ಚಿಕ್ಕಮಗಳೂರು: ಕಡೂರು ವಿಧಾನಸಭಾ ಕ್ಷೇತ್ರದ (Kaduru Assembly Constituency) ಜೆಡಿಎಸ್ ಅಭ್ಯರ್ಥಿ ವೈಎಸ್ವಿ ದತ್ತಾ (JDS Candidate YSV Datta) ವಿರುದ್ಧ 41 ಚೆಕ್ ಬೌನ್ಸ್ ಪ್ರಕರಣಗಳು (Cheque Bounce Cases) ದಾಖಲಾಗಿವೆ ಎಂಬ ಮಾಹಿತಿಯನ್ನು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ನೀಡಿದ್ದಾರೆ. 2014 ರಿಂದ 2023ರ ವರೆಗೆ ರಾಜ್ಯ ಹೊರರಾಜ್ಯಗಳಲ್ಲಿ 41 ಚೆಕ್ಬೌನ್ಸ್ ಪ್ರಕರಣಗಳು ದಾಖಲಾಗಿವೆ. ಇನ್ ಸ್ಟ್ರುಮೆಂಟ್ಸ್ (NI)ಕಾಯ್ದೆ 1881 ಕಲಂ 138ರ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಶೃಂಗೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೀವರಾಜ್ (Jeevaraj, BJP Candidate) ಬಳಿ 8 ಲಕ್ಷ ಸಾಲವನ್ನು ಪಡೆದುಕೊಂಡಿದ್ದಾರೆ.
ವೈಎಸ್ವಿ ದತ್ತಾ ಅವರ ಬಳಿ 2022-23 ರಲ್ಲಿ 8 ಲಕ್ಷದ 15 ಸಾವಿರ ಆದಾಯ ಹೊಂದಿದ್ದಾರೆ. 17.89 ಲಕ್ಷ ಮೌಲ್ಯದ ಚರಾಸ್ತಿ, 2.94 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಒಟ್ಟು 93.19 ಲಕ್ಷ ಸಾಲ ಪಡೆದುಕೊಂಡಿದ್ದಾರೆ.
ಕೆಲ ತಿಂಗಳ ಹಿಂದೆ ವೈಎಸ್ವಿ ದತ್ತಾ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ರು. ಟಿಕೆಟ್ ತಪ್ಪಿದ ಹಿನ್ನೆಲೆ ಮತ್ತೆ ಜೆಡಿಎಸ್ಗೆ ಘರ್ ವಾಪ್ಸಿ ಆಗಿದ್ದರು. ಈಗ ಜೆಡಿಎಸ್ ಟಿಕೆಟ್ ಪಡೆದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಉಡುಪಿಯಲ್ಲಿ ಐಟಿ ಅಧಿಕಾರಿಗಳ ದಾಳಿ
ಚುನಾವಣಾ ಸಮಯದಲ್ಲಿ ಮೊಗವೀರ ಸಮುದಾಯದ ಮುಖಂಡ ಜಿ.ಶಂಕರ್ ಸಂಸ್ಥೆ ಮೇಲೆ ಐಟಿ ದಾಳಿ ನಡೆದಿದೆ. ಚುನಾವಣಾ ಸಂದರ್ಭದಲ್ಲಿ ಅಕ್ರಮ ಹಣದ ವಹಿವಾಟು ನಡೆಯುತ್ತಿದೆ ಎಂಬ ಮಾಹಿತಿ ಆಧಾರದ ಮೇಲೆ ದಾಳಿ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇಂದು ಬೆಳಗ್ಗೆ ಬೆಂಗಳೂರು, ಗೋವಾ ರಿಜಿಸ್ಟರ್ ಕಾರಿನಲ್ಲಿರುವ ಬಂದಿರುವ ಅಧಿಕಾರಿಗಳ ತಂಡ ಏಕಾಕಾಲದಲ್ಲಿ ಜಿ.ಶಂಕರ್ ಮನೆ ಸೇರಿ, ಸಂಸ್ಥೆಯ ಮೇಲೆ ದಾಳಿ ನಡೆಸಲಾಗಿದೆ. ಸಂಸ್ಥೆಯ ಲೆಕ್ಕ ಪತ್ರ ಮತ್ತು ನಗದು ವಹಿವಾಟಿನ ವಿವರ ಪರಿಶೀಲಿಸಲಾಗುತ್ತಿದೆ.
ಇದನ್ನೂ ಓದಿ: Mohiuddin Bava: ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿ ‘ತೆನೆ’ ಹಿಡಿದ ಮೊಯ್ದೀನ್ ಬಾವ! ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪ!
ಉಮಾಪತಿ ನಾಮಪತ್ರ ಸಲ್ಲಿಕೆ
ಬೊಮ್ಮನಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಗೌಡ ನಾಮಪತ್ರ ಸಲ್ಲಿಕೆ ಮಾಡಿದರು. ಮಾಜಿ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ