎಸ್ಕೇಫ್ ಆಗಿದ್ದನಂತೆ.
ಆರೋಪಿ ರವಿ ಬಳ್ಳಾರಿ ಬಂಧನ ವಿಚಾರ ತಿಳಿಯುತ್ತಿದ್ದಂತೆ ಮೃತ ಬಾಲಕನ ಕುಟುಂಬಸ್ಥರು ಪೊಲೀಸ್ ಠಾಣೆ ಬಳಿ ಜಮಾಯಿಸಿದ್ದಾರೆ. ಅಲ್ಲದೆ, ಆರೋಪಿಗೆ ಗಲ್ಲು ಶಿಕ್ಷೆ ಆಗಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ