Accident: ಕ್ರೂಸರ್ ಪಲ್ಟಿ ಹೊಡೆದು ಭೀಕರ ಅಪಘಾತ, ಸ್ಥಳದಲ್ಲೇ 7 ಮಂದಿ ದುರ್ಮರಣ

ಅಪಘಾತಕ್ಕೀಡಾದ ಕ್ರೂಸರ್ ವಾಹನ

ಅಪಘಾತಕ್ಕೀಡಾದ ಕ್ರೂಸರ್ ವಾಹನ

ಬೆಳಗಾವಿ ಜಿಲ್ಲೆಯ ಬೆಳಗಾವಿ–ಗೋಕಾಕ್ ರಸ್ತೆಯ ಕಲ್ಯಾಳ ಬ್ರಿಡ್ಜ್ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಕ್ರೂಸರ್ ವಾಹನ ಪಲ್ಟಿ ಹೊಡೆದು 7 ಮಂದಿ ಕಾರ್ಮಿಕರು ಪ್ರಾಣ ಬಿಟ್ಟಿದ್ದಾರೆ.

  • Share this:

ಬೆಳಗಾವಿ: ಇಂದು ಮುಂಜಾನೆ (Early Morning) ನಡೆದ ಭೀಕರ ಅಪಘಾತದಲ್ಲಿ (Accident) 7 ಮಂದಿ ಸಾವನ್ನಪ್ಪಿದ್ದಾರೆ. ಬೆಳಗಾವಿ (Belagavi) ಜಿಲ್ಲೆಯ ಬೆಳಗಾವಿ – ಗೋಕಾಕ್ ರಸ್ತೆಯ (Belagavi-Gokak Road) ಕಲ್ಯಾಳ ಬ್ರಿಡ್ಜ್ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಕೂಲಿ ಕಾರ್ಮಿಕರನ್ನು (Labor) ಕರೆದೊಯ್ಯುತ್ತಿದ್ದ ಕ್ರೂಸರ್ (Cruiser)  ವಾಹನ ಪಲ್ಟಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಕ್ರೂಸರ್ ಚಾಲಕನ ನಿಯಂತ್ರಣ ತಪ್ಪಿ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ವಾಹನದಲ್ಲಿದ್ದ 7 ಮಂದಿ ಸಾವನ್ನಪ್ಪಿದ್ದು, ಇನ್ನೂ 10 ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಅಂತ ಹೇಳಲಾಗಿದೆ.


ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಕ್ರೂಸರ್ ವಾಹನ


ಬೆಳಗಾವಿ–ಗೋಕಾಕ್ ರಸ್ತೆಯ ಕಲ್ಯಾಳ ಬ್ರಿಡ್ಜ್ ಬಳಿ ಕ್ರೂಸರ್ ವಾಹನ ಪಲ್ಟಿ ಹೊಡೆದಿದೆ. ಈ ಕ್ರೂಸರ್ ವಾಹನದಲ್ಲಿ ಸುಮಾರು 18 ಮಂದಿ ಕೂಲಿ ಕಾರ್ಮಿಕರು ಇದ್ದರು ಎನ್ನಲಾಗಿದೆ. ಚಾಲಕ ನಿರ್ಲಕ್ಷ್ಯತನದಿಂದ ಕ್ರೂಸರ್ ಓಡಿಸುತ್ತಾ ಇದ್ದ ಎನ್ನಲಾಗಿದೆ. ಕಲ್ಯಾಳ ಬ್ರಿಡ್ಜ್ ಬಳಿ ಬರುತ್ತಿದ್ದಂತೆ ಕ್ರೂಸರ್ ಪಲ್ಟಿ ಹೊಡೆದು, ದುರ್ಘಟನೆ ಸಂಭವಿಸಿದೆ.7 ಮಂದಿ ದುರ್ಮರಣ, ಹಲವರಿಗೆ ಗಾಯ


ಕ್ರೂಸರ್ ಡಿಕ್ಕಿ ಹೊಡೆಯುತ್ತಿದ್ದಂತೆ 7 ಮಂದಿ ಸಾವನ್ನಪ್ಪಿದ್ದಾರೆ. ಮೃತರನ್ನು ಅಡಿವೆಪ್ಪ ಚಿಲಬಾಂವಿ (27), ಬಸವರಾಜ್ ದಳವಿ (30), ಬಸವರಾಜ ಹನಮನ್ನವರ (51), ಆಕಾಶ ಗಸ್ತಿ (22), ಫಕೀರಪ್ಪ ಹರಿಜನ (55), ಮಲ್ಲಪ್ಪ ದಾಸನಟ್ಟಿ (30) ಹಾಗೂ ಬಸವರಾಜ ಸನದಿ ಎಂದು ಗುರುತಿಸಲಾಗಿದೆ.


ಇದನ್ನೂ ಓದಿ: Belagavi: 7 ಭ್ರೂಣಗಳ ಪತ್ತೆ ಕೇಸ್, ಹೆರಿಗೆ ಆಸ್ಪತ್ರೆ, ಸ್ಕ್ಯಾನಿಂಗ್ ಸೆಂಟರ್ ಸೀಜ್; ಸಚಿವ ಸುಧಾಕರ್ ಖಡಕ್​ ಆದೇಶ


ಮತ್ತೊಂದು ವಾಹನ ಹಿಂದಿಕ್ಕಲು ಹೋಗಿ ಪಲ್ಟಿ


ಕ್ರೂಸರ್‌ನಲ್ಲಿ ಇದ್ದವರೆಲ್ಲ ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರು ಎನ್ನಲಾಗಿದೆ. ಇವರೆಲ್ಲ ಅಕ್ಕತಂಗೇರಹಾಳ ಗ್ರಾಮದಿಂದ ಸಾಂಬ್ರಾ - ಸುಳೇಭಾವಿ ರೈಲು ಮಾರ್ಗದಲ್ಲಿ ದುರಸ್ತಿ ಕಾಮಗಾರಿಗೆ ಹೊರಟಿದ್ದರು. ಈ ವೇಳೆ ಬೆಳಗಾವಿ- ಗೋಕಾಕ್ ರಾಜ್ಯ ಹೆದ್ದಾರಿಯಲ್ಲಿ ಮತ್ತೊಂದು ಕ್ರೂಸರ್ ವಾಹನ ಹಿಂದಿಕ್ಕಲು ಹೋಗಿ ಡಿಕ್ಕಿ ಹೊಡೆದಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಹಳ್ಳದ ಸೇತುವೆಗೆ ಡಿಕ್ಕಿ ಹೊಡೆದು, ಎರಡು ಸಲ ಪಲ್ಟಿ ಹೊಡೆದಿದೆ ಎನ್ನಲಾಗಿದೆ.


ಗಾಯಾಳುಗಳು ಆಸ್ಪತ್ರೆಗೆ ದಾಖಲು


ಇನ್ನು ಕ್ರೂಸರ್‌ನಲ್ಲಿದ್ದ ಹಲವು ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಅಂತ ಹೇಳಲಾಗಿದೆ. ಗಾಯಾಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಸಿ, ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಸ್ಥಳಕ್ಕೆ ಬೆಳಗಾವಿ ಪೋಲಿಸ್ ಕಮಿಷನರ್ ಡಾ.  ಬೋರಲಿಂಗಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ಬಗ್ಗೆ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಲಾರಿ ಹಾಗೂ ಬಸ್‌ಗಳ ನಡುವೆ ಸರಣಿ ಅಪಘಾತ


ಇತ್ತ ಬೆಂಗಳೂರು ಗ್ರಾಮಂತರದ ಹೊಸಕೋಟೆ ಬಳಿ ಇಂದು ಲಾರಿ ಬಸ್ ಮತ್ತು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. 8 ವಾಹನಗಳು ಜಖಂ ಆಗಿವೆ. ಹೊಸಕೋಟೆಯ ಟೋಲ್ ಪ್ಲಾಜಾ ಬಳಿ ಘಟನೆ ನಡೆದಿದೆ. ಲಾರಿ‌ ಚಾಲಕನ ನಿರ್ಲಕ್ಷ್ಯದಿಂದ ಸರಣಿ ಅಪಘಾತ ನಡೆದಿದೆ ಎನ್ನಲಾಗಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.


ಇದನ್ನೂ ಓದಿ: Sister Kidnap: ತವರು ಮನೆಗೆ ಹೋದವಳು ನಾಪತ್ತೆ, ರಿಸೆಪ್ಷನ್​ಗೂ ಮುನ್ನ ತಂಗಿಯನ್ನೇ ಕಿಡ್ನ್ಯಾಪ್ ಮಾಡಿದ್ನಾ ಸಹೋದರ?


8 ಮಂದಿಗೆ ಸಣ್ಣ ಪುಟ್ಟ ಗಾಯ


ಎರಡು ಬಸ್, ಒಂದು ಲಾರಿ, ಒಂದು ಗೂಡ್ಸ್ ವಾಹನ ಮತ್ತು ಮೂರು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 8 ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅಪಘಾತದ ರಬಸಕ್ಕೆ ಲಾರಿಯ ಮುಂಬಾಗ ಬಸ್ಸಿನ ಹಿಂಭಾಗ ಜಖಂ ಆಗಿದೆ. ಇನ್ನು ಬಸ್ಸಿನ ಹಿಂಬದಿ ಸೀಟಿನಲ್ಲಿ ಯಾರು ಇಲ್ಲದ ಕಾರಣ ಪ್ರಾಣ ಹಾನಿ ತಪ್ಪಿದೆ.

Published by:Annappa Achari
First published: