ನಿವೃತ್ತ ಸೈನಿಕರಿಗೆ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿದ ವಂಚಕರು

ಹೂಡಿಕೆಯ ಹೆಸರಲ್ಲಿ 526 ಜನ ನಿವೃತ್ತ ಸೈನಿಕರನ್ನು ವಂಚಿಸಿದ್ದಾರೆ. ತಮಿಳುನಾಡಿನ ಜುವಾರಿ ಸಿಮೆಂಟ್‌ ಕಂಪನಿಯಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚಿನ ಲಾಭ ಬರುತ್ತೆ. ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿದ್ರೆ ತಿಂಗಳಿಗೆ ಹನ್ನೆರಡು ಸಾವಿರ ರೂಪಾಯಿ ಆದಾಯ ಬರುತ್ತೆ ಎಂದು ವಂಚಕರು ಆಮಿಷವೊಡ್ಡಿದ್ದರು

news18-kannada
Updated:January 13, 2020, 9:40 PM IST
ನಿವೃತ್ತ ಸೈನಿಕರಿಗೆ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿದ ವಂಚಕರು
ಸಾಂದರ್ಭಿಕ ಚಿತ್ರ
  • Share this:
ಹುಬ್ಬಳ್ಳಿ(ಜ.14) : ಜುವಾರಿ ಸಿಮೆಂಟ್ ಕಂಪನಿಯ ಹೆಸರಲ್ಲಿ ನಿವೃತ್ತ ಸೈನಿಕರನ್ನು ವಂಚಿಸಲಾಗಿದೆ. ರಾಜ್ಯ ಮತ್ತು ಹೊರ ರಾಜ್ಯದ ನೂರಾರು ಸೈನಿಕರಿಗೆ ತಮಿಳುನಾಡು ಮೂಲದ ನಾಲ್ವರು ವಂಚಕರು ಪಂಗನಾಮ ಹಾಕಿದ್ದಾರೆ. ಮೋಸದ ಜಾಲಕ್ಕೆ ಬಲಿಯಾಗಿ ಕೋಟ್ಯಾಂತರ ರೂಪಾಯಿ ಹಣವನ್ನು ಕಳೆದುಕೊಂಡ ಸೈನಿಕರೀಗ ಬೀದಿಗೆ ಬಂದಿದ್ದಾರೆ.

ಬಾಹ್ಯ ಶತ್ರುಗಳಿಂದ ದೇಶ ರಕ್ಷಿಸಿದವರು ದೇಶದೊಳಗಿನ ವಂಚಕರ ಬಲೆಗೆ ಬಿದ್ದರು. ಸೈನಿಕರು ದೇಶದ ರಕ್ಷಣೆ ಹಾಗೂ ಸಂದಿಗ್ಧ ಪರಿಸ್ಥಿತಿಗಳಲ್ಲಿ ಜೀವದ ಹಂಗು ತೊರೆದು ಹೋರಾಡುತ್ತಾರೆ. ಉಗ್ರರನ್ನು ಮಟ್ಟ ಹಾಕಿ ದೇಶವನ್ನು ಸುರಕ್ಷಿತವಾಗಿ ಇಡುತ್ತಾರೆ. ಬಾಹ್ಯ ಶತ್ರುಗಳಿಂದ ದೇಶವನ್ನು ರಕ್ಷಿಸುವ ಸೈನಿಕರಿಗೆ ದೇಶದೊಳಗಿನ ವಂಚಕರು ಮೋಸ ಮಾಡಿದ್ದಾರೆ.

ಹೂಡಿಕೆಯ ಹೆಸರಲ್ಲಿ 526 ಜನ ನಿವೃತ್ತ ಸೈನಿಕರನ್ನು ವಂಚಿಸಿದ್ದಾರೆ. ತಮಿಳುನಾಡಿನ ಜುವಾರಿ ಸಿಮೆಂಟ್‌ ಕಂಪನಿಯಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚಿನ ಲಾಭ ಬರುತ್ತೆ. ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿದ್ರೆ ತಿಂಗಳಿಗೆ ಹನ್ನೆರಡು ಸಾವಿರ ರೂಪಾಯಿ ಆದಾಯ ಬರುತ್ತೆ ಎಂದು ವಂಚಕರು ಆಮಿಷವೊಡ್ಡಿದ್ದರು. ಜುವಾರಿ ಸಿಮೆಂಟ್ ಕಂಪನಿ ಸೈನಿಕರಿಗೆ ಮಾತ್ರ ಆಫರ್ ಕೊಟ್ಟಿದೆ ಎಂದು ನಂಬಿಸಿದ್ದರು. ಹೆಚ್ಚಿನ ಆದಾಯದ ಆಸೆಗೆ ಬಿದ್ದ ಸೈನಿಕರು ತಮ್ಮಬಳಿ ಇದ್ದಬದ್ದ ಹಣವನ್ನೆಲ್ಲ ವಂಚಕರ ಕೈಗೆ ಕೊಟ್ಟಿದ್ದರು.

ಬಣ್ಣದ ಮಾತು ಹೇಳಿ ಹಣ ಕಿತ್ತು ಪರಾರಿಯಾದರು

ಜುವಾರಿ ಸಿಮೆಂಟ್‌ ಕಂಪನಿ ಪ್ರಧಾನ ವ್ಯವಸ್ಥಾಪಕ ಎಂದು ಹೇಳಿಕೊಂಡಿರುವ ಮಂಜುನಾಥ್ ಹಾಗೂ ಆತನ ಸ್ನೇಹಿತರಾದ ಕೆ. ಮಣಿ, ಇರ್ಷಾದ್ ಮತ್ತು ಜಾನ್ಸನ್ ಎಂಬುವರು ಬಣ್ಣದ ಮಾತುಗಳಿಗೆ ಮರುಳಾದ ಸೈನಿಕರು ಹಣವನ್ನೆಲ್ಲ ಹೂಡಿಕೆ ಮಾಡಿದ್ದರು. ಒಂದೆರಡು ತಿಂಗಳು ಹೂಡಿಕೆಯ ಲಾಭಾಂಶ ಕೊಟ್ಟಂತೆ ಮಾಡಿದ ವಂಚಕರು ಚೆಕ್‌ ಬೌನ್ಸ್ ಆಗುತ್ತಿದ್ದಂತೆ ನಾಪತ್ತೆಯಾಗಿದ್ದಾರೆ.

ಆರೋಪಿ ಕೆ. ಮಣಿ ಕೂಡ ನಿವೃತ್ತ ಸೈನಿಕ. ಜುವಾರಿ ಕಂಪನಿಯಲ್ಲಿ ಕೆಲಸ ಮಾಡುತ್ತಾನೆ. ಈತನ ಕುಟುಂಬದ ಅನೇಕರು ಸೈನ್ಯದಲ್ಲಿದ್ದಾರೆ. ಹೀಗಾಗಿ ಈತನ ಮೇಲೆ ವಿಶ್ವಾಸ ಮಾಡಿದ ಹಲವರು ಹೂಡಿಕೆ ಮಾಡಿದ್ದಾರೆ. ಕರ್ನಾಟಕದ 200 ಮತ್ತು ತಮಿಳುನಾಡಿನ 326 ನಿವೃತ್ತ ಸೈನಿಕರು ಸುಮಾರು 27 ಕೋಟಿ ರೂಪಾಯಿ ಹಣವನ್ನು ವಂಚಕರ ಕೈಗೆ ಕೊಟ್ಟಿದ್ದಾರೆ. ಆಮಿಷಕ್ಕೆ ಬಲಿಯಾದ ಸೈನಿಕರು ನಿವೃತ್ತಿಯಿಂದ ಬಂದ ಎಲ್ಲಾ ಹಣವನ್ನು ಕೊಟ್ಟು ಈಗ ಕಂಗಾಲಾಗಿದ್ದಾರೆ.

ಹುಬ್ಬಳ್ಳಿ- ಧಾರವಾಡ ಯೋಧರೂ ಹಣದಾಸೆಗೆ ಬಲಿಹುಬ್ಬಳ್ಳಿ- ಧಾರವಾಡದ ಮೂವತ್ತಕ್ಕೂ ಹೆಚ್ಚು ನಿವೃತ್ತ ಸೈನಿಕರು ಹಣ ಕಳೆದುಕೊಂಡಿದ್ದಾರೆ. ಹುಬ್ಬಳ್ಳಿಯ ಮಹಾತ್ಮಾ ಗಾಂಧೀಜಿ ಉದ್ಯಾನ ವನದಲ್ಲಿ ಮೋಸಕ್ಕೆ ಬಲಿಯಾಗಿರುವ ನಿವೃತ್ತ ಸೈನಿಕರು ಸಭೆ ನಡೆಸಿದ್ದಾರೆ. ನಿವೃತ್ತ ಸೈನಿಕರಾದ ಶಿವಪುತ್ರ ಕಡ್ಲಿ, ಉಮೇಶ್‌ ಬೋಸ್ಲೆ, ರಂಗರಾಜು ಮತ್ತು ಮಂಜುನಾಥ ನೇತ್ರತ್ವದಲ್ಲಿ ಚರ್ಚೆ ನಡೆಸಿದ್ದಾರೆ. ಆರೋಪಿಗಳನ್ನು ಬಂಧಿಸಿ ತಮ್ಮ ಹಣವನ್ನು ವಾಪಸ್‌ ಕೊಡಿಸುವಂತೆ ಧಾರವಾಡ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಸಂಕಷ್ಟಕ್ಕೆ ಸಿಲುಕಿರುವ ಸೈನಿಕರ ಕುಟುಂಬಗಳು

ಮಂಜುನಾಥ್, ಕೆ. ಮಣಿ, ಇರ್ಷಾದ್ ಮತ್ತು ಜಾನ್ಸನ್ ವಿರುದ್ಧ ತಮಿಳುನಾಡಿನ ನೀಲಗಿರಿ ಹಾಗೂ ಕೋಯಮತ್ತೂರಿನಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಹಣ ಕಳೆದುಕೊಂಡು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು ನ್ಯಾಯ ಕೊಡಿಸುವಂತೆ ಸೈನಿಕರು ಧಾರವಾಡ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಹೆಚ್ಚಿನ ಆದಾಯದ ಆಮಿಷಕ್ಕೆ ಒಳಗಾಗಿ ವಂಚಕರ ಜಾಲಕ್ಕೆ ಸೈನಿಕರು ಬಲಿಯಾಗಿರುವುದು ವಿಪರ್ಯಾಸ.

ಇದನ್ನೂ ಓದಿ : ಮಂಗಳೂರು ಆಯ್ತು, ಈಗ ಬೆಂಗಳೂರು, ಕನಕಪುರ ಮಂದಿಯ ನೆಮ್ಮದಿ ಹಾಳು ಮಾಡುತ್ತಿದ್ದಾರೆ: ಕಲ್ಲಡ್ಕ ವಿರುದ್ಧ ಖಾದರ್ ವಾಗ್ದಾಳಿ

ಎಷ್ಟು ಎಚ್ಚರ ವಹಿಸಿದರೂ ಮೋಸಗಾರರು ಒಂದಲ್ಲಾ ಒಂದು ಸೋಗಿನಲ್ಲಿ ತಲೆ ಎತ್ತುತ್ತಿರುವುದು ಖೇದಕರ. ಆರ್ಥಿಕ ಅಪರಾಧ ಎಸಗುವ ಇಂತಹ ವಂಚಕ ಜಾಲಗಳಿಗೆ ಕಡಿವಾಣ ಬೀಳಲಿ ಎನ್ನುವುದೇ ಎಲ್ಲರ ಆಶಯ.

 

 
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ