ದುಗ್ಲಾಪುರ ಮಹಿಳೆ ಹತ್ಯೆ ಪ್ರಕರಣ; ಆರು ಜನ ಆರೋಪಿಗಳ ಬಂಧನ

news18
Updated:September 4, 2018, 5:28 PM IST
ದುಗ್ಲಾಪುರ ಮಹಿಳೆ ಹತ್ಯೆ ಪ್ರಕರಣ; ಆರು ಜನ ಆರೋಪಿಗಳ ಬಂಧನ
news18
Updated: September 4, 2018, 5:28 PM IST
-ವೀರೇಶ್ ಜಿ ಹೊಸೂರ್, ನ್ಯೂಸ್ 18 ಕನ್ನಡ

ಚಿಕ್ಕಮಗಳೂರು,(ಸೆ.04): ಹಣಕ್ಕಾಗಿ ಮಹಿಳೆಯನ್ನು ಕೊಲೆ ಮಾಡಿದ್ದ ಆರು ಜನ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಧರ್ಮರಾಜ್, ಅರುಣ್, ರಾಜ ಮಾಣಿಕ್ಯಂ, ವಿಜಯ್, ವೆಂಕಟೇಶ್ ಹಾಗೂ ಓರ್ವ ಅಪ್ರಾಪ್ತ ಬಾಲಕ ಬಂಧಿತರು.  ಆರೋಪಿಗಳು ತರೀಕೆರೆ ತಾಲೂಕಿನ ಸೀತಾಪುರ ಕಾವಲು ಗ್ರಾಮದವರು ಎನ್ನಲಾಗಿದೆ. ಇವರು ಕೊಲೆಯಾದ ಮಹಿಳೆ ಶಾಂತಮ್ಮಗೆ ಪರಿಚಯವಿದ್ದರು ಎಂದು ತಿಳಿದುಬಂದಿದೆ.

ಆಗಸ್ಟ್ 17ರ ರಾತ್ರಿ 11 ಗಂಟೆ ಸುಮಾರಿಗೆ ಅಪ್ರಾಪ್ತ ಸೇರಿ ಐವರು ದುಗ್ಲಾಪುರ ಗ್ರಾಮದ ಶಾಂತಮ್ಮ ಎಂಬ ಅಂಗಡಿ ಹಾಗೂ ವ್ಯವಹಾರಸ್ಥ ಮಹಿಳೆ ಮನೆಗೆ ಬಂದು 2 ಸಾವಿರ ಹಣ ಕೇಳಿದ್ದರು. ಹಣ ಕೊಡಲು ಶಾಂತಮ್ಮ ನಿರಾಕರಿಸಿದಾಗ, ಬಳಿಕ ತೆಂಗಿನಕಾಯಿ ಮಾರುವವರಂತೆ ಬಂದರು. ಮೂವರು, ಕೈಕಾಲು-ಬಾಯಿ ಹಿಡಿದು ಅಲ್ಲೇ ಇದ್ದ ಕಬ್ಬಿಣದ ರಾಡ್​​ ಹಾಗೂ ಖಾರ ರುಬ್ಬುವ ಕಲ್ಲಿನಿಂದ ಜಜ್ಜಿ ಕೊಲೆಗೈದರು. ಬಳಿಕ ಮನೆ ಹಾಗೂ ಅಂಗಡಿಯಲ್ಲಿದ್ದ 15 ಸಾವಿರ ದುಡ್ಡು, 30 ಗ್ರಾಂ ಚಿನ್ನ, 500 ಗ್ರಾಂ ಬೆಳ್ಳೆಯನ್ನು ದೋಚಿ ತಮಗೇನು ಗೊತ್ತಿಲ್ಲದಂತೆ ಪರಾರಿಯಾಗಿದ್ದರು.

ಅಷ್ಟೇ ಅಲ್ಲದೇ, ಕೊಲೆಗೈದು ಹಣ, ಚಿನ್ನ, ಬೆಳ್ಳಿ ದೋಚಿದ ದರೋಡೆಕೋರರು ಮತ್ತದೇ ಗ್ರಾಮದಲ್ಲಿ ತಮಗೇನು ಗೊತ್ತಿಲ್ಲದಂತೆ ಸುಮ್ಮನಿದ್ದರು.  ತಾವೇ ಕೊಲೆಗೈದ ಮಹಿಳೆಯ ಅಂತ್ಯಸಂಸ್ಕಾರದಲ್ಲೂ ಭಾಗಿಯಾಗಿ, ತಿಥಿ ಊಟವನ್ನು ಮಾಡಿದ್ದರು.  ಯಾವುದೇ ಸುಳಿವು ಸಿಗಬಾರದು, ಪೊಲೀಸ್ ನಾಯಿ ಬಂದರೂ ನಮ್ಮನ್ನ ಹಿಡಿಯಬಾರದೆಂದು ಮನೆಯ ಸುತ್ತಲು ಖಾರದಪುಡಿ ಚೆಲ್ಲಿದ್ದರು. ಆದರೆ ಆರೋಪಿಗಳಲ್ಲಿ ಓರ್ವನಾದ ವೆಂಕಟೇಶ್‍ಗೆ ಹುಡುಗಿ ವಿಚಾರದಲ್ಲಿ ಇದೇ ಶಾಂತಮ್ಮಳೊಂದಿಗೆ ಗಲಾಟೆಯಾಗಿತ್ತು ಎಂಬ ಗ್ರಾಮಸ್ಥರು ಕೊಟ್ಟ ಸಣ್ಣ ಸುಳಿವು ಪೊಲೀಸರಿಗೆ ಸಾಕಾಗಿತ್ತು. ವೆಂಕಟೇಶ್​ನನ್ನು ಕರೆತಂದು ಪೊಲೀಸ್ ಭಾಷೆಯಲ್ಲಿ ಕೇಳುತ್ತಿದ್ದಂತೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಒಟ್ಟಾರೆ, ಆಧುನಿಕ ಪ್ರಪಂಚದಲ್ಲಿ ದುಡಿಯುವುದಕ್ಕೆ ಸಾವಿರ ಮಾರ್ಗವಿದ್ದರೂ ವಯಸ್ಸಿನ ಹುಡುಗರು ಇಂತಹ ದಾರಿ  ಹಿಡಿಯುತ್ತಿರುವುದು ಆಧುನಿಕತೆಗೆ ಮಾಡಿದ ಅಪಮಾನ. ದುಡಿಯುವ ಮನಸ್ಸು-ಹಂಬಲ ಇರುವವರಿಗೆ ಹೆಜ್ಜೆಗೊಂದು ದಾರಿ. ಆದರೆ 20 ವರ್ಷದ ಯುವಕರು ಕೊಲೆ ಮಾಡಿ ಬದುಕು-ಶೋಕಿ ಮಾಡುವುದಕ್ಕೆ ಮುಂದಾಗುತ್ತಿರುವುದು ಸಮಾಜದಲ್ಲಿ ಆತಂಕ ಸೃಷ್ಠಿಸಿದರೆ, ಹಳ್ಳಿಗರು ನಿಟ್ಟುಸಿರು ಬಿಟ್ಟಿದ್ದಾರೆ.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ