• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Accident: ಮದುವೆಗೆ ಹೊರಟವರಿಗೆ ಮರದ ರೂಪದಲ್ಲಿ ಕಾದಿತ್ತು ಸಾವು! ಕ್ರೂಸರ್‌ ಡಿಕ್ಕಿಗೆ 7 ಮಂದಿ ಬಲಿ

Accident: ಮದುವೆಗೆ ಹೊರಟವರಿಗೆ ಮರದ ರೂಪದಲ್ಲಿ ಕಾದಿತ್ತು ಸಾವು! ಕ್ರೂಸರ್‌ ಡಿಕ್ಕಿಗೆ 7 ಮಂದಿ ಬಲಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮರಕ್ಕೆ ಕ್ರೂಸರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಏಳು ಜನರು ಮೃತಪಟ್ಟಿರುವ ಭೀಕರ ಘಟನೆ ಧಾರವಾಡ ತಾಲೂಕಿನ ಬಾಡ ಗ್ರಾಮದ ಬಳಿ‌ ನಿನ್ನೆ ತಡರಾತ್ರಿ ಒಂದು ಗಂಟೆ ಸುಮಾರಿಗೆ ಸಂಭವಿಸಿದೆ. ಅಪಘಾತದಲ್ಲಿ 13 ಮಂದಿ ಸಾವನ್ನಪ್ಪಿದ್ದು, 6 ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

  • Share this:

ಧಾರವಾಡ: ಅವರೆಲ್ಲ ನಿಶ್ಚಿತಾರ್ಥ (Engagement) ಮುಗಿಸಿ ಬರುತ್ತಾ ಇದ್ದರು. ಇಂದು ಮದುವೆ (Marriage) ಕಾರ್ಯವೂ ನಡೆಯಬೇಕಿತ್ತು. ಕ್ರೂಸರ್‌ (Cruiser) ವಾಹನದಲ್ಲಿ ಕುಳಿತಿದ್ದ ಅವರೆಲ್ಲ ಇನ್ನೆನು ಮನೆ (Home) ತಲುಪಿ ಬಿಡುತ್ತೇವೆ ಅಂದುಕೊಂಡಿದ್ದರು. ಅಷ್ಟರಲ್ಲಿ ಅದೇನಾಯ್ತೋ ಏನೋ, ರಸ್ತೆ ಪಕ್ಕದಲ್ಲಿದ್ದ ಮರಕ್ಕೆ (Tree) ಕ್ರೂಸರ್‌ ಡಿಕ್ಕಿ ಹೊಡೆದು ಬಿಟ್ಟಿದೆ. ಪರಿಣಾಮ ಮಕ್ಕಳು (Children), ಮಹಿಳೆಯರು (Ladies) ಸೇರಿದಂತೆ 7 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಧಾರವಾಡ (Dharwad) ತಾಲೂಕಿನ ಬಾಡ ಗ್ರಾಮದ ಬಳಿ‌ ತಡರಾತ್ರಿ ಒಂದು ಗಂಟೆ ಸುಮಾರಿಗೆ ಇಂಥದ್ದೊಂದು ಭೀಕರ ಅಪಘಾತ ನಡೆದಿದೆ. ನಿಶ್ಚಿತಾರ್ಥ, ಮದುವೆ ಸಂಭ್ರಮದಲ್ಲಿದ್ದ ಮನೆ ಸ್ಮಶಾನದಂತಾಗಿದೆ. ಇನ್ನು 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ (Hospital) ದಾಖಲಿಸಿ, ಚಿಕಿತ್ಸೆ (Treatment) ಕೊಡಿಸಲಾಗುತ್ತಿದೆ.


ಧಾರವಾಡದಲ್ಲಿ ಭೀಕರ ಅಪಘಾತ


ಮರಕ್ಕೆ ಕ್ರೂಸರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಏಳು ಜನರು ಮೃತಪಟ್ಟಿರುವ ಭೀಕರ ಘಟನೆ ಧಾರವಾಡ ತಾಲೂಕಿನ ಬಾಡ ಗ್ರಾಮದ ಬಳಿ‌ ನಿನ್ನೆ ತಡರಾತ್ರಿ ಒಂದು ಗಂಟೆ ಸುಮಾರಿಗೆ ಸಂಭವಿಸಿದೆ. ಅಪಘಾತದಲ್ಲಿ 13 ಮಂದಿ ಸಾವನ್ನಪ್ಪಿದ್ದು, 6 ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.


ಅಪಘಾತದಲ್ಲಿ ಮೃತಪಟ್ಟವರು ಯಾರು?


ಮೃತರನ್ನು 14 ವರ್ಷದ ಅನನ್ಯಾ, 13 ವರ್ಷದ ಹರೀಶ, 34 ವರ್ಷದ ಶಿಲ್ಪಾ, 60 ವರ್ಷದ ನೀಲವ್ವ, 20 ವರ್ಷದ ಮಧುಶ್ರೀ, 11 ವರ್ಷದ ಮಹೇಶ್ವರಯ್ಯ ಹಾಗೂ 35 ವರ್ಷದ ಶಂಭುಲಿಂಗಯ್ಯ ಅಂತ ಗುರುತಿಸಲಾಗಿದೆ. ಮೃತರೆಲ್ಲರೂ ಧಾರವಾಡ ತಾಲೂಕಿನ ಬೆನಕಟ್ಟಿ ಗ್ರಾಮದವರೆಂದು ಮಾಹಿತಿ ತಿಳಿದು ಬಂದಿದೆ. ಇನ್ನು 13 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆ ಹಾಗೂ ಕಿಮ್ಸ್‌ಗೆ ದಾಖಲು ಮಾಡಲಾಗಿದೆ. ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ಇದನ್ನೂ ಓದಿ: Bengaluru: ಕತ್ತರಿಗುಪ್ಪೆ ಬಳಿ ಪಾದಚಾರಿಗಳ ಮೇಲೆ ಹರಿದ ಕಾರು: ಓರ್ವ ಸಾವು, ಸಿಸಿಟಿವಿಯಲ್ಲಿ ದೃಶ್ಯ ಸೆರೆ


ಇಂದು ಮದುವೆ ಸಂಭ್ರಮದಲ್ಲಿದ್ದ ಜನ


ನಿಗದಿ ಗ್ರಾಮದ ಯುವಕನ ಮದುವೆಗೆ ಇವರೆಲ್ಲ ಬರುತ್ತಿದ್ದರು ಎನ್ನಲಾಗಿದೆ. ನಿನ್ನೆ ವೀಳ್ಯ ಶಾಸ್ತ್ರ ಮುಗಿಸಿ, ಇಂದು ಮದುವೆ ಕಾರ್ಯಕ್ಕೆ ಹೋಗುವ ತಯಾರಿಯಲ್ಲಿ ಇದ್ದರು. ನಿಗದಿ ಗ್ರಾಮದಲ್ಲಿ ನಡೆಯಲಿದ್ದ ಮದುವೆ ನಿಶ್ಚಯವಾಗಿತ್ತು. ಆದರೆ ಮಳೆ ಕಾರಣದಿಂದಾಗಿ ಮನ್ಸೂರ ರೇವಣಸಿದ್ದೇಶ್ವರ ಮಠಕ್ಕೆ ಮದುವೆ ಸ್ಥಳಾಂತರವಾಗಿತ್ತು. ಈ ವೇಳೆ ಮನ್ಸೂರ ಗ್ರಾಮದಿಂದ ಬೆನಕಟ್ಟಿ ಗ್ರಾಮಕ್ಕೆ ಮರಳುತ್ತಿದ್ದಾಗ ಘಟನೆ ನಡೆದಿದೆ.


ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ


ಈ ಭೀಕರ ಅಪಘಾತಕ್ಕೆ ಚಾಲಕನ ನಿರ್ಲಕ್ಷವೇ ಕಾರಣ ಎನ್ನಲಾಗಿದೆ. ಕ್ರೂಸರ್‌ನಲ್ಲಿ ಇದ್ದವರು ನಿಧಾನಕ್ಕೆ ಹೋಗು ಅಂದ್ರು ಚಾಲಕ ಕೇಳದೇ, ಅತಿಯಾದ ವೇಗದಲ್ಲಿ ಹೋಗಿದ್ರಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತಕ್ಕೆ ಚಾಲಕನ ಬೇಜವಾಬ್ದಾರಿ ಕಾರಣ ಅಂತ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಮಂಜುಳಾ ಹೇಳಿದ್ದಾರೆ.


ಪೊಲೀಸರಿಂದ ಮುಂದುವರೆದ ತನಿಖೆ


ಚಾಲಕನ ನಿಯಂತ್ರಣ ತಪ್ಪಿ ವಾಹನ ಮರಕ್ಕೆ ಡಿಕ್ಕಿಯಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ ಪಿ ಕೃಷ್ಣಕಾಂತ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದೀಗ ತನಿಖೆ ಮುಂದುವರೆದಿದೆ.


ಇದನ್ನೂ ಓದಿ: Bengaluru: ಬಾಂಗ್ಲಾ ಯುವತಿ ಮೇಲೆ ಗ್ಯಾಂಗ್ ರೇಪ್ ಕೇಸ್: 7 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ


ಮೈಸೂರಿನಲ್ಲಿ ಯುವಕರಿಬ್ಬರು ಸಾವು


ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟ ಘಟನೆ ಮೈಸೂರಿನ ನಂಜನಗೂಡು ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೂಡ್ಲಾಪುರದ ಸಚಿನ್ ಹಾಗೂ ಉತ್ತನಹಳ್ಳಿಯ ದೊರೆಸ್ವಾಮಿ ಮೃತರು. ನಂಜನಗೂಡಿನ ಸಿಂಧುವಳ್ಳಿ ಬಳಿಯ ಹುಣಸನಾಳು ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮೂವರು ಯುವಕರು ತ್ರಿಬಲ್ ರೈಡಿಂಗ್‌ನಲ್ಲಿ ಹೋಗುತ್ತಿದ್ದರು. ಆಗ ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರನ್ನು ನೋಡಿದ್ದಾರೆ. ಇದರಿಂದಾಗಿ ಪರಾರಿಯಾಗಲು ಯತ್ನಿಸಿದ್ದಾರೆ.

top videos
    First published: