Anekal: ಅಕ್ರಮ ಬಂಧನದಲ್ಲಿದ್ದ 50 ಗೋವುಗಳ ರಕ್ಷಣೆ

ಆನೇಕಲ್ ಉಪ ವಿಭಾಗದ DySP ಮಲ್ಲೇಶ್, ಆನೇಕಲ್ ಠಾಣೆ ಇನ್ಸ್‌ಪೆಕ್ಟರ್ ಮಹಾನಂದ ನೇತೃತ್ವದಲ್ಲಿ ದಾಳಿ ನಡೆಸಿದ್ದು, ದಾಳಿ ವೇಳೆ ಕೋಳಿ ಫಾರಂ ಶೆಡ್ ಒಳಗೆ 50 ಕ್ಕೂ ಹೆಚ್ಚು ಹಸು, ಎಮ್ಮೆ ಮತ್ತು ಕರುಗಳು ಕಂಡು ಬಂದಿವೆ

ಗೋವುಗಳು

ಗೋವುಗಳು

  • Share this:
ಅದು ನೋಡಲು ಹೊಲದೊಳಗೆ ನಿರ್ಮಿಸಿದ ಕೋಳಿ ಫಾರಂನತ್ತಿತ್ತು (Poultry). ಅಲ್ಲಿ ಕೋಳಿ ಸಾಕಾಣಿಕೆ ಮಾಡಲಾಗುತ್ತಿದೆ ಅಂತ ಎಲ್ಲರೂ ಭಾವಿಸಿದ್ದರು. ಆದ್ರೆ ಅಲ್ಲಿ ಅಕ್ರಮವಾಗಿ ಗೋವುಗಳನ್ನು (Cow Shelter) ಕೂಡಿ ಹಾಕಲಾಗಿದೆ ಎಂಬ ಆರೋಪದ ಮೇಲೆ ಇಂದು ಆನೇಕಲ್ ಪೊಲೀಸರು (Anekal Police) ದಾಳಿ ನಡೆಸಿದ್ದು, ಅನುಮಾನದ ಮೇಲೆ ಐವತ್ತಕ್ಕೂ ಅಧಿಕ ಗೋವುಗಳನ್ನು (Cows) ವಶಕ್ಕೆ ಪಡೆಯಲಾಗಿದೆ. ಹೌದು ಖಸಾಯಿಖಾನೆಗೆ ಸಾಗಿಸಲು ಗೋವುಗಳನ್ನು ಆಕ್ರಮವಾಗಿ ಕೂಡಿ ಹಾಕಲಾಗಿದೆ ಎಂಬ ಆರೋಪ ಹಿನ್ನೆಲೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಗೌರೇನಹಳ್ಳಿ ಬಳಿಯ ಕೋಳಿಫಾರಂನಂತಹ ಶೆಡ್ ಮೇಲೆ ಆನೇಕಲ್ ಪೊಲೀಸರು ಮತ್ತು ಗೋ ಗ್ಯಾನ್ ಪ್ರಾಣಿ ದಯಾ ಸಂಘದವರು ದಾಳಿ ನಡೆಸಿದ್ದಾರೆ.

ಆನೇಕಲ್ ಉಪ ವಿಭಾಗದ DySP ಮಲ್ಲೇಶ್, ಆನೇಕಲ್ ಠಾಣೆ ಇನ್ಸ್‌ಪೆಕ್ಟರ್ ಮಹಾನಂದ ನೇತೃತ್ವದಲ್ಲಿ ದಾಳಿ ನಡೆಸಿದ್ದು, ದಾಳಿ ವೇಳೆ ಕೋಳಿ ಫಾರಂ ಶೆಡ್ ಒಳಗೆ 50 ಕ್ಕೂ ಹೆಚ್ಚು ಹಸು, ಎಮ್ಮೆ ಮತ್ತು ಕರುಗಳು ಕಂಡು ಬಂದಿವೆ. ಸ್ಥಳ ಪರಿಶೀಲನೆ ನಡೆಸಿದಾಗ ವಾರಸುದಾರರಿಂದ ಸಮರ್ಪಕ ಮಾಹಿತಿ ದೊರೆಯದ ಹಿನ್ನೆಲೆ ಐವತ್ತಕ್ಕೂ ಅಧಿಕ ಗೋವುಗಳನ್ನು ವಶಕ್ಕೆ ಪಡೆದು ತಮಿಳುನಾಡಿನ ಹೊಸೂರು ಬಳಿಯ ಗೋ ಶಾಲೆಗೆ ರವಾನಿಸಲಾಗಿದೆ.

ತಪ್ಪಿತಸ್ಥರ ವಿರುದ್ಧ ಕ್ರಮ

ಜೊತೆಗೆ ಅಕ್ರಮವಾಗಿ ನಡೆಯುತ್ತಿರುವ ಖಸಾಯಿಖಾನೆಗಳ ಬಗ್ಗೆಯು ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಆನೇಕಲ್ ಉಪ ವಿಭಾಗದ DySP ಮಲ್ಲೇಶ್ ತಿಳಿಸಿದ್ದಾರೆ.

ಇದನ್ನೂ ಓದಿ:  Artist: ಈ ಕಲಾವಿದನಿಗೆ ದುರಸ್ಥಿಗೊಂಡ ರಸ್ತೆಗಳೇ ಕ್ಯಾನ್ವಾಸ್ ಅಂತೆ! ಎಷ್ಟು ಚೆನ್ನಾಗಿದೆ ಅಲ್ವಾ ಈ ಕಲಾಕೃತಿಗಳು

ಇನ್ನೂ ಖಸಾಯಿಖಾನೆಗೆ ಸಾಗಿಸಲು ಅಕ್ರಮವಾಗಿ ಗೋವುಗಳನ್ನು ಶೆಡ್ ನಲ್ಲಿ ಕೂಡಿ ಹಾಕಲಾಗಿದೆ ಎಂಬ ಮಾಹಿತಿ ಸಿಕ್ಕಿತ್ತು. ಪೊಲೀಸರ ನೆರವಿನೊಂದಿಗೆ ದಾಳಿ ನಡೆಸಿದಾಗ ಒಳ್ಳೆಯ ಎತ್ತುಗಳು ಮತ್ತು ಕೋಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿವೆ. ಸಮೀಪದಲ್ಲಿಯೇ ಖಸಾಯಿಖಾನೆಗಳು ಇರುವುದರಿಂದ ಇವುಗಳನ್ನು ಅಲ್ಲಿಗೆ ಸಾಗಿಸುವ ಉದ್ದೇಶವಿತ್ತು. ಹಾಗಾಗಿ ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ದಂಧೆಗೆ ಗ್ರಾ.ಪಂ. ಸದಸ್ಯರ ಕುಮ್ಮಕ್ಕು!

ಪೊಲೀಸರು ಸಹ ಉತ್ತಮವಾಗಿ ಸ್ಪಂದಿಸಿದ್ದಾರೆ. ಅಂದಹಾಗೆ ಇಲ್ಲಿನ ವಾತಾವರಣ ಗಮನಿಸಿದರೆ ಇಲ್ಲಿಂದ ಬೇರೆ ಬೇರೆ ಕಡೆಯ ಖಸಾಯಿಖಾನೆಗಳಿಗೆ ಗೋವುಗಳನ್ನು ಸಾಗಾಣೆ ಮಾಡಲಾಗುತ್ತಿತ್ತು ಎಂಬ ಸಂದೇಹ ಮೂಡುತ್ತಿದೆ. ಈ ದಂಧೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರ ಕುಮ್ಮಕ್ಕು ಇದ್ದು, ಶೆಡ್ ಮಾಲೀಕ, ಜಮೀನು ಮಾಲೀಕ, ಮಾಂಸ ಮಾರಾಟ ಮಾಡುವ ಅಂಗಡಿಗಳ ಮಾಲೀಕರು ಸೇರಿದಂತೆ ಎಲ್ಲರ ಮೇಲೂ ಕ್ರಮ ಜರುಗಿಸಬೇಕು ಎಂದು ಗೋ ಗ್ಯಾನ್ ಫೌಂಡೇಶನ್ ಸದಸ್ಯ ಸಂಜಯ್ ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಪೊಲೀಸರ ದಾಳಿ ವೇಳೆ ಸಣ್ಣ ಸಣ್ಣ ಕರುಗಳು ಹಸುಗಳು ಸಹ ಕಂಡು ಬಂದಿದ್ದು, ಪೊಲೀಸರು ಕೂಲಂಕುಷವಾಗಿ ಪರಿಶೀಲನೆ ನಡೆಸಿದಾಗ ಮಾತ್ರ ಸಾಕಾಣಿಕೆ ದೃಷ್ಟಿಯಿಂದ ಅಥವಾ ಕಸಾಯಿಖಾನೆಗೆ ರವಾನಿಸಲು ಗೋವುಗಳನ್ನು ಕಟ್ಟಿ ಹಾಕಲಾಗಿತ್ತು ಎಂಬ ವಿಚಾರ ತಿಳಿಯಲಿದೆ.

ವಾರ್ಡ್ ಸ್ವಚ್ಛತೆಗೆ ತೆರಳಿದಾಗ ಅಕ್ರಮ ಖಸಾಯಿಖಾನೆ ಪತ್ತೆ; ಶೆಡ್ ನಲ್ಲಿ 3 ಗೋವುಗಳ ಹತ್ಯೆ

ಅಕ್ರಮ ಗೋಮಾಂಸ ಶೆಡ್ (Cattle slaughter) ಮೇಲೆ ನಗರಸಭೆ ಅಧ್ಯಕ್ಷರ ನೇತೃತ್ವದ ಅಧಿಕಾರಿಗಳು ದಾಳಿ ಮಾಡಿರುವ ಘಟನೆ ಚಿಕ್ಕಮಗಳೂರು (Chikkamagaluru) ನಗರದ ತಮಿಳು ಕಾಲೋನಿಯಲ್ಲಿ ನಡೆದಿದೆ.

ಇದನ್ನೂ ಓದಿ:  Hubballi: ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬಕ್ಕೆ ಸಿಎಂ ಬೊಮ್ಮಾಯಿ ಸಿಡಿಮಿಡಿ; ವೇದಿಕೆ ಮೇಲೆಯೇ ಅಧಿಕಾರಿಗೆ ತರಾಟೆ

ಸಂತೆ ಮೈದಾನದ (Snate Maidan) ಸಮೀಪದಲ್ಲಿರುವ ತಮಿಳು ಕಾಲೋನಿಯಲ್ಲಿ(Tamilu Colony) ಅಕ್ರಮವಾಗಿ ಖಸಾಯಿಖಾನೆ ನಡೆಸುತ್ತಿರೋದು ಬೆಳಕಿಗೆ ಬಂದಿದ್ದು, ಜೆಸಿಬಿಯೊಂದಿಗೆ (JCB) ತೆರಳಿದ ಅಧಿಕಾರಿ ಮತ್ತು ಸಿಬ್ಬಂದಿ ತಂಡ ಶೆಡ್ ಗಳನ್ನು ನಾಶಗೊಳಿಸಿದ್ದಾರೆ. ಶೆಡ್ ಮಾಲೀಕ (Cow Slaughter Shed Owner) ಸೇರಿ ದಂತೆ ಇತರರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Published by:Mahmadrafik K
First published: