• Home
  • »
  • News
  • »
  • state
  • »
  • Guinness World Record: 6 ಸಾವಿರ ಕೊಡವರಿಂದ ವರ್ಲ್ಡ್ ರೆಕಾರ್ಡ್! ಅಷ್ಟಕ್ಕೂ ಅವರೇನು ಮಾಡಿದ್ದಾರೆ ಅಂತ ತಿಳಿದರೆ ನೀವೇ ಸೂಪರ್ ಅಂತೀರಿ

Guinness World Record: 6 ಸಾವಿರ ಕೊಡವರಿಂದ ವರ್ಲ್ಡ್ ರೆಕಾರ್ಡ್! ಅಷ್ಟಕ್ಕೂ ಅವರೇನು ಮಾಡಿದ್ದಾರೆ ಅಂತ ತಿಳಿದರೆ ನೀವೇ ಸೂಪರ್ ಅಂತೀರಿ

ಕೊಡವ ಸಮುದಾಯದವರು

ಕೊಡವ ಸಮುದಾಯದವರು

ಕೊಡವರು ಒಂದೇ ಕುಲಕ್ಕೆ ಸಂಬಂಧಪಟ್ಟವರು ಎಂಬ ಹಿನ್ನೆಲೆಯಲ್ಲಿ ವಂಶವೃಕ್ಷ ಜೋಡಣೆ ಕಾರ್ಯಕ್ರಮದ ಅಂಗವಾಗಿ ಮುಖ್ಯವಾಗಿ ವಿಶ್ವ ದಾಖಲೆ ಬರೆಯುವ ಉದ್ದೇಶದಿಂದ ಬಿಟ್ಟಂಗಾಲದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.

  • Share this:

ಗಿನ್ನಿಸ್ ವಿಶ್ವ ದಾಖಲೆ (Guinness World Record) ಪುಟದಲ್ಲಿ ಹೆಸರು ಬರೆಯುವ ಉದ್ದೇಶದಿಂದ ಕೊಡವ (Kodava) ಸಮುದಾಯದ ಸುಮಾರು 6,000 ಜನರು ಶನಿವಾರ ವಿರಾಜಪೇಟೆ (Virajpet) ಯ ಬಿಟ್ಟಂಗಾಲದಲ್ಲಿ ಒಂದೆಡೆ ನೆರೆದಿದ್ದಾರೆ. ಎಲ್ಲಾ ಕೊಡವರು ಒಂದೇ ಕುಟುಂಬಕ್ಕೆ ಸೇರಿದವರೆಂದು ದೃಢೀಕರಿಸುವಲ್ಲಿ ಯಶಸ್ಸು ಕಂಡಿರುವ ಕೊಡವ ಕ್ಲಾನ್ ಪೋರ್ಟಲ್ (Kodava Clan Portal) ಈ ಕಾರ್ಯಕ್ರಮ ಆಯೋಜಿಸಿದ್ದು, ಈ ಉಪಕ್ರಮವನ್ನು ಒಕ್ಕೂಟ ಎಂದು ಹೆಸರಿಸಲಾಗಿದೆ. ಕೊಡವರು ಒಂದೇ ಕುಲಕ್ಕೆ ಸಂಬಂಧಪಟ್ಟವರು ಎಂಬ ಹಿನ್ನೆಲೆಯಲ್ಲಿ ವಂಶವೃಕ್ಷ ಜೋಡಣೆ ಕಾರ್ಯಕ್ರಮದ ಅಂಗವಾಗಿ ಮುಖ್ಯವಾಗಿ ವಿಶ್ವ ದಾಖಲೆ ಬರೆಯುವ ಉದ್ದೇಶದಿಂದ ಬಿಟ್ಟಂಗಾಲದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.


ಒಂದೇ ಕಡೆ ಸೇರಿದ ಕೊಡವ ಕುಟುಂಬ!


"ನಾವೆಲ್ಲರೂ ಒಂದೇ ಕುಟುಂಬದವರು ಎಂದು ಸಾಬೀತುಪಡಿಸಲು ಸುಮಾರು 6500 ಜನರು ಒಂದೇ ಸೂರಿನಡಿ ಸೇರಿಕೊಂಡಿದ್ದೇವೆ" ಎಂದು ಕೊಡವ ಕ್ಲಾನ್ ಪೋರ್ಟಲ್ ಸಂಸ್ಥಾಪಕ ಜಿ ಕಿಶೂ ಉತ್ತಪ್ಪ ತಿಳಿಸಿದರು.


ಮೂರು ತಲೆಮಾರಿನ ಜನರು ಈ ಕಾರ್ಯಕ್ರಮಕ್ಕೆ ಜಮಾಯಿಸಿದ್ದಾರೆ. ಹಿಂದಿನ ವಿಶ್ವ ದಾಖಲೆಯನ್ನು ಈ ಕಾರ್ಯಕ್ರಮ ಮುರಿದಿದೆಯೇ ಎಂದು ಖಚಿತಪಡಿಸಲು ವರ್ಲ್ಡ್ ರೆಕಾರ್ಡ್ ಅಸೋಸಿಯೇಷನ್‌ನ ಪ್ರತಿನಿಧಿಗಳು ಇದನ್ನು ಮೇಲ್ವಿಚಾರಣೆ ಮಾಡಿದ್ದಾರೆ ಎಂದು ಅವರು ಕಾರ್ಯಕ್ರಮದ ಬಗ್ಗೆ ವಿವರಿಸಿದರು.


ಕೊಡವ ಕ್ಲಾನ್ ಪೋರ್ಟಲ್


ಕೊಡವ ಸಮುದಾಯವು ಪೂರ್ವಜರ ವಂಶಾವಳಿಯೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡಲು ಕೊಡವ ಕ್ಲಾನ್ ಪೋರ್ಟಲ್ ಅನ್ನು ಪ್ರಾರಂಭಿಸಲಾಗಿದೆ. 21,000 ಕ್ಕೂ ಹೆಚ್ಚು ಕೊಡವ ವ್ಯಕ್ತಿಗಳ ದೊಡ್ಡ ಕುಟುಂಬ ವೃಕ್ಷವನ್ನು ರಚಿಸುವಲ್ಲಿ ಪೋರ್ಟಲ್ ಯಶಸ್ವಿಯಾಗಿದೆ. ಪೋರ್ಟಲ್ ಮೂಲಕ ಅವರು ಎಫ್‌ಎಂಕೆಎಂ ಕಾರಿಯಪ್ಪ ಅಥವಾ ಸಮುದಾಯದ ಬೇರೆಯವರೊಂದಿಗೆ ಹೇಗೆ ಸಂಬಂಧ ಹೊಂದಿದ್ದಾರೆ ಎಂಬುದನ್ನು ಸಹ ಕಂಡುಹಿಡಿಯಬಹುದು.


ಇದನ್ನೂ ಓದಿ: ಅಷ್ಟಮಂಗಲದ ಪ್ರಕಾರವೇ ಪತ್ತೆಯಾಯ್ತು ಶಿವಲಿಂಗ!


ಈಗಾಗಲೇ ಇಂಡಿಯನ್‌ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಕೊಡವ ಕ್ಲಾನ್‌ ಸಂಸ್ಥೆ ದಾಖಲೆ ಹೊಂದಿದೆ. ಈಗ ಹೆಚ್ಚಿನ ಮನ್ನಣೆಗಾಗಿ ಗಿನ್ನೆಸ್ ಪುಟದಲ್ಲಿ ವಿಶ್ವ ದಾಖಲೆ ಬರೆಯಲು ಈ ಕಾರ್ಯಕ್ರಮವನ್ನು ಹಂಚಿಕೊಂಡಿದೆ.


ಫ್ರಾನ್ಸ್‌ ದಾಖಲೆ ಮುರಿಯುವ ಪ್ರಯತ್ನ


"ನಾವೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದ್ದೇವೆಯೇ ಎಂದು ಕಂಡುಹಿಡಿಯಲು ನಾವು ಈಗ ಈವೆಂಟ್‌ನ ಭಾಗವಾಗಿರುವ ಪ್ರತಿಯೊಬ್ಬರನ್ನು ಪೋರ್ಟಲ್‌ನಲ್ಲಿರುವ ಕುಟುಂಬ ವೃಕ್ಷಕ್ಕೆ ಲಿಂಕ್ ಮಾಡುತ್ತಿದ್ದೇವೆ" ಎಂದು ಕಿಶೂ ವಿವರಿಸಿದರು.


ಈಗಾಗಲೇ ಫ್ರಾನ್ಸ್‌ನಲ್ಲಿ ಒಟ್ಟುಗೂಡಿದ ಅತಿದೊಡ್ಡ ಕುಟುಂಬ ಗಿನ್ನಿಸ್‌ ಬುಕ್‌ನಲ್ಲಿ ಹೆಸರು ಪಡೆದುಕೊಂಡಿದೆ. 4514 ಮಂದಿಯ 'ಲಾರ್ಜೆಸ್ಟ್‌ ಫ್ಯಾಮಿಲಿ ಗ್ಯಾದರಿಂಗ್‌' ದಾಖಲೆಯನ್ನು ಮುರಿಯುವ ಗುರಿ ಇದಾಗಿದೆ" ಎಂದು ಅವರು ವಿವರಿಸಿದರು.


ಹಲವು ಕಾರ್ಯಕ್ರಮಗಳ ಆಯೋಜನೆ


ಶನಿವಾರ ನಡೆದ ಕಾರ್ಯಕ್ರಮದಲ್ಲಿ 6000ಕ್ಕೂ ಅಧಿಕ ಜನ ಭಾಗವಹಿಸಿ, ಹಲವು ಕಾರ್ಯಕ್ರಮಗಳಿಗೆ ಸಾಕ್ಷಿಯಾದರು. ಕಾರ್ಯಕ್ರಮದಲ್ಲಿ ಕೊಡವ ಸಾಹಿತ್ಯಾಸಕ್ತರಿಗೆ ತಮ್ಮ ಕೃತಿಗಳನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸಿ ಪುಸ್ತಕ ಮಾರಾಟವನ್ನು ಆಯೋಜಿಸಿತ್ತು.


ಸುತ್ತಮುತ್ತಲಿನ 30ಕ್ಕೂ ಹೆಚ್ಚು ಮಳಿಗೆಗಳು ಕೊಡವ ಸಂಸ್ಕೃತಿಯನ್ನು ಪ್ರಚಾರ ಮಾಡುವಲ್ಲಿ ನಿರತವಾಗಿವೆ. ವಾಲಗಥಾಟ್ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳು, ಗಾಯನ ಮತ್ತು ಇತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.


ಮಾತೃಭಾಷೆ ಕೊಡವ ತಕ್ಕ!


ಕೊಡಗಿನ ಜನಸಂಖ್ಯೆಯಲ್ಲಿ ಸುಮಾರು ಮೂರನೇ ಒಂದರಷ್ಟು ಮಂದಿ ಕೊಡವರು. ಮಾತೃಭಾಷೆ ಕೊಡವ ತಕ್ಕ. ಕೊಡವ ತಕ್ಕನ್ನು ಬಳಸುವ ಸುಮಾರು ಐದು ಲಕ್ಷ ಜನರಲ್ಲಿ ಶೇಕಡ ಇಪ್ಪತ್ತರಷ್ಟು ಕೊಡವರಾಗಿದ್ದಾರೆ. ಕೊಡಗಿನ ಹೊರಗೂ, ಮುಖ್ಯವಾಗಿ ಬೆಂಗಳೂರು, ಮೈಸೂರು, ಮಂಗಳೂರು, ಮುಂಬಯಿ, ದಿಲ್ಲಿ, ಹೈದರಾಬಾದ್, ಚೆನ್ನೈ, ಮೊದಲಾದ ಕಡೆಗಳಲ್ಲೂ ಇವರು ವಾಸಿಸುತ್ತಿದ್ದಾರೆ.


ಇದನ್ನೂ ಓದಿ: ಖಾಲಿ ಗಾಜಿನ ಬಾಟಲಿ ಬ್ಯುಸಿನೆಸ್! ತಿಂಗಳಿಗೆ 50 ಸಾವಿರ ಆದಾಯ ಗಳಿಸುತ್ತಿರುವ ಹಾಸನದ ಯುವಕ


ಕೊಡವ ಕ್ಲಾನ್ ಪೋರ್ಟಲ್ ಹಮ್ಮಿಕೊಂಡ ಕಾರ್ಯಕ್ರಮ ವಿಶ್ವ ದಾಖಲೆ ಬರೆಯುವಲ್ಲಿ ಯಶಸ್ವಿಯಾಗುತ್ತಾ? ಪ್ರಾನ್ಸ್‌ನ ದಾಖಲೆಯನ್ನು ಬದಿಗೊತ್ತುತ್ತದೆಯೇ ಏನು ಎಂಬುವುದನ್ನು ಕಾದು ನೋಡಬೇಕಷ್ಟೆ.

Published by:ವಾಸುದೇವ್ ಎಂ
First published: