ಮಡಿಕೇರಿ: ಸರ್ಕಾರಿ ಕೆಎಸ್ಆರ್ಟಿಸಿ ಬಸ್ (KSRTC) ಹಾಗೂ ಕಾರಿನ (Car) ನಡುವೆ ನಡೆದ ಭೀಕರ ಅಪಘಾತದಲ್ಲಿ (Accident) ಮೂವರು ಮಕ್ಕಳು (Children) ಸೇರಿದಂತೆ ಆರು ಮಂದಿ ಸಾವನ್ನಪ್ಪಿರುವ ಘಟನೆ ಕೊಡಗು (Kodagu) ಜಿಲ್ಲೆಯ ಸಂಪಾಜೆ ಗೇಟ್ ಬಳಿ ನಡೆದಿದೆ. ಮೃತರೆಲ್ಲರೂ ಕಾರಿನಲ್ಲಿದ್ದ ಪ್ರಯಾಣಿಕರು ಎಂಬ ಮಾಹಿತಿ ಲಭ್ಯವಾಗಿದ್ದು, ಮೂರು ಮಕ್ಕಳು, ಇಬ್ಬರು ಮಹಿಳೆ (Woman) ಮತ್ತು ಓರ್ವ ಪುರುಷ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ. ಮಂಡ್ಯದ (Mandya) ಮದ್ದೂರು ಮೂಲದ ಕಾರಿನಲ್ಲಿ ಮಡಿಕೇರಿಯಿಂದ (Madikeri) ಸುಳ್ಯ ಕಡೆ ಪ್ರಯಾಣಿಸುತ್ತಿದ್ದರು.
ಈ ವೇಳೆ ಸುಳ್ಯದಿಂದ ಮಡಿಕೇರಿ ಕಡೆ ಹೋಗುತ್ತಿದ್ದ ಸರ್ಕಾರಿ ಬಸ್ಗೆ ಸಂಪಾಜೆ ಗೇಟ್ ಬಳಿ ಅಪಘಾತ ಸಂಭವಿಸಿದೆ. ಕಾರಿನ ಬಾನೆಟ್ ಕಾರಿನ ಬೋನೆಟ್ ನಲ್ಲಿ ಸಿಲುಕಿದ್ದ ಇಬ್ಬರು ಮಕ್ಕಳನ್ನು ಸ್ಥಳೀಯರು ಯುವಕರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನವನ್ನು ನಡೆಸಲಾಗಿತ್ತು, ಆದರೆ ಆಸ್ಪತ್ರೆ ಸೇರುವ ಮುನ್ನವೇ ಮಕ್ಕಳು ಸಾವನ್ನಪ್ಪಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: Crime News: ಬೆಂಗಳೂರು ಪೊಲೀಸರ ರೋಚಕ ಕಾರ್ಯಾಚರಣೆ, ಖತರ್ನಾಕ್ ಚಡ್ಡಿ ಗ್ಯಾಂಗ್ ಲಾಕ್! ಕೋಟಿ ಕೋಟಿ ಒಡವೆ ಮಾಲೀಕರಿಗೆ ವಾಪಸ್
ಒಬ್ಬಂಟಿಯಾಗಿ ಓಡಾಡುವ ಮಹಿಳೆಯರೇ ಟಾರ್ಗೆಟ್
ಒಬ್ಬಂಟಿಯಾಗಿ ಓಡಾಡುವ ಮಹಿಳೆಯರೇ ಹುಷಾರ್. ಇಲ್ಲ ಎಂದರೆ ಖದೀಮರು ನಿಮ್ಮನ್ನ ಟಾರ್ಗೆಟ್ ಮಾಡುತ್ತಾರೆ. ಬೆಂಗಳೂರು ನಗರದಲ್ಲಿ ಸರಗಳ್ಳರ ಹಾವಳಿ ಮತ್ತೆ ಹೆಚ್ಚಾಗುತ್ತಿದೆ. ಚಂದ್ರಲೇಔಟ್ ಠಾಣಾ ವ್ಯಾಪ್ತಿಯ ಬಿಸಿಸಿ ಲೇಔಟ್ ನಲ್ಲಿ ಮಧ್ಯಾಹ್ನ 12 ಗಂಟೆಯಲ್ಲಿ ನಡುರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯ ಚಿನ್ನದ ಸರ ಕಸಿಯಲು ಖದೀಮ ಪ್ರಯತ್ನಿಸಿದ್ದಾನೆ.
ಮಹಿಳೆಯನ್ನು ಹಿಂದೆಯಿಂದ ಫಾಲೋ ಮಾಡುತ್ತಾ ಹೋಗಿದ್ದ ಕಳ್ಳ ಯಾರು ಇಲ್ಲದ ವೇಳೆ ಆಕೆಯ ಕತ್ತು ಬಿಗಿದು ಸರ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾನೆ. ಕರಿಮಣಿ ಸರ ಎಂದು ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿ, ಅಲ್ಲಿಂದ ಎಸ್ಕೇಪ್ ಆಗಿದ್ದಾಣೆ. ಘಟನೆಯಲ್ಲಿ ಮಹಿಳೆ ಎಡಗೈಗೆ ಗಾಯವಾಗಿದೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದರೂ ಏನೂ ಆಗಿಲ್ಲವಲ್ಲ ಬಿಡಿ ಎಂದು ಮಹಿಳೆ ಕಂಪ್ಲೇಟ್‌ಗೆ ರೆಸ್ಪಾನ್ಸ್ ಮಾಡದೆ ಕಳಿಸಿದ್ದಾರಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ