• Home
  • »
  • News
  • »
  • state
  • »
  • Accident: ಬೀದರ್​ನಲ್ಲಿ ಭೀಕರ ಅಪಘಾತ; ಐವರ ಸಾವು, 6 ಮಂದಿಗೆ ಗಾಯ

Accident: ಬೀದರ್​ನಲ್ಲಿ ಭೀಕರ ಅಪಘಾತ; ಐವರ ಸಾವು, 6 ಮಂದಿಗೆ ಗಾಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭೀಕರ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದು, 6 ಮಂದಿ ಗಾಯಗೊಂಡಿದ್ದಾರೆ. ಒಂದೇ ಊರಿನ ಐವರು ಮಹಿಳೆಯರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಬೀದರ್ (ನ.04 : ಐಶರ್ ಟ್ರಕ್ (Eicher Truck) ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿ ಐವರ ಸಾವನ್ನಪ್ಪಿರುವ (Death) ದಾರುಣ ಘಟನೆ ಬೀದರ್ (Bidar) ಜಿಲ್ಲೆ ಚಿಟಗುಪ್ಪಾ ತಾಲೂಕಿನ ಬೆಮ್ಮಳಖೇಡ ಗ್ರಾಮದ ಬಳಿ ನಡೆದಿದೆ. ಭೀಕರ ಅಪಘಾತದಲ್ಲಿ (Accident) ಸ್ಥಳದಲ್ಲಿಯೇ ಓರ್ವ ಮಹಿಳೆ ಸಾವನ್ನಪ್ಪಿದ್ದು, ಆಸ್ಪತ್ರೆಯಲ್ಲಿ ನಾಲ್ವರು ಮಹಿಳೆಯರು (Women) ಸಾವನ್ನಪ್ಪಿದ್ದಾರೆ. ಪ್ರಭಾವತಿ (36), ಯಾದಮ್ಮ (40), ಗುಂಡಮ್ಮ (52), ಜಕ್ಕಮ್ಮ (32), ರುಕ್ಮಿಣಿ (60) ಸಾವೀಗೀಡಾದ ದುರ್ದೈವಿಗಳಾಗಿದ್ದಾರೆ.


ಗಾಯಾಳುಗಳು ಆಸ್ಪತ್ರೆಗೆ ದಾಖಲು


ಇನ್ನು ಅಪಘಾತದಲ್ಲಿ 6 ಜನ‌ ಗಾಯಾಳುಗಳನ್ನು ಬೀದರ್ ಹಾಗೂ ಮನ್ನಾಖೇಳ್ಳಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗಿದೆ.  ಬೀದರ್ ಜಿಲ್ಲೆ ಚಿಟಗುಪ್ಪಾ ತಾಲೂಕಿನ ಬೆಮ್ಮಳಖೇಡ ಗ್ರಾಮದ ಬಳಿ ಈ ಭೀಕರ ಅಪಘಾತ ಸಂಭವಿಸಿದೆ.


couple died and nine injured in accident at vijayapura mrq


ಮೃತರು ಉಡಮನಳ್ಳಿ ಗ್ರಾಮಸ್ಥರು
ಮೃತಪಟ್ಟ 5 ಮಹಿಳೆಯರು 6 ಜನ‌ ಗಾಯಾಳುಗಳು ಉಡಮನಳ್ಳಿ ಗ್ರಾಮಸ್ಥರಾಗಿದ್ದು, ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಇನ್ನು ಈ ಸಂಬಂಧ ಬೆಮಳಖೇಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ: Chandrashekar Death: ಆಶ್ರಮಕ್ಕೆ ಬಂದ ಚಂದ್ರಶೇಖರ್​ಗೆ ವಿನಯ್​ ಗುರೂಜಿ ಹೇಳಿದ್ದೇನು? ಸಾವಿನ ಬಗ್ಗೆ ಸುಳಿವು ಕೊಟ್ಟಿದ್ರಾ ಅವಧೂತರು?


ಬೈಕ್ ಸವಾರನ ಬಲಿ ಪಡೆದ ಬಿಎಂಟಿಸಿ ಬಸ್; ಚಾಲಕನಿಗೆ ಥಳಿತ


ಬೆಂಗಳೂರಿನ ರಸ್ತೆಗಳು ಎಷ್ಟು ಸೇಫ್ ಅನ್ನೋ ಪ್ರಶ್ನೆ ಮತ್ತೆ ಮತ್ತೆ ಸಾರ್ವಜನಿಕರ ಮುಂದೆ ಬರುತ್ತಿದೆ. ಒಂದು ಕಡೆ ರಸ್ತೆಗುಂಡಿಗಳು ಯಮದೂತರಾಗಿ ಕುಳಿತಿದ್ರೆ, ಮತ್ತೊಂದೆಡೆ ಬಿಎಂಟಿಸಿ ಬಸ್​ ಯಾವಾಗ ಬಂದು ಡಿಕ್ಕಿ ಹೊಡೆಯುತ್ತೆ ಅನ್ನೋ ಆತಂಕದಲ್ಲಿಯೇ ಜನರು ಪ್ರಯಾಣಿಸಬೇಕಾಗಿದೆ. ಬುಧವಾರ ರಾತ್ರಿ ಬಿಎಂಟಿಸಿ ಬೈಕ್​ ಸವಾರನೋರ್ವನನ್ನು ಬಲಿ ಪಡೆದುಕೊಂಡಿದೆ. ಆಕ್ರೋಶಗೊಂಡ ಜನರು ಬಿಎಂಟಿಸಿ ಚಾಲಕನನ್ನ ಹಿಡಿದು ಥಳಿಸಿದ್ದಾರೆ.


ಪ್ರಮೋದ್ ಮೃತ ಬೈಕ್ ಸವಾರ. ಕಾಮಾಕ್ಷಿಪಾಳ್ಯ ಬಳಿಯ ಸುಮನ್ ಹಳ್ಳಿ ಬ್ರಿಡ್ಜ್ ಬಳಿ ಬುಧವಾರ (ನ.03) ರಾತ್ರಿ ಸುಮಾರು 10 ಗಂಟೆಗೆ ಅಪಘಾತ ಸಂಭವಿಸಿದೆ. 401FA ಸಂಖ್ಯೆಯ ಬಿಎಂಟಿಸಿ ಬಸ್ ಸುಮನಹಳ್ಳಿಯಿಂದ ಲಗ್ಗರೆ ಕಡೆ ತೆರಳುತ್ತಿತ್ತು. ಡಿಪೋ ನಂಬರ್ 4ಕ್ಕೆ ಸೇರಿದ ಬಸ್ ಇದಾಗಿದೆ.


ತಲೆಗೆ ಬಲವಾದ ಪೆಟ್ಟು ಬಿದ್ದು ಸಾವು


ಈ ವೇಳೆ ಮುಂದೆ ಹೋಗುತ್ತಿದ್ದ ಬೈಕ್​​ಗೆ ಬಸ್​ ಡಿಕ್ಕಿ ಹೊಡೆದಿದೆ. ಬೈಕ್ ಸವಾರನ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಪ್ರಮೋದ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬೈಕ್ ಸವಾರ ಮೃತನಾಗಿರುವ ವಿಷಯ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಜನರು ಚಾಲಕನ ಶರ್ಟ್​ ಕಳಚಿ ಹಲ್ಲೆ ನಡೆಸಿದ್ದಾರೆ. ಚಾಲಕ ನನ್ನದೇನೂ ತಪ್ಪಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.


ಚಾಲಕ ಮತ್ತು ನಿರ್ವಾಹಕ ಪೊಲೀಸ್​ ವಶಕ್ಕೆ


ಇನ್ನು ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಸಾರ್ವಜನಿಕರಿಂದ ಚಾಲಕನನ್ನು ರಕ್ಷಿಸಿದ್ದಾರೆ. ನಂತರ ಚಾಲಕ ಮತ್ತು ನಿರ್ವಾಹಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಸದ್ಯ ಮೃತ ಬೈಕ್ ಸವಾರ ಪ್ರಮೋದ್ ಮೃತದೇವನ್ನು ಕೆಸಿ ಜನರಲ್ ಆಸ್ಪತ್ರೆಯ ಶವಾಗರದಲ್ಲಿರಿಸಿ ಕುಟುಂಬಸ್ಥರಿಗೆ ಮಾಹಿತಿ ರವಾನಿಸಲಾಗಿದೆ. ಪ್ರಮೋದ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಈ ಸಂಬಂಧ ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.


ಇದನ್ನೂ ಓದಿ: Potholes in Bengaluru: ಅಪಘಾತ ತಪ್ಪಿಸಲು ಅಖಾಡಕ್ಕಿಳಿದ ಖಾಕಿ! ಟ್ರಾಫಿಕ್ ಪೊಲೀಸರಿಂದ ರಸ್ತೆ ಗುಂಡಿ ಮುಚ್ಚುವ ಕಾರ್ಯ


ಭೀಕರ ಅಪಘಾತ ಯುವತಿ ಸಾವು


ಯಲಹಂಕ ಏರ್ ಪೋರ್ಟ್ ರಸ್ತೆಯಲ್ಲಿ (Yalahanka Airport Road) ಭೀಕರ ಅಪಘಾತ ಸಂಭವಿಸಿದೆ. ಯಲಹಂಕ ಏರ್‌ಪೋರ್ಟ್ ಫ್ಲೈ ಓವರ್ ಮೇಲೆ ಬೈಕ್​ನಲ್ಲಿ ಬರ್ತಿದ್ದ ಯುವಕ ಕಂಟ್ರೋಲ್​ ತಪ್ಪಿ ವೇಗವಾಗಿ ಬಂದು ಡಿವೈಡರ್​ಗೆ ಡಿಕ್ಕಿ ಹೊಡೆದಿದ್ದಾನೆ. ಯುವತಿಯನ್ನು ಹಿಂಬದಿಯಲ್ಲಿ ಕೂರಿಸಿಕೊಂಡಿದ್ದ ಯುವಕ ವೇಗವಾಗಿ ಬೈಕ್​ ರೈಡ್​ ಮಾಡಿದ್ದೇ ಅಪಘಾತಕ್ಕೆ ಕಾರಣವಾಗಿದೆ. ಯಲಹಂಕ ಏರ್‌ಪೋರ್ಟ್ ಫ್ಲೈ ಓವರ್ ಮೇಲೆ ಮಧ್ಯಾಹ್ನ 12 ಗಂಟೆಗೆ ಅಪಘಾತ (Accident) ಸಂಭವಿಸಿದೆ. ಅಪಘಾತದಲ್ಲಿ ಯುವಕನ ಕೈ ಕಟ್​ ಆಗಿದ್ದು, ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ. ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಯುವತಿ ಸಾವನ್ನಪ್ಪಿದ್ದಾರೆ.

Published by:ಪಾವನ ಎಚ್ ಎಸ್
First published: