77 ಲಕ್ಷದ ಬೆಂಜ್, 15 ಲಕ್ಷಕ್ಕೆ ಹರಾಜು; ಆರ್‌ಟಿಓ ಆಕ್ಷನ್‌ ಬಿಡ್‌ನಲ್ಲಿ ಬಿಲ್ಡರ್‌ ಪಾಲಾದ ಐಶಾರಾಮಿ ಕಾರು

ಅಸಲಿಗೆ ಮಂಡ್ಯ ಮೂಲದ ರಾಜು ಗೌಡ ಎಂಬುವರು ಬೆಂಜ್ ಕಾರ್ ಓಡಿಸುವ ವೇಳೆ ಈ ಕಾರನ್ನು ಸೀಜ್ ಮಾಡಲಾಗಿತ್ತು. ಈ ಕಾರು ಮಂಡ್ಯದ ಬಿಕೆ ರೇಖಾ ಎಂಬವರ ಹೆಸರಿನಲ್ಲಿತ್ತು. ಆದರೆ, ಇವರು ಆರ್‌ಟಿಓ ತೆರಿಗೆ ಪಾವತಿಸದೆ ಕಾರ್‌ಗೆ ನಕಲಿ ನಂಬರ್ ಹಾಕಿಸಿ ಓಡಿಸುತ್ತಿದ್ದರು.

ಆಕ್ಷನ್‌ ಬಿಡ್‌ಗೆ ಇಡಲಾಗಿದ್ದ ಬೆಂಜ್‌ ಕಾರು.

ಆಕ್ಷನ್‌ ಬಿಡ್‌ಗೆ ಇಡಲಾಗಿದ್ದ ಬೆಂಜ್‌ ಕಾರು.

  • Share this:
ಬೆಂಗಳೂರು (ಮೇ 21); ಇಂದು ಯಶವಂತಪುರದ ಆರ್‌ಟಿಓ ಕಚೇರಿಯಲ್ಲಿ ನಡೆಸಲಾದ ಓಪನ್ ಆಕ್ಷನ್‌ ಬಿಡ್‌ನಲ್ಲಿ 77 ಲಕ್ಷ ಮೌಲ್ಯದ ಬೆಂಜ್‌ ಕಾರು ಕೇವಲ 15.75 ಲಕ್ಷಕ್ಕೆ ಬಿಲ್ಡರ್ ಅರ್ಜುನ್ ಎಂಬುವವರ ಪಾಲಾಗಿದೆ.

ಅಸಲಿಗೆ ಮಂಡ್ಯ ಮೂಲದ ರಾಜು ಗೌಡ ಎಂಬುವರು ಬೆಂಜ್ ಕಾರ್ ಓಡಿಸುವ ವೇಳೆ ಈ ಕಾರನ್ನು ಸೀಜ್ ಮಾಡಲಾಗಿತ್ತು. ಈ ಕಾರು ಮಂಡ್ಯದ ಬಿಕೆ ರೇಖಾ ಎಂಬವರ ಹೆಸರಿನಲ್ಲಿತ್ತು. ಆದರೆ, ಇವರು ಆರ್‌ಟಿಓ ತೆರಿಗೆ ಪಾವತಿಸದೆ ಕಾರ್‌ಗೆ ನಕಲಿ ನಂಬರ್ ಹಾಕಿಸಿ ಓಡಿಸುತ್ತಿದ್ದರು.

ಈ ವೇಳೆ ಯಶವಂತಪುರ ಆರ್‌ಟಿಓ ಇನ್ಸ್‌ಪೆಕ್ಟರ್ ರಾಜಣ್ಣ ನೇತೃತ್ವದ ‍ತಂಡ ತೆರಿಗೆ ಕಟ್ಟದ ಕಾರಣ ಬೆಂಜ್ ಕಾರ್ ಅನ್ನು ಸೀಜ್ ಮಾಡಿತ್ತು. ಇದೇ ಕಾರನ್ನು ನಿನ್ನೆ ಅಧಿಕಾರಿಗಳು ಆಕ್ಷನ್ ಬಿಡ್‌ಗೆ ಇಟ್ಟಿದ್ದರು. ಈ ಬಿಡ್‌ನಲ್ಲಿ ಸುಮಾರು 77 ಲಕ್ಷ ಮೌಲ್ಯದ ಬೆಂಜ್‌ ಕಾರು ಕೇವಲ 15.75 ಲಕ್ಷಕ್ಕೆ ಮಾರಾಟವಾಗಿದೆ. ಕೆ ಆರ್ ಪುರಂ ನಿವಾಸಿಯಾಗಿರೋ ಅರ್ಜುನ್ ಎಂಬವರು ಕಡಿಮೆ ಬೆಲೆಗೆ ಈ ಕಾರನ್ನು ಖರೀದಿಸಿದ್ದಾರೆ.

ಇದನ್ನೂಓದಿ : ಸೋನಿಯಾ ಗಾಂಧಿ ವಿರುದ್ಧದ FIR ಹಿಂತೆಗೆದುಕೊಳ್ಳುವ ಭರವಸೆ ನೀಡಲಾಗಿದೆ; ಡಿ.ಕೆ. ಶಿವಕುಮಾರ್‌
First published: