ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸಿ (Traffic Rules) ದಂಡ ಬಾಕಿ ಉಳಿಸಿಕೊಂಡಿರುವ ಸವಾರರಿಗೆ ಖುಷಿ ಸುದ್ದಿ ನೀಡಿದ್ದ ಸಾರಿಗೆ ಇಲಾಖೆ (Transport Department ) ಇಂದು ಯಾವ ಯಾವ ನಿಯಮಗಳ ಉಲ್ಲಂಘನೆಗೆ ಎಷ್ಟು ರಿಯಾಯಿತಿ ನೀಡಲಾಗಿದೆ ಎಂಬುವುದರ ಕುರಿತು ಚಾರ್ಟ್ ರಿಲೀಸ್ ಮಾಡಿದೆ. ಬೆಂಗಳೂರಿನ (Bengaluru) ಜನರು ರಿಯಾಯಿತಿ ದರದಲ್ಲಿ ದಂಡ ಕಟ್ಟಲು ಮುಗಿಬಿದ್ದಿದ್ದಾರೆ. ಅಲ್ಲದೆ, ಶೇಕಡಾ 50ರಷ್ಟು ರಿಯಾಯಿತಿ ಹಿನ್ನಲೆ ಆನ್ ಲೈನ್ ನಲ್ಲಿ(Online) ದಂಡ ಪಾವತಿ ಮಾಡಲು ಹಲವು ಮಂದಿ ಮುಂದಾಗಿದ್ದು, ಇದರಿಂದ ಸಂಚಾರಿ ಇಲಾಖೆಯ ಸರ್ವರ್ ಕೂಡ ಡೌನ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಟ್ರಾಫಿಕ್ ಸ್ಪೆಷಲ್ ಕಮಿಷನರ್ ಸಲೀಂ ಅವರು, ಆನ್ ಲೈನ್ ಪ್ರಕ್ರಿಯೆಯ ವಿಧಾನದ ಕಾರ್ಯ ನಡೆಯುತ್ತಿದ್ದು, ಸಂಜೆಯೊಳಗೆ ಸ್ಪಷ್ಟ ಮಾಹಿತಿಯನ್ನ ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Traffic Violation: ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡಿರುವ ಸವಾರರಿಗೆ ಖುಷಿ ಸುದ್ದಿ!
ಸಾರಿಗೆ ಇಲಾಖೆ ಚಾರ್ಟ್ ಬಿಡುಗಡೆ
ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾಗಿರುವ, ಹೈಕೋರ್ಟ್ ನ್ಯಾ ಬಿ.ವೀರಪ್ಪ ಅವರ ಪ್ರಸ್ತಾವನೆ ಮೇರೆಗೆ ಕ್ರಮ ಸರ್ಕಾರ ದಂಡದಲ್ಲಿ 50% ರಿಯಾಯಿತಿ ನೀಡಿ ಸರ್ಕಾರದ ಆದೇಶ ಹೊರಡಿಸಿತ್ತು. ದಂಡ ಪಾವತಿ ಮಾಡಲು ಫೆ.11ರವರೆಗೆ ಮಾತ್ರ ಸಮಯ ನೀಡಿ ಆದೇಶ ನೀಡಲಾಗಿತ್ತು. ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿಗಳು ಅಧಿಕೃತ ಆದೇಶ ಹೊರಡಿಸಿದ್ದರು. ಸದ್ಯ ದಂಡ ಪಾವತಿ ಕುರಿತಂತೆ ಸಾರಿಗೆ ಇಲಾಖೆ ಚಾರ್ಟ್ ಬಿಡುಗಡೆ ಮಾಡಿದೆ.
ಟ್ರಾಫಿಕ್ ಪೊಲೀಸರು ನಿಯಮಗಳ ಉಲ್ಲಂಘನೆ ಪ್ರಕರಣಗಳು ಹಾಗೂ ದಂಡದ ರಿಯಾಯಿತಿ ಚಾರ್ಟ್ ಬಿಡುಗಡೆ ಮಾಡಿದ್ದಾರೆ. ಯಾವ ಯಾವ ಪ್ರಕರಣಕ್ಕೆ ಎಷ್ಟೆಷ್ಟು ದಂಡ ಹಾಗೂ ಎಷ್ಟು ಡಿಸ್ಕೌಂಟ್ ನೀಡಲಾಗಿದೆ ಎಂದು ಚಾರ್ಟ್ನಲ್ಲಿ ಮಾಹಿತಿ ನೀಡಲಾಗಿದೆ.
44 ತರಹದ ಟ್ರಾಫಿಕ್ ನಿಯಮಗಳ ಉಲ್ಲಂಘಟನೆ ಪಟ್ಟಿ
ಟ್ರಾಫಿಕ್ ಪೊಲೀಸರು ಸುಮಾರು 44 ತರಹದ ನಿಯಮಗಳ ಉಲ್ಲಂಘಟನೆಯ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಪುಟ್ ಪಾತ್ ಪಾರ್ಕಿಂಗ್ಗೆ ಒಂದು ಸಾವಿರ ದಂಡ ಹಾಗೂ ಇದರಲ್ಲಿ 500 ರೂಪಾಯಿ ರಿಯಾಯಿತಿ ನೀಡಲಾಗಿದೆ.
ಫೆಕ್ಟೀವ್ ನಂಬರ್ ಪ್ಲೇಟ್ಗೆ ಮೊದಲ ಕೇಸ್ ಆದರೆ 500 ರೂಪಾಯಿ ದಂಡ, ಇದರಲ್ಲಿ 250 ರಿಯಾಯಿತಿ. ಹೆಚ್ಚುವರಿ ಕೇಸ್ಗೆ 1,500 ರೂಪಾಯಿ ದಂಡ ಇದರಲ್ಲಿ 750 ರಿಯಾಯಿತಿ ನೀಡಲಾಗಿದೆ. ಉಳಿದಂತೆ ಸಿಗ್ನಲ್ ಜಂಪ್ಗೆ 500 ರೂಪಾಯಿ ದಂಡ, ಇದರಲ್ಲಿ 250 ರೂಪಾಯಿ ರಿಯಾಯಿತಿ. ಓವರ್ ಸ್ಪೀಡ್ಗೆ ಒಂದು ಸಾವಿರ ರೂಪಾಯಿ ದಂಡ, ಇದರಲ್ಲಿ 500 ರೂಪಾಯಿ ರಿಯಾಯಿತಿ ನೀಡಲಾಗಿದೆ.
ಇದನ್ನೂ ಓದಿ: Wayanad: ಬೆಂಗಳೂರಿನ ಟ್ರಾಫಿಕ್‌ನಿಂದ ಪಾರಾಗಲು ಹೊಸ ಪ್ಲಾನ್, ವಯನಾಡಿನಲ್ಲಿ ಹಾಲಿಡೇ ಹೋಮ್ ನಿರ್ಮಿಸಿದ ಟೆಕ್ಕಿ
ಯಾವ ಪ್ರಕರಣಕ್ಕೆ ಎಷ್ಟು ದಂಡ, ಎಷ್ಟು ರಿಯಾಯಿತಿ ಸಿಗುತ್ತೆ?
ಓನ್ ವೇ ರೈಡಿಂಗ್ಗೆ ಮೊದಲ ಬಾರಿ 500 ರೂಪಾಯಿ ದಂಡ, 250 ರಿಯಾಯಿತಿ. ರಿಪೀಟೆಡ್ ಪ್ರಕರಣಗಳಿಗೆ 1,500 ದಂಡ, 750 ರಿಯಾಯಿತಿ. ಫುಟ್ ಫಾತ್ ಡ್ರೈವಿಂಗ್ ಪ್ರಕರಣದಲ್ಲಿ ಮೊದಲ ಬಾರಿಗೆ 500 ರೂಪಾಯಿ ದಂಡ, 250 ರಿಯಾಯಿತಿ. ರಿಪೀಟೆಡ್ ಪ್ರಕರಣಗಳಿಗೆ 1500 ರೂಪಾಯಿ ದಂಡ, 750 ರಿಯಾಯಿತಿ.
ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಿದ ಪ್ರಕರಣದಲ್ಲಿ ಮೊದಲ ಬಾರಿಗೆ 3,000 ಸಾವಿರ ದಂಡ, 1,500 ರಿಯಾಯಿತಿ. ರಿಪೀಟೆಡ್ ಪ್ರಕರಣಗಳಿಗೆ 10,000 ರೂಪಾಯಿ ದಂಡ, 5,000 ರಿಯಾಯಿತಿ. ಬೈಕ್ ಚಾಲನೆ ವೇಳೆ ಮೊಬೈಲ್ ಬಳಕೆಗೆ 1,500 ದಂಡ, 750 ರೂಪಾಯಿ ರಿಯಾಯಿತಿ. ಹೆಲ್ಮೆಟ್ ರಹಿತ ಚಾಲನೆಗೆ 500 ದಂಡ, 250 ರೂಪಾಯಿ ರಿಯಾಯಿತಿ ನೀಡಲಾಗಿದೆ. ಇದೇ ರೀತಿ ಸುಮಾರು 44 ವಿವಿಧ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳ ಪಟ್ಟಿ ರಿಲೀಸ್ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ