ಎಚ್ಚರ...! ರಾಜ್ಯಕ್ಕೆ ಕಾಲಿಟ್ಟಿದೆ ಮಾರಕ ರೋಗ ಎಚ್​1ಎನ್​1: ಈವರೆಗೆ 6 ಮಂದಿ ಬಲಿ

Precilla Olivia Dias | news18
Updated:October 12, 2018, 5:52 PM IST
ಎಚ್ಚರ...! ರಾಜ್ಯಕ್ಕೆ ಕಾಲಿಟ್ಟಿದೆ ಮಾರಕ ರೋಗ ಎಚ್​1ಎನ್​1: ಈವರೆಗೆ 6 ಮಂದಿ ಬಲಿ
H1N1
  • News18
  • Last Updated: October 12, 2018, 5:52 PM IST
  • Share this:
ನ್ಯೂಸ್​ 18 ಕನ್ನಡ

ಬೆಂಗಳೂರು(ಅ.12): ಕಳೆದ ತಿಂಗಳಿನಲ್ಲಿ ಮಾರಕ ರೋಗ ಎಚ್1ಎನ್1 ರಾಜ್ಯಕ್ಕೆ ಕಾಲಿಟ್ಟಿದ್ದು, ಈವರೆಗೆ ಒಟ್ಟು  ಆರು ಮಂದಿಯನ್ನು ಬಲಿ ಪಡೆದಿದೆ. ಅದರಲ್ಲೂ ಬೆಂಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಎಚ್1ಎನ್​1 ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿವೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಶಂಕೆ ವ್ಯಕ್ತವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ.

ಹೌದು ಸಪ್ಟೆಂಬರ್​ನಿಂದ ರಾಜ್ಯದಲ್ಲಿ ಎಚ್​1ಎನ್​1 ಮಾರಕ ರೋಗಕ್ಕೆ ಬಲಿಯಾದವರ ಸಂಖ್ಯೆ 6ಕ್ಕೇರಿದೆ. ಜನವರಿಯಿಂದ ಆಗಸ್ಟ್ ವರಗೆ 39 ಪ್ರಕರಣಗಳು ವರದಿಯಾಗಿತ್ತಾದರೂ, ಸಪ್ಟೆಂಬರ್​ ಮೊದಲ ವಾರದಿಂದ ಗಣನೀಯವಾಗಿ ಏರಿಕೆಯಾಗಿದೆ. ಬೆಂಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಎಚ್​1ಎನ್​1 ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿವೆ.

ಈಗಾಗಲೇ ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಅಗತ್ಯ ಔಷಧಿಗಳು ಮತ್ತು ಸೌಕರ್ಯಗಳನ್ನು ತಯಾರಿಟ್ಟುಕೊಳ್ಳಲು ಸೂಚನೆ ನೀಡಲಾಗಿದೆ. ಅಲ್ಲದೇ ರಾಜ್ಯದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.

ಈ ಕುರಿತಾಗಿ ನ್ಯೂಸ್ 18 ಕನ್ನಡಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ  ಡಾ. ಶಿವಾನಂದ್ ಸಜ್ಜನ್ ಶೆಟ್ಟಿ "ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ಟ್ಯಾಮಿಫ್ಲೂ ಔಷಧ ಸರಬರಾಜು ಮಾಡಲಾಗಿದೆ. ರೋಗಿಗಳ ಜಾಗೃತಿಯೊಂದೇ ಎಚ್​1ಎನ್​1 ವಿರುದ್ಧ ಹೋರಾಡಲು ಇರುವ ಪ್ರಮುಖ ಅಸ್ತ್ರ" ಎಂದಿದ್ದಾರೆ.


ಆರಂಭದಲ್ಲೇ ಚಿಕಿತ್ಸೆ ಪಡೆದರೆ ಎಚ್​1ಎನ್​1 ನಿಂದ ಸಂಪೂರ್ಣವಾಗಿ ಗುಣಮುಖರಾಗಬಹುದು. ಆದರೆ ಅನೇಕರು ರೋಗ ಉಲ್ಭಣವಾದ ಮೇಲಷ್ಟೇ ಆಸ್ಪತ್ರೆಗೆ ಹೋಗುತ್ತಾರೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಳವಾಗಿದೆ ಎನ್ನಲಾಗಿದೆ. ಈ ವರ್ಷ ಸಾವನ್ನಪ್ಪಿರುವ 6 ಪ್ರಕರಣಗಳಲ್ಲೂ ರೋಗಿಗಳು ತಡವಾಗಿ ಆಸ್ಪತ್ರೆಗೆ ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕಳೆದ ವರ್ಷ ಎಚ್​1ಎನ್​1 ನಿಂದ ಒಟ್ಟು 15 ಮಂದಿ ಸಾವನ್ನಪ್ಪಿದ್ದರು.  ಈ ಬಾರಿ ಬಿಬಿಎಂಪಿ ವ್ಯಾಪ್ತಿಯಲ್ಲಿ 1, ಬೆಂಗಳೂರು ಗ್ರಾಮಾಂತರ 1, ತುಮಕೂರು 1, ರಾಮನಗರ 1, ಹಾಸನದಲ್ಲಿ ಒಬ್ಬರು ಈ ಮಾರಕ ರೋಗದಿಂದ ಸಾವನ್ನಪ್ಪಿದ್ದಾರೆ.
First published:October 12, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading