ಆರ್​ಆರ್ ನಗರದಲ್ಲಿ 40 ಸಾವಿರ ಅಕ್ರಮ ಮತದಾರರ ಹೆಸರು ಸೇರ್ಪಡೆ; ಮುನಿರತ್ನ ವಿರುದ್ಧ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ

ಒಂದು ಮನೆಯಲ್ಲಿ ಇಬ್ಬರು ಮತದಾರರು ಇದ್ದರೆ, ನಾಲ್ಕು, ಐದು ಜನರ ಹೆಸರನ್ನು ಸೇರಿಸಿದ್ದಾರೆ. ಆಂಧ್ರ, ಚಿತ್ತೂರು, ತಮಿಳುನಾಡು ಅಲ್ಲಿಂದ ಕರೆದುಕೊಂಡು ಬಂದು ಮತ ಹಾಕಿಸುತ್ತಾರೆ. ಡೋಬಿ ಘಾಟ್ ಮನೆಯೊಂದರಲ್ಲಿ 56 ಹೆಸರು ಅಕ್ರಮವಾಗಿ ಸೇರಿಸಿದ್ದಾರೆ. ನಾವು ಸರ್ವೇ ಮಾಡಿದ್ದಾಗ ಈ ಮಾಹಿತಿ ಬಹಿರಂಗವಾಗಿದೆ. ಎಲ್ಲವನ್ನೂ ನಾವು ವಿಡಿಯೋ ರೆಕಾರ್ಡ್ ಮಾಡಿಸಿದ್ದೇವೆ ಎಂದು ಆರೋಪ ಮಾಡಿದರು.

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

 • Share this:
  ಬೆಂಗಳೂರು; ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ 35000 ಸೆಟ್ ಆಪ್ ಬಾಕ್ಸ್ ಉಚಿತವಾಗಿ ನೀಡಿದ್ದಾರೆ. ಇದನ್ನು ಖುದ್ದು ಮುನಿರತ್ನ ಅವರು ಒಪ್ಪಿಕೊಂಡಿದ್ದಾರೆ. 35 ಸಾವಿರ ಸೆಟ್ ಆಪ್ ಬಾಕ್ಸ್ ಗೆ ಮೂರು ಕೋಟಿ ನಲವತ್ತು ಲಕ್ಷ ಆಗುತ್ತೆ. ಪ್ರಜಾ ಪ್ರತಿನಿಧಿ ಕಾಯ್ದೆ ಐಪಿಸಿ 173ರ ಪ್ರಕಾರ ಕ್ರಮ ತೆಗೆದುಕೊಂಡು, ಇಂದು ಸಂಜೆಯೊಳಗೆ ಮುನಿರತ್ನ ಅವರನ್ನು ಅನರ್ಹ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಚುನಾವಣಾ ಆಯೋಗಕ್ಕೆ ಒತ್ತಾಯಿಸಿದರು.  

  ನಾನೇ ಸೆಟ್ ಆಪ್ ಬಾಕ್ಸ್ ಹಂಚಿದ್ದೇನೆ ಎಂದು ಮುನಿರತ್ನ ಅವರೇ ಹೇಳಿದ್ದಾರೆ. ಹೀಗಾಗಿ ಅಭ್ಯರ್ಥಿಯನ್ನು ಅನರ್ಹ ಮಾಡಲು ಕಾನೂನಿನಲ್ಲಿ ಅವಕಾಶ ಇದೆ. ಕೂಡಲೇ ಚುನಾವಣೆ ಆಯೋಗ ಮುನಿರತ್ನ ಅವರನ್ನು ಅನರ್ಹ ಮಾಡಬೇಕು. ಮುನಿರತ್ನ ಆದಾಯ ಕೂಡ ಹೆಚ್ಚಾಗಿದೆ. ಈ ಬಗ್ಗೆ ಐಟಿ- ಇಡಿ ತನಿಖೆಯಾಗಲಿ. ಮುನಿರತ್ನ ಆದಾಯ ಹೆಚ್ಚಳದ ಬಗ್ಗೆ ತನಿಖೆಯಾಗಬೇಕು ಎಂದು ಡಿಕೆಶಿ ಆಗ್ರಹಿಸಿದರು.

  ಆರ್ ಆರ್ ನಗರ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ 40 ಸಾವಿರ ಹೆಸರು ಅಕ್ರಮವಾಗಿ ಸೇರ್ಪಡೆಯಾಗಿದೆ ಎಂದು ಡಿ.ಕೆ.ಶಿವಕುಮಾರ್ ಅವರು ಗಂಭೀರ ಆರೋಪ ಮಾಡಿದರು. ಖಾಲಿ ಮನೆ, ಖಾಲಿ ಸೈಟ್ ತೋರಿಸಿ ಹೆಸರು ಸೇರ್ಪಡೆಯಾಗಿದೆ. ಒಟ್ಟು 40 ಸಾವಿರ ಹೆಸರು ಅಕ್ರಮವಾಗಿ ಸೇರ್ಪಡೆಯಾಗಿದೆ. ಒಂದು ಮನೆಯಲ್ಲಿ ಇಬ್ಬರು ಮತದಾರರು ಇದ್ದರೆ, ನಾಲ್ಕು, ಐದು ಜನರ ಹೆಸರನ್ನು ಸೇರಿಸಿದ್ದಾರೆ. ಆಂಧ್ರ, ಚಿತ್ತೂರು, ತಮಿಳುನಾಡು ಅಲ್ಲಿಂದ ಕರೆದುಕೊಂಡು ಬಂದು ಮತ ಹಾಕಿಸುತ್ತಾರೆ. ಡೋಬಿ ಘಾಟ್ ಮನೆಯೊಂದರಲ್ಲಿ 56 ಹೆಸರು ಅಕ್ರಮವಾಗಿ ಸೇರಿಸಿದ್ದಾರೆ. ನಾವು ಸರ್ವೇ ಮಾಡಿದ್ದಾಗ ಈ ಮಾಹಿತಿ ಬಹಿರಂಗವಾಗಿದೆ. ಎಲ್ಲವನ್ನೂ ನಾವು ವಿಡಿಯೋ ರೆಕಾರ್ಡ್ ಮಾಡಿಸಿದ್ದೇವೆ ಎಂದು ಆರೋಪ ಮಾಡಿದರು.

  ಇದನ್ನು ಓದಿ: IBPS SO Recruitment 2021: ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ ಐಬಿಪಿಎಸ್

  ನಿಮ್ಮ ಮನೆಯ ವಿಳಾಸದಲ್ಲಿ ನಕಲಿ ಮತದಾರರ‌ ಹೆಸರು ಇದ್ದರೆ ದೂರು ನೀಡಿ ಎಂದು ಡಿ.ಕೆ.ಶಿವಕುಮಾರ್ ಅವರು ಆರ್​ಆರ್ ನಗರ ಕ್ಷೇತ್ರದ ಮತದಾರರ ಬಳಿ ಮನವಿ ಮಾಡಿದರು. ನಿಮ್ಮ ಮನೆಯ ಹೆಸರಿನಲ್ಲಿ ಬೋಗಸ್ ಹೆಸರು ಸೇರಿಸಿ ಮತ ಹಾಕುತ್ತಿದ್ದಾರೆ. ಮುನಿರತ್ನ ಅಕ್ರಮವಾಗಿ ನಕಲಿ ಹೆಸರನ್ನು ಸೇರಿಸಿದ್ದಾರೆ. ನಾವು ಕೂಡ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ. ಆರ್ ಆರ್ ನಗರ ಕ್ಷೇತ್ರದಲ್ಲಿ
  ಶೇಕಡ 10ರಷ್ಟು ನಕಲಿ ಮತಗಳು ಇವೆ. ಕೂಡಲೇ ಬಿಜೆಪಿ ಅಭ್ಯರ್ಥಿಯನ್ನು ಅನರ್ಹ ಮಾಡಿ. ಈ ಬಗ್ಗೆ ಚುನಾವಣಾ ಆಯೋಗ ಕೂಡಲೇ ಕ್ರಮ ತೆಗದುಕೊಳ್ಳಬೇಕು ಎಂದು ಆಗ್ರಹಿಸಿದರು.
  Published by:HR Ramesh
  First published: