Hijab Controversy: ಹಿಜಾಬ್ ಧರಿಸಿ ಕಾಲೇಜ್ಗೆ ಬಂದ ವಿದ್ಯಾರ್ಥಿನಿಯರು! ಉಪ್ಪಿನಂಗಡಿಯಲ್ಲಿ 6 ಮಂದಿ ಅಮಾನತು
ಹಿಜಾಬ್ ಧರಿಸಿ ಬಂದಿದ್ದ 6 ಮಂದಿ ಸರ್ಕಾರಿ ಪದವಿ ಕಾಲೇಜ್ ವಿದ್ಯಾರ್ಥಿನಿಯರನ್ನು ಸಸ್ಪೆಂಡ್ ಮಾಡಲಾಗಿದೆ. ಕೋರ್ಟ್ ಆದೇಶ ಉಲ್ಲಂಘಿಸಿದ ಕಾರಣಕ್ಕೆ ಅವರನ್ನು ಸಸ್ಪೆಂಡ್ ಮಾಡಿದ್ದಾಗಿ ಮೂಲಗಳು ತಿಳಿಸಿವೆ.
ಉಪ್ಪಿನಂಗಡಿ, ದಕ್ಷಿಣ ಕನ್ನಡ: ಅಂತರಾಷ್ಟ್ರೀಯ ಮಟ್ಟದಲ್ಲಿ (International level) ಸುದ್ದಿಯಾಗಿದ್ದ (News) ಹಿಜಾಬ್ ವಿವಾದ (Hijab Controversy) ಇತ್ತೀಚಿಗೆ ಕೊಂಚ ತಣ್ಣಗಾಗಿತ್ತು. ಆದರೆ ಇದೀಗ ಮತ್ತೆ ಅದಕ್ಕೆ ರೆಕ್ಕೆ ಪುಕ್ಕ ಬಂದಿದೆ. ಇಂದು ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಉಪ್ಪಿನಂಗಡಿಯಲ್ಲಿ (Uppinangadi) ಮತ್ತೆ ಹಿಜಾಬ್ ವಿವಾದ ಭುಗಿಲೆದ್ದಿದೆ. ಉಪ್ಪಿನಂಗಡಿ ಸರ್ಕಾರಿ ಪದವಿ ಕಾಲೇಜ್ನಲ್ಲಿ (Government Degree College) 6 ವಿದ್ಯಾರ್ಥಿನಿಯರು ಕಾಲೇಜ್ಗೆ ಹಿಜಾಬ್ ಮತ್ತು ಸ್ಕಾರ್ಪ್ (Scarp) ಧರಿಸಿ ಬಂದಿದ್ದಾರೆ. ಕೋರ್ಟ್ ಆದೇಶ (Court Order) ಉಲ್ಲಂಘನೆ (Suspend) ಮಾಡಿ, ಕಾಲೇಜು ಆಡಳಿತ ಮಂಡಳಿ (College Management) ಆದೇಶ ಹೊರಡಿಸಿದೆ. ಯಾವುದೇ ಕಾರಣಕ್ಕೂ ತರಗತಿಗೆ (Class) ಹಿಜಾಬ್ ಧರಿಸಿಕೊಂಡು ಬರಬಾರದೆಂಬ ಸರ್ಕಾರದ ಆದೇಶ (Government order) ಹಾಗೂ ಹೈಕೋರ್ಟ್ ತೀರ್ಪನ್ನು ಪಾಲಿಸದೆ ಪದೇ ಪದೇ ಆದೇಶ ಉಲ್ಲಂಘಿಸುತ್ತಿದ್ದರು. ಕಾಲೇಜಿನ ಕಲಿಕಾ ವಾತಾವರಣಕ್ಕೆ ವಿರುದ್ಧವಾಗಿ ವರ್ತಿಸಿದ್ದ 6 ಮಂದಿ ವಿದ್ಯಾರ್ಥಿನಿಯರನ್ನು ಕಾಲೇಜು ಉಪನ್ಯಾಸಕರ ಸಭೆಯ ಒಮ್ಮತದ ತೀರ್ಮಾನದಂತೆ ಅಮಾನತು ಮಾಡಲಾಗಿದೆ ಅಂತ ವರದಿಯಾಗಿದೆ.
6 ಕಾಲೇಜ್ ವಿದ್ಯಾರ್ಥಿನಿಯರು ಅಮಾನತು
ಹಿಜಾಬ್ ಧರಿಸಿ ಬಂದಿದ್ದ 6 ಮಂದಿ ಸರ್ಕಾರಿ ಪದವಿ ಕಾಲೇಜ್ ವಿದ್ಯಾರ್ಥಿನಿಯರನ್ನು ಸಸ್ಪೆಂಡ್ ಮಾಡಲಾಗಿದೆ. ಉಪ್ಪಿನಂಗಡಿಯ ಸರ್ಕಾರಿ ಪದವಿ ಕಾಲೇಜ್ನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು. ಹೀಗಾಗಿ ಕೋರ್ಟ್ ಆದೇಶ ಉಲ್ಲಂಘಿಸಿದ ಕಾರಣಕ್ಕೆ ಅವರನ್ನು ಸಸ್ಪೆಂಡ್ ಮಾಡಿದ್ದಾಗಿ ಮೂಲಗಳು ತಿಳಿಸಿವೆ.
ಹಿಜಾಬ್ ವಿವಾದದಕ್ಕೆ ಸಂಬಂಧಿದಂತೆ ಜಟಾಪಟಿ
ಇನ್ನು ವಿದ್ಯಾರ್ಥಿನಿಯರ ಸಸ್ಪೆಂಡ್ ವಿಚಾರದಲ್ಲಿ ಪ್ರಾಂಶುಪಾಲರಿಂದ ಕಾಲೇಜು ಸಮಿತಿ ಸಭೆ ನಡೆದಿತ್ತು. ಆದರೆ ಸಭೆಯನ್ನು ಸುಳ್ಳು ಮಾಹಿತಿ ನೀಡಿ ಜಾಯಿಂಟ್ ಡೈರೆಕ್ಟರ್ ನಿಲ್ಲಿಸಿದ್ದಾರೆ ಎಂಬ ವಿಚಾರ ಬಯಲಾಗಿದೆ. ಸಭೆಯಲ್ಲಿ ನಡೆಸದಂತೆ ಶಾಸಕರು, ಜಿಲ್ಲಾಧಿಕಾರಿ ಸೂಚಿಸಿದ್ದಾರೆ ಎಂದು ಜಾಯಿಂಟ್ ಡೈರೆಕ್ಟರ್ ಮಾಹಿತಿ ನೀಡಿದ್ದರು. ಆದರೆ ಈ ಬಗ್ಗೆ ಕಾಲೇಜ್ ಪ್ರಾಂಶುಪಾಲರು ಶಾಸಕರು ಮತ್ತು ಜಿಲ್ಲಾಧಿಕಾರಿಯವರನ್ನು ಸಂಪರ್ಕಿಸಿದಾಗ ಗುಟ್ಟು ರಟ್ಟಾಗಿದೆ. ಇನ್ನು ಸ್ಕಾರ್ಫ ವಿವಾದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ನಡುವೆಯೂ ಘರ್ಷಣೆ ಉಂಟಾಗಿದೆ.
ಅತ್ತ ಮಂಗಳೂರು ಯೂನಿವರ್ಸಿಟಿ ಕಾಲೇಜಿನಲ್ಲಿ ಹಿಜಾಬ್ ವಿವಾದ ಮುಂದುವರೆದಿದೆ. ಇಂದೂ ಕೂಡ 15 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದರು. ಈ ವೇಳೆ ಹಿಜಾಬ್ ಧರಿಸಿದ್ದಕ್ಕಾಗಿ ತರಗತಿ ಹಾಗೂ ಲೈಬ್ರರಿಗೆ ಅವರಿಗೆ ಪ್ರವೇಶ ನೀಡದೇ, ನಿರ್ಬಂಧಿಸಲಾಯ್ತು. ಹೀಗಾಗಿ ಕಾಲೇಜ್ ಪ್ರವೇಶಕ್ಕೆ ಪಟ್ಟು ಹಿಡಿದಿರುವ ವಿದ್ಯಾರ್ಥಿನಿಯಿರು ಲೈಬ್ರೆರಿಯ ಹೊರಗೆ ಕುಳಿತಿದ್ದಾರೆ. ಇಂದು ಕೂಡ ವಿದ್ಯಾರ್ಥಿನಿಯರ ಮನವೊಲಿಸಲು ಕಾಲೇಜು ಪ್ರಾಂಶುಪಾಲರು ಯತ್ನಿಸಿದ್ರು. ಆದರೆ ಯಾವುದೇ ಮನವೊಲಿಕೆಗೂ ವಿದ್ಯಾರ್ಥಿನಿಯರು ಬಗ್ಗದೇ, ಪಟ್ಟು ಹಿಡಿದು ಕುಳಿತಿದ್ದು ಕಂಡು ಬಂತು.
ಹಿಜಾಬ್ ಬಗ್ಗೆ ಹೈಕೋರ್ಟ್ ಹೇಳಿದ್ದೇನು?
ಹಿಜಾಬ್ ವಿವಾದದ ಕುರಿತಂತೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ನಲ್ಲಿ ನಡೆದಿತ್ತು. ಮಾರ್ಜ್ 15ರಂದು ಈ ಬಗ್ಗೆ ಹೈಕೋರ್ಟ್ ನ್ಯಾಯಪೀಠ ತನ್ನ ತೀರ್ಪು ಪ್ರಕಟಿಸಿತ್ತು. ಹಿಜಾಬ್ ಇಸ್ಲಾಂನಲ್ಲಿನ ಅತ್ಯಗತ್ಯ ಆಚರಣೆಯ ಭಾಗವಲ್ಲ ಎಂದಿರುವ ನ್ಯಾಯಪೀಠ, ಶೈಕ್ಷಣಿಕ ಸಂಸ್ಥೆಗಳಲ್ಲಿ ಸಮವಸ್ತ್ರದ ಜತೆಗೆ ಹಿಜಾಬ್ ಧರಿಸುವುದನ್ನು ನಿಷೇಧಿಸುವ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿತ್ತು.
ಫೆಬ್ರವರಿಯಲ್ಲಿ ಸುದೀರ್ಘ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ಹೈಕೋರ್ಟ್, ಮಂಗಳವಾರ ತೀರ್ಪು ಪ್ರಕಟಿಸಿತ್ತು. ಈ ತೀರ್ಪಿನ ವೇಳೆ ಸಿಜೆ ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾ. ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರನ್ನು ಒಳಗೊಂಡ ಹೈಕೋರ್ಟ್ ಪೂರ್ಣಪೀಠ ಕೆಲವು ಮಹತ್ವದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ