• Home
  • »
  • News
  • »
  • state
  • »
  • Karnataka: ಶಿಥಿಲಾವಸ್ಥೆಯಲ್ಲಿ ರಾಜ್ಯದ 56 ಸೇತುವೆಗಳು; ನೆತ್ತಿ ಮೇಲೆ ಕತ್ತಿ ಇದ್ದರೂ ಬಜೆಟ್ ಅನುಮೋದಿಸದ ಸರ್ಕಾರ!

Karnataka: ಶಿಥಿಲಾವಸ್ಥೆಯಲ್ಲಿ ರಾಜ್ಯದ 56 ಸೇತುವೆಗಳು; ನೆತ್ತಿ ಮೇಲೆ ಕತ್ತಿ ಇದ್ದರೂ ಬಜೆಟ್ ಅನುಮೋದಿಸದ ಸರ್ಕಾರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

KRDCL ಹಿರಿಯ ಅಧಿಕಾರಿಯೊಬ್ಬರು ಮೂರು ತಿಂಗಳ ಹಿಂದೆ ವರದಿಯನ್ನು ಸಿದ್ಧಪಡಿಸಿದ್ದೇವೆ ಮತ್ತು ಅದನ್ನು ಸರ್ಕಾರಕ್ಕೆ ಸಲ್ಲಿಸಿರುವುದಾಗಿ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಸರ್ಕಾರ ಇನ್ನೂ ಬಜೆಟ್‌ಗೆ ಅನುಮೋದನೆ ನೀಡಿಲ್ಲ ಎಂಬ ಮಾಹಿತಿಯನ್ನೂ ಈ ಅಧಿಕಾರಿ ಬಹಿರಂಗಪಡಿಸಿದ್ದಾರೆ.

  • Trending Desk
  • Last Updated :
  • Bangalore [Bangalore], India
  • Share this:

    ಬೆಂಗಳೂರು(ನ.18): ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಲಿಮಿಟೆಡ್ (KRDCL), ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಡಿಯಲ್ಲಿ ರಸ್ತೆ ಕಾಮಗಾರಿ, ನಿರ್ಮಾಣ ಮತ್ತು ಸೇತುವೆಗಳ(Bridges) ಪುನರಾಭಿವೃದ್ಧಿಯನ್ನು ಕೈಗೊಳ್ಳುವ ಮೂಲಕ ಮೇಲ್ಮೈ ಮೂಲಸೌಕರ್ಯವನ್ನು ಉತ್ತೇಜಿಸಲು ಸ್ಥಾಪಿಸಲಾದ ಕಂಪನಿಯು ಬಳಕೆಯಲ್ಲಿರುವ ಹೆಚ್ಚಿನ ಸೇತುವೆಗಳನ್ನು ಬಲಪಡಿಸಲು ಶಿಫಾರಸು ಮಾಡಿದೆ.


    ಸೇತುವೆಗಳ ಕುರಿತು ವರದಿ


    2022-23ರ ಬಜೆಟ್ ಅಧಿವೇಶನದಲ್ಲಿ (Budget Session) ಮಾಡಿದ ಘೋಷಣೆಯಂತೆ ಸೇತುವೆಗಳ ಸ್ಥಿತಿಯ ಕುರಿತು ವಿವರವಾದ ಕಾರ್ಯಸಾಧ್ಯತಾ ವರದಿಯನ್ನು (ಡಿಎಫ್‌ಆರ್) ತಯಾರಿಸಲು ರಾಜ್ಯ ಸರಕಾರ ಕೆಆರ್‌ಡಿಸಿಎಲ್‌ಗೆ ಸೂಚಿಸಿತ್ತು. ಈ ಕುರಿತು ಮಾಹಿತಿ ನೀಡಿದ KRDCL ಹಿರಿಯ ಅಧಿಕಾರಿಯೊಬ್ಬರು ಮೂರು ತಿಂಗಳ ಹಿಂದೆ ವರದಿಯನ್ನು ಸಿದ್ಧಪಡಿಸಿದ್ದೇವೆ ಮತ್ತು ಅದನ್ನು ಸರ್ಕಾರಕ್ಕೆ ಸಲ್ಲಿಸಿರುವುದಾಗಿ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಸರ್ಕಾರ ಇನ್ನೂ ಬಜೆಟ್‌ಗೆ ಅನುಮೋದನೆ ನೀಡಿಲ್ಲ ಎಂಬ ಮಾಹಿತಿಯನ್ನೂ ಈ ಅಧಿಕಾರಿ ಬಹಿರಂಗಪಡಿಸಿದ್ದಾರೆ.


    Bengaluru: ಆಟವಾಡುವಾಗ ಆಯತಪ್ಪಿ ರಾಜಕಾಲುವೆಗೆ ಬಿದ್ದ ಮಗು; ಶೋಧಕಾರ್ಯ ಮಾಡಿದ್ರು ಪತ್ತೆಯಾಗದ ಕಂದ


    ಸೇತವೆಗಳ ದುರಸ್ತಿ ಹಾಗೂ ಪುನರ್‌ನಿರ್ಮಾಣ


    ಈ ಸೇತುವೆಗಳಲ್ಲಿ ಕೆಲವನ್ನು ವಾಹನಗಳ ಓಡಾಟಕ್ಕೆ ತೆರೆದಿದ್ದರೆ, ಇನ್ನು ಕೆಲವನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೇತುವೆಗಳಿಂದ ವಾಹನ ಚಲಾಯಿಸುವವರ ಪ್ರಾಣಕ್ಕೆ ಹಾಗೂ ದೇಹದ ಅಂಗಾಂಗಳಿಗೆ ಅಪಾಯವಿದೆ ಎಂಬುದನ್ನು ಅಧಿಕಾರಿ ಒಪ್ಪಿಕೊಂಡಿದ್ದಾರೆ.


    ಸೇತುವೆಗಳು ಬಹಳ ಹಳೆಯದಾಗಿದ್ದು 50 ವರ್ಷಗಳ ಹಿಂದೆಯೇ ನಿರ್ಮಿಸಿದವುಗಳಾಗಿವೆ. ವಾಹನಗಳ ಸಾಂದ್ರತೆ ಹೆಚ್ಚಿದಂತೆ ಅವು ದುರ್ಬಲಗೊಳ್ಳುತ್ತಲೇ ಹೋಗುತ್ತವೆ. ಕೆಲವುಗಳನ್ನು ಇನ್ನಷ್ಟು ಗಟ್ಟಿಮುಟ್ಟಾಗಿಸಲು ದುರಸ್ತಿಗಳನ್ನು ಕೈಗೊಳ್ಳಬೇಕಾಗಿದೆ ಇನ್ನು ಕೆಲವನ್ನು ಪುನರ್ ನಿರ್ಮಿಸಬೇಕಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.


    56 ಸೇತುವೆಗಳ ಪಟ್ಟಿ ತಯಾರಿ


    ಯೋಜನೆ ಮತ್ತು ರಸ್ತೆ ಆಸ್ತಿ ನಿರ್ವಹಣಾ ಕೇಂದ್ರವು ಸಿದ್ಧಪಡಿಸಿದ ಸೇತುವೆಯ ಸ್ಥಿತಿ ಸೂಚ್ಯಂಕದ ಆಧಾರದ ಮೇಲೆ 56 ಸೇತುವೆಗಳನ್ನು ಪಟ್ಟಿ ಮಾಡಲಾಗಿದೆ. ಕೇಂದ್ರವು ಸೇತುವೆಗಳ ಸ್ಥಿತಿಯನ್ನು ನಿಯಮಿತವಾಗಿ ಅಧ್ಯಯನ ನಡೆಸುತ್ತಿದ್ದು ಅವುಗಳ ಸ್ಥಿರತೆ ಮತ್ತು ಸಾಮರ್ಥ್ಯದ ಬಗ್ಗೆ ವರದಿಯನ್ನು ಸಿದ್ಧಪಡಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವರದಿಯನ್ನು ಆಧರಿಸಿ ಹೆಚ್ಚಿನ ಸೇತುವೆಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಇನ್ನು ಕೆಲವನ್ನು ರಾಜಕೀಯ ಪ್ರಭಾವದ ಕಾರಣದಿಂದ ಪಟ್ಟಿಮಾಡಲಾಗಿದೆ ಎಂದು ಅಧಿಕಾರಿ ಬಹಿರಂಗಪಡಿಸಿದ್ದಾರೆ.


    ತಂತ್ರಜ್ಞಾನದ ಮಧ್ಯಸ್ಥಿಕೆ


    ವಿವರವಾದ ಕಾರ್ಯಸಾಧ್ಯತಾ ವರದಿಯು ಸಂಚಾರ ಸಾಂದ್ರತೆಯನ್ನು ಅಧ್ಯಯನ ಮಾಡಿದೆ ಮತ್ತು ತಾಂತ್ರಿಕ ಮಧ್ಯಸ್ಥಿಕೆಗಳನ್ನು ಸೂಚಿಸಿದೆ ಎಂದು ಕೆಆರ್‌ಡಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಸಾದ್ ಪಿ ಆರ್ ತಿಳಿಸಿದ್ದಾರೆ. ಪ್ರತಿ ಸೇತುವೆಗೆ ಮಣ್ಣಿನ ತನಿಖೆಯನ್ನು ನಡೆಸಲಾಗಿದ್ದು ಪುನರಾಭಿವೃದ್ಧಿ ಸಮಯದಲ್ಲಿ ಅಳವಡಿಸಿಕೊಳ್ಳಬೇಕಾದ ತಾಂತ್ರಿಕ ವಿನ್ಯಾಸಗಳನ್ನು ಸಹ ವರದಿ ಶಿಫಾರಸು ಮಾಡಿದೆ ಎಂದು ಶಿವಪ್ರಸಾದ್ ಸುದ್ದಿಮಾಧ್ಯಮಕ್ಕೆ ತಿಳಿಸಿದ್ದಾರೆ. ಅಂದಾಜಿನ ಪ್ರಕಾರ ಸೇತುವೆಯನ್ನು ಬಲಪಡಿಸುವುದು ಹಾಗೂ ಮರುಸ್ಥಾಪನೆಗೆ ಸುಮಾರು ರೂ 1,300 ಕೋಟಿ ವೆಚ್ಚವಾಗಬಹುದು ಎಂದು ಶಿವಪ್ರಸಾದ್ ತಿಳಿಸಿದ್ದಾರೆ.


    ಸಾಂದರ್ಭಿಕ ಚಿತ್ರ


    ಯೋಜನೆಯನ್ನು ಅನುಮೋದಿಸಿ, ಹಣ ಮಂಜೂರಾದಲ್ಲಿ, ಕಾಮಗಾರಿ ಆರಂಭಿಸಲು ಕನಿಷ್ಠ ಆರು ತಿಂಗಳ ಸಮಯಾವಕಾಶವಾದರೂ ಬೇಕು. ಸೇತುವೆಯ ಸಾಮರ್ಥ್ಯ ಬಲಪಡಿಸಲು ಮೂರು ವರ್ಷಗಳು ಬೇಕು ಎಂಬುದು ಶಿವಪ್ರಸಾದ್ ಮಾತಾಗಿದೆ. ಹೆಚ್ಚಿನ ಸೇತುವೆಗಳು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯಲ್ಲಿವೆ ಎಂದು ಶಿವಪ್ರಸಾದ್ ಮಾಹಿತಿ ನೀಡಿದ್ದಾರೆ.


    ನಿಯತಕಾಲಿಕವಾಗಿ ಮೌಲ್ಯಮಾಪನ ಮಾಡುವುದು


    ಸೇತುವೆಗಳ ನಿಯತಕಾಲಿಕ ಮೌಲ್ಯಮಾಪನಗಳ ಪ್ರಾಮುಖ್ಯತೆಯ ಕುರಿತು ತಜ್ಞರು ಪ್ರಾಧಾನ್ಯತೆ ನೀಡಿದ್ದಾರೆ. ರಾಷ್ಟ್ರೀಯ ಕಟ್ಟಡ ಸಂಹಿತೆ ಪ್ರತಿ ಮೂರು ವರ್ಷಗಳಿಗೊಮ್ಮೆ ತಾಂತ್ರಿಕ ಲೆಕ್ಕ ಪರಿಶೋಧನೆ ನಡೆಸಬೇಕು ಎಂದು ಸ್ಪಷ್ಟವಾಗಿ ಹೇಳುತ್ತದೆ. ಅದಾಗ್ಯೂ ದೋಷಗಳು ಗೋಚರಿಸಿದಾಗ ಮಾತ್ರವೇ ಸರಕಾರಿ ಸಂಸ್ಥೆಗಳು ಮಧ್ಯಪ್ರವೇಶಿಸುತ್ತವೆ ಎಂದು ಬೆಂಗಳೂರಿನ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್‌ಗಳ ಸಂಘದ ಅಧ್ಯಕ್ಷ ಶ್ರೀಕಾಂತ್ ಚನ್ನಾಲ್ ತಿಳಿಸಿದ್ದಾರೆ.


    ದುರಸ್ತಿ ಅಗತ್ಯವಿರುವ ಪ್ರಮುಖ ಸೇತುವೆಗಳು


    * ಧಾರವಾಡ ಜಿಲ್ಲೆಯ ಉಪ್ಪಿನಬೆಟ್ಟಗೆರೆ ಬಳಿ NH-01 ಬಳಿ ಸೇತುವೆ


    * ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಬಳಿ NH-46 - ರಾಮದುರ್ಗ ಬಳಿ NH 34, ಬೆಳಗಾವಿ ಜಿಲ್ಲೆ


    * NH 55 ಮುಧೋಳ ಬಳಿ, ಬಾಗಲಕೋಟೆ


    * NH 31, ಲೋಳಸೂರು ಬಳಿ, ಬೆಳಗಾವಿ ಜಿಲ್ಲೆ

    Published by:Precilla Olivia Dias
    First published: