ಕಲಬುರ್ಗಿಯಲ್ಲಿ ಪೌರತ್ವ ಪಾಲಿಟಿಕ್ಸ್ - ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಓರ್ವ ಸಾವು

ಪೌರತ್ವ ಕಾಯ್ದೆ ಬೆಂಬಲಿಸಿ ಕಲಬುರ್ಗಿಯಲ್ಲಿ ನಡೆಸಿದ ಬೃಹತ್ ರಾಲಿ ವೇಳೆ ಮಹಾನಗರ ಪಾಲಿಕೆ ವಾಹನಗಳನ್ನು ಬಳಸಿಕೊಂಡ ಘಟನೆ ಬೆಳಕಿಗೆ ಬಂದಿದೆ. ಕಲಬುರ್ಗಿ ನಾಗರೀಕ ಸಮಿತಿಯಿಂದ ರಾಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಾರ್ಯಕರ್ತರು ಮಹಾನಗರ ಪಾಲಿಕೆ ವಾಹನದಲ್ಲಿ ಬಂದಿರೋ ದೃಶ್ಯಗಳನ್ನು ಕೆಲವರು ಸೆರೆ ಹಿಡಿದಿದ್ದಾರೆ.

news18-kannada
Updated:January 11, 2020, 9:31 PM IST
ಕಲಬುರ್ಗಿಯಲ್ಲಿ ಪೌರತ್ವ ಪಾಲಿಟಿಕ್ಸ್ - ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಓರ್ವ ಸಾವು
ಸಾಂದರ್ಭಿಕ ಚಿತ್ರ
  • Share this:
ಕಲಬುರ್ಗಿ(ಜ.11) : ಕಲಬುರ್ಗಿಯಲ್ಲಿ ಪೌರತ್ವದ ಪರ ಮತ್ತು ವಿರುದ್ಧದ ಹೋರಾಟಗಳು ತಾರಕಕ್ಕೇರಲಾರಂಭಿಸಿವೆ. ಕರ್ನಾಟಕ ಪೀಪಲ್ಸ್ ಫೋರಂ ನಿಷೇಧಾಜ್ಞೆ ಧಿಕ್ಕರಿಸಿ ಪೌರತ್ವ ವಿರೋಧಿ ಹೋರಾಟ ಮಾಡಿತ್ತು. ಅದಾದ ನಂತರ ಕಲಬುರ್ಗಿ ನಾಗರೀಕ ಸಮಿತಿ ಪೌರತ್ವದ ಪರ ಬೃಹತ್ ಹೋರಾಟ ನಡೆಸಿತು. ಆದರೆ ಈ ಸಂದರ್ಭದಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಮೃತನ್ನು ಈಶ್ವರ್ ಚಂದ್ರಶಾ(72) ಎಂದು ಗುರುತಿಸಲಾಗಿದೆ.

ಕಲಬುರ್ಗಿ ನಾಗರೀಕ ಸಮಿತಿಯಿಂದ ನಗರೇಶ್ವರ ಶಾಲೆಯಿಂದ ಮೆರವಣಿಗೆಯಲ್ಲಿ ಬರುವಾಗ ಈಶ್ವರ್ ಕುಸಿದು ಬಿದ್ದಿದ್ದ. ತಕ್ಷಣ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಈಶ್ವರ್ ಮೃತಪಟ್ಟಿದ್ದಾನೆ. ಈಶ್ವರ್ ಹೃದಯಾಘಾತದಿಂದ ಸಾವನ್ನಪ್ಪಿರೋದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ. ರಾಲಿಯಲ್ಲಿ ಉತ್ಸಾಹದಿಂದ ಭಾಗಿಯಾಗಿದ್ದ ಈಶ್ವರ್, ಮಾರ್ಗ ಮಧ್ಯದಲ್ಲಿಯೇ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾನೆ. ಘಟನೆ ಸಂಘಟಕರನ್ನು ಕಸಿವಿಸಿಗೊಳ್ಳುವಂತೆ ಮಾಡಿದೆ.

ಪಾಲಿಕೆ ಆಸ್ತಿ ದುರ್ಬಳಕೆ ; ಪ್ರಿಯಾಂಕ್ ಖರ್ಗೆ

ಪೌರತ್ವ ಕಾಯ್ದೆ ಬೆಂಬಲಿಸಿ ಕಲಬುರ್ಗಿಯಲ್ಲಿ ನಡೆಸಿದ ಬೃಹತ್ ರಾಲಿ ವೇಳೆ ಮಹಾನಗರ ಪಾಲಿಕೆ ವಾಹನಗಳನ್ನು ಬಳಸಿಕೊಂಡ ಘಟನೆ ಬೆಳಕಿಗೆ ಬಂದಿದೆ. ಕಲಬುರ್ಗಿ ನಾಗರೀಕ ಸಮಿತಿಯಿಂದ ರಾಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಾರ್ಯಕರ್ತರು ಮಹಾನಗರ ಪಾಲಿಕೆ ವಾಹನದಲ್ಲಿ ಬಂದಿರೋ ದೃಶ್ಯಗಳನ್ನು ಕೆಲವರು ಸೆರೆ ಹಿಡಿದಿದ್ದಾರೆ. ಕಸ ತೆಗೆದುಕೊಂಡು ಹೋಗುವ ವಾಹನದಲ್ಲಿ ಧ್ವಜಗಳನ್ನು ಹಿಡಿದುಕೊಂಡು ಬರುತ್ತಿದ್ದು, ಇದಕ್ಕೆ ಪ್ರತಿಪಕ್ಷಗಳು ಕಿಡಿಕಾರಿವೆ. ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಟ್ವಿಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ಸರ್ಕಾರ ಪ್ರಾಯೋಜಿತ ಕಾರ್ಯಕ್ರಮ ಎಂದು ಕಂಡುಬರುತ್ತಿದೆ. ಕಾರ್ಯಕರ್ತರನ್ನು ಕರೆತರಲು ಪಾಲಿಕೆ ವಾಹನ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಪ್ರಿಯಾಂಕ್ ಆರೋಪಿಸಿದ್ದಾರೆ. ಕಾರ್ಯಕರ್ತರು ಪಾಲಿಕೆ ವಾನಹಗಳಲ್ಲಿ ಹೋಗುತ್ತಿರುವ ಫೋಟೋ ಹಾಕಿ ಟ್ವೇಟ್ ಮಾಡಿದ್ದಾರೆ. ಪಾಲಿಕೆ ವಾಹನಗಳ ದುರ್ಬಳಕೆಯನ್ನು ಖಂಡಿಸಿದ್ದಾರೆ.

ಇದನ್ನೂ ಓದಿ : ಎಷ್ಟು ಮಂದಿ ಬೇಕು?: ಉದ್ಯೋಗ ಭರ್ತಿಗೆ ಯೋಗ್ಯ ಅಭ್ಯರ್ಥಿಗಳಿಲ್ಲವೆಂದ ಡಿಸಿಎಂಗೆ ಕುಮಾರಸ್ವಾಮಿ ತಿರುಗೇಟು

ಇದೇ ವೇಳೆ ರಸ್ತೆಗಳ ಮೇಲೆಯೂ ಪೌರತ್ವ ಬೆಂಬಲಿಸಿದ ಬರಹಗಳನ್ನು ಬರೆದಿರೋದು ಚರ್ಚೆಗೆ ಗ್ರಾಸವಾಗಿದೆ. ನಗರದ ಮುಖ್ಯ ರಸ್ತೆಯಲ್ಲಿ ಪೌರತ್ವ ಬೆಂಬಲಿಸಿದ ದೊಡ್ಡ ಗಾತ್ರದ ಬರಹಗಳನ್ನು ಒಂದು ಗುಂಪು ಬರೆದಿದೆ. ಇದು ಗಮನಕ್ಕೆ ಬರುತ್ತಿದ್ದಂತೆಯೇ ಮತ್ತೊಂದು ಗುಂಪು ಅದನ್ನು ಅಳಿಸಿ ಹಾಕಿ, ಆರ್.ಎಸ್.ಎಸ್. ಮುರ್ದಾಬಾದ್ ಮತ್ತಿತರ ಬರಹಗಳನ್ನು ಬರೆದಿದೆ. ಎರಡೂ ಗುಂಪುಗಳು ರಸ್ತೆಯನ್ನು ದುರ್ಬಳಕೆ ಮಾಡಿಕೊಂಡಿವೆ. ವಾಹನ ಮತ್ತು ರಸ್ತೆ ಎರಡೂ ಸಹ ಪಾಲಿಕೆ ವ್ಯಾಪ್ತಿಗೆ ಬಂದರೂ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸಿದ್ದಾರೆ.

 
First published:January 11, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ