• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ 6 ಮಂದಿ ಆತ್ಮಹತ್ಯೆ: ಹೆತ್ತವರು-ನಾಲ್ವರು ಮಕ್ಕಳ ದುರಂತ ಅಂತ್ಯ

ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ 6 ಮಂದಿ ಆತ್ಮಹತ್ಯೆ: ಹೆತ್ತವರು-ನಾಲ್ವರು ಮಕ್ಕಳ ದುರಂತ ಅಂತ್ಯ

ಘಟನಾ ಸ್ಥಳ

ಘಟನಾ ಸ್ಥಳ

ಸಾಲಬಾಧೆಯಿಂದ ನೊಂದಿದ್ದ ಭೀಮರಾಯ ಆತ್ಮಹತ್ಯೆಗೆ ಪತ್ನಿಯನ್ನು ಒಪ್ಪಿಸಿ ಮಕ್ಕಳ ಸಮೇತ ಇಂದು ಬೆಳಗ್ಗೆ ತನ್ನ ಜಮೀನಿನಲ್ಲಿನ ಕೃಷಿ ಹೊಂಡದ ಬಳಿ ಬಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

  • Share this:

    ಯಾದಗಿರಿ: ಸಾಲಭಾದೆ ತಾಳಲಾರದೆ ಒಂದೇ ಕುಟುಂಬದ ಆರು ಜನರು ಕೃಷಿ ಹೊಂಡಕ್ಕೆ ಹಾರಿ ಪ್ರಾಣ ಬಿಟ್ಟಿರುವ ಹೃದಯ ವಿದ್ರಾವಕ ಘಟನೆ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ. ನಾಲ್ವರು ಮಕ್ಕಳೊಂದಿಗೆ ಪೋಷಕರು ಹೊಂಡಕ್ಕೆ ಹಾರಿ ಪ್ರಾಣ ಬಿಟ್ಟಿದ್ದಾರೆ. ರೈತ ಭೀಮರಾಯ (45), ಹೆಂಡತಿ ಶಾಂತಮ್ಮ (40), ಮಕ್ಕಳಾದ ಸುಮಿತ್ರಾ (12)  , ಶ್ರೀದೇವಿ (10), ಶಿವರಾಜ (7), ಲಕ್ಷ್ಮೀ (4) ಮೃತರು. ಸಾಲಬಾಧೆಯಿಂದ ನೊಂದಿದ್ದ ಭೀಮರಾಯ ಆತ್ಮಹತ್ಯೆಗೆ ಪತ್ನಿಯನ್ನು ಒಪ್ಪಿಸಿ ಮಕ್ಕಳ ಸಮೇತ ಇಂದು ಬೆಳಗ್ಗೆ ತನ್ನ ಜಮೀನಿನಲ್ಲಿನ ಕೃಷಿ ಹೊಂಡದ ಬಳಿ ಬಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.


    ಅಣ್ಣತಮ್ಮಂದಿರಿಗೆ ಜಮೀನು ಭಾಗವಾದ ನಂತರ 3 ಎಕರೆ ಭೂಮಿಯಲ್ಲಿ ಭೀಮರಾಯ ಕೃಷಿ ಮಾಡಿಕೊಂಡಿದ್ದರು. ಕಳೆದ 2-3 ವರ್ಷಗಳಿಂದ ಕೃಷಿಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದರು. ಕೊರೊನಾ, ಲಾಕ್​ಡೌನ್​ನಿಂದ ಕೃಷಿಗೆ ಹೊಡೆತ ಬಿದ್ದಿತ್ತು. ಸಾಲ ತೀರಿಸಲಾಗದೆ ಇಂದು ಇಡೀ ಕುಟುಂಬ ತಪ್ಪು ನಿರ್ಧಾರ ತೆಗೆದುಕೊಂಡಿದೆ.


    ಶಹಾಪುರ ಪೋಲಿಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶವಗಳನ್ನ ಹೊರ ತೆಗೆದಿದ್ದಾರೆ. ಭೀಮರಾಯ ಹಾಗೂ ಸ್ಥಳಕ್ಕೆ ತಹಶೀಲ್ದಾರ ಜಗನ್ನಾಥ ರೆಡ್ಡಿ, ಡಿವೈಎಸ್ಪಿ ವೆಂಕಟೇಶ್ ಹುಗಿಬಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ಅಘಾತ ವ್ಯಕ್ತಪಡಿಸಿರುವ ಭೀಮರಾಯ ಅವರ ಸಹೋದರರು. ಸಾಲ ತೀರಿಸಲು ಆಗದಿದ್ದರೆ ನಮ್ಮ ಜಮೀನು ಮಾರಿ ಹಣ ಕೊಡುತ್ತಿದ್ದೆವು. ಇಡೀ ಕುಟುಂಬ ತಪ್ಪು ನಿರ್ಧಾರ ಮಾಡಬಾರದಿತ್ತು ಎಂದು ಕಣ್ಣೀರಿಟ್ಟಿದ್ದಾರೆ.


    ಇದನ್ನೂ ಓದಿ: ಅತ್ತೆ ಮೇಲೆ ಕುದಿಯುವ ಎಣ್ಣೆ ಸುರಿದ ಸೊಸೆ: ಇಬ್ಬರ ಜಗಳಕ್ಕೆ ಕಾರಣವಾಗಿದ್ದು ಸರ್ಕಾರದ ಅದೊಂದು ನಿರ್ಧಾರ!


    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

    Published by:Kavya V
    First published: