ಬೆಂಗಳೂರು: ಇತ್ತೀಚೆಗಷ್ಟೇ ಶಾಲಾ ಬಾಲಕನೋರ್ವ ಅಪಾರ್ಟ್ಮೆಂಟ್ನಿಂದ (Apartment_ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಬೆಂಗಳೂರಿನ (Bengaluru) ಜನರನ್ನು ಬೆಚ್ಚಿಬೀಳುವಂತೆ ಮಾಡಿತ್ತು. ಇಂತದ್ದೇ ಘಟನೆ ನಗರದಲ್ಲಿ ಮರುಕಳಿಸಿದ್ದು, ಅಪಾರ್ಟ್ಮೆಂಟ್ನ 19ನೇ ಮಹಡಿಯಿಂದ ಬಿದ್ದು ಮಹಿಳೆಯೊಬ್ಬರು (Woman Death) ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ತಲಘಟ್ಟಪುರದಲ್ಲಿ ನಡೆದಿದೆ. 40 ವರ್ಷದ ಕರಿಷ್ಮಾ ಆತ್ಮಹತ್ಯೆಗೆ ಶರಣಾದ ಮಹಿಳೆ ಎಂದು ಗುರುತಿಸಲಾಗಿದೆ. ಮೃತ ಮಹಿಳೆ ಕಳೆದ ಕೆಲ ದಿನಗಳಿಂದ ಮಾನಸಿಕ ಖಿನ್ನತೆಗೆ (Mental Illness) ಒಳಗಾಗಿದ್ದರಂತೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ (Talaghattapura, Bengaluru) ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
ಅಂದಹಾಗೇ, ಕಳೆದ 15 ವರ್ಷಗಳಿಂದ ಕೆನಾಡದಲ್ಲಿ ವಾಸವಾಗಿದ್ದ ಕರಿಷ್ಮಾ ಮತ್ತು ಕರಣ್ ದಂಪತಿಗಳು ಕೆಲ ಸಮಯದ ಹಿಂದೆ ಭಾರತಕ್ಕೆ ವಾಪಸ್ ಆಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಕರಿಷ್ಮಾ, ಕೆಲ ದಿನಗಳಿಂದ ಡಿಪ್ರೆಶನ್ ನಲ್ಲಿದ್ದರಂತೆ. ಇದಕ್ಕಾಗಿ ಚಿಕಿತ್ಸೆ ಪಡೆದುಕೊಳ್ಳಲು ವಿದೇಶದಿಂದ ವಾಪಸ್ ಆಗಿದ್ದರಂತೆ.
ಇದನ್ನೂ ಓದಿ: Tunisha Sharma: ನಟಿ ತುನಿಷಾ ಶರ್ಮಾ ಆತ್ಮಹತ್ಯೆ, ಸಹನಟ ಶೀಝಾನ್ ಖಾನ್ ಅರೆಸ್ಟ್
ಕೆನಡಾದ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದ ದಂಪತಿ, ಖುಷಿ ಖುಷಿಯಾಗೇ ಲೈಪ್ ಲೀಡ್ ಮಾಡುತ್ತಿದ್ದರು. ಹೀಗಿದ್ದ ಕುಟುಂಬದಲ್ಲಿ ಕರಿಷ್ಮಾ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರಂತೆ.
ಇದರಿಂದ ಕೆನಡಾದಿಂದ ಬೆಂಗಳೂರಿಗೆ ವಾಪಸ್ ಬಂದು ತಲಘಟ್ಟಪುರದ ಅಪಾರ್ಟ್ಮೆಂಟ್ ನಲ್ಲಿ ವಾಸ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಅನಾರೋಗ್ಯದಿಂದ ಸಾಕಷ್ಟು ನೊಂದಿದ್ದ ಮಹಿಳೆ, ಒಂದು ತಿಂಗಳ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದರಂತೆ. ತಲಘಟ್ಟಪುರದ ಪೂರ್ವ ಹೈಲ್ಯಾಂಡ್ ಅಪಾರ್ಟ್ಮೆಂಟ್ನ 19ನೇ ಮಹಡಿಯಿಂದ ಬಿದ್ದು ಮಹಿಳೆ ಸಾವನ್ನಪ್ಪಿದ್ದಾರೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಅನುಮನಾಸ್ಪರ ರೀತಿಯಲ್ಲಿ ವ್ಯಕ್ತಿ ಸಾವು, ಪತ್ನಿ ಮೇಲೆ ಶಂಕೆ!
ವ್ಯಕ್ತಿಯೋರ್ವ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ನೆಲಮಂಗಲದ (NelaMangala) ಮಾಚೋಹಳ್ಳಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಸುನೀಲ್ ಎಂದು ಗುರುತಿಸಲಾಗಿದ್ದು, ಹೃದಯಾಘಾತದರಿಂದ ಮೃತಪಟ್ಟಿದ್ದಾರೆ ಅಂತ ಮೃತನ ಪತ್ನಿ ಆಶಾ ಹೇಳಿದ್ದಾರೆ. ಆದರೆ ಮೃತ ವ್ಯಕ್ತಿಯ ಕುತ್ತಿಗೆ ಭಾಗದಲ್ಲಿ ನೇಣು ಬಿಗಿದ ಗುರುತು ಪತ್ತೆಯಾಗಿದೆ.
ಕಳೆದ 4 ವರ್ಷದ ಹಿಂದೆ ತನ್ನ ಸ್ನೇಹಿತನ ಪತ್ನಿ ಆಶಾಳನ್ನೇ ಸುನೀಲ್ ಮದುವೆಯಾಗಿದ್ದ. ಕುಡಿದು ಬಂದಾಗಲೆಲ್ಲ ಸುನೀಲ್ ಪ್ರತಿನಿತ್ಯ ಜಗಳ ಮಾಡ್ತಿದ್ನಂತೆ. ದಿನನಿತ್ಯ ನಾಯಿ ಗೂಡಿನಲ್ಲಿ ಮದ್ಯದ ನಶೆಯಲ್ಲಿ ಮಲಗುತ್ತಿದ್ದನಂತೆ. ಆದರೆ ಇದ್ದಕ್ಕಿದ್ದಂತೆ ನಾಯಿ ಗೂಡಿನಲ್ಲೇ ಸುನೀಲ ಸಾವನ್ನಪ್ಪಿದ್ದಾನೆ ಎಂದು ಆಶಾ ಹೇಳ್ತಿದ್ದಾರೆ.
ಇದನ್ನೂ ಓದಿ: Tunisha Sharma: ಮೇಕಪ್ ರೂಂನಲ್ಲಿ ಆತ್ಮಹತ್ಯೆ ಮಾಡಿಕೊಂಡ ಖ್ಯಾತ ಕಿರುತೆರೆ ನಟಿ!
ಗಂಡ ಪ್ರತಿ ದಿನ ಕುಡಿದು ಬಂದು ಜಗಳ ಮಾಡುತ್ತಿದ್ದ. ಮಕ್ಕಳು, ಸಣ್ಣ ವಿಚಾರಕ್ಕೂ ಜಗಳ ಮಾಡುತ್ತಿದ್ದ. ಕಳೆದ ಕೆಲ ದಿಗಳಿಂದ ನಾಯಿ ಗೂಡಲ್ಲೇ ಮಲಗುತ್ತಿದ್ದ. ಮಕ್ಕಳು ಕೂಡ ಅಪ್ಪ ಏಕೆ ಹೀಗೆ ಮಾಡ್ತಿದ್ದಾರೆ ಅಂತ ಪ್ರಶ್ನೆ ಮಾಡಿದ್ದರು. ಆದರೆ ಇಂದು ಈ ರೀತಿ ಆಗಿದೆ. ಅವರನ್ನು ಕೂಡಲೇ ಆಸ್ಪತ್ರೆ ದಾಖಲಿಸುವ ಪ್ರಯತ್ನ ಮಾಡಿದ್ದೆ.
ಆದರೆ ಪ್ರಯೋಜನ ಆಗಿಲ್ಲ ಎಂದು ವೈದ್ಯರು ಹೇಳಿದರು. ಈಗ ಅವರ ಮನೆಯವರು ಬಂದು ನನ್ನ ಮೇಲೆ ಆರೋಪ ಮಾಡ್ತಿದ್ದಾರೆ.
ಸದ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ನಿಜ ಸಂಗತಿ ಬೆಳಕಿಗೆ ಬರುತ್ತೆ. ನಾನು ಮತ್ತು ಮಕ್ಕಳು ಅವರ ಮೇಲೆ ಸಾಕಷ್ಟು ಪ್ರೀತಿ ಇಟ್ಟಿದ್ದೇವು ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ