ಹೆಚ್ಚಿದ ತುಟ್ಟಿಭತ್ಯೆ (ಡಿಎ) ಮತ್ತು ತುಟ್ಟಿಭತ್ಯೆ ಪರಿಹಾರ (ಡಿಆರ್) ಗಾಗಿ ಬಹಳ ದಿನಗಳ ಕಾಲ ನಿರೀಕ್ಷಿಸುತ್ತಿದ್ದ ಕೇಂದ್ರ ಸರ್ಕಾರದ ಉದ್ಯೋಗಿಗಳು ಹಾಗೂ ಪಿಂಚಣಿದಾರರ ಮೊಗದಲ್ಲಿ ಮಂದಹಾಸ ಮೂಡಿದೆ.ಈ ಸೌಲಭ್ಯಕ್ಕೆ ಕೇಂದ್ರ ಸರ್ಕಾರದ ಅನುಮೋದನೆ ದೊರಕಿದೆ. ಅಂತೂ ಕೋವಿಡ್ ಸಮಯದಲ್ಲಿ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರ ಹೆಚ್ಚಳ ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ಆರ್ಥಿಕವಾಗಿ ನೆರವಾಗಲಿದೆ. ಕೇಂದ್ರ ಸರಕಾರದ ಉದ್ಯೋಗಿಗಳಿಗೆ ತುಟ್ಟಿಭತ್ಯೆಯಲ್ಲಿ ಶೇ 28 ರಷ್ಟು ಹೆಚ್ಚಳ ಮಾಡುವುದಾಗಿ ಕೇಂದ್ರ ತಿಳಿಸಿದೆ.
ಡಿಎ (Dearness Allowance) ಮತ್ತು ಡಿಆರ್ (Dearness Relief) ಹೆಚ್ಚಳವಾದಲ್ಲಿ ಕೇಂದ್ರ ಸರಕಾರದ ಉದ್ಯೋಗಿಗಳಿಗೆ ವೇತನದಲ್ಲಿ ಹೆಚ್ಚಳವಾಗುತ್ತದೆ ಹಾಗೂ ಪಿಂಚಣಿದಾರರಿಗೆ ಉತ್ತಮ ಮೊತ್ತ ಕೈ ಸೇರುತ್ತದೆ. IANS ವರದಿಯ ಪ್ರಕಾರ ಜುಲೈ 2021 ರವರೆಗೆ ಡಿಎ ಮತ್ತು ಡಿಆರ್ ಹೆಚ್ಚಳವನ್ನು ಸಚಿವಾಲಯವು ಸ್ಥಗಿತಗೊಳಿಸುವುದಾಗಿ ಘೋಷಿಸಿತ್ತು. ಕಳೆದ ಒಂದೂವರೆ ವರ್ಷಗಳಿಂದ ಬಾಕಿ ಇರುವ ತುಟ್ಟಿಭತ್ಯೆಯನ್ನು ಮತ್ತೆ ಜಾರಿಗೆ ತರಲು ಅನುಮೋದನೆ ದೊರಕಿದ್ದು ಮೂಲಗಳ ಪ್ರಕಾರ ಕೇಂದ್ರ ಸರಕಾರದ ಉದ್ಯೋಗಿಗಳಿಗೆ ಶೇ 28 ರಷ್ಟು ತುಟ್ಟಿಭತ್ಯೆ ಸಿಗುತ್ತದೆ. ಅಂದರೆ ಈ ಬಾರಿ ಉದ್ಯೋಗಿಗಳಿಗೆ ಶೇ 11 ರಷ್ಟು ಹೆಚ್ಚು ತುಟ್ಟಿಭತ್ಯೆ ದೊರಕುವುದು ಖಾತ್ರಿಯಾಗಿದೆ.
ಕೊರೋನಾ ಕಾರಣದಿಂದ ತುಟ್ಟಿಭತ್ಯೆ ಹಾಗೂ ಪಿಂಚಣಿದಾರರಿಂದ ತುಟ್ಟಿಭತ್ಯೆ ಪರಿಹಾರವನ್ನು ತಡೆಹಿಡಿಯಲಾಗಿತ್ತು. ಕೇಂದ್ರವು ಜನವರಿ 2020 ರಲ್ಲಿ ತುಟ್ಟಿಭತ್ಯೆಯನ್ನು ಶೇ 4 ರಷ್ಟು ಹೆಚ್ಚಿಸಿತ್ತು. ಅದೇ ರೀತಿ ಈ ವರ್ಷ ಶೇ 4 ರಷ್ಟು ಹೆಚ್ಚಿಸಿದೆ ಅದೇ ರೀತಿ ಜೂನ್ 2020 ರಲ್ಲಿ ಶೇ 3 ರಷ್ಟು ತುಟ್ಟಿಭತ್ಯೆ ಹೆಚ್ಚಿಸಿತ್ತು. ಹೀಗಾಗಿ ಒಟ್ಟು ತುಟ್ಟಿಭತ್ಯೆಯಲ್ಲಿ ಶೇ 11 ರಷ್ಟು ಹೆಚ್ಚಳ ಕಂಡುಬಂದಿದೆ. ಈ ಮೂರು ಬಾಕಿ ಇರುವ ತುಟ್ಟಿಭತ್ಯೆಯನ್ನು ಮೂರು ಕಂತುಗಳಲ್ಲಿ ಉದ್ಯೋಗಿಗಳಿಗೆ ನೀಡಲಾಗುವುದು ಎಂಬುದಾಗಿ ಮೂಲಗಳು ತಿಳಿಸಿವೆ.
ಕಾರ್ಮಿಕ ಸಚಿವಾಲಯವು ಸಲ್ಲಿಸಿದ್ದ ಗ್ರಾಹಕ ಬೆಲೆ ಅಂಕಿಅಂಶಗಳ ಪ್ರಕಾರ ಸೂಚ್ಯಂಕವು 0.5 ಪಾಯಿಂಟ್‌ಗಳಷ್ಟು ಏರಿಕೆಯಾಗಿದ್ದು ಇದು 12.06 ಕ್ಕೆ ತಲುಪಿದೆ. ಪ್ರಧಾನಿ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ತೆಗೆದುಕೊಂಡ ಈ ತೀರ್ಮಾನದಿಂದ ಉದ್ಯೋಗಿಗಳು ಮತ್ತು ಪಿಂಚಣಿದಾರರ ಮುಖದಲ್ಲಿ ಕಿರುನಗೆ ಮೂಡಿದೆ. ಹೆಚ್ಚಿನ ಮಾಹಿತಿಯ ಪ್ರಕಾರ ತುಟ್ಟಿಭತ್ಯೆ ಹಾಗೂ ಆತ್ಮೀಯ ಭತ್ಯೆಯನ್ನು ಸಪ್ಟೆಂಬರ್‌ನಿಂದ ನೀಡುವ ನಿರೀಕ್ಷೆ ಇದೆ.
ಈ ಸಲುವಾಗಿ ಇಂಟರ್ನೆಟ್‌ನಲ್ಲಿ ಫೇಕ್ ಸುದ್ದಿಯೊಂದು ಹರಿದಾಡುತ್ತಿದ್ದು ಮುಂಬರುವ ತಿಂಗಳಿನಿಂದಲೇ ತುಟ್ಟಿಭತ್ಯೆ ಹಾಗೂ ತುಟ್ಟಿ ಭತ್ಯೆ ಪರಿಹಾರ ಏರಿಸಲಾಗುವುದು ಎಂಬ ಮಾಹಿತಿ ಇತ್ತು. ಜುಲೈ 2021 ರಿಂದ ಕೇಂದ್ರ ಸರಕಾರಿ ಉದ್ಯೋಗಿಗಳಿಗೆ ತುಟ್ಟಿಭತ್ಯೆ ಹಾಗೂ ಪಿಂಚಣಿದಾರರಿಗೆ ತುಟ್ಟಿ ಭತ್ಯೆ ಪರಿಹಾರ ಪುನರಾರಂಭ ಎಂಬ ಸುದ್ದಿ ಹರಿದಾಡುತ್ತಿದ್ದು ಈ ಕಚೇರಿ ಲಿಖಿತ ದಾಖಲೆಯ ವಿವರಗಳು ಸುಳ್ಳಾಗಿದೆ ಎಂದು ಈ ಕುರಿತು ಹಣಕಾಸು ಸಚಿವಾಲಯವು ಟ್ವೀಟ್ ಮಾಡಿತ್ತು.
ಏಳನೇ ವೇತನ ಆಯೋಗದ (7th Pay Commission) ಶಿಫಾರಸಿನಂತೆ ಡಿಎ ಹೆಚ್ಚಳವಾಗಲಿದ್ದು ತುಟ್ಟಿಭತ್ಯೆಯು ಶೇ 17 ರಿಂದ ಶೇ 28 ಕ್ಕೆ ಏರಿಕೆಯಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ