• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Congress Candidate List: ಮೊದಲ ಪಟ್ಟಿಯಲ್ಲಿ 8 ಮುಸ್ಲಿಂ ಅಭ್ಯರ್ಥಿಗಳು; ಹೀಗಿದೆ ಜಾತಿ ಲೆಕ್ಕಾಚಾರ

Congress Candidate List: ಮೊದಲ ಪಟ್ಟಿಯಲ್ಲಿ 8 ಮುಸ್ಲಿಂ ಅಭ್ಯರ್ಥಿಗಳು; ಹೀಗಿದೆ ಜಾತಿ ಲೆಕ್ಕಾಚಾರ

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ (ಸಾಂದರ್ಭಿಕ ಚಿತ್ರ

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ (ಸಾಂದರ್ಭಿಕ ಚಿತ್ರ

ಮಂಡ್ಯದ ಐದು ಕ್ಷೇತ್ರಗಳಿಂದ ಯಾರು ಸ್ಪರ್ಧೆ ಮಾಡಲಿದ್ದಾರೆ ಎಂಬುವುದು ಇನ್ನು ನಿಗೂಢವಾಗಿದೆ. ಇತ್ತ ಮಾಜಿ ಸಂಸದೆ ರಮ್ಯಾ ರಾಮನಗರದಿಂದ ಸ್ಪರ್ಧೆ ಮಾಡ್ತಾರಾ ಅನ್ನೋ ಕುತೂಹಲ ಮತ್ತಷ್ಟು ಹೆಚ್ಚಾಗಿದೆ

 • News18 Kannada
 • 2-MIN READ
 • Last Updated :
 • Karnataka, India
 • Share this:

ಬೆಂಗಳೂರು: ವಿಧಾನಸಭಾ ಚುನಾವಣೆ (Karnataka Election 2023) ದಿನಾಂಕ ಘೋಷಣೆಗೂ ಮುನ್ನ ಕಾಂಗ್ರೆಸ್ (Congress) 124 ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಹಾಲಿ 61 ಶಾಸಕರಿಗೆ ಟಿಕೆಟ್ ಸಿಕ್ಕಿದೆ. ಗೊಂದಲ ಇರೋ ಕ್ಷೇತ್ರಗಳಿಂದ ಯಾರು ಸ್ಪರ್ಧೆ ಮಾಡ್ತಾರೆ ಅನ್ನೋದು ಇನ್ನು ಕುತೂಹಲ ಮನೆ ಮಾಡಿದೆ. ಈಗಾಗಲೇ ರಾಜಾಜಿನಗರ (Rajajinagara) ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ವಂಚಿತರು ಬಂಡಾಯ ಏಳುವ ಲಕ್ಷಣಗಳು ಕಾಣಿಸುತ್ತಿವೆ. ಮತ್ತೊಂದೆಡೆ ತೀವ್ರ ಕುತೂಹಲ ಕೆರಳಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರ (Former CM Siddaramaiagh) ಕ್ಷೇತ್ರ ಅಂತಿಮವಾಗಿದೆ. ಹಾಲಿ ಶಾಸಕರಾಗಿರುವ ಯತೀಂದ್ರ (Yatheendra Siddaramaiah) ತಂದೆಗೆ ವರುಣಾ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. ಹಾಲಿ ಐವರು ಶಾಸಕರಿಗೆ ಇನ್ನು ಟಿಕೆಟ್ ಘೋಷಣೆ ಆಗಿಲ್ಲ. ಕೋಲಾರ ಮತ್ತು ಬಾದಾಮಿ ಕ್ಷೇತ್ರದ ಅಭ್ಯರ್ಥಿಯ ಹೆಸರು ಸಹ ಪ್ರಕಟಿಸಿಲ್ಲ.


ಇನ್ನುಳಿದಂತೆ ಮಂಡ್ಯದ ಐದು ಕ್ಷೇತ್ರಗಳಿಂದ ಯಾರು ಸ್ಪರ್ಧೆ ಮಾಡಲಿದ್ದಾರೆ ಎಂಬುವುದು ಇನ್ನು ನಿಗೂಢವಾಗಿದೆ. ಇತ್ತ ಮಾಜಿ ಸಂಸದೆ ರಮ್ಯಾ ರಾಮನಗರದಿಂದ ಸ್ಪರ್ಧೆ ಮಾಡ್ತಾರಾ ಅನ್ನೋ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. 124ರಲ್ಲಿ ಎಂಟು ಮುಸ್ಲಿಂ ಕ್ಯಾಂಡಿಡೇಟ್​​ಗಳಿಗೆ ಟಿಕೆಟ್ ಸಿಕ್ಕಿದೆ. 124 ಅಭ್ಯರ್ಥಿಗಳ ಪಟ್ಟಿಯಲ್ಲಿ ಜಾತಿ ಲೆಕ್ಕಾಚಾರ ಹೇಗಿದೆ ಎಂಬುದರ ಮಾಹಿತಿ ಇಲ್ಲಿದೆ.


ಜಾತಿವಾರು ಲೆಕ್ಕಾಚಾರ ಹೀಗಿದೆ


1.ಲಿಂಗಾಯತ: 32


2.ಮುಸ್ಲಿಂ: 8


3.ಕ್ರೈಸ್ತ: 1


4.ಬ್ರಾಹ್ಮಣ: 5


5.ಒಕ್ಕಲಿಗ: 19


6.ಕುಂಬಾರ: 1


7.ಬಂಟ: 1


8.ರೆಡ್ಡಿ: 5


9.ಈಡಿಗ: 4


10.ಪರಿಶಿಷ್ಟ ಜಾತಿ: 22


11.ಮರಾಠಿ:1


12.ರಜಪೂತ: 1


13.ಕುರುಬ: 5


14.ಓಬಿಸಿ: 20


ಇದನ್ನೂ ಓದಿ:  Karnataka Politics: ಇಬ್ಭಾಗವಾದ ಕೆಆರ್ ಪೇಟೆ ಜೆಡಿಎಸ್, ತೆನೆಗೆ ಗುಡ್ ಬೈ ಹೇಳಿ ಕಾಂಗ್ರೆಸ್​ ಸೇರ್ಪಡೆಯಾದ ರೇವಣ್ಣನ ಆಪ್ತ!


ಘೋಷಣೆಯಾದ ಹಾಲಿ ಶಾಸಕರ ಕ್ಷೇತ್ರಗಳು


ಪುಲಕೇಶಿ ನಗರ - ಅಖಂಡ ಶ್ರೀನಿವಾಸಮೂರ್ತಿ
ಅಫಜಲಪುರ- ಎಂ ವೈ ಪಾಟೀಲ್
ಕುಂದಗೋಳ - ಕುಸುಮಾ ಶಿವಳ್ಳಿ
ಹರಿಹರ- ರಾಮಪ್ಪ
ಶಿಡ್ಲಘಟ್ಟ- ವಿ ಮುನಿಯಪ್ಪ
ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ 8 ಮುಸ್ಲಿಂ ಅಭ್ಯರ್ಥಿಗಳು

top videos


  ಬೀದರ್- ರಹೀಮ್ ಖಾನ್
  ಕಲುಬರಗಿ ಉತ್ತರ -ಕನೀಝ್ ಫಾತಿಮಾ
  ಶಿವಾಜಿನಗರ - ರಿಜ್ವಾನ್ ಅರ್ಷದ್
  ಚಾಮರಾಜಪೇಟೆ - ಜಮೀರ್ ಅಹ್ಮದ್
  ಮಂಗಳೂರು - ಯು ಟಿ ಖಾದರ್
  ರಾಮನಗರ - ಇಕ್ಬಾಲ್ ಹುಸೇನ್
  ನರಸಿಂಹರಾಜ - ತನ್ವೀರ್ ಸೇಠ್
  ಶಾಂತಿನಗರ- ಎನ್ ಎ ಹ್ಯಾರಿಸ್

  First published: