HOME » NEWS » State » 5 COVID PATIENTS ARE DIED AT HUBLI HOSPITAL AND FAMILY MEMBERS ACCUSED FROM OXYGEN SHORTAGE SAKLB LG

ಹುಬ್ಬಳ್ಳಿಯಲ್ಲಿ ಐವರು ಕೋವಿಡ್ ಸೋಂಕಿತರ ಸಾವು; ಆಕ್ಸಿಜನ್​​ ಕೊರತೆಯಿಂದ ದುರಂತ?

ಆಕ್ಸಿಜನ್ ಸರಿಯಾಗಿ ಪೂರೈಕೆ ಮಾಡದಿರೋದ್ರಿಂದ ರೋಗಿಗಳ ಸಾವನ್ನಪ್ಪಿದ್ದಾರೆ ಎಂದು ರೋಗಿಯ ಸಂಬಂಧಿ ರಾಜುಗೌಡ ಪಾಟೀಲ ಎಂಬುವರು ಆರೋಪಿಸಿದ್ದಾರೆ.

news18-kannada
Updated:May 5, 2021, 8:03 AM IST
ಹುಬ್ಬಳ್ಳಿಯಲ್ಲಿ ಐವರು ಕೋವಿಡ್ ಸೋಂಕಿತರ ಸಾವು; ಆಕ್ಸಿಜನ್​​ ಕೊರತೆಯಿಂದ ದುರಂತ?
ಆಕ್ಸಿಜನ್ ಸಿಲಿಂಡರ್ (ಸಾಂದರ್ಭಿಕ ಚಿತ್ರ).
  • Share this:
ಹುಬ್ಬಳ್ಳಿ(ಮೇ 05): ನಿನ್ನೆ ಬೆಳಿಗ್ಗೆ ಕಲಬುರ್ಗಿ ಜಿಲ್ಲೆ ಅಫಜಲಪುರ ಪಟ್ಟಣದಲ್ಲಿ ಆಕ್ಸಿಜನ್ ಕೊರತೆಯಿಂದ ನಾಲ್ವರು ಸಾವನ್ನಪ್ಪಿರುವ ಪ್ರಕರಣದ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಐವರು ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದು, ಆಕ್ಸಿಜನ್ ಇಲ್ಲದೆ ಸಾವಿಗೀಡಾಗಿರೋ ಶಂಕೆ ವ್ಯಕ್ತವಾಗಿದೆ. ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಲೈಫ್ ಲೈನ್ ಆಸ್ಪತ್ರೆಯಲ್ಲಿ ದುರ್ಘಟನೆ ಸಂಭವಿಸಿದೆ. ಇಬ್ಬರು ಮಹಿಳೆರು ಹಾಗೂ ಮೂರು ಜನ ಪುರುಷರು ಸೇರಿ 5 ಜನ ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದಾರೆ.

ನಿನ್ನೆ ಸಂಜೆ ಲೈಫ್ ಲೈನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿಯೇ ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಮೃತರ ಸಂಬಂಧಿಗಳು ಆರೋಪಿಸಿದ್ದಾರೆ. ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಮೃತರ ಸಂಬಂಧಿಕರು ಆಸ್ಪತ್ರೆ ಬಳಿ ಜವಾಯಿಸಿದ್ದಾರೆ. ಸಾವಿನ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಸರಿಯಾಗಿ ಸಿಗುತ್ತದೆ ಎಂದು ಸೋಂಕಿತರನ್ನು ದಾಖಲಿಸಿದ್ದೇವೆ. ಚಿಕಿತ್ಸೆಗೇನು ಕೊರತೆಯಾಗಿಲ್ಲ. ಆದರೆ ಆಕ್ಸಿಜನ್ ಕೊರತೆಯಿಂದಾಗಿ ಸೋಂಕಿತರು ಸಾವನ್ನಪ್ಪಿದ್ದಾರೆ. ಐವರು ಕೋವಿಡ್ ಸೋಂಕಿತರ ಸಾವಿಗೆ ಆಕ್ಸಿಜನ್ ಕೊರತೆಯೇ ಕಾರಣ. ಅದೂ ಸಹ ಒಂದೇ ಐಸಿಯುನಲ್ಲಿ ಇದ್ದ ಐವರೂ ಸಾವನ್ನಪ್ಪಿದ್ದಾರೆ. ಆಕ್ಸಿಜನ್ ಸರಿಯಾಗಿ ಪೂರೈಕೆ ಮಾಡದಿರೋದ್ರಿಂದ ರೋಗಿಗಳ ಸಾವನ್ನಪ್ಪಿದ್ದಾರೆ ಎಂದು ರೋಗಿಯ ಸಂಬಂಧಿ ರಾಜುಗೌಡ ಪಾಟೀಲ ಎಂಬುವರು ಆರೋಪಿಸಿದ್ದಾರೆ.

Astrology: ಮಿಥುನ ರಾಶಿಯವರಿಗೆ ಈ ದಿನ ಅನಿರೀಕ್ಷಿತ ಧನಾಗಮನ: ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಶವಂತ್ ಮದನಿಕರ, ಡಿಸಿಪಿ ರಾಮರಾಜನ್ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿರೋ ಡಿಸಿಪಿ ರಾಮರಾಜನ್ ಲೈಫ್ ಲೈನ್ ಆಸ್ಪತ್ರೆಯಲ್ಲಿ ಐವರು ಕೋವಿಡ್ ಸೋಂಕಿತರು ಸಾವನ್ನಪ್ಪಿರೋದನ್ನು ಖಾತ್ರಿಪಡಿಸಿದ್ದಾರೆ. ಆದರೆ ಹೇಗೆ ಸಾವನ್ನಪ್ಪಿದ್ದಾರೆ ಎಂಬಿತ್ಯಾದಿ ನಮಗೆ ಗೊತ್ತಿಲ್ಲ ಎಂದಿದ್ದಾರೆ.

ಇದೇ ವೇಳೆ ಪ್ರತಿಕ್ರಿಯಿಸಿರೋ ಜಿಲ್ಲಾ ಆರೋಗ್ಯಾಧಿಕಾರಿ ಯಶವಂತ ಮದನಿಕರ್, ಐವರು ಕೋವಿಡ್ ಸೋಂಕಿತರ ಸಾವು ಆಕ್ಸಿಜನ್ ಕೊರತೆಯಿಂದ ಆಗಿಲ್ಲ ಎಂದಿದ್ದಾರೆ.  ಮಾಹಿತಿ ತಿಳಿದ ತಕ್ಷಣ ಸ್ವತಃ ಬಂದು  ಆಸ್ಪತ್ರೆಯಲ್ಲಿ ಪರಿಶೀಲನೆ‌ ಮಾಡಲಾಗಿದ್ದು, ಆಕ್ಸಿಜನ್ ಕೊರತೆ ಆಗಿರುವುದು ಕಂಡಿಬಂದಿಲ್ಲ.

ಲೈಫ್ ಲೈನ್ ಆಸ್ಪತ್ರೆಯಲ್ಲಿ ಒಟ್ಟು 21 ಜನ ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಆಕ್ಸಿಜನ್ ಇರುವ  30 ಜಂಬೂ ಸಿಲಿಂಡರ್ ಇವೆ.  2 ಕೆಎಲ್ ಸಾಮರ್ಥ್ಯದ ಒಂದು ಆಕ್ಸಿಜನ್ ಕಂಟೇನರ್ ಇದೆ. ಹಾಗೂ  ನೈಸರ್ಗಿಕವಾಗಿ ಗಾಳಿ ಬಳಸಿಕೊಂಡು ಪ್ರತಿ ನಿಮಿಷಕ್ಕೆ‌ 85 ಸಾವಿರ ಲೀಟರ್‌ ಆಕ್ಸಿಜನ್ ಉತ್ಪಾದಿಸುವ  (O2 ಕಾನ್ಸ್ ನ್ ಟ್ರೇಟೆಡ್) ಘಟಕವನ್ನು ಲೈಫ್ ಲೈನ್ ಆಸ್ಪತ್ರೆ ಹೊಂದಿದೆ.ಅಲ್ಲದೆ ಪ್ರತಿ ಐಸಿಯುನಲ್ಲಿ ಆಕ್ಸಿಜನ್ ಕೊರತೆ ಉಂಟಾದಲ್ಲಿ ಎಚ್ಚರಿಸಲು ಅಲಾರಮಿಂಗ್ ಸಿಸ್ಟಮ್‌ ಸಹ ಅಳವಡಿಸಲಾಗಿದೆ. ಆದ್ದರಿಂದ ಇಂದು ಸಂಭವಿಸಿರುವ ಕೋವಿಡ್ ಸೋಂಕಿತರ ಸಾವಿಗೆ ಆಕ್ಸಿಜನ್ ಕೊರತೆ ಕಾರಣವಲ್ಲ ಎಂಬುದು‌ ಪ್ರಾಥಮಿಕ‌ ತನಿಖೆಯಿಂದ ತಿಳಿದು ಬಂದಿದೆ. ಮೃತರ ಸಾವು ಕುರಿತು ಡೆತ್ ಅಡಿಟ್ ಕಮಿಟಿಯಿಂದ ತನಿಖೆ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಯಶವಂತ ಮದೀನಕರ ಅವರು ‌ತಿಳಿಸಿದ್ದಾರೆ.

ಒಟ್ಟಾರೆ ರಾಜ್ಯದಲ್ಲಿ ಆಕ್ಸೀಜನ್ ಕೊರತೆ ಕಾರಣದಿಂದ ಹಲವಾರು ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದಾರೆ. ಚಾಮರಾಜನಗರ, ಕಲಬುರ್ಗಿ ಮೊದಲಾದ ಕಡೆ ಘಟನೆ ನಡೆದಿರುವಾಗಲೇ ಹುಬ್ಬಳ್ಳಿಯ ಲೈಫ್ ಲೈನ್ ಆಸ್ಪತ್ರೆಯಲ್ಲಿ ಒಂದೇ ಐಸಿಯು ನಲ್ಲಿದ್ದ ಐವರು ಸಾವನ್ನಪ್ಪಿರೋದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಡೆತ್ ಆಡಿಟ್ ಕಮಿಟಿಯ ತನಿಖೆಯ ನಂತರ ನಿಖರ ಮಾಹಿತಿ ಹೊರ ಬೀಳಲಿದೆ.
Published by: Latha CG
First published: May 5, 2021, 8:02 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories