ನಾಲ್ಕನೇ ದಿನದ ವಿಧಾನಸಭೆ ಕಲಾಪ ಆರಂಭ; ಸದನಕ್ಕೆ ಗೈರಾದ ಸಚಿವರು, ಶಾಸಕರು

ಕಲಾಪದಲ್ಲಿ ಆಡಳಿತ ಪಕ್ಷದ ಸಾಲಿನಲ್ಲಿ ಸಚಿವರೇ ಇಲ್ಲ ಎಂದು ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸುನೀಲ್​ ಕುಮಾರ ಸೇರಿ ಇತರೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Latha CG | news18india
Updated:December 13, 2018, 12:26 PM IST
ನಾಲ್ಕನೇ ದಿನದ ವಿಧಾನಸಭೆ ಕಲಾಪ ಆರಂಭ; ಸದನಕ್ಕೆ ಗೈರಾದ ಸಚಿವರು, ಶಾಸಕರು
ವಿಧಾನಸಭೆ ಕಲಾಪ
  • Share this:
ಬೆಳಗಾವಿ,(ಡಿ.13): ಡಿಸೆಂಬರ್​ 10 ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನವು ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ವಿಧಾನಸಭೆ ಕಲಾಪ ಆರಂಭವಾಗಿದ್ದು, ಆಡಳಿತ ಪಕ್ಷದ ಸಚಿವರು ಹಾಗೂ ಶಾಕಸರು ಗೈರಾಗಿದ್ದಾರೆ.

ಕಲಾಪದಲ್ಲಿ ಆಡಳಿತ ಪಕ್ಷದ ಸಾಲಿನಲ್ಲಿ ಸಚಿವರೇ ಇಲ್ಲ ಎಂದು ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸುನೀಲ್​ ಕುಮಾರ ಸೇರಿ ಇತರೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಶ್ನೋತ್ತರ ಕಲಾಪ ಆರಂಭವಾಗಿದ್ದು, ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ಮುಖಂಡರು ಸಭೆಯಲ್ಲಿ ಹಾಜರಾಗಿದ್ದಾರೆ.

ಇದನ್ನೂ ಓದಿ: ಮುಖ್ಯಮಂತ್ರಿ ಹುದ್ದೆ ರೇಸ್​ನಲ್ಲಿ ಗೆಲ್ಲುವವರಾರು? ರಾಹುಲ್ ಎದುರಿದೆ ದೊಡ್ಡ ಸವಾಲು

ಇಂದಿನ ಕಲಾಪದಲ್ಲಿ ಬೆಳ್ಳಂದೂರು ಕೆರೆ ಸಂರಕ್ಷಣೆ, ನಿರ್ವಹಣೆ ಕುರಿತು ಚರ್ಚಿಸಲಾಗುತ್ತಿದೆ. ಡಿಸಿಎಂ​​, ಬೆಂಗಳೂರು ನಗರಾಭಿವೃದ್ಧಿ ಸಚಿವ ಪರಮೇಶ್ವರ್ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಜಲಸಂಪನ್ಮೂಲ ‌ಸಚಿವ ಡಿ.ಕೆ. ಶಿವಕುಮಾರ್, ಸಚಿವ ಕೆ.ಜೆ ಜಾರ್ಜ್‌ ಸೇರಿದಂತೆ ಬೆಂಗಳೂರು ನಗರ ಶಾಸಕರು ಭಾಗಿಯಾಗಿದ್ದಾರೆ. ಇತ್ತೀಚಿಗೆ ಬೆಳ್ಳಂದೂರು ಕೆರೆ ಸಂರಕ್ಷಣೆ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ನೀಡಿರುವ ತೀರ್ಪು, ಕೆರೆ ಸಂರಕ್ಷಣೆಗೆ ಮಾಡಬೇಕಾದ ಕ್ರಮಗಳು, ಹಾಗೂ ನಿರ್ವಹಣೆ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗುತ್ತಿದೆ.

ಕಲಾಪಕ್ಕೆ ಸಿದ್ದರಾಮಯ್ಯ ಗೈರು

ಮಲೇಷ್ಯಾ ಪ್ರವಾಸಕ್ಕೆ ತೆರಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ನಿನ್ನೆ ರಾತ್ರಿ ವಾಪಸ್ಸಾಗಿದ್ದಾರೆ. ಆದರೂ ಸಹ ಇಂದಿನ ಸದನಕ್ಕೆ ಗೈರಾಗಿದ್ದಾರೆ. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾದ ಮೊದಲ ದಿನವೇ ವಿದೇಶ ಪ್ರವಾಸಕ್ಕೆ ಹೊರಟಿದ್ದ ಸಿದ್ದರಾಮಯ್ಯ 5 ದಿನಗಳ ಕಾಲ ವಾಪಾಸ್​ ಬರುವುದಿಲ್ಲ ಎನ್ನಲಾಗಿತ್ತು. ಆದರೆ, ಮೂರೇ ದಿನಕ್ಕೆ ಬೆಂಗಳೂರಿಗೆ ಆಗಮಿಸಿದ್ದಾರೆ. ಇಂದು ರಾತ್ರಿ ಬೆಂಗಳೂರನ್ನು ತಲುಪಲಿದ್ದರೂ ಡಿ. 17 ರಿಂದಲೇ ಸಿದ್ದರಾಮಯ್ಯ ಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆ.

ಎರಡನೇ ಸಾಲಿನಲ್ಲಿ ಕುಳಿತ ಹೊರಟ್ಟಿ:ವಿಧಾನಸಭೆ ಕಲಾಪಕ್ಕೆ ಆಗಮಿಸಿದ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮೊದಲ ಸಾಲಿನಲ್ಲಿ ಸ್ಥಾನ ನೀಡಿರಲಿಲ್ಲ. ಈ ಮೊದಲು ಮೊದಲ ಸಾಲಿನಲ್ಲಿ ಕುರ್ಚಿ ನಿಗದಿಪಡಿಸಲಾಗಿತ್ತು. ಸದನದ ಹಿರಿಯ ಸದಸ್ಯರಾದರೂ ಮೊದಲ ಸಾಲಿನಲ್ಲಿ ಸ್ಥಾನ ನೀಡಿಲ್ಲ. ಹೀಗಾಗಿ ಅವರು ಎರಡನೇ ಸಾಲಿನಲ್ಲಿ ಕುಳಿತರು. ಸಿಎಂ ಬಳಿ ಹೋಗದೆ ದೂರವೇ ಉಳಿದರು. ಸಭಾಪತಿ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಹೊರಟ್ಟಿ, ಕಾಂಗ್ರೆಸ್ ಪಕ್ಷ ಹಾಗೂ ಕುಮಾರಸ್ವಾಮಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.

 

First published: December 13, 2018, 12:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading