Mandya: 5 ರೂಪಾಯಿಯ ಡಾಕ್ಟರ್ ಎಂದೇ ಪ್ರಸಿದ್ಧರಾಗಿರುವ ಶಂಕರೇಗೌಡರಿಗೆ ಹೃದಯಾಘಾತ!

ಡಾ.ಶಂಕರೇ ಗೌಡ ಅವರು 5 ರೂಪಾಯಿಗೆ ಚಿಕಿತ್ಸೆ ನೀಡುತ್ತಿದ್ದರು. ಆ ಮೂಲಕ ಬಹುತೇಕ ರೋಗಿಗಳ ರೋಗವನ್ನು ಗುಣಪಡಿಸುವ ಮೂಲಕ ಅವರಿಗೆ ದಾರಿ ದೀಪವಾಗಿದ್ದಾರೆ.  ಶಂಕರೇಗೌಡರು ತಮ್ಮ ಸ್ವಂತ ಊರು ಶಿವಳ್ಳಿಯಿಂದ ಬಂದವರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದರು.

ಡಾ ಶಂಕರೇಗೌಡ

ಡಾ ಶಂಕರೇಗೌಡ

  • Share this:
    ಖ್ಯಾತ 5 ರೂಪಾಯಿ ಡಾಕ್ಟರ್ (Doctor)​ ಎಂದೇ ಪ್ರಸಿದ್ಧರಾಗಿರುವ ಡಾ. ಶಂಕರೇಗೌಡರಿಗೆ (Shankregowda) ಲಘು ಹೃದಯಾಘಾತವಾಗಿದೆ (Heart Attack) ಎಂದು ತಿಳಿದುಬಂದಿದೆ. ಮಂಡ್ಯ (Mandya) ಜಿಲ್ಲೆಯಲ್ಲಿ ರೋಗಿಗಳಿಗೆ 5 ರೂಪಾಯಿಗೆ ಔಷಧಿ (Medicine) ನೀಡುವ ಮೂಲಕ ಪ್ರಸಿದ್ಧಿ ಪಡೆದಿರುವ ಡಾ ಶಂಕರೇಗೌಡ ಅವರಿಗೆ ಸೋಮವಾರದಂದು ಲಘು ಹೃದಯಾಘಾತ ಕಾಣಿಸಿಕೊಂಡಿದ್ದು, ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೈಸೂರಿನ (Mysore) ಅಪೋಲೋ ಆಸ್ಪತ್ರೆಗೆಯಲ್ಲಿ ಚಿಕಿತ್ಸೆಗೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

    ಅಪೋಲೋ ಆಸ್ಪತ್ರೆಗೆ ವೈದರು ಈ ಬಗ್ಗೆ ಮಾತನಾಡಿ, ಡಾ. ಶಂಕರೇಗೌಡ ಅವರ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದಾರೆ. ಆದರೆ ಹೃದಯದ ಮೂರು ರಕ್ತನಾಳಗಳಲ್ಲಿ ಬ್ಲಾಕ್​ ಆಗಿದೆ ಎಂದು ಹೇಳಿದ್ದಾರೆ. ಅವರಿಗೆ ಬೈಪಾಸ್​​ ಸರ್ಜರಿ ಮಾಡುವ ಸಾಧ್ಯತೆಗಳಿದ್ದು, ಒಂದು ವಾರ ಕಳೆದ ಬಳಿಕ ಸರ್ಜರಿ ಮಾಡಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

    ಡಾ.ಶಂಕರೇ ಗೌಡ ಅವರು 5 ರೂಪಾಯಿಗೆ ಚಿಕಿತ್ಸೆ ನೀಡುತ್ತಿದ್ದರು. ಆ ಮೂಲಕ ಬಹುತೇಕ ರೋಗಿಗಳ ರೋಗವನ್ನು ಗುಣಪಡಿಸುವ ಮೂಲಕ ಅವರಿಗೆ ದಾರಿ ದೀಪವಾಗಿದ್ದಾರೆ.  ಶಂಕರೇಗೌಡರು ತಮ್ಮ ಸ್ವಂತ ಊರು ಶಿವಳ್ಳಿಯಿಂದ ಬಂದವರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದರು.

    ಬಡವರ ಪಾಲಿನ ದೇವರು

    ವೈದ್ಯೋ ನಾರಾಯಣ ಹರಿ ಎಂಬ ಮಾತಿದೆ. ಬಹುತೇಕರು ವೈದ್ಯರನ್ನು ದೇವರಂತೆ ಕಾಣುತ್ತಾರೆ. ಏಕೆಂದರೆ ಸಾವಿನ ದವಡೆಯಲ್ಲಿರುವ ವ್ಯಕ್ತಿಯನ್ನ ಬದುಕಿಸಿ ಆತನಿಗೆ ಮತ್ತೊಂದು ಜೀವವನ್ನು ನೀಡುವ ವೈದ್ಯರನ್ನು ಎಲ್ಲರೂ ದೇವರನ್ನಾಗಿ ಕಾಣುತ್ತಾರೆ. ಅದರಂತೆಯೇ ಡಾ. ಶಂಕರೇಗೌಡ ಅವರು ಸಹ ಬಹುತೇಕರ ಪಾಲಿಗೆ ದೇವರಾಗಿದ್ದಾರೆ.

    ಅದರಲ್ಲೂ ಸದ್ಯದ ಪರಿಸ್ಥಿತಿ ನೋಡಿದರೆ 5 ರೂಪಾಯಿಗೆ ಔಷಧಿಗಳೇ ಸಿಗುವುದಿಲ್ಲ. ಅಂತಹ ಸಮಯದಲ್ಲಿ 5 ರೂಪಾಯಿದೆ ರೋಗಿಗಳನ್ನು ಉಪಚರಿಸುವ ಮೂಲಕ ಬಹುತೇಕರಿಗೆ  ದೇವರಂತೆ ಕಂಡಿದ್ದಾರೆ. ಕೊರೋನಾ ಸಮಯದಲ್ಲಿ ಜೀವಕ್ಕೆ ಲೆಕ್ಕಿಸದೆ ದುಡಿದಿದ್ದಾರೆ.

    ಸಾಮಾನ್ಯವಾಗಿ ಬಡವರಿಗೆ ಔಷಧಿ ಕೊಂಡುಕೊಳ್ಳಲು ಹಣವಿರುವುದಿಲ್ಲ. ಮಾತ್ರವಲ್ಲದೆ ದುಡಿಯುವ ಸಂಬಳ ಔಷಧಿಗಾಗಿ ಖರ್ಚು ಆಗುತ್ತದೆ. ಆದರೆ ಬಡವರ ಸಂಕಷ್ಟವನ್ನು, ಅವರ ನೋವನ್ನು ಅರಿತುಕೊಂಡು ಡಾ. ಶಂಕರೇಗೌಡ ಅವರು 5 ರೂಪಾಗಿದೆ ರೋಗಿಗಳನ್ನು ಉಪಚಯಿಸುತ್ತಿದ್ದಾರೆ. ಆ ಮೂಲಕ ಅನೇಕ ರೋಗಿಗಳನ್ನು ಗುಣ ಪಡಿಸಿದ್ದಾರೆ.

    ಇದನ್ನೂ ಓದಿ: Helicopter: ಆನ್​ಲೈನ್​ನಲ್ಲಿ ಹಳೆಯ ಹೆಲಿಕಾಪ್ಟರ್​ ಖರೀದಿಸಿ, ಕ್ಯಾಂಪ್​ ಹೌಸನ್ನಾಗಿ ಮಾರ್ಪಡಿಸಿದ ದಂಪತಿ!

    ಜನಪ್ರಿಯ ವೈದ್ಯ ಶಂಕರೇಗೌಡ

    ಮಂಡ್ಯ ಜಿಲ್ಲೆಗೆ ಮಾತ್ರವಲ್ಲ, ಶಂಕರೇ ಗೌಡ ಅವರು ಕರ್ನಾಟಕ ಹಾಗೂ ದಕ್ಷಿಣ ಭಾರತದಲ್ಲೇ ಜನಪ್ರಿಯತೇ ಪಡೆದಿದ್ದಾರೆ. ದೇಶದ ಮೂಲೆ ಮೂಲೆಗಳಿಂದ ಜನರು ಇವರನ್ನು ಭೇಟಿಯಾಗುವ ಮೂಲಕ ಚಿಕಿತ್ಸೆ ಪಡೆದುಕೊಂಡು ಹೋಗಿದ್ದಾರೆ , ಶಂಕರೇಗೌಡ ಅವರು ಯಾರಿಗೂ ಭೇದ ಬಾವ ಮಾಡದೆ ಎಲ್ಲರನ್ನು ಸಮಾನವಾಗಿ ಕಾಣುವ ಮೂಲಕ ಉಪರಿಸುವ ಗುಣ ಅವರಲ್ಲಿದೆ ಹಾಗಾಗಿ ಬಹುತೇಕರಿಗೆ ಡಾ ಶಂಕರೇಗೌಡ ಎಂದರೆ ಬಲು ಇಷ್ಟ.

    ಇದನ್ನೂ ಓದಿ: Efficient Bikes: 1 ಲೀಟರ್​ ಪೆಟ್ರೋಲ್​ಗೆ​ 90 ಕಿ.ಮೀ ಮೈಲೇಜ್​ ನೀಡುವ 4 ಬೆಸ್ಟ್​ ಬೈಕ್​ಗಳು

    ಕೃಷಿಕನಾಗಿಗೂ ಸೈ ಎನಿಸಿಕೊಂಡ ಶಂಕರೇಗೌಡ

    ವೈದ್ಯರಾಗಿ ಮಾತ್ರವಲ್ಲ, ಶಂಕರೇಗೌಡ ಅವರು ಕೃಷಿಕನಾಗಿಗೂ ಗುರುತಿಸಿಕೊಂಡಿದ್ದಾರೆ. ಸ್ವಗ್ರಾಮ ಮಂಡ್ಯ ತಾಳೂಕಿನ ಶಿವಳ್ಳಿಯ ಹತ್ತಾರು ಎಕ್ರೆ ಜಮೀನು ಹೊಂದಿರುವ ಅವರು ಪ್ರತಿವರ್ಷ ಕಬ್ಬು, ಭತ್ತ ಬೆಳೆಯುತ್ತಾರೆ. ಅತ್ತ ವೈದ್ಯರಾಗಿ, ಇತ್ತ ಕೃಷಿಕನಾಗಿ ಶಂಕರೇಗೌಡ ಕೆಲಸ ಮಾಡುತ್ತಾರೆ.

    ಚುಣಾವಣೆಗೆ ಸ್ಪರ್ಧಿಸಿದ ಶಂಕರೇಗೌಡ

    ಜನರ  ಒತ್ತಾಯದ ಮೇರೆಗೆ ಶಂಕರೇಗೌಡ ಅವರು ಚುನಾವಣೆಗೆ ಸ್ಪರ್ಧಿಸಿದ್ದರು, ಆ ಮೂಲಕ ಮಂಡ್ಯ ಜಿಲ್ಲೆಯ ಪಂಚಾಯತ್​ ಉಪಾಧ್ಯಕ್ಷರಾಗಿದ್ದರು.

    ಬಹುತೇಕ ಮಂದಿಗೆ ಡಾ ಶಂಕರೇಗೌಡ ಅವರಿಗೆ ಲಘು ಹೃದಯಾಘಾತದ ವಿಚಾರ ಬೇಸರ ತರಿಸಿದೆ. ಅನೇಕರು ಬೇಗನೇ ಗುಣವಾಗಿ ಬರಲಿ ಎಂದು ಬಯಸುತ್ತಿದ್ದಾರೆ.
    Published by:Harshith AS
    First published: