• Home
  • »
  • News
  • »
  • state
  • »
  • Yadagiri: ಹಿಂದೂ ಧರ್ಮ ತೊರೆದ ದಲಿತರು! 400ಕ್ಕೂ ಹೆಚ್ಚು ಮಂದಿಯಿಂದ ಬೌದ್ಧ ಧರ್ಮ ಸ್ವೀಕಾರ

Yadagiri: ಹಿಂದೂ ಧರ್ಮ ತೊರೆದ ದಲಿತರು! 400ಕ್ಕೂ ಹೆಚ್ಚು ಮಂದಿಯಿಂದ ಬೌದ್ಧ ಧರ್ಮ ಸ್ವೀಕಾರ

ಬೌದ್ಧ ಧರ್ಮ ಸ್ವೀಕಾರ

ಬೌದ್ಧ ಧರ್ಮ ಸ್ವೀಕಾರ

ಬೌದ್ಧ ಧರ್ಮ ಸ್ವೀಕರಿಸಲು 400 ಜನ‌ ಹೆಸರು ನೋಂದಣಿ ಮಾಡಿಕೊಂಡಿದ್ದರು. 500 ಸಮೀಪ ಬೌದ್ಧ ಧರ್ಮ ಸ್ವೀಕರಿಸಿದ್ದಾರೆ. ಶೋಷಿತ ಸಮುದಾಯ ಹೊರಗೆ ಬರಲು ಬೌದ್ಧ ಧರ್ಮ ಸ್ವೀಕರಿಸಿದ್ದೇವೆ ಎನ್ನುವುದು ಅವರ ಮಾತಾಗಿದೆ.

  • News18 Kannada
  • Last Updated :
  • Karnataka, India
  • Share this:

ಯಾದಗಿರಿ (ಅ.14): ಬುದ್ಧನ ಬೋಧನೆಗಳು ಹಾಗೂ ಬೌದ್ಧ ಧರ್ಮ (Buddhism) ಒಪ್ಪಿಕೊಂಡು 400ಕ್ಕೂ ಹೆಚ್ಚು ಹಿಂದೂಗಳು ಹಿಂದು ಧರ್ಮ ತೊರೆದು  ಬೌದ್ಧ ಧರ್ಮ ಸ್ವೀಕರಿಸಿದ್ದಾರೆ. ಸ್ವ ಇಚ್ಛೆಯಿಂದ ಬೌದ್ಧ ಧಮ್ಮ ದೀಕ್ಷಾ ಪಡೆದರು. ವರಜ್ಯೋತಿ  ಭಂತೇಜಿ ಸಾನಿಧ್ಯದಲ್ಲಿ ಹಾಗೂ ರಮಾತಾಯಿ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಬೌದ್ಧ ದೀಕ್ಷಾ ಪಡೆದರು. ಯಾದಗಿರಿ (Yadagiri) ಜಿಲ್ಲೆಯ ಸುರಪುರ ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ಹಾಗೂ ದಲಿತ ಸಂಘಟನೆಗಳ ಸಹಯೋಗದಲ್ಲಿ ಬೌದ್ಧ ಧಮ್ಮ ದೀಕ್ಷಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪರಿಶಿಷ್ಟ ಸಮುದಾಯದ ಜನರು ಹಿಂದೂ ಧರ್ಮವನ್ನು (Hinduism) ತೊರೆದು ಬೌದ್ಧ ಧರ್ಮ ದೀಕ್ಷಾ ಪಡೆದರು.


ನೊಂದು ಹಿಂದು ಧರ್ಮ ತೊರೆದಿದ್ದೇವೆ-


ದಲಿತರಿಗೆ ದೇಗುಲ ಪ್ರವೇಶ ಹಾಗೂ ಹೋಟೆಲ್ ಪ್ರವೇಶಕ್ಕೆ ನಿರಾಕರಣೆ , ದಲಿತರಿಗೆ ದೌರ್ಜನ್ಯಯಾಗುತ್ತಿದ್ದು ಇದರಿಂದ ನೊಂದು ಹಿಂದು ಧರ್ಮ ತೊರೆದು ಬೌದ್ಧ ಧರ್ಮ ಸ್ವಿಕಾರ ಮಾಡಿದ್ದೆವೆಂದು ಬೌದ್ಧ ಧರ್ಮ ಸ್ವೀಕರಿಸಿದವರ ಅಭಿಪ್ರಾಯವಾಗಿದೆ.


ಇದನ್ನೂ ಓದಿ: Brahmanda Guruji: ಕರ್ನಾಟಕ ಮೂರು ಭಾಗವಾಗುತ್ತೆ, ದೇಶ ಇಬ್ಭಾಗವಾಗುತ್ತೆ! ಭಯಾನಕ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ


ಬೌದ್ಧ ಧರ್ಮ ಧೀಕ್ಷಾ ಕಾರ್ಯಕ್ರಮ


ಬೌದ್ಧ ಧರ್ಮ ಧೀಕ್ಷಾ ಕಾರ್ಯಕ್ರಮದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಸಲಾಯಿತು. ತ್ರಿಸರಣ ಪಂಚಶೀಲ ಪಠಣ, ಅಷ್ಟಾಂಗ ಮಾರ್ಗ ಬೋಧನೆ, 22 ಪ್ರತಿಜ್ಞಾ ವಿಧಿಗಳನ್ನು ವರಜ್ಯೋತಿ ಭಂತೇಜಿ ಗುರುಜಿ ಅವರುಬೋಧನೆ ಮಾಡಿಸಿದರು. ವರಜ್ಯೋತಿ ಭಂತೇಜಿ ಅವರು ಮಾತನಾಡಿ, ಬೌದ್ಧ ಧರ್ಮ ಸ್ವೀಕರಿಸಲು 400 ಜನ‌ ಹೆಸರು ನೋಂದಣಿ ಮಾಡಿಕೊಂಡಿದ್ದರು. 500 ಸಮೀಪ ಬೌದ್ಧ ಧರ್ಮ ಸ್ವೀಕರಿಸಿದ್ದಾರೆ. ಶೋಷಿತ ಸಮುದಾಯ ಹೊರಗೆ ಬರಲು ಬೌದ್ಧ ಧರ್ಮ ಸ್ವೀಕರಿಸಿದ್ದೇವೆ ಎನ್ನುವುದು ಅವರ ಮಾತಾಗಿದೆ.


ಇದನ್ನೂ ಓದಿ: Heavy Rain: ಮುಂದಿನ 3 ಗಂಟೆಗಳ ಕಾಲ ಭಾರೀ ಮಳೆ; ಇನ್ನೂ 5 ದಿನ ನಿಲ್ಲೋದಿಲ್ಲ ವರುಣ ಆರ್ಭಟ!


ದೇವಸ್ಥಾನ, ಹೊಟೇಲ್ ಗಳಲ್ಲಿ ಪ್ರವೇಶವಿರಲಿಲ್ಲ


ಅದೆ ರೀತಿ ಟ್ರಸ್ಟ್ ಅಧ್ಯಕ್ಷ ಹಾಗೂ ಬೌದ್ಧ ಧರ್ಮ ಸ್ವೀಕರಿಸಿದ, ವೆಂಕಟೇಶ ಹೊಸಮನಿ ಅವರು ಮಾತನಾಡಿ, ಯಾರು ಹಿಂದೂಗಳನ್ನಾಗಿ ನಮ್ಮನ್ನು ಕಾಣುತ್ತಿಲ್ಲ. ದೇವಸ್ಥಾನ, ಹೊಟೇಲ್ ಗಳಲ್ಲಿ ಪ್ರವೇಶ ಕೊಡುತ್ತಿಲ್ಲ.ಇದರಿಂದ ನೊಂದು ಹಿಂದು ಧರ್ಮ ತೊರೆದು ಬೌದ್ಧ ಧರ್ಮ ಸ್ವೀಕರಿಸಿದ್ದೇವೆ ಎಂದರು.


ಬೌದ್ಧ ಧರ್ಮ ಸ್ವೀಕರಿಸುವರ ಸಂಖ್ಯೆ ಹೆಚ್ಚಾಗುತ್ತಿದೆ


ಹಿಂದೂ ಧರ್ಮದ ಪದ್ದತಿ ಪಾಲನೆ ಮಾಡದೆ ಬೌದ್ಧ ಧರ್ಮದ ತತ್ವದಂತೆ ಜೀವನ ನಡೆಸಬೇಕೆಂದು ತಿಳಿಸಲಾಯಿತು. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗಳಾದ ರಮಾತಾಯಿ ಅಂಬೇಡ್ಕರ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾದರು. ಡಾ. ಅಂಬೇಡ್ಕರ್ ಅವರು 20 ವರ್ಷಗಳ ಕಾಲ ಬೌದ್ಧ ಧರ್ಮದ ಬಗ್ಗೆ ಅಧ್ಯಯನ ಮಾಡಿದ್ದಾರೆ. ದೇಶದಲ್ಲಿ ದಲಿತರ ಮೇಲೆ ಶೋಷಣೆ ಹೆಚ್ಚಾಗಿದೆ. ದೇಗುಲಗಳಲ್ಲಿ ಪ್ರವೇಶಕ್ಕೆ ನಿರಾಕರಣೆ ಮಾಡಲಾಗುತ್ತಿದೆ. ದಲಿತರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ. ಬೌದ್ಧ ಧರ್ಮ ಸ್ವೀಕರಿಸುವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಬೌದ್ಧ ಧರ್ಮ ಸ್ವೀಕಾರ ಮಾಡುತ್ತಿದ್ದು ಖುಷಿ ತಂದಿದೆ ಎಂದರು.


ಇದನ್ನೂ ಓದಿ: Brahmanda Guruji: ಕರ್ನಾಟಕ ಮೂರು ಭಾಗವಾಗುತ್ತೆ, ದೇಶ ಇಬ್ಭಾಗವಾಗುತ್ತೆ! ಭಯಾನಕ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ


ಬೌದ್ಧ ಧರ್ಮ ಸ್ವ ಇಚ್ಛೆಯಿಂದ ಸ್ವೀಕರಿಸಲು ಮುಂಚಿತವಾಗಿ ಬೌದ್ಧ ಧರ್ಮ ಸ್ವೀಕರಿಸುವರಿಗೆ ಅರ್ಜಿ ನೀಡಲಾಗಿತ್ತು. ಬೌದ್ಧ ಧರ್ಮ ಸ್ವೀಕರಿಸುವವರು ಅರ್ಜಿ ಭರ್ತಿ ಮಾಡಿದ ನಂತರ ಹೆಸರು ನೋಂದಣಿ ಮಾಡಿಕೊಳ್ಳಲಾಗಿದೆ‌ ನಂತರ ಇಂದು ಬೌದ್ಧ ಧರ್ಮ ಸ್ವೀಕರಿಸಿದರು. ಸುರಪುರ ತಾಲೂಕಿನ ವಿವಿಧ ಭಾಗದಿಂದ ಆಗಮಿಸಿದ ಹಿಂದು ಜನ ಬೌದ್ಧ ಧರ್ಮ ಸ್ವೀಕರಿಸಿದ್ದಾರೆ.

Published by:ಪಾವನ ಎಚ್ ಎಸ್
First published: