ಗೋವಾ ಬೀಚ್​ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ 70 ವರ್ಷದ ಕಾಮುಕ..!

ಹಾಡುಹಗಲೇ ಗೋವಾದ ಬೀಚ್​ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ 70 ವರ್ಷದ ಕಾಮುಕ. ಸ್ನೇಹಿತೆಯನ್ನು ಕಾಪಾಡಲು ಹೋದ ಯುವಕನಿಗೆ ಚಾಕು ತೋರಿಸಿ ಬೆದರಿಸಿದ ಕಾಮುಕ.

Anitha E | news18
Updated:January 4, 2019, 4:45 PM IST
ಗೋವಾ ಬೀಚ್​ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ 70 ವರ್ಷದ ಕಾಮುಕ..!
ಸಾಂದರ್ಭಿಕ ಚಿತ್ರ
  • News18
  • Last Updated: January 4, 2019, 4:45 PM IST
  • Share this:
ಗೋವಾ ಎಂದ ಕೂಡಲೇ ನೆನಪಾಗೋದು ನಯನ ಮನೋಹರ ಕಡಲ ತೀರಗಳು ಹಾಗೂ ಅಲ್ಲಿ ಕಾಣ ಸಿಗುವ ಬಿಕಿನಿ ಸುಂದರಿಯರು. ಗೋವಾ ನೋಡುವುದಕ್ಕಿಂತ ಹೆಚ್ಚಾಗಿ ಅಲ್ಲಿನ ಬೀಚ್​ಗಳಲ್ಲಿ ಬಿಕಿನಿ ತೊಟ್ಟು ಒಡಾಡುವ ವಿದೇಶಿಗರನ್ನು ನೋಡಲು ಹೋಗುವವರೇ ಹೆಚ್ಚು.

ಇದನ್ನೂ ಓದಿ: ಯಶ್​-ಸುದೀಪ್​-ಪುನೀತ್​ರ​ ಹೆಗಲ ಮೇಲೆ ಬಂದೂಕು ಇರಿಸಿ ಹಾರಿಸಲಾಯಿತ ಈ ರಾಜಕೀಯ ಗುಂಡು ...?

ಪ್ರವಾಸಿಗರನ್ನು ಕೈ ಬೀಸಿ ಕರೆವ ಗೋವಾದ ಬೀಚ್​ನಲ್ಲಿ ಹಾಡುಹಗಲೇ 70 ವರ್ಷದ ಕಾಮುಕನೋರ್ವ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿದೆ. ಈತನಿಂದ ಸ್ನೇಹಿತೆಯನ್ನು ಕಾಪಾಡಲು ಹೋದ ಸ್ನೇಹಿತನಿಗೆ ಚಾಕು ತೋರಿಸಿ ಬೆದರಿಸಿದ್ದಾನೆ  ಆರೋಪಿ.

ಇದನ್ನೂ ಓದಿ: 'ನಟ ಸಾರ್ವಭೌಮ'ನಿಗಿಲ್ಲ ಐಟಿ ದಾಳಿಯ ಅಡ್ಡಿ ಎಂದ ಪವನ್​ ಒಡೆಯರ್​: ಪುನೀತ್​ ಹೊಸ ಸಿನಿಮಾಕ್ಕೆ ಬಿತ್ತು ಬ್ರೇಕ್​..!

ಗೋವಾದ ಕಲಾನ್​ಗೂಟ್​ ಬೀಚ್​ನಲ್ಲಿ ಈ ಘಟನೆ ನಡೆದಿದ್ದು, ಕಿರುಕುಳಕ್ಕೊಳಗಾದ ಮಹಿಳೆ ತನ್ನ ಸ್ನೇಹಿತನೊಂದಿಗೆ ಬೀಚ್​ನಲ್ಲಿ ಒಡಾಡುವಾಗ 70 ವರ್ಷದ ಕಾಮುಕ ಇದ್ದಕ್ಕಿದ್ದಂತೆ ಬಂದು ಆಕೆಯನ್ನು ಆಲಂಗಿಸಿಕೊಂಡಿದ್ದಾನೆ. ಮಹಿಳೆ ಆತನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನಂತರ ಮಹಿಳೆಯೇ ಆತನ್ನು ನೆಲ್ಲಕುರುಳಿಸಿ ದೂರ ಸರಿದಿದ್ದಾರೆ.

ಗುರುವಾರ ಅಂದರೆ ನಿನ್ನೆ (ಜ.3) ಈ ಘಟನೆ ನಡೆದಿದ್ದು, ಘಟನೆ ನಂತರ ಆ ಯುವತಿ ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಯನ್ನು ಆಗ್ನೆಲ್​ ಪೆರೆರಿಯಾ ಎಂದು ಗುರುತಿಸಲಾಗಿದೆ.

First published: January 4, 2019, 3:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading