Hubballi ಕಿಮ್ಸ್​ನಲ್ಲಿ ಇದ್ದಕ್ಕಿದ್ದಂತೆ ಮಗು ಮಾಯ! ಕೈಯಲ್ಲಿದ್ದ ಕಂದನ ಕದ್ದೊಯ್ದನಾ ಕಳ್ಳ?

ಸದಾ ವಿವಾದದಲ್ಲಿ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಮತ್ತೊಂದು ಘಟನೆ ನಡೆದು ಹೋಗಿದೆ. ಹಾಡಹಗಲೇ ಮಗುವಿನ ಕಳ್ಳತವಾಗಿರೋದು ಅಚ್ಚರಿಗೆ ಕಾರಣವಾಗಿದೆ. ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಮಗು ಮತ್ತು ಅಪರಿಚಿತ ಆಗಂತುಕನಿಗೆ ಹುಡುಕಾಟ ಆರಂಭಿಸಿದ್ದಾರೆ.

ಕಿಮ್ಸ್​ನಲ್ಲಿ ಮಗು ಕಳ್ಳತನ

ಕಿಮ್ಸ್​ನಲ್ಲಿ ಮಗು ಕಳ್ಳತನ

  • Share this:
ಹುಬ್ಬಳ್ಳಿ (ಜೂ 13):  ಹುಬ್ಬಳ್ಳಿಯ ಕಿಮ್ಸ್ (KIMS) ಅಂದ್ರೆ ಸದಾ ಒಂದಿಲ್ಲ ಒಂದು ವಿವಾದ. ಗುಣಮುಟ್ಟದ ಚಿಕಿತ್ಸೆಗೆ ಹೇಗೆ ಫೇಮಸ್ (Famous) ಆಗಿದೆಯೋ ಹಾಗೆಯೇ ವಿವಾದದ ಮೂಲಕವೂ ಅಷ್ಟೇ ಅಪಖ್ಯಾತಿಗೂ ಗುರಿಯಾಗಿದೆ. ಇದೀಗ ಕಿಮ್ಸ್ ಆಸ್ಪತ್ರೆಯಲ್ಲಿ (Hospital) ಹಾಡಹಗಲೇ ಮಗುವೊಂದನ್ನು ಕಳುವು ಮಾಡಲಾಗಿದೆ. ಚಿಕಿತ್ಸೆಗೆಂದು ದಾಖಲಾಗಿದ್ದ ಮಗುವನ್ನು (Child) ಅಪರಿಚಿತ ವ್ಯಕ್ತಿ ಎತ್ತಿಕೊಂಡು ಹೋಗಿದ್ದು, ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.  ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಹಾಡಹಗಲೇ ಮಗು ಕಳ್ಳತನವಾಗಿದೆ. 40 ದಿನದ ಹಸುಗೂಸನ್ನು ಖದೀಮರು ಕಳ್ಳತನ (Theft) ಮಾಡಿದ್ದಾರೆ. ಕೈಯಲ್ಲಿದ್ದ ಮಗುವನ್ನ ಕದ್ದು ಎಸ್ಕೇಪ್ ಆಗಿದ್ದಾರೆ.

ಉಮ್ಮೇ ಜೈನಾಬ್ ಹುಸೇನ್ ಸಾಬ್ ಶೇಖ್ ಎಂಬ ಹಸುಗೂಸನ್ನು ಕದ್ದೊಯ್ಯಲಾಗಿದೆ. ‍ಕುಂದಗೋಳದ ನೆಹರೂ ನಗರದ ಮಹಿಳೆ ಸಲ್ಮಾ ಎಂಬುವರಿಗೆ ಸೇರಿದ ಮಗು ಕಳ್ಳತನವಾಗಿದೆ.  ಜೂನ್ 10 ರಂದು ಕಿಮ್ಸ್ ಗೆ ಮಗುವಿನೊಂದಿಗೆ ಮಹಿಳೆ ದಾಖಲಾಗಿದ್ದಳು. ಹಿಮೊರಾಜಿಕಲ್ ಡಿಸೀಸ್ ಆಫ್ ನ್ಯೂ ಬಾರ್ನ್ ನಿಂದ ಮಗು ಬಳಲುತ್ತಿತ್ತು. ಇತ್ತೀಚೆಗೆ ಜನಿಸಿದ ಮಗುವಿನ ತೂಕ ಹೆಚ್ಚಿಸುವ ಉದ್ದೇಶದಿಂದ ಕಿಮ್ಸ್ ಗೆ ದಾಖಲು ಮಾಡಲು ಕುಂದಗೋಳ ವೈದ್ಯರು ಹೇಳಿದ್ದರು.

ಕಿಮ್ಸ್​ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ

ಸರ್ಕಾರಿ ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಮಗುವನ್ನು ಪಾಲಕರು ಕಿಮ್ಸ್ ಗೆ ದಾಖಲು ಮಾಡಿದ್ದರು. ಇಂದು ಮದ್ಯಾಹ್ನ ಏಕಾಏಕಿ ತಾಯಿಯ ಕೈಯಲ್ಲಿದ್ದ ಮಗುವನ್ನು ಕದ್ದೊಯ್ದಿರೋದಾಗಿ ಪಾಲಕರು ಆರೋಪಿಸಿದ್ದಾರೆ. ಮಗು ಅಳುತ್ತಿದ್ದರಿಂದ ವಾರ್ಡ್ ನ ಹೊರಗೆ ಬಂದಿದ್ದೆ. ಕಪ್ಪಗಿದ್ದ ವ್ಯಕ್ತಿ ಮಗುವನ್ನು ಕಿತ್ತುಕೊಂಡು ಹೋಗಿದ್ದಾನೆ. ಕೈಯಲ್ಲಿದ್ದ ಮಗುವನ್ನು ಕಿತ್ತುಕೊಂಡು ಓಡಿ ಹೋಗಿದ್ದಾನೆ ಎಂದು ತಾಯಿ ಸಲ್ಮಾ ಆರೋಪಿಸಿದ್ದಾಳೆ.  ಹೇಗಾದ್ರೂ ಮಾಡಿ ಮಗುವನ್ನು ಹುಡುಕಿಕೊಡುವಂತೆ ಸಂಬಂಧಿಗಳು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Covid19: ದೇಶದಲ್ಲಿ ಕರೋನಾ ಮಹಾಸ್ಫೋಟ; 24 ಗಂಟೆಗಳಲ್ಲಿ 8,329 ಜನಕ್ಕೆ ತಗುಲಿದ ಸೋಂಕು

ಅಪರಿಚಿತನಿಗೆ ತಾಯಿಯೇ ಮಗುವನ್ನು ಕೊಟ್ಳಾ

ಆದರೆ ಪ್ರತ್ಯಕ್ಷದರ್ಶಿಗಳು ಹೇಳೋದೇ ಬೇರೆ. ತಾಯಿಯೇ ಮಗುವನ್ನು ಹೊರಗೆ ಕರೆದೊಯ್ದಿದ್ದಳು. ಹದಿನೈದು ನಿಮಿಷಗಳ ನಂತರ ಮಗುವನ್ನು ಯಾರೋ ಎತ್ತಿಕೊಂಡು ಹೋಗಿದ್ದಾರೆ ಅಂತ ತಾಯಿ ಅಳುತ್ತಾ ಬಂದಿದ್ದಾಳೆ. ಅಪರಿಚಿತ ವ್ಯಕ್ತಿ ವಾರ್ಡ್ ಗೆ ಬಂದಿರಲಿಲ್ಲ. ಹೊರಗಿನಿಂದಲೇ ಮಗುವನ್ನು ಕೊಂಡೊಯ್ದಿದ್ದಾನೆ ಅಂತ ಅದೇ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ ಮಾಹಿತಿ ನೀಡಿದ್ದಾಳೆ.

ಮಗುವನ್ನು ಎತ್ತಿಕೊಂಡು ಫೋನ್ ನಲ್ಲಿ ಮಾತನಾಡುತ್ತಾ ವಾರ್ಡ್ ಹೊರಗೆ ಹೋದ ಸಲ್ಮಾ, ಅಪರಿಚಿತ ವ್ಯಕ್ತಿ ಮಗು ಕೊಡುವಂತೆ ಸನ್ನೆ ಮಾಡಿದ ಕೂಡಲೇ ತಕ್ಷಣ ಕೊಟ್ಟು ಬಿಟ್ಟಿದ್ದಾಳೆ. ಫೋನ್ ನಲ್ಲಿ ಮುಳುಗಿ ಹೋಗಿದ್ದ ಸಲ್ಮಾ ತನ್ನ ಮಗುವನ್ನು ಅಪರಿಚಿತನಿಗೆ ಕೊಟ್ಟಿದ್ದನ್ನು ನೆನಪಿಸಿಕೊಂಡದ್ದೇ 15 ನಿಮಿಷಗಳ. ಹೀಗಾಗಿ ತಾಯಿಯ ಯಡವಟ್ಟಿನಿಂದ ಈ ಕೃತ್ಯ ನಡೆದು ಹೋಗಿದೆ ಎಂದು ಹೇಳಲಾಗುತ್ತಿದೆ.

ಭದ್ರತಾ ವೈಫಲ್ಯವೂ ಕಾರಣ

ಮಧ್ಯಾಹ್ನದ ವೇಳೆ ಕೆಲ ಹೊತ್ತು ಮಾತ್ರ ಸಂಬಂಧಿಗಳಿಗೆ ಒಳಗೆ ಬಿಡಲಾಗುತ್ತದೆ. ಸಾರ್ವಜನಿಕರಿಗೆ ಒಳಗೆ ಪ್ರವೇಶ ನಿರ್ಬಂಧ ಇರೋ ವೇಳೆಯಲ್ಲಿಯೇ ಕಳ್ಳತನ ಕೃತ್ಯ ನಡೆದಿದೆ. ಒಂದು ವೇಳೆ ತಾಯಿಯೆ ಮಗುವನ್ನು ಕೊಟ್ಟಿದ್ದರೂ ಅದನ್ನು ಸಿಬ್ಬಂದಿ ಪರಿಶೀಲಿಸಬೇಕಿತ್ತು. ಅಪರಿಚಿತ ವ್ಯಕ್ತಿಯನ್ನು ತಡೆಯಬೇಕಿತ್ತು. ಆದರೆ ಅದರ ಬದಲಿಗೆ ಮಗುವನ್ನು ಎತ್ತಿಕೊಂಡು ಹೋದ ವ್ಯಕ್ತಿಯನ್ನೇ ನೋಡಿಲ್ಲ ಅಂತ ಸಿಬ್ಬಂದಿ ಹೇಳ್ತಿದ್ದಾರೆ. ಇನ್ನು ಸಿಸಿ ಕ್ಯಾಮರಾಗಳನ್ನು ತಡಕಾಡಿದ್ರೂ ಸದ್ಯಕ್ಕೆ ಅಪರಿಚಿತ ವ್ಯಕ್ತಿಯ ದೃಶ್ಯಗಳು ಇನ್ನೂ ಸಿಕ್ಕಿಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ.

ಸೂಕ್ತ ತನಿಖೆ ನಡೆಸಲಾಗುತ್ತಿದೆ

ಕಿಮ್ಸ್ ಆಸ್ಪತ್ರೆಯಲ್ಲಿ ಮಗು ಕಳ್ಳತನ ಪ್ರಕರಣದ ತನಿಖೆ ಮುಂದುವರೆದಿದೆ. ಹಾಡಹಗಲೇ ಘಟನೆ ನಡೆದಿರೋದ್ರಿಂದ ಕಿಮ್ಸ್ ಸಿಬ್ಬಂದಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಿಮ್ಸ್ ಹಿರಿಯ ಅಧಿಕಾರಿಗಳೂ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಸೂಕ್ತ ಕ್ರಮಕ್ಕೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ವಾಂತಿ ಹಿನ್ನೆಲೆಯಲ್ಲಿ ಮಗುವನ್ನು ಅಡ್ಮಿಟ್ ಮಾಡಲಾಗಿತ್ತು. ಮಗು ಗುಣಮುಖಗೊಂಡಿದ್ದರಿಂದ ಡಿಸ್ಚಾರ್ಜ್ ಮಾಡಲು ತೀರ್ಮಾನಿಸಲಾಗಿತ್ತು. ಇಂದು ಡಿಸ್ಚಾರ್ಜ್ ಆಗುವ ಮುನ್ನವೇ ಘಟನೆ ನಡೆದಿದೆ.

ಇದನ್ನೂ ಓದಿ: BMRCL: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​, ಸೈಕಲ್​ ಕೊಂಡೊಯ್ಯಲು ಸಿಕ್ಕಿದೆ ಪರ್ಮಿಷನ್​

ಸೆಕ್ಯೂರಿಟಿ ಇದ್ದರೂ ಅಪರಿಚಿತ ಹೇಗೆ ಒಳಗೆ ಬಂದ ಎಂಬುದರ ಪರಿಶೀಲನೆ ಮಾಡಲಾಗುತ್ತಿದೆ. ಸಿಸಿ ಕ್ಯಾಮರಾ ದೃಶ್ಯ ಇತ್ಯಾದಿ ಪರಿಶೀಲಿಸಲಾಗ್ತಿದೆ ಎಂದು ಕಿಮ್ಸ್ ವೈದ್ಯಕೀಯ ನಿರೀಕ್ಷಕ ಡಾ.ಅರುಣಕುಮಾರ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಆಸ್ಪತ್ರೆಗೆ ಭೇಟಿ ನೀಡಿದ್ದ ಡಿಸಿಪಿ ಸಾಹಿಲ್ ಬಾಗ್ಲಾ, ಮಗು ಕಳ್ಳತನದ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ತನಿಖೆ ಆರಂಭಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ತೇವೆ ಎಂದು ತಿಳಿಸಿದ್ದಾರೆ. ಇಂದು ಮದ್ಯಾಹ್ನ ತಾಯಿ ಕೈಯಲ್ಲಿದ್ದ ಮಗುವನ್ನು ಅಪರಿಚಿತ ಕಿತ್ತುಕೊಂಡು ಹೋಗಿದ್ದ. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Published by:Pavana HS
First published: