HOME » NEWS » State » 6 YEARS FOR PAHARE TEAM CLEAN WORK AT KARAWAR AND SANDALWOOD ACTOR ARUN SAGAR JOIN HANDS TODAY DKK LG

ಪಹರೆ ವೇದಿಕೆಯ ಸ್ವಚ್ಛತಾ ಕಾರ್ಯಕ್ಕೆ 6 ವರ್ಷ; ಸಂಭ್ರಮಕ್ಕೆ ಕೈ ಜೋಡಿಸಿ ಕಸ ಆಯ್ದ ನಟ ಅರುಣ್ ಸಾಗರ್

ಕಳೆದ ಆರು ವರ್ಷದಿಂದ ಪ್ರತಿ ಶನಿವಾರ ನಿರಂತರವಾಗಿ ನಡೆದುಕೊಂಡು ಬಂದ ಸ್ವಚ್ಚತಾ ಸೇವೆಯ ಹಾದಿಯಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನ ಇದರ ಜತೆಗೆ ಮಾಡಿದ್ದಾರೆ. ಕಾರವಾರ ನಗರದಲ್ಲಿ ಗಿಡ ನೆಟ್ಟು ಪರಿಸರ ಉಳಿಸುವ ಮಹತ್ತರ ಕಾಳಜಿ ತೋರಿಸಿದ್ದಾರೆ. ನಗರಸಬೆಯಿಂದ ಆಗದ ಕೆಲವಷ್ಟು ಸಾಮಾಜಿಕ ಕಾರ್ಯವನ್ನ ಪಹರೆ ವೇದಿಕೆ ಕಾರ್ಯಕರ್ತರು ಮಾಡಿದ್ದಾರೆ.

news18-kannada
Updated:January 23, 2021, 5:14 PM IST
ಪಹರೆ ವೇದಿಕೆಯ ಸ್ವಚ್ಛತಾ ಕಾರ್ಯಕ್ಕೆ 6 ವರ್ಷ; ಸಂಭ್ರಮಕ್ಕೆ ಕೈ ಜೋಡಿಸಿ ಕಸ ಆಯ್ದ ನಟ ಅರುಣ್ ಸಾಗರ್
ನಟ ಅರುಣ್ ಸಾಗರ್
  • Share this:
ಕಾರವಾರ(ಜ.23): ಉತ್ತರ ಕನ್ನಡ ಜಿಲ್ಲೆಯ ಪಹರೆ ಸಂಘಟನೆಯವರು ಕಳೆದ ಆರು ವರ್ಷದಿಂದ ಪ್ರತಿ ಶನಿವಾರ ಮುಂಜಾನೆ ನಗರದ ವಿವಿಧೆಡೆ ಸ್ವಚ್ಚತಾ ಕಾರ್ಯ ಮಾಡಿಕೊಂಡು ಬರುತ್ತಿದ್ದು, ಇವತ್ತಿಗೆ ಆರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಾರವಾರದ ಕಾಳಿ ನದಿ ಮತ್ತು ಅರಬ್ಬೀ ಸಮುದ್ರ ಸಂಗಮ ಅಂಚಿನ ಕಡಲತೀರದಲ್ಲಿ ಸ್ವಚ್ಚತಾ ಕಾರ್ಯ ನಡೆಸಿದರು. ಇವತ್ತಿನ ಆರು ವರ್ಷದ ಸಂಭ್ರಮದ ಸ್ವಚ್ಚತಾ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ನಟ ಅರಣ ಸಾಗರ್ ಆಗಮಿಸಿದ್ದು ಕಡಲತೀರದಲ್ಲಿ ಇದ್ದ ಕಸವನ್ನು ಆಯುವ ಮೂಲಕ ಸ್ವಚ್ಚತೆಯಲ್ಲಿ ಕೈಗೂಡಿಸಿದ್ರು .ಇವತ್ತಿನ ಸ್ವಚ್ಚತಾ ಕಾರ್ಯಕ್ರಮದಲ್ಲಿ ಸಂಘಟನೆಯ ನೂರಾರು ಕಾರ್ಯಕರ್ತರು ಆಗಮಿಸಿ ಕಡಲತೀರದಲ್ಲಿ ಬಿದ್ದ ಕಸವನ್ನ ಆಯ್ದು ಕಡಲತೀರವನ್ನ ಸ್ವಚ್ಚಗೊಳಿಸಿದ್ರು. ಕಾಳಿ ನದಿ ಮತ್ತು ಸಮುದ್ರ ಸಂಗಮ ಜಾಗ ಪ್ರವಾಸೋದ್ಯಮಕ್ಕೆ ಉತ್ತಮ ಜಾಗ. ಆದ್ರೆ ಇದುವರೆಗೂ ಇದು ತೆರೆಮರೆಯಲ್ಲೇ ಇದೆ. ಈ ಜಾಗವನ್ನ ಮುನ್ನಲೆಗೆ ತಂದು ಪ್ರವಾಸೋದ್ಯಮಕ್ಕೆ ಇಂಬು ನೀಡುವ ನಿಟ್ಟಿನಲ್ಲಿ ಇವತ್ತು ಈ ಜಾಗವನ್ನ ಸ್ವಚ್ಚಗೊಳಿಸಲಾಯಿತು.

ಎಷ್ಟು ವರ್ಷದಿಂದ ನಡೆಯುತ್ತಿದೆ ಸ್ವಚ್ಚತೆ ಕಾರ್ಯ?

ಪಹರೆ ಸಂಘಟನೆಯ ಸ್ವಚ್ಚತಾ ಕಾರ್ಯ ಕಳೆದ ಆರು ವರ್ಷದಿಂದ ನಡೆಯುತ್ತಿದೆ. ೨೦೧೫ರಲ್ಲಿ ಆರಂಭವಾದ ಸ್ವಚ್ಚತಾ ಕಾರ್ಯ ಇಂದಿಗೆ ನಿರಂತರವಾಗಿ ಸಾಗಿದ್ದು ೬ವರ್ಷ ಪೂರೈಸಿದೆ..ಹತ್ತು ಮಂದಿಯಿಂದ ಒಂದಾಗಿ ಆರಂಭವಾದ ಸ್ವಚ್ಚತಾ ಕಾರ್ಯಕ್ಕೆ ಇಂದು ನೂರಾರು ಜನ ಕೈಗೂಡಿಸಿ ಕಾರವಾರ ನಗರ ಸ್ವಚ್ಚವಾಗಿಡುವ ಪಣ ತೊಟ್ಟಿದ್ದಾರೆ..ಪ್ರತಿ ಶನಿವಾರ ಮುಂಜಾನೆ ಬೆಳಕು ಹರಿಯುವ ಮುಂಚೆಯೇ ತಾವು ಆಯ್ಕೆ ಮಾಡಿಕೊಂಡ ಕಾರವಾರ ನಗರದ ಒಂದು ಏರಿಯಾದಲ್ಲಿ ಒಂದಾಗುವ ಪಹರೆ ವೇದಿಕೆಯ ಕಾರ್ಯಕರ್ತರು ಬುಟ್ಟಿ, ಗುದ್ದಲಿ, ಪೊರಕೆ ಹಿಡಿದು ಸ್ವಚ್ಚತೆಯಲ್ಲಿ ತೊಡಗಿ ಕೊಳ್ಳುತ್ತಾರೆ..ಇಲ್ಲಿ ಮೇಲು ಕೀಳು ಭಾವನೆ ಇರಲ್ಲ ತಾವೆಲ್ಲರೂ ಕಾರವಾರ ನಗರದ ಸ್ವಚ್ಚತೆಗಾಗಿ ಸೇವೆ ಸಲ್ಲಿಸುತ್ತಿದ್ದೆವೆ ಎನ್ನೋ ಮನೋಭಾವನೆಯಿಂದ ಕಸ ಆಯಲು ಮುಂದಾಗುತ್ತಾರೆ ಹೀಗೆ ನಿರಂತರವಾಗಿ ಸಾಗಿದೆ ಪಹರೆ ವೇದಿಕೆಯ ಸ್ವಚ್ಚ ಕಾರವಾರ ಕನಸು.

ಕೋಲಾರ ನಗರಸಭೆ ಅಧಿಕಾರಿಗಳಿಗೆ ಚಾಟಿ ಬೀಸಿದ ಡಿಸಿ ಸತ್ಯಭಾಮ; ನಾಲ್ವರು ಸಿಬ್ಬಂದಿಯ ಅಮಾನತು

ಇಳಿ ವಯಸ್ಸಿನವರು ಸ್ವಚ್ಚ ಕಾರ್ಯದಲ್ಲಿ ಭಾಗಿ

ಪಹರೆ ವೇದಿಕೆಯಲ್ಲಿ ಚಿಕ್ಕ ಯವಸ್ಸಿನವರಿಂದ ಹಿಡಿದು ಇಳಿ ವಯಸ್ಸಿನವರು ಕೂಡಾ ಸ್ವಚ್ಚ ಕಾರ್ಯದಲ್ಲಿ ತೊಡಗಿಸಿಕೊಂಡು ನಗರ ಶುಚಿತ್ವಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ..ಕಳೆದ ಎರಡು ವರ್ಷದ ಹಿಂದೆ ಸ್ವಚ್ಚತಾ ಕಾರ್ಯದಲ್ಲಿ ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಕೂಡಾ ಆಗಮಿಸಿ ಇಲ್ಲಿ ಗಿಡ ನೆಟ್ಟು ಪರಿಸರ ಉಳಿಸಿ ಎನ್ನೋ ಸಂದೇಶ ನೀಡಿ ಹೋಗಿದ್ದು ಸ್ಮರಿಸಬಹುದು ಜತೆಗೆ ಪಹರೆ ವೇದಿಕೆ ಕಾರ್ಯಕ್ಕೆ ಅಭಿನಂದಿಸಿದ್ರು..ಮುಂಜಾನೆ ಮೈ ಕೊರೆಯುವ ಚಳಿಯನ್ನ ಲೆಕ್ಕಿಸದ ಪಹರೆ ವೇದಿಕೆಯ ಸಂಘಟನೆಯ ಕಾರ್ಯಕರ್ತರು ನಗರಕ್ಕೆ ಬಂದು ಸ್ವಚ್ಚತಾ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ..ಕಳೆದ ಆರು ವರ್ಷದಿಂದ ಪ್ರತಿ ಶನಿವಾರ ನಿರಂತರವಾಗಿ ನಡೆದುಕೊಂಡು ಬಂದ ಸ್ವಚ್ಚತಾ ಸೇವೆಯ ಹಾದಿಯಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನ ಇದರ ಜತೆಗೆ ಮಾಡಿದ್ದಾರೆ. ಕಾರವಾರ ನಗರದಲ್ಲಿ ಗಿಡ ನೆಟ್ಟು ಪರಿಸರ ಉಳಿಸುವ ಮಹತ್ತರ ಕಾಳಜಿ ತೋರಿಸಿದ್ದಾರೆ. ನಗರಸಬೆಯಿಂದ ಆಗದ ಕೆಲವಷ್ಟು ಸಾಮಾಜಿಕ ಕಾರ್ಯವನ್ನ ಪಹರೆ ವೇದಿಕೆ ಕಾರ್ಯಕರ್ತರು ಮಾಡಿದ್ದಾರೆ.

ಮಳೆಗಾಲ, ಕೊರೋನಾ ಕಾಲದಲ್ಲೂ ನಡೆಯಿತು ಸ್ವಚ್ಚತಾ ಕಾರ್ಯಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಮನೆ ಬಿಟ್ಟು ಬರಲು ಆಗದ ಹಿನ್ನಲೆಯಲ್ಲಿ ತಮ್ಮ ತಮ್ಮ ಮನೆಯಲ್ಲೆ ಸ್ವಚ್ಚತೆ ಮತ್ತು ತಮ್ಮ ತಮ್ಮ ಮನೆಯ ಆವರಣ ಹೊರಗಿನ ಆವರಣ ಸ್ವಚ್ಚತೆ ಮಾಡಿದ್ರು..ಲಾಕ್ ಡೌನ್ ಸಡಿಲಿಕೆ ಆದ ಬಳಿಕ ಮತ್ತೆ ಪ್ರತಿ ಶನಿವಾರ ಕೋವಿಡ್ ನಿಯಮ ಪಾಲನೆ ಮಾಡಿ ಸ್ವಚ್ಚತೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ..ಇನ್ನು ಮಳೆಗಾದಲ್ಲಿ ಮನೆಯಿಂದ ಹೊರಬರೋದೆ ದೊಡ್ಡ ಕಷ್ಟ ಇಂತ ಕಷ್ಟಕರ ಸಮಯದಲ್ಲಿ ಪಹರೆ ವೇದಿಕೆ ಕಾರ್ಯಕರ್ತರು ಒಂದಾಗಿ ಸ್ವಚ್ಚತೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ನಿರಂತರವಾಗಿ ಸ್ವಚ್ಚತೆ ಕಾರ್ಯದಲ್ಲಿ ತೊಡಗಿಕೊಂಡು ಮುನ್ನುಗ್ಗುತ್ತಿದ್ದಾರೆ. ಕೇವಲ ಶೋಕಿಗಾಗಿ ಪರಕೆ ಹಿಡಿಯುವ ಕಾಲದಲ್ಲಿ ಪಹರೆ ವೇದಿಕೆಯ ಸಂಘಟನೆಯ ಕಾರ್ಯಕರ್ತರು ಸ್ವಚ್ಚತೆ ಅಂದ್ರೆ ಏನು ಎನ್ನೋದ್ರ ಬಗ್ಗೆ ತೋರಿಸಿಕೊಟ್ಟಿದ್ದಾರೆ..ಇವತ್ತು ಆರು ವರ್ಷ ಪೂರ್ಣಗೊಂಡಿದೆ...ಇವರ ಸ್ವಚ್ಚ ಸೇವೆ ಮುಂದೆ ನಿರಂತರವಾಗಿರಲಿ.
Published by: Latha CG
First published: January 23, 2021, 5:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories