ಟಾಟಾ ಸುಮೋ ಮತ್ತು‌ ಗೂಡ್ಸ್ ವಾಹನ ನಡುವೆ ಮುಖಾಮುಖಿ ಡಿಕ್ಕಿ : 8 ಜನರ ಸಾವು

ಟಾಟಾ ಸುಮೊದ ಮುಂಭಾಗದಲ್ಲಿ ಕುಳಿತಿದ್ದವರು ಸೇರಿದಂತೆ ನಾಲ್ವರು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯನ್ನು ಕಂಡ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ, ಗಾಯಾಳುಗಳನ್ನು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

G Hareeshkumar | news18-kannada
Updated:November 22, 2019, 7:52 AM IST
ಟಾಟಾ ಸುಮೋ ಮತ್ತು‌ ಗೂಡ್ಸ್ ವಾಹನ ನಡುವೆ ಮುಖಾಮುಖಿ ಡಿಕ್ಕಿ : 8 ಜನರ ಸಾವು
ಪ್ರಾತಿನಿಧಿಕ ಚಿತ್ರ
  • Share this:
ಮಂಡ್ಯ(ನ.22): ಟಾಟಾ ಸುಮೋ ಹಾಗೂ ಗೂಡ್ಸ್ ವಾಹನ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 8 ಜನರು ಮೃತಪಟ್ಟಿರುವ ಘಟನೆ ನಿನ್ನೆರಾತ್ರಿ  ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ರಾಮದೇವನಹಳ್ಳಿಯ ರಾಷ್ಟ್ರೀಯ ಹೆದ್ದಾರಿಯ ಬಳಿ ನಡೆದಿದೆ.

ಮೃತಪಟ್ಟಿರುವವರನ್ನು ಬಾಕರ್ ಷರೀಫ್ ಬಿನ್ ಇಸ್ಮಾಯಿಲ್ ಷರೀಫ್ (50). ತಾಹೀರ್ ಬಿನ್ ಸುಲ್ತಾನ್ ಷರೀಫ್(30), ನೌಷದ್ ಬಿನ್ ಮಕ್ಬೂಲ್ ಪಾಷ(45), ಹಸೀನ್ ತಾಜ್ ಕೋಂ ಖಲೀಂ(50), ಮೆಹಬೂಬ್ ಜಾನ್ ಬಿನ್ ದಸ್ತರ್ ಖಾನ್(50), ಮಕ್ಸೂದ್ ಬಿನ್ ಮಹಮ್ಮದ್ (25), ಸಾಯದಾ(35) ಮತ್ತು‌ ಅಕ್ಬರ್ ಆಲಿ(40)ಎಂದು ಗುರುತಿಸಲಾಗಿದೆ. ಮೃತರು ನಾಗಮಂಗಲ ತಾಲೂಕಿನವರು ಎಂದು ತಿಳಿದು ಬಂದಿದೆ.

ಟಾಟಾ ಸುಮೊದ ಮುಂಭಾಗದಲ್ಲಿ ಕುಳಿತಿದ್ದವರು ಸೇರಿದಂತೆ ನಾಲ್ವರು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯನ್ನು ಕಂಡ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ, ಗಾಯಾಳುಗಳನ್ನು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ : ರಸ್ತೆ ತೆರಿಗೆ ವಂಚಿಸಲು ನಕಲಿ ನಂಬರ್​ ಪ್ಲೇಟ್​ ಬಳಸಿದ ಬೆನ್ಜ್​ ಕಾರ್​ ಮಾಲೀಕ

ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಮೃತ ಹಾಗೂ ಗಂಭೀರವಾಗಿಗೊಂಡವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬೆಳ್ಳೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
First published: November 22, 2019, 7:42 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading