• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Neonatal Baby: ಹಳ್ಳದಲ್ಲಿ ತೇಲಿ ಬಂತು 7 ಭ್ರೂಣಗಳ ಮೃತದೇಹ! ಗಾಬರಿಯಾದ್ರು ಬಸ್ ನಿಲ್ದಾಣದಲ್ಲಿದ್ದ ಜನ!

Neonatal Baby: ಹಳ್ಳದಲ್ಲಿ ತೇಲಿ ಬಂತು 7 ಭ್ರೂಣಗಳ ಮೃತದೇಹ! ಗಾಬರಿಯಾದ್ರು ಬಸ್ ನಿಲ್ದಾಣದಲ್ಲಿದ್ದ ಜನ!

ಕಾಲುವೆಯಲ್ಲಿ ತೇಲಿ ಬಂತು ಭ್ರೂಣ

ಕಾಲುವೆಯಲ್ಲಿ ತೇಲಿ ಬಂತು ಭ್ರೂಣ

5 ಡಬ್ಬಿಗಳಲ್ಲಿ 7 ಭ್ರೂಣಗಳು ಪತ್ತೆಯಾಗಿದೆ. ಮೂಡಲಗಿ ಬಸ್ ನಿಲ್ದಾಣದ ಬಳಿ ಇರುವ ಹಳ್ಳದಲ್ಲಿ ಭ್ರೂಣಗಳ ಮೃತ ದೇಹಗಳು ಪತ್ತೆಯಾಗಿವೆ. ಮೃತದೇಹಗಳನ್ನು ಯಾರು ಎಸೆದಿದ್ದಾರೆ ಎಂಬುದು ಇನ್ನೂ ನಿಗೂಢವಾಗಿದೆ.

  • Share this:

ಬೆಳಗಾವಿ (ಜೂ 24): 7 ಭ್ರೂಣಗಳ (Neonatal Babies) ಮೃತದೇಹವನ್ನು (Dead Body) ಹಳ್ಳದಲ್ಲಿ ತೇಲಿ ಬಿಟ್ಟಿರುವ ಹೀನ ಕೃತ್ಯ ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. 7 ಭ್ರೂಣಗಳು ಮೃತದೇಹವನ್ನು ಕೀಚಕರು ಹಳ್ಳಕ್ಕೆ ಹಾಕಿ ಹೋಗಿದ್ದಾರೆ. ಡಬ್ಬದಲ್ಲಿ ಹಾಕಿ ಹಳ್ಳಕ್ಕೆ ಬಿಡಲಾಗಿದ್ದು, ಶವ ನೋಡಿದ ಜನ ಹೌಹಾರಿದ್ದಾರೆ. ಸ್ಥಳಕ್ಕೆ ಮೂಡಲಗಿ ಪೊಲೀಸರ (Police) ಭೇಟಿ ಪರಿಶೀಲನೆ ನಡೆಸಿದ್ದಾರೆ. ಡಿಎಚ್ಒ ಡಾ.ಮಹೇಶ ಕೋಣಿ (Mahesh Koni) ಪ್ರತಿಕ್ರಿಯೆ  ಈಗಾಗಲೇ ಗ್ರಾಮ ಪಂಚಾಯತಿಯಿಂದ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದೇವೆ. ಇವೆಲ್ಲವೂ ಐದು ತಿಂಗಳ ಭ್ರೂಣಗಳಾಗಿವೆ. ಭ್ರೂಣಗಳನ್ನು ಈಗಾಗಲೇ ಸ್ಥಳೀಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಕೇಸ್ ದಾಖಲಾದ ಬಳಿಕ ಅವುಗಳನ್ನ ಬೆಳಗಾವಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (Laboratory) ತಂದು ಪರೀಕ್ಷೆ ಮಾಡಲಾಗುವುದು


ಒಟ್ಟು 5 ಡಬ್ಬಿಗಳಲ್ಲಿ 7 ಭ್ರೂಣಗಳು ಪತ್ತೆ


ಒಟ್ಟು 5 ಡಬ್ಬಿಗಳಲ್ಲಿ 7 ಭ್ರೂಣಗಳು ಪತ್ತೆಯಾಗಿದೆ. ಮೂಡಲಗಿ ಬಸ್ ನಿಲ್ದಾಣದ ಬಳಿ ಇರುವ ಹಳ್ಳದಲ್ಲಿ ಭ್ರೂಣಗಳ ಮೃತ ದೇಹಗಳು ಪತ್ತೆಯಾಗಿವೆ. ಮೃತದೇಹಗಳನ್ನು ಯಾರು ಎಸೆದಿದ್ದಾರೆ ಎಂಬುದು ಇನ್ನೂ ನಿಗೂಢವಾಗಿದೆ. ಮೃತದೇಹ ಕಂಡು ಮೂಡಲಗಿ ಜನರು ಹೌಹಾರಿದ್ದಾರೆ. ಸ್ಥಳಕ್ಕೆ ಮೂಡಲಗಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.


ಡಿಎಚ್ಒ ಡಾ.ಮಹೇಶ ಕೋಣಿ  ಹೇಳಿಕೆ


ಮೂಡಲಗಿ ಪಟ್ಟಣದ ಸೇತುವೆ ಕೆಳಗೆ  ಡಬ್ಬಿಯಲ್ಲಿ ಮೃತ ಭ್ರೂಣಗಳು ಪತ್ತೆಯಾಗಿವೆ. ಇದು ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣಗಳ ಹತ್ಯೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಈಗಾಗಲೇ ಗ್ರಾಮ ಪಂಚಾಯತಿಯಿಂದ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದೇವೆ. ಇವೆಲ್ಲವೂ ಐದು ತಿಂಗಳ ಭ್ರೂಣಗಳಾಗಿವೆ. ಭ್ರೂಣಗಳನ್ನು ಈಗಾಗಲೇ ಸ್ಥಳೀಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಕೇಸ್ ದಾಖಲಾದ ಬಳಿಕ ಅವುಗಳನ್ನ ಬೆಳಗಾವಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ತಂದು ಪರೀಕ್ಷೆ ಮಾಡಲಾಗುವುದು. ಇದನ್ನ ಯಾರು ಮಾಡಿದ್ದಾರೆ, ಎಲ್ಲಿಂದ ಬಂದಿದ್ದು ಎನ್ನುವ ಬಗ್ಗೆ ತನಿಖೆ ಮಾಡಲಾಗುವುದು. ಭ್ರೂಣಗಳ ಹತ್ಯೆ ಕುರಿತು ತನಿಖೆಗೆ ಒಂದು ತಂಡ ಸಹ ರಚನೆ ಮಾಡಲಾಗುವುದು. ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ತಂಡ ರಚನೆ ಮಾಡುತ್ತೇವೆ ಎಂದ್ರು.


ಇದನ್ನೂ ಓದಿ: Belagavi: ನಾಯಿ ಬರ್ತ್​ಡೇ ಆಚರಣೆ ವಿಡಿಯೋ ನೋಡಿ! 1 ಕ್ವಿಂಟಲ್ ಕೇಕ್, 5 ಸಾವಿರ ಜನರಿಗೆ ಭರ್ಜರಿ ಊಟ!


ವಾಹನಗಳ ಸೈಲೆನ್ಸರ್​ ನಾಶ ಮಾಡಿದ ಖಾಕಿ

ರಾಯಚೂರು: ನಗರದ ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ಸೈಲೆನ್ಸರ್‌ಗಳನ್ನು ರಸ್ತೆಯ ಮೇಲಿರಿಸಿದ ಪೊಲೀಸರು ಅವುಗಳನ್ನು ರೋಡ್ ರೂಲರ್‌ನಿಂದ ನಾಶಪಡಿಸಿದರು. ಜೂನ್ 2 ರಿಂದ 8 ನೇ ತಾರೀಖಿನವರೆಗೂ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದ ಇಲಾಖೆ ಜಿಲ್ಲೆಯಲ್ಲಿ ಶಬ್ದಮಾಲಿನ್ಯ ಮಾಡುತ್ತಿದ್ದ ದ್ವಿಚಕ್ರ, ತ್ರಿಚಕ್ರ ಮತ್ತು ಭಾರಿ ವಾಹನಗಳ ಸೈಲೆನ್ಸರ್​ಗಳನ್ನು ವಶಕ್ಕೆ ಪಡೆದಿದ್ದರು. ಇದರ ಜೊತೆಗೆ 2.95 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.


ಇದನ್ನೂ ಓದಿ: Bengaluru: ಆನ್‌ಲೈನಲ್ಲೇ ಬ್ಯಾಂಕ್‌ ಮ್ಯಾನೇಜರ್‌ಗೆ ಗಾಳ ಹಾಕಿದ ಯುವತಿ, 5 ಕೋಟಿ ಕಳೆದುಕೊಂಡು ಈತನಾದ ಪೊಲೀಸ್ ಅತಿಥಿ!


ತೀರ್ಥ ಸೇವನೆ ಮಾಡಲು ಹೋಗಿ ಕೃಷ್ಣನ ಮೂರ್ತಿ ನುಂಗಿದ


ಬೆಳಗಾವಿ (ಜೂ. 24): ತೀರ್ಥ ಸೇವನೆ (Tirtha Consumption) ವೇಳೆ ವ್ಯಕ್ತಿಯೋರ್ವ ಬಾಲಕೃಷ್ಣನ ಲೋಹದ ಮೂರ್ತಿ (Idol) ನುಂಗಿರೋ ವಿಚಿತ್ರ ಘಟನೆ ಬೆಳಗಾವಿಯಲ್ಲಿ ನಡೆದಿದೆ. ದೇವರಿಗೆ ಪೂಜೆ ಮಾಡಿ ಅಂಗೈನಲ್ಲಿ ಬಾಲಕೃಷ್ಣನ ಮೂರ್ತಿ ಇಟ್ಟುಕೊಂಡಿದ್ದ 45 ವರ್ಷದ ವ್ಯಕ್ತಿ ಆಕಸ್ಮಿಕವಾಗಿ ತೀರ್ಥದ ಜೊತೆ ಮೂರ್ತಿಯನ್ನು ನುಂಗಿದ್ದಾರೆ. ಈತ ಪ್ರತಿ ದಿನ ದೇವರ ಪೂಜೆ ಮಾಡಿದ ಬಳಿಕ ತೀರ್ಥ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡಿದ್ದರು. ಎಂದಿನಂತೆ ಪೂಜೆ ಮಾಡಿದ ಬಳಿಕ ತೀರ್ಥ ಸೇವಿಸುವಾಗ ತೀರ್ಥದ ಜೊತೆಯೇ ಮೂರ್ತಿ ನುಂಗಿರೋ ಘಟನೆ ನಡೆದಿದೆ. ಬಳಿಕ ಆತನಿಗೆ ಗಂಟಲು ನೋವು (Throat Pain) ಮತ್ತು ಗಂಟಲು ಊತ ಕಾಣಿಸಿಕೊಂಡಿದೆ. ತಕ್ಷಣ ಸ್ಥಳೀಯ ವೈದ್ಯರನ್ನು ಆತ ಸಂಪರ್ಕಿಸಿದ್ದಾರೆ.

Published by:Pavana HS
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು