HOME » NEWS » State » 67 YR OLD KUMBH MELA RETURNEE BECOMES SUPER SPREADER INFECTS 33 WITH COVID 19 IN BENGALURU LG

ಕುಂಭಮೇಳದಿಂದ ಬೆಂಗಳೂರಿಗೆ ವಾಪಸ್ಸಾದ ಸೋಂಕಿತ ಮಹಿಳೆಯಿಂದ 33 ಜನರಿಗೆ ಕೊರೋನಾ ಪಾಸಿಟಿವ್​​

ಬಿಬಿಎಂಪಿ ಅಧಿಕಾರಿಗಳು ಈ ವಿಷಯದ ಬಗ್ಗೆ ಮಾಹಿತಿ ಕಲೆ ಹಾಕಿ ಸಂಪರ್ಕಿತರನ್ನು ಪತ್ತೆ ಹಚ್ಚುವ ಕಾರ್ಯ ಮಾಡಿದ್ದಾರೆ. ಸೈಖಿಯಾಟ್ರಿಸ್ಟ್​​ನ ಸಂಪರ್ಕಕ್ಕೆ ಬಂದಿದ್ದ ಎಲ್ಲರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸುವಂತೆ ಸ್ಪಂದನ ಹಾಸ್ಪಿಟಲ್​​ ಬಿಬಿಎಂಪಿ ಅಧಿಕಾರಿಗಳ ಬಳಿ ಕೇಳಿದೆ. ಅದರಂತೆ ಎಲ್ಲಾ ರೋಗಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇಬ್ಬರು ಆಸ್ಪತ್ರೆ ಸಿಬ್ಬಂದಿ ಸೇರಿದಂತೆ 13 ಮಂದಿ ಮನೋರೋಗಿಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

news18-kannada
Updated:May 13, 2021, 10:40 AM IST
ಕುಂಭಮೇಳದಿಂದ ಬೆಂಗಳೂರಿಗೆ ವಾಪಸ್ಸಾದ ಸೋಂಕಿತ ಮಹಿಳೆಯಿಂದ 33 ಜನರಿಗೆ ಕೊರೋನಾ ಪಾಸಿಟಿವ್​​
ಕುಂಭಮೇಳ
  • Share this:
ಬೆಂಗಳೂರು(ಮೇ 13): ಕೊರೋನಾ ರಣಕೇಕೆ ಹಾಕುತ್ತಿರುವ ಸಂದರ್ಭದಲ್ಲಿ ದೇಶದಲ್ಲಿ ಪ್ರಸಿದ್ಧ ಕುಂಭಮೇಳವೂ ನಡೆಯುತ್ತಿದೆ. ಇಲ್ಲಿಂದಲೇ ಸೋಂಕು ವ್ಯಾಪಕವಾಗಿ ಹಬ್ಬಿದೆ. ಕುಂಭಮೇಳದಲ್ಲಿ ಭಾಗವಹಿಸಿದ್ದ ಹಲವು ಜನರು ಕೊರೋನಾದಿಂದ ಉಸಿರು ಚೆಲ್ಲಿದ್ದಾರೆ. ಈಗ ಇದರ ಜೊತೆಗೆ ಕುಂಭಮೇಳದಲ್ಲಿ ಭಾಗವಹಿಸಿದ್ದ ಕೊರೋನಾ ಸೋಂಕಿತೆ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಅವರು ಸುಮಾರು 33ಕ್ಕೂ ಹೆಚ್ಚು ಮಂದಿ ಜೊತೆ ಸಂಪರ್ಕ ಹೊಂದಿದ್ದು, ಅವರೆಲ್ಲರಿಗೂ ಕೊರೋನಾ ಪಾಸಿಟಿವ್​ ಆಗಿರುವ ಘಟನೆ ಬೆಳಕಿಗೆ ಬಂದಿದೆ. ಏಪ್ರಿಲ್​ ಮೊದಲ ವಾರದಲ್ಲಿ ಮಹಿಳೆಗೆ ಕೊರೋನಾ ಸೋಂಕು ತಗುಲಿತ್ತು ಎಂದು ತಿಳಿದು ಬಂದಿದೆ.

67 ವರ್ಷದ ಸೋಂಕಿತ ಮಹಿಳೆ ಕೊರೋನಾ ಸೂಪರ್​ ಸ್ಪ್ರೆಡರ್ ಆಗಿದ್ದಾರೆ. ಸುಮಾರು 33ಕ್ಕೂ ಹೆಚ್ಚು ಜನ ಇವರ ಸಂಪರ್ಕಕ್ಕೆ ಬಂದಿದ್ದು, ಈಗ ಅವರೆಲ್ಲರಿಗೂ ಕೊರೋನಾ ಪಾಸಿಟಿವ್ ಆಗಿದೆ. ಪಾಸಿಟಿವ್ ಬಂದವರಲ್ಲಿ 13 ಮಂದಿ ಬೆಂಗಳೂರು ದಕ್ಷಿಣದ ಸ್ಪಂದನ ಹೆಲ್ತ್​ ಕೇರ್​​​​​ನ ಮನೋರೋಗಿಗಳಾಗಿಗಳಾಗಿದ್ದಾರೆ ಎನ್ನಲಾಗಿದೆ.

ವರದಿ ಪ್ರಕಾರ, ಮಹಿಳೆಯ ಸೊಸೆ ಸ್ಪಂದನ ಹೆಲ್ತ್​ ಕೇರ್​​ನಲ್ಲಿ ಸೈಖಿಯಾಟ್ರಿಸ್ಟ್​(ಮನೋರೋಗ ತಜ್ಞೆ) ಆಗಿದ್ದಾರೆ. ಇವರು ಇಲ್ಲಿನ 13 ರೋಗಿಗಳಿಗೆ ಚಿಕಿತ್ಸೆ ನೀಡಿದ್ದರು ಎನ್ನಲಾಗಿದ್ದು, ಈಗ ಅವರೆಲ್ಲರಿಗೂ ಕೊರೋನಾ ಪಾಸಿಟಿವ್ ಆಗಿದೆ. ಕೆಲವು ದಿನಗಳ ಬಳಿಕ ಮನೋರೋಗ ತಜ್ಞೆ ಕೊರೋನಾ ಪರೀಕ್ಷೆಗೆ ಒಳಗಾಗಿದ್ದಾರೆ. ಆಗ ಅವರಿಗೆ ಪಾಸಿಟಿವ್ ಇರುವುದು ತಿಳಿದಿದೆ. ಆದರೆ ಯಾವುದೇ ಲಕ್ಷಣಗಳಿಲ್ಲ. ಕುಂಭಮೇಳದಿಂದ ವಾಪಸ್ಸಾದ ತನ್ನ ಅತ್ತೆಯಿಂದ ಕೊರೋನಾ ತಗುಲಿರುವುದು ಖಚಿತವಾಗಿದೆ. ಈಗ ಅವರು ಚಿಕಿತ್ಸೆ ನೀಡಿದ 13 ಮಂದಿ ರೋಗಿಗಳಿಗೂ ಕೊರೋನಾ ಪಾಸಿಟಿವ್ ಆಗಿರುವುದು ದುಃಖಕರ ಸಂಗತಿಯಾಗಿದೆ.

ಪ್ರೀತಿಸಿ ವಂಚಿಸಿದ ಪ್ರಿಯತಮನ ನಕಲಿ ಅಂತ್ಯಸಂಸ್ಕಾರ ಮಾಡಿ ಆತನ ಮಾಜಿ ಪ್ರಿಯತಮೆಯ ಮೇಲೆ ಸೇಡು ತೀರಿಸಿಕೊಂಡ ಮಹಿಳೆ..!

ಇದಾದ ಬಳಿಕ ಬಿಬಿಎಂಪಿ ಅಧಿಕಾರಿಗಳು ಈ ವಿಷಯದ ಬಗ್ಗೆ ಮಾಹಿತಿ ಕಲೆ ಹಾಕಿ ಸಂಪರ್ಕಿತರನ್ನು ಪತ್ತೆ ಹಚ್ಚುವ ಕಾರ್ಯ ಮಾಡಿದ್ದಾರೆ. ಸೈಖಿಯಾಟ್ರಿಸ್ಟ್​​ನ ಸಂಪರ್ಕಕ್ಕೆ ಬಂದಿದ್ದ ಎಲ್ಲರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸುವಂತೆ ಸ್ಪಂದನ ಹಾಸ್ಪಿಟಲ್​​ ಬಿಬಿಎಂಪಿ ಅಧಿಕಾರಿಗಳ ಬಳಿ ಕೇಳಿದೆ. ಅದರಂತೆ ಎಲ್ಲಾ ರೋಗಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇಬ್ಬರು ಆಸ್ಪತ್ರೆ ಸಿಬ್ಬಂದಿ ಸೇರಿದಂತೆ 13 ಮಂದಿ ಮನೋರೋಗಿಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಕುಂಭಮೇಳದಿಂದ ಹಿಂದಿರುಗಿದ ಕುಟುಂಬದ ಎಲ್ಲಾ 18 ಮಂದಿಗೂ ಕೊರೋನಾ ಪಾಸಿಟಿವ್​ ಖಚಿತವಾಗಿ ಎಂದು ತಿಳಿದು ಬಂದಿದೆ.

ನಂದಿನಿ ಲೇಔಟ್​​​​ ಪ್ರಾಥಮಿಕ ಆರೋಗ್ಯ ಕೇಂದ್ರದ ಬಿಬಿಎಂಪಿ ವೈದ್ಯಾಧಿಕಾರಿ ಕೊರೋನಾ ಹರಡುವಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕುಂಭಮೇಳದಿಂದ ವಾಪಸ್ಸಾದವರಿಂದ ಕೊರೊನಾ ಹರಡಿದೆ. 67 ವರ್ಷದ ಸೋಂಕಿತ ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
Youtube Video

ಸ್ಪಂದನ ಹೆಲ್ತ್​ಕೇರ್​ ಸೆಂಟರ್​​ನ ಮುಖ್ಯಸ್ಥ ಮಹೇಶ್​ ಆರ್​.ಗೌಡ ಮಾತನಾಡಿ, ಆಸ್ಪತ್ರೆ ಸಿಬ್ಬಂದಿ ಸೇರಿ ಒಟ್ಟು 16 ರೋಗಿಗಳಿಗೆ ಕೊರೋನಾ ಪಾಸಿಟಿವ್​ ಆಗಿದೆ ಎಂದಿದ್ದಾರೆ.
Published by: Latha CG
First published: May 13, 2021, 10:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories