ಮಂಡ್ಯ: ಜಗತ್ತಿನಲ್ಲಿ ತಾಯಿಗಿಂತ (Mother) ಉತ್ತಮ ಯೋಧರಿಲ್ಲ (Warrior) ಎಂದು ಹೇಳಲಾಗುತ್ತದೆ. ಆದರೆ ಈ ಮಗುವಿನ ವಿಷಯದಲ್ಲಿ ತಾಯಿಗಿಂತ ನಿರ್ದಯಿ ಯಾರೂ ಇಲ್ಲ ಎಂದು ಕಾಣುತ್ತಿದೆ. ಮಗು ಜನಿಸಿದ ಕೆಲವೇ ದಿನಗಳಲ್ಲಿ 9 ತಿಂಗಳು ಹೊತ್ತು ಹೆತ್ತಿದ್ದ ಮಗುವನ್ನು (Newborn Baby Boy) ಅನಾಥವಾಗಿ ಬಿಟ್ಟು ಹೋಗಿರುವ ಮನಕಲಕುವ ಘಟನೆ ಮಂಡ್ಯ (Mandya) ಜಿಲ್ಲೆಯ ಪಾಂಡವಪುರ (Pandavapura) ತಾಲೂಕಿನ ಚಿಕ್ಕಮರಳಿ ಗ್ರಾಮದ ಬಳಿಯ ಲೋಕಪಾವನಿ ನದಿಯ (Lokapavani River) ಬ್ರಿಡ್ಜ್ ಬಳಿ ನಡೆದಿದೆ. ಸದ್ಯ ಮಗುವನ್ನು ರಕ್ಷಣೆ ಮಾಡಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ತರಕಾರಿ ಬ್ಯಾಸ್ಕೆಟ್ವೊಂದರಲ್ಲಿ ಮಗು ಪತ್ತೆ
ಬೆಳ್ಳಂಬೆಳಗ್ಗೆ ಈ ಮಾರ್ಗದಲ್ಲಿ ತೆರಳುತ್ತಿದ್ದ ಸಾರ್ವಜನಿಕರು ಮಗುವಿನ ಅಳುವಿನ ಧ್ವನಿಯನ್ನು ಕೇಳಿ ಮರದ ಕೆಳಗೆ ಹೋಗಿ ನೋಡಿದ ಸಂದರ್ಭದಲ್ಲಿ ಮಗು ಇರುವುದು ತಿಳಿದು ಬಂದಿದೆ. ಮರದ ಕೆಳಗೆ ಬಟ್ಟೆಯಲ್ಲಿ ಸುತ್ತಿಟ್ಟು ಮಗುವನ್ನು ತರಕಾರಿ ಬ್ಯಾಸ್ಕೆಟ್ವೊಂದರಲ್ಲಿ ಇಟ್ಟು ಹೋಗಿದ್ದರು. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇದನ್ನೂ ಓದಿ: Bengaluru: ರಾತ್ರಿ ವೇಳೆ ವಾಹನಗಳಲ್ಲಿ ಓಡಾಡುವ ಸವಾರರೇ ಎಚ್ಚರ ಎಚ್ಚರ; ಏಕಾಏಕಿ ಡಿಕ್ಕಿ ಹೊಡೆದು ದರೋಡೆ ಮಾಡ್ತಾರೆ ಹುಷಾರ್!
ಘಟನೆ ಕುರಿತಂತೆ ಮಾಹಿತಿ ಪಡೆದುಕೊಂಡ ಕೂಡಲೇ ಪೊಲೀಸರು ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಮಗುವನ್ನು ಆ್ಯಂಬುಲೆನ್ಸ್ ಮೂಲಕ ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಮಗುವಿನ ಆರೋಗ್ಯ ಪರಿಶೀಲನೆ ನಡೆಸಿದ ವೈದ್ಯರು, ಮಗುವಿಗೆ ಜಾಂಡೀಸ್ ರೋಗ ಲಕ್ಷಣಗಳು ಕಂಡು ಬಂದಿದೆ ಎಂದು ತಿಳಿಸಿದ್ದರು. ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸದ್ಯ ಮಗುವಿಗೆ ಐಸಿಯು ಕೇರ್ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಸಿಡಿಪಿಒ ನಟರಾಜು ಅವರು, ಮಗುವಿನ ಹಾರೈಕೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸದಸ್ಯೆಯನ್ನು ನೇಮಕ ಮಾಡಲಾಗಿದೆ. ಸದ್ಯ ಮಗುವಿನ ಆರೋಗ್ಯ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ. ಕಳೆದ ಆರು ತಿಂಗಳ ಹಿಂದಷ್ಟೇ ನವಜಾತ ಮಗುವನ್ನು ನೀರಿಲ್ಲದ ಬಾವಿಯೊಂದರಲ್ಲಿ ಎಸೆದು ಹೋಗಿದ್ದ ಘಟನೆ ಪಾಂಡವಪುರ ತಾಲೂಕಿನ ಚಂದ್ರೆ ಗ್ರಾಮದಲ್ಲಿ ಬೆಳಕಿಗೆ ಬಂದಿತ್ತು.
ಬಟ್ಟೆ ತೊಳೆಯುತ್ತಿದ್ದಾಗ ಕಾಲು ಜಾರಿ ಕೆರೆಗೆ ಬಿದ್ದ ಸಹೋದರಿಯರನ್ನು ರಕ್ಷಿಸಿದ ಚಾಲಕ
ತುಮಕೂರಿನ ಶಿರಾದ ಹಂದಿಕುಂಟೆ ಗ್ರಾಮದ ಹೊರವಲಯದಲ್ಲಿ 18 ವರ್ಷದ ಸುಷ್ಮಾ, 9 ವರ್ಷದ ಮಂಜುಳಾ ಬಟ್ಟೆ ತೊಳೆಯುತ್ತಿದ್ದರು. ಈ ವೇಳೆ ಕಾಲುಜಾರಿ ತಂಗಿ ಮಂಜುಳಾ ನೀರಿಗೆ ಬಿದ್ದಿದ್ದು, ತಂಗಿಯನ್ನ ಉಳಿಸಲು ಹೋದ ಅಕ್ಕ ಮಂಜುಳಾ ಕೂಡ ನೀರಲ್ಲಿ ಮುಳುಗಿದ್ದರು. ಆದರೆ ಈ ವೇಳೆ ಇದೇ ಮಾರ್ಗದಲ್ಲಿ ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕ ಹೆಣ್ಣು ಮಕ್ಕಳು ರಕ್ಷಣೆಗಾಗಿ ಕಿರುಚುತ್ತಿದ್ದನ್ನು ಗಮನಿಸಿದ್ದಾರೆ. ಕೂಡಲೇ ರಸ್ತೆ ಬದಿ ಬಸ್ ನಿಲ್ಲಿಸಿ, ಕರೆಗೆ ಹಾರಿ ಸಹೋದರಿಯರನ್ನು ರಕ್ಷಣೆ ಮಾಡಿದ್ದಾರೆ.
ನಾಗೇನಹಳ್ಳಿ ಕಡೆಯಿಂದ ಶಿರಾ ಕಡೆಗೆ ಬರುತ್ತಿದ್ದ ಕೆಎಸ್ಆರ್ಸಿ ಬಸ್ ಚಾಲಕ ಮಂಜುನಾಥ್ ಸಮಯಪ್ರಜ್ಞೆ ತೋರಿ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಕೂಡಲೇ ಇಬ್ಬರನ್ನೂ ಬರಗೂರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದು, ಸಹೋದರಿಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು, ಇಬ್ಬರು ಹೆಣ್ಣು ಮಕ್ಕಳ ಜೀವನ ರಕ್ಷಣೆ ಮಾಡಿದ ಚಾಲಕ ಮಂಜುನಾಥ್ ಅವರಿಗೆ ಶಿರಾ ಡಿಪೋ ಅಧಿಕಾರಿ ಸನ್ಮಾನ ಮಾಡಿ ಗೌರವಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ