Viral News: ಬೇಲೂರು ತಾಲೂಕಿನಲ್ಲಿ ಕೊನೆಗೂ ಎದ್ದುನಿಂತ ಕಲ್ಲಿನ ಆನೆ

Stone elephant: ಬೆಣ್ಣಿನಮನೆ ಗ್ರಾಮದ ಜಮೀನಿನಲ್ಲಿ ಹಲವು ವರ್ಷಗಳಿಂದ ಬೃಹತ್ ಗಾತ್ರದ ಕಲ್ಲಿನ ಆನೆಯೊಂದು ಇತ್ತು.. ಈಗ ಬೃಹತ್ ಗಾತ್ರದ ಕಲ್ಲಿನ ಆನೆಯನ್ನು 2 ಕ್ರೇನ್ ಹಾಗೂ 1 ಜೆಸಿಬಿ ಯಂತ್ರದ ಮೂಲಕ ಮೇಲಕ್ಕೆತ್ತಲಾಗಿದೆ

ಕಲ್ಲಿನ ಆನೆ

ಕಲ್ಲಿನ ಆನೆ

 • Share this:
  ನಮಗೆಲ್ಲಾ ತಿಳಿದಿರುವಂತೆ ಹಾಸನ ಜಿಲ್ಲೆಯಲ್ಲಿ(Hassan District) ಹೊಯ್ಸಳರ(Hoysala) ಕಾಲದ ಇತಿಹಾಸ(History) ಸಾರುವ ಅನೇಕ ದೇವಾಲಯಗಳು(Temple) ಇದೆ. ಅದರಲ್ಲೂ ಬೇಲೂರು(Beluru) ಹಳೇಬೀಡು(Halebidu) ಹೊರತುಪಡಿಸಿ ಅದರ ಸುತ್ತಮುತ್ತ ಗ್ರಾಮಗಳಲ್ಲಿಯೂ(Village) ಸಹ ಇತಿಹಾಸದ ಕುರುಹುಗಳಾಗಿ ಹಲವಾರು ಶಾಸನಗಳ ಚಿತ್ರಗಳು ವಿಗ್ರಹಗಳು ಪ್ರತಿನಿತ್ಯ ಒಂದಲ್ಲ ಒಂದು ಕಡೆ ಲಭಿಸುತ್ತದೆ ಇರುತ್ತದೆ.. ಅದೇ ರೀತಿ ಈಗ ಬೇಲೂರು ತಾಲೂಕಿನಲ್ಲಿ ಬರೋಬರಿ 35 ರಿಂದ 40 ಟನ್ ತೂಕದಕಲ್ಲಿನ ಕಲ್ಲಿನ ಆನೆ ಸಿಕ್ಕಿದೆ.

  2 ಕ್ರೇನ್ ಹಾಗೂ 1 ಜೆಸಿಬಿ ಮೂಲಕ ಎದ್ದುನಿಂತ ಕಲ್ಲಿನ ಆನೆ

  ಹೌದು ಬೇಲೂರು ತಾಲೂಕಿನ ಬೆಣ್ಣಿನಮನೆ ಗ್ರಾಮದ ಜಮೀನಿನಲ್ಲಿ ಹಲವು ವರ್ಷಗಳಿಂದ ಬೃಹತ್ ಗಾತ್ರದ ಕಲ್ಲಿನ ಆನೆಯೊಂದು ಇತ್ತು.. ಈಗ ಬೃಹತ್ ಗಾತ್ರದ ಕಲ್ಲಿನ ಆನೆಯನ್ನು 2 ಕ್ರೇನ್ ಹಾಗೂ 1 ಜೆಸಿಬಿ ಯಂತ್ರದ ಮೂಲಕ ಮೇಲಕ್ಕೆತ್ತಲಾಗಿದೆ. ಹೊಯ್ಸಳರ ಕಾಲದಲ್ಲಿ ಬೇಲೂರಿನ ಶ್ರೀ ಚನ್ನಕೆಶವಸ್ವಾಮಿ ದೇಗುಲ ನಿರ್ಮಾಣದ ಸಂದರ್ಭದ ಬೆಣ್ಣಿನಮನೆ ಗ್ರಾಮದಲ್ಲಿದ್ದ ಬೃಹತ್ ಗಾತ್ರದ ಬಂಡೆಕಲ್ಲಿನಿಂದ ಸಾಕಷ್ಟು ಕಲ್ಲಿನ ವಿಗ್ರಹಗಳನ್ನು ಕೆತ್ತಲಾಗಿದೆ ಎಂಬ ಉಹಾ ಪೋಹಗಳು ಹಿಂದಿನಿಂದಲೂ ಗ್ರಾಮಸ್ಥರನ್ನು ಕಾಡುತಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಬೆಣ್ಣಿನಮನೆ ಗ್ರಾಮದಲ್ಲಿ 35 ರಿಂದ 40 ಟನ್ ತೂಕದಕಲ್ಲಿನ ಕಲ್ಲಿನ ಆನೆ ಸಿಕ್ಕಿರುವುದು ಜನರ ಕುತೂಹಲಕ್ಕೆ ಕಾರಣವಾಗಿದೆ.

  ಇದನ್ನೂ ಓದಿ: ಸರ್ಕಾರಿ ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಪ್ರಾರ್ಥನೆಗೆ ಪ್ರತ್ಯೇಕ ಕೊಠಡಿ: ಹಿಂದೂ ಸಂಘಟನೆಗಳಿಂದ ವಿರೋಧ

  ಆನೆಕಲ್ ನಿಂಗೇಗೌಡ ಎಂಬುವವರ ಜಮೀನಿನಲ್ಲಿ ಕಂಡುಬಂದಿದ್ದ ಆನೆ

  40 ಟನ್ ತೂಕದ ಆನೆ ಬೆಣ್ಣಿನಮನೆ ಗ್ರಾಮದಲ್ಲಿ ಆನೇಕಲ್ ನಿಂಗೇಗೌಡ ಎಂಬುವವರ ಜಮೀನಿನಲ್ಲಿ ಕಂಡುಬಂದಿತ್ತು.. ಆನೇಕಲ್ ನಿಂಗೇಗೌಡ ಅವರು ಜಮೀನಿನಲ್ಲಿ ವ್ಯವಸಾಯ ಮಾಡುವ ಸಂದರ್ಭದಲ್ಲಿ ಈ ವಿಗ್ರಹ ಕಂಡುಬಂದಿತ್ತು.. ವಿಶೇಷ ಅಂದ್ರೆ ಈ ಭಾಗದಲ್ಲಿ ಹೆಚ್ಚು ಕಾಡು ಇರುವ ಕಾರಣ ಕಲ್ಲಿನ ಆನೆಯ ವಿಗ್ರಹದ ಬಗ್ಗೆ ಯಾರೂ ಸಹ ಅಷ್ಟಾಗಿ ಗಮನ ಹರಿಸಿರಲಿಲ್ಲ.. ಆದರೆ ಕಾಲನಂತರದಲ್ಲಿ ಆನೇಕಲ್ ನಿಂಗೇಗೌಡರು ತಮ್ಮ ಜಮೀನನ್ನು ಅಣ್ಣೇಗೌಡ ಎಂಬುವವರಿಗೆ ಮಾರಾಟ ಮಾಡಿದ್ದರು..

  ಜಮೀನನ್ನ ಅಣ್ಣೇಗೌಡರ ಮಕ್ಕಳು ಕಾಫಿ ತೋಟವನ್ನಾಗಿ ಮಾಡಿ ಬೆಳೆ ಬೆಳೆಯಲು ಪ್ರಾರಂಭ ಮಾಡಿದರು. ಹಬ್ಬ-ಹರಿದಿನಗಳಲ್ಲಿ ಜಮೀನಿನಲ್ಲಿ ಬೆಳೆ ಬೆಳೆಯುವ ಸಂದರ್ಭದಲ್ಲಿ ಕಲ್ಲಿನ ಆನೆಗೆ ಪೂಜೆ ಸಲ್ಲಿಸಿ ಕೆಲಸ ಮಾಡುತ್ತಿದ್ದರು.. ಹೀಗೆ ಪೂಜೆ ಮಾಡುವ ವೇಳೆ ಪುರೋಹಿತರೊಬ್ಬರು ಆನೆ ಎಡ ಮಗ್ಗುಲಲ್ಲಿ ಮಲಗಿರುವ ಕಾರಣ ಏಳಿಗೆ ಆಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು.. ಹೀಗಾಗಿ ಅಣ್ಣೇಗೌಡರ ಮಕ್ಕಳು ಪುರೋಹಿತರನ್ನು ಭೇಟಿಯಾಗಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಕಲ್ಲಿನ ಆನೆಯನ್ನು ಜೆಸಿಬಿ ಹಾಗೂ ಕ್ರೇನ್ ಬಳಸಿ ಎತ್ತಿ ನಿಲ್ಲಿಸಿದ್ದಾರೆ.

  ಇದನ್ನೂ ಓದಿ: ಮಾಜಿ ಪ್ರಧಾನಿ ದೇವೇಗೌಡರಿಗೆ ಕೊರೊನಾ; ಆಸ್ಪತ್ರೆಗೆ ದಾಖಲು

  35ರಿಂದ 40 ಟನ್ ತೂಕವಿರುವ ಆನೆ

  ಪ್ರಸ್ತುತ ಅಣ್ಣೇಗೌಡರ ಜಮೀನಿನಲ್ಲಿ ಇರುವ ಆನೆ 12 ಅಡಿ ಅಗಲ ಆರು ಅಡಿ ಎತ್ತರವಿದ್ದು ಅಂದಾಜು 35ರಿಂದ 40 ಟನ್ ತೂಕವಿದೆ.. ಹೀಗಾಗಿ ಇದನ್ನ ಮೇಲಕ್ಕೆ ಎತ್ತಿ ನಿಲ್ಲಿಸಲು ಎರಡು ಕ್ರೇನ್ ಹಾಗೂ ಒಂದು ಜೆಸಿಬಿ ಯಂತ್ರದ ಸಹಾಯ ಪಡೆದುಕೊಳ್ಳಲಾಗಿದೆ. ಇನ್ನು ಘಟನೆಯ ಬಗ್ಗೆ ಮಾತನಾಡಿರುವ ಜಮೀನಿನ ಮಾಲೀಕ ದಿನೇಶ್, ಕಲ್ಲಿನ ಆನೆ ಮಎಡ ಮಗ್ಗುಲಲ್ಲಿ ಮಲಗಿದ ಎಂದು ಯಾರು ಜಮೀನು ಕೊಳ್ಳಲು ಮುಂದಾದ ಸಂದರ್ಭದಲ್ಲಿ ನಮ್ಮ ತಂದೆ ಅಣ್ಣೆ ಗೌಡರು ಜಮೀನನ್ನು ಕಂಡುಕೊಂಡಿದ್ದರು. ಆದ್ರೆ ಗ್ರಾಮದಲ್ಲಿ ಸಣ್ಣಪುಟ್ಟ ಸಮಸ್ಯೆ ಉಂಟಾದರೆ ಸಹ ಗ್ರಾಮಸ್ಥರು ಎಲ್ಲವೂ ಕಲ್ಲಿನ ಆನೆಯಿಂದ ಎಂದು ಹೇಳುತ್ತಿದ್ದರು..

  ಹೀಗಾಗಿ ಕಲ್ಲಿನ ಆನೆಯನ್ನು ಎತ್ತಿ ನಿಲ್ಲಿಸುವ ಬಗ್ಗೆ ಧರ್ಮಸ್ಥಳ ಹೆಗ್ಗಡೆಯವರಿಗೆ ಮಾಹಿತಿ ನೀಡಿದ್ದೆವು. ಅಲ್ಲದೆ ಧರ್ಮಸ್ಥಳದಿಂದ ವ್ಯವಸ್ಥಾಪಕರು ಬಂದು ಆನೆಯನ್ನು ತೆಗೆದುಕೊಂಡು ಹೋಗಲು ರಸ್ತೆ ಇಲ್ಲ ಎಂದು ವಾಪಸ್ ಹೋಗಿದ್ದರು.. ಆದರೆ ನಾವು ಜಮೀನು ಸಮತಟ್ಟು ಮಾಡಿಸಿರುವುದರಿಂದ ಎರಡು ಕ್ರೇನ್ ಹಾಗೂ ಒಂದು ಜೆಸಿಬಿ ಯಂತ್ರದ ಮೂಲಕ ಕಲ್ಲಿನ ಆನೆಯನ್ನು ಎತ್ತಿ ನಿಲ್ಲಿಸಿದ್ದೇವೆ ಎಂದರು.
  Published by:ranjumbkgowda1 ranjumbkgowda1
  First published: