Percentage Scam: ಶಿಕ್ಷಣ ಇಲಾಖೆಗೂ ಕಾಲಿಟ್ಟ ಕಮೀಷನ್ ಭೂತ! ಶಿಕ್ಷಣ ಸಚಿವ ನಾಗೇಶ್ ವಿರುದ್ಧ ಪ್ರಧಾನಿಗೆ ದೂರು!

ನಾಗೇಶ್ ಶಿಕ್ಷಣ ಸಚಿವರಾದ ಬಳಿಕ ಇಲಾಖೆಯಲ್ಲಿ ಭ್ರಷ್ಟಚಾರ ಹೆಚ್ಚಾಗಿದ್ದು, ಇಲಾಖೆಗೆ ಕೆಟ್ಟ ಹೆಸರು ತರೋ ಕೆಲ್ಸ ಮಾಡ್ತಿದ್ದಾರೆ ಅಂತ ರುಪ್ಸಾ ಅಧ್ಯಕ್ಷರು ಆರೋಪ ಮಾಡಿದ್ದಾರೆ. ಈ ಕುರಿತಂತೆ ಪ್ರಧಾನಿ ಮೋದಿ ಅವ್ರಿಗೆ ಭ್ರಷ್ಟಾಚಾರದ ಸಮಗ್ರ ವಿವರವನ್ನು ಒಳಗೊಂಡು ಪತ್ರ ಬರೆಯಲಿದ್ದಾರಂತೆ.

ಬಿ. ಸಿ.ನಾಗೇಶ್

ಬಿ. ಸಿ.ನಾಗೇಶ್

  • Share this:
ಕರ್ನಾಟಕದಲ್ಲಿ ಕಮೀಷನ್ ದಂಧೆ (Percentage Scam) ಜೋರಾಗಿ ಸದ್ದು ಮಾಡ್ತಿದೆ. ಗುತ್ತಿಗೆದಾರರ (Contractor) ಸಂಘ ದೊಡ್ಡ ಮಟ್ಟದಲ್ಲಿ ಆರೋಪ ಮಾಡ್ತಿದೆ. ರಾಜ್ಯದಲ್ಲಿ ಸದ್ಯ ಸದ್ದು ಮಾಡ್ತಿರೋ ಕಮೀಷನ್ ದಂಧೆ ದಿನದಿಂದ ದಿನಕ್ಕೆ ಒಂದೊಂದು ಇಲಾಖೆಯನ್ನ (Ministry) ಆವರಿಸಿಕೊಳ್ತಿದೆ. ಮೊನ್ನೆ ಮೊನ್ನೆಯಷ್ಟೇ ತೋಟಗಾರಿಕಾ ಸಚಿವ ಮುನಿರತ್ನ ವಿರುದ್ಧ ಗಂಭೀರ ಆರೋಪ ಕೇಳಿಬಂದಿತ್ತು. ಲೋಕೋಪಯೋಗಿ (PWD), ಬಿಬಿಎಂಪಿ (BBMP), ತೋಟಗಾರಿಕೆ ಇಲಾಖೆ ಬೆನ್ನಲ್ಲೇ ಇದೀಗ ಶಿಕ್ಷಣ ಇಲಾಖೆಗೂ (Education Ministry) ಕಮೀಷನ್ ಭೂತ ಕಾಲಿಟ್ಟಿದೆ. ಸಚಿವರ ರಾಜೀನಾಮೆಗೆ ಒತ್ತಾಯ ಕೇಳಿ ಬರ್ತಿದೆ. ಇನ್ನು ಕಮೀಷನ್ ವಿಚಾರಕ್ಕೆ ಕುರಿತ ದಾಖಲೆಗಳು ಪಿಎಂ ಕಚೇರಿಗೂ ತಲುಪಲಿದೆ. ಏನಿದು ಶಿಕ್ಷಣ ಇಲಾಖೆಯ ಕಮೀಷನ್ ಆರೋಪ ಅನ್ನೋದನ್ನು ನೋಡೋಣ

ರಾಜ್ಯದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಕಮೀಷನ್ ಆರೋಪ, ಪ್ರತ್ಯಾರೋಪ ಕೇಳಿ ಬರ್ತಿದೆ. ಆ ಇಲಾಖೆಯಲ್ಲಿ ಇಷ್ಟು ಕಮೀಷನ್. ಈ ಇಲಾಖೆಯಲ್ಲಿ ಇಷ್ಟು ಪರ್ಸಂಟೇಜ್ ಅಂತೆಲ್ಲಾ ಆರೋಪವನ್ನ ಗುತ್ತಿಗೆದಾರರು ಮಾಡ್ತಿದ್ದಾರೆ. ಆದರೆ ಇದೀಗ ಇಷ್ಟೇ ಇಲಾಖೆ ಅಲ್ಲ ಶಿಕ್ಷಣ ಇಲಾಖೆಯಲ್ಲೂ ಹತ್ರತ್ರ 50 ರಷ್ಟು ಕಮೀಷನ್ ದಂಧೆ ನಡೆಯುತ್ತಿದೆ ಅಂತ ಖಾಸಗಿ ಶಾಲಾ ಆಡಳಿತ ಮಂಡಳಿ ರುಪ್ಸಾ ಗಂಭೀರ ಆರೋಪ ಮಾಡಿದೆ.

50 percent commission ghost education department complaint submitted to the prime minister against education minister nagesh
ಬಿ.ಸಿ.ನಾಗೇಶ್​


ಶಿಕ್ಷಣ ಸಚಿವ ನಾಗೇಶ್ ವಿರುದ್ಧ ಆರೋಪ

ನಾಗೇಶ್ ಶಿಕ್ಷಣ ಸಚಿವರಾದ ಬಳಿಕ ಇಲಾಖೆಯಲ್ಲಿ ಭ್ರಷ್ಟಚಾರ ಹೆಚ್ಚಾಗಿದ್ದು, ಇಲಾಖೆಗೆ ಕೆಟ್ಟ ಹೆಸರು ತರೋ ಕೆಲ್ಸ ಮಾಡ್ತಿದ್ದಾರೆ ಅಂತ ರುಪ್ಸಾ ಅಧ್ಯಕ್ಷರು ಆರೋಪ ಮಾಡಿದ್ದಾರೆ. ಈ ಕುರಿತಂತೆ ಪ್ರಧಾನಿ ಮೋದಿ ಅವ್ರಿಗೆ ಭ್ರಷ್ಟಾಚಾರದ ಸಮಗ್ರ ವಿವರವನ್ನು ಒಳಗೊಂಡು ಪತ್ರ ಬರೆಯಲಿದ್ದಾರಂತೆ.

ಇದನ್ನೂ ಓದಿ: ಮೈತ್ರಿ ಸರ್ಕಾರ ಇದ್ದಾಗಲೂ ಕಮೀಷನ್ ದಂಧೆ ಇತ್ತು! ಎಚ್‌ಡಿ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ

ರುಪ್ಸಾ ಮಾಡಿರುವ ಆರೋಪಗಳೇನು.!?

- ಶಾಲೆ ಮಾನ್ಯತೆ ನವೀಕರಣ ಮಾಡಲು ಲಕ್ಷಾಂತರ ರೂಪಾಯಿ ಲಂಚ ನೀಡ್ಬೇಕು

- ಲಂಚ ಪಡೀಬೇಕು ಅಂತಾನೆ ಹೊಸ ಮಾರ್ಗಗಳ ಅನ್ವೇಷಣೆ ಮಾಡಲಾಗಿದೆ

- RTE ಶುಲ್ಕ ಮರುಪಾವತಿ ಮಾಡೋಕೆ 30% ರಿಂದ 50% ವರೆಗೂ ಲಂಚ ಕೊಡಬೇಕು

- ಅನ್ಯ ಪಠ್ಯಕ್ರಮ ಅನುಸರಿಸಲು NOC ಪಡೆಯೋಕೆ 15 ಲಕ್ಷದವರೆಗೂ ಲಂಚ

- ದಾಖಲೆಗಳ ನೆಪದಲ್ಲಿ ತಿಂಗಳಿಗೊಮ್ಮ ಮಾಮೂಲಿ ವಸೂಲಿ

- ವರ್ಷಕ್ಕೊಮ್ಮೆ ಅಧಿಕಾರಿಗಳ ವರ್ಗಾವಣೆ ಮಾಡಬೇಕು ಅಂದ್ರೆ ಲಂಚ ಕೊಡಬೇಕು

- ಸರ್ಕಾರಿ ಶಾಲೆಗಳನ್ನು ಶಿಕ್ಷಣ ಸಚಿವರು ಮರೆತಿದ್ದಾರೆ

- ಮಕ್ಕಳಿಗೆ ಶೂ ಸಾಕ್ಸ್ ನೀಡಿಲ್ಲ, ಸೈಕಲ್ ನೀಡಿಲ್ಲ

- ಧಾರ್ಮಿಕ ಸೂಕ್ಷ್ಮ ವಿಚಾರಗಳ ವಿಚಾರದಲ್ಲಿ ವಿದ್ಯಾರ್ಥಿಗಳ ಮನಸ್ಸು ಕಲುಷಿತಗೊಳಿಸಿದ್ದಾರೆ

ಹಣಕ್ಕೆ ಡಿಮ್ಯಾಂಡ್ ಇಟ್ಟ ಬಿಇಓ ಆಡಿಯೋ ಬಿಡುಗಡೆ!

ಈ ಎಲ್ಲಾ ಆರೋಪಗಳ ಜತೆಗೆ ವಿಜಯಪುರ ಜಿಲ್ಲೆಯ ವಿಜಯಪುರ ತಾಲೂಕಿನ ಬಿಇಓ ಖಾಸಗಿ ಶಾಲೆ ಆಡಳಿತ ಮಂಡಳಿ ಬಳಿ ಲಂಚ ಕೇಳಿದ್ದಾರೆ ಎನ್ನಲಾದ ಆಡಿಯೋ ಇದೀಗ ವೈರಲ್ ಆಗಿದೆ. ಈ ಆಡಿಯೋ ಶಿಕ್ಷಣ ಇಲಾಖೆಯನ್ನ ಇನ್ನಷ್ಟು ಮುಜುಗರಕ್ಕೀಡುಮಾಡಿದೆ.

ಸುಮಾರು ಎಂಟು ಆರೋಪಗಳನ್ನ ಮಾಡಿರೋ ರುಪ್ಸಾ ಸಂಘಟನೆ ಇದೀಗ ಪ್ರಧಾನಿ ಕಚೇರಿಗೆ ದಾಖಲೆಗಳ ಸಮೇತ ದೂರು ನೀಡಲು ಮುಂದಾಗಿದೆ.‌

ಇದನ್ನೂ ಓದಿ: ಇದು ಶಿಕ್ಷಕರ ದಿನಾಚರಣೆ ಸ್ಪೆಷಲ್, ವಂಡರ್‌ ಲಾದಿಂದ ವಂಡರ್‌ಫುಲ್ ಗಿಫ್ಟ್!

ಶಿಕ್ಷಣ ಇಲಾಖೆ ವಿರುದ್ಧ ಆರೋಪದಿಂದ ಸರ್ಕಾರಕ್ಕೆ ಮುಜುಗರ

ಸದ್ಯ ಗುತ್ತಿಗೆದಾರರು ಮಾಡ್ತಿದ್ದ ಆರೋಪವನ್ನ ಸರ್ಕಾರ ತಿರಸ್ಕಾರ ಮಾಡ್ತಾನೇ ಬರ್ತಿದೆ. ಇದೀಗ ಹೊಸ ಇಲಾಖೆಯ ಕಮೀಷನ್ ದಂಧೆ ಸರ್ಕಾರವನ್ನ ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಚಿವ ನಾಗೇಶ್ ವಿರುದ್ಧ ಕ್ರಮ ಆಗುತ್ತಾ? ಇಲ್ಲ ಈ ಕುರಿತಂತೆ ಸ್ಪಷ್ಟನೆ ಕೊಡ್ತಾರಾ ಕಾದು ನೋಡಬೇಕಿದೆ.
Published by:Thara Kemmara
First published: