Baby Boy: 5 ಸಾವಿರಕ್ಕೆ ಗಂಡು ಮಗು ಮಾರಾಟ; ಎರಡು ದಿನಗಳ ಬಳಿಕ ಮಗು ಬೇಕು ಎಂದ ತಾಯಿ

ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಮಗುವಿನ ಸುಳಿವು ಮಾತ್ರ ಇನ್ನು ಪತ್ತೆಯಾಗಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ವಿಜಯಪುರ (ಸೆ. 16): ಎರಡನೇ ಮಗುವನ್ನು ಸಾಕಲು ಸಾಧ್ಯವಾಗದೇ ಹೆತ್ತ ತಾಯಿಯೊಬ್ಬಳು ನವಜಾತ ಗಂಡು ಮಗುವನ್ನು(New born child sold for money) ಮಾರಾಟ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ (vijayapura district hospital) ಈ ಘಟನೆ ನಡೆದಿದ್ದು, 8 ದಿನದ ಗಂಡು ಮಗುವನ್ನು ಕೇವಲ ಐದು ಸಾವಿರಕ್ಕೆ ಹೆತ್ತ ತಾಯಿ ನರ್ಸ್​ ಮೂಲಕ ಮಾರಾಟ ಮಾಡಿದ್ದಾಳೆ. ಇದಾದ ಎರಡು ದಿನಗಳ ಬಳಿಕ ಮಗು ತಮಗೆ ಬೇಕು ಎಂದು ಬಂದಿದ್ದು ಆಸ್ಪತ್ರೆಗೆ ಬಂದಿದ್ದಾಳೆ. ಈ ವೇಳೆ ಮಗು ಸಿಗದಿದ್ದಾಗ ಸಹಾಯವಾಣಿ ಮೊರೆ ಹೋಗಿದ್ದು, ಪರಿಣಾಮ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಏನಿದು ಘಟನೆ?
    ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ರೇಣುಕಾ ಕಾಂಬಳೆ‌ ಎಂಬ ಮಹಿಳೆ ಈಗಾಗಲೇ ಒಂದು ಹೆಣ್ಣು ಮಗು ಇತ್ತು. ಈ ವೇಳೆ ಕಳೆದ ತಿಂಗಳು ಎರಡನೇ ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ, ಕಡು ಕಷ್ಟದ್ದಲ್ಲಿದ್ದ ರೇಣುಕಾಗೆ ಮಗು ಸಾಕುವುದು ಕಷ್ಟವಾಗಿದೆ. ಇದನ್ನು ತಿಳಿದ ಆಸ್ಪತ್ರೆಯ ನರ್ಸ್ ಕಸ್ತೂರಿ ರೇಣುಕಾಗೆ​ ಮಗುವನ್ನು ಮಾರಾಟ ಮಾಡಲು ತಿಳಿಸಿದ್ದಾಳೆ. ಇದರಿಂದ ಮಗು ಕೂಡ ಬೇರೆ ಕಡೆ ಚೆನ್ನಾಗಿ ಬೆಳೆಯಲಿದೆ. ನಿಮಗೂ ಹಣ ಸಿಗಲಿದೆ ಎಂದು ತಿಳಿಸಿದ್ದಾಳೆ.

     ಹಣದ ಆಮಿಷವೊಡ್ಡಿದ ನರ್ಸ್​
    ಮಗುವಿನ ಭವಿಷ್ಯದ ಜೊತೆ ಹಣದ ದುರಾಸೆಗೆ ಬಿದ್ದ ರೇಣುಕಾ ಕೂಡ ಮಗುವನ್ನು ಮಾರಾಟ ಮಾಡಲು ನಿರ್ಧರಿಸಿದ್ದಾಳೆ. ಜಿಲ್ಲಾಸ್ಪತ್ರೆಯ ನರ್ಸ್ ಹಾಗೂ ಆಕೆಯ ಪತಿಯ ಸಹಾಯದಿಂದ ರೇಣುಕಾ ಕೂಡ ತನ್ನ 8 ದಿನದ ಮಗುವನ್ನು ಆಗಸ್ಟ್​ 19ರಂದು ಮಾರಾಟ ಮಾಡಿದ್ದಾಳೆ. ರೇಣುಕಾ ಗಂಡ ಮಂಜುನಾಥ ಪಡಸಲಗಿ ಆಗಸ್ಟ್​​​ 26 ರಂದು ನರ್ಸ್​ ತೋರಿಸಿದ ವ್ಯಕ್ತಿಗೆ ಮಗುವನ್ನು ಜಿಲ್ಲಾಸ್ಪತ್ರೆ ಆವರಣದಲ್ಲೇ ಮಗುವನ್ನು ಮಾರಾಟ ಮಾಡಿದ್ದಾನೆ.

    ಇದನ್ನು ಓದಿ: ವೈರಲ್​ ಆದ ಮ್ಯಾಗಿ ಮಿಲ್ಕ್ ಶೇಕ್​​; ಹೊಸ ರುಚಿಗೆ ಅಸಹ್ಯ ಪಟ್ಟುಕೊಂಡವರೇ ಹೆಚ್ಚು!

    ಮಾರಾಟ ಮಾಡಿದ ಬಳಿಕ ಮಗು ಬೇಕು ಎಂದ ತಾಯಿ
    ಇದಾದ ಎರಡು ದಿನಗಳ ಬಳಿಕ ಹೆತ್ತ ಕರುಳು ತಳಮಳ ಗೊಂಡಿದೆ. ಹಾಲುಗಲ್ಲದ ಕಂದನ ದೂರು ಮಾಡಿದ ಪಾಪ ಪ್ರಜ್ಞೆ ಆಕೆಯನ್ನು ಕಾಡಿದೆ. ಇದೇ ಕಾರಣಕ್ಕೆ ಮಗುವನ್ನು ಹಿಂದಿರುಗಿಸುವಂತೆ ರೇಣುಕಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಆದರೆ, ಆದಾಗಲೇ ಮಗುವನ್ನು ಕೊಂಡು ಕೊಂಡಿದ್ದ ವ್ಯಕ್ತಿ ಇವರ ಸುಳಿವಿಗೆ ಸಿಗದಂತೆ ನಾಪತ್ತೆಯಾಗಿದ್ದಾಳೆ. ಇತ್ತ ಮಗು ಬೇಕು ಎಂದು ರೇಣುಕಾ ಹಠ ಹಿಡಿದರೂ ಮಗು ಸಿಗುವ ಸ್ಥಿತಿಯಲ್ಲಿ ಇರಲಿಲ್ಲ. ಈ ಹಿನ್ನಲೆ ದಿಕ್ಕು ತೋಚದ ತಾಯಿ ಕಡೆಗೆ ಮಕ್ಕಳ ಸಹಾಯವಾಣಿ ಮೊರೆ ಹೋಗಿದ್ದಾಳೆ.

    ಇದನ್ನು ಓದಿ: ಕೆಲಸ ಕಳೆದುಕೊಂಡ ನಿರುದ್ಯೋಗಿಗಳಿಗೆ ಸರ್ಕಾರದಿಂದ ಶೇ 50ರಷ್ಟು ಭತ್ಯೆ; ಮಾಡಬೇಕಿರುವುದು ಇಷ್ಟೇ!

    ನರ್ಸ್​ ಅಮಾನತು ಮಾಡಿದ ಜಿಲ್ಲಾಡಳಿತ
    ಈ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ನರ್ಸ್​ಗಳು ಮಗುವಿನ ಮಾರಾಟ ಜಾಲದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಜಿಲ್ಲಾಸ್ಪತ್ರೆಯಲ್ಲಿ ಬಡ ಕುಟುಂಬದ ಅಸಹಾಯಕತೆಯನ್ನು ಬಂಡಾವಳವಾಗಿಸಿಕೊಂಡು ಮಗು ಮಾರಾಟ ಮಾಡುತ್ತಿದ್ದ ನರ್ಸ್ ಕಸ್ತೂರಿಯನ್ನು ಜಿಲ್ಲಾಡಳಿತ ಅಮಾನತು ಮಾಡಲಾಗಿದೆ.

    ಇನ್ನೂ ಪತ್ತೆಯಾಗದ ಮಗು

    ಪ್ರಕರಣ ಸಂಬಂಧ ನರ್ಸ್ ಕಸ್ತೂರಿ ಹಾಗೂ ಆಕೆಯ ಪತಿ ಮಂಜುನಾಥ್ ಪಡಸಲಗಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ನರ್ಸ್ ಪತಿಯ ಜೊತೆ ಬಂದಿದ್ದ ಮತ್ತೋರ್ವ ಅಪರಿಚಿತ ವ್ಯಕ್ತಿಯ ವಿರುದ್ಧವೂ ದೂರು ದಾಖಲಿಸಲಾಗಿದ್ದು, ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆದರೆ, ಮಗುವಿನ ಸುಳಿವು ಮಾತ್ರ ಇನ್ನು ಪತ್ತೆಯಾಗಿಲ್ಲ. ಈ ಬಗ್ಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
    Published by:Seema R
    First published: