• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bengaluru: ಪೋಷಕರೇ ಮಕ್ಕಳನ್ನು ಒಂಟಿಯಾಗಿ ಆಡಲು ಬಿಡುವ ಮುನ್ನ ಎಚ್ಚರ; ಆಟವಾಡುತ್ತಾ 2ನೇ ಮಹಡಿಯಿಂದ ಬಿದ್ದ ಕಂದಮ್ಮ!

Bengaluru: ಪೋಷಕರೇ ಮಕ್ಕಳನ್ನು ಒಂಟಿಯಾಗಿ ಆಡಲು ಬಿಡುವ ಮುನ್ನ ಎಚ್ಚರ; ಆಟವಾಡುತ್ತಾ 2ನೇ ಮಹಡಿಯಿಂದ ಬಿದ್ದ ಕಂದಮ್ಮ!

ಅಪಾರ್ಟ್​​ಮೆಂಟ್​ ಮಹಡಿಯಿಂದ ಬಿದ್ದ ಮಗುವನ್ನು ರಕ್ಷಿಸಿದ ಸ್ಥಳೀಯರು

ಅಪಾರ್ಟ್​​ಮೆಂಟ್​ ಮಹಡಿಯಿಂದ ಬಿದ್ದ ಮಗುವನ್ನು ರಕ್ಷಿಸಿದ ಸ್ಥಳೀಯರು

ಕಲಬುರಗಿ ಮೂಲದ ಶಿವಪ್ಪ ದಂಪತಿಯ ಮಗು ರಾಹುಲ್ ಆಟವಾಡುತ್ತಾ ಕೆಳಗೆ ಬಿದ್ದಿದ್ದು, ಮಗು ಕೆಳಗೆ ಬಿದ್ದ ಘಟನೆಯನ್ನು ಗಮನಿಸಿದ ಅಪಾರ್ಟ್​ಮೆಂಟ್ ನಿವಾಸಿಗಳು ಕೂಡಲೇ ಗಮನಿಸಿ ಮಗುವನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಆಟವಾಡುತ್ತಾ 2ನೇ ಮಹಡಿಯಿಂದ ಬಿದ್ದು ಮಗು (Child) ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಕೆಂಗೇರಿ (Kengeri) ಸಮೀಪದ ಬಿಡಿಎ ಅಪಾರ್ಟ್​​ಮೆಂಟ್​ನಲ್ಲಿ (BDA Apartments) ನಡೆದಿದೆ. ಮಕ್ಕಳನ್ನು ಒಂಟಿಯಾಗಿ ಆಡಲು ಬಿಡುವ ಮುನ್ನ ಪೋಷಕರು ಎಚ್ಚರಿಕೆ ವಹಿಸಿಬೇಕಿದೆ. ಘಟನೆಯಲ್ಲಿ ಗಾಯಗೊಂಡಿರುವ 3 ವರ್ಷದ ಮಗು ರಾಹುಲ್​ನನ್ನು ರಾಜರಾಜೇಶ್ವರಿ ಆಸ್ಪತ್ರೆಗೆ (Hospital) ದಾಖಲು ಮಾಡಲಾಗಿದೆ. ಇಂದು ಬೆಳಗ್ಗೆ 11:30ರ ಸುಮಾರಿಗೆ ಈ ಘಟನೆ ನಡೆದಿದೆ. ಮಗು ಬೀಳುವ ಭೀಕರ ದೃಶ್ಯ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದ್ದು, ನೋಡುಗರನ್ನು ಬೆಚ್ಚಿಬೀಳಿಸುವಂತಿದೆ. ದುರ್ಘಟನೆಯಲ್ಲಿ ಗಾಯಗೊಂಡಿರುವ ಬಾಲಕ ರಾಹುಲ್​​ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದು, ಕುಟುಂಬಸ್ಥರಿಗೆ ಶಾಕ್​ ಎದುರಾಗಿದೆ.


ಕಲಬುರಗಿ ಮೂಲದ ಶಿವಪ್ಪ ದಂಪತಿಯ ಮಗು ರಾಹುಲ್ ಆಟವಾಡುತ್ತಾ ಕೆಳಗೆ ಬಿದ್ದಿದ್ದು, ಮಗು ಕೆಳಗೆ ಬಿದ್ದ ಘಟನೆಯನ್ನು ಗಮನಿಸಿದ ಅಪಾರ್ಟ್​ಮೆಂಟ್ ನಿವಾಸಿಗಳು ಕೂಡಲೇ ಮಗುವನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಕುಟುಂಬಸ್ಥರು ಅಪಾರ್ಟ್​​ಮೆಂಟ್​​ನಲ್ಲಿ ವಾಸಿಸುತ್ತಿದ್ದರು.


ಇದನ್ನೂ ಓದಿ: Ramesh Jarkiholi: ಚುನಾವಣೆಗೆ ನಿಲ್ಲಲ್ಲ ಅಂತ ಗೋಕಾಕ್ ಸಾಹುಕಾರ್​ ಬಾಂಬ್! ಅತ್ತ ಬಿಜೆಪಿ ಪ್ರಚಾರ ಸಮಿತಿಯಿಂದ ಸೋಮಣ್ಣಗೆ ಕೊಕ್!


ಇಂದು ಬೆಳಗ್ಗೆ ಮನೆಯ ಹೊರಗೆ ಚೇರ್ ಹಾಕಿ ಅದರ ಮೇಲೆ ಬೆಡ್ ಶೀಟ್ ಹಾಕಿ ಮಗುವನ್ನು ಆಡಲು ಬಿಟ್ಟಿದ್ದರು. ಈ ವೇಳೆ ಕಾಲು ಜಾರಿ ಮಗು ಕಬ್ಬಿಣದ ಸರಳುಗಳಿಂದ ತೂರಿ ಕೆಳಕ್ಕೆ ಬಿದ್ದಿದೆ ಎನ್ನಲಾಗಿದೆ. ಮಗು ತಂದೆ ಶಿವಪ್ಪ ಮೇಸ್ತ್ರಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು, ತಂದೆ- ತಾಯಿ ಮನೆಯಲ್ಲೇ ಇದ್ದಾಗ ಘಟನೆ ನಡೆದಿದೆ. ಮಗುವಿನ ತಾಯಿ ಮತ್ತೊಂದು ಮಗುವಿಗೆ ಊಟ ಮಾಡಿಸುತ್ತಿದ್ದ ವೇಳೆ ದುರ್ಘಟನೆ ನಡೆದಿದೆ.




ನಿಲ್ಲಿಸಿದ್ದ ಬಿಎಂಟಿಸಿ ಬಸ್​​ನಲ್ಲಿ ಬೆಂಕಿ ಅನಾಹುತ, ಕಂಡಕ್ಟರ್ ಸಜೀವ ದಹನ


ನಿಂತಿದ್ದ ಬಸ್​ಗೆ ಬೆಂಕಿ ಹೊತ್ತಿಕೊಂಡು ಕಂಡಕ್ಟರ್ ಮೃತಪಟ್ಟಿರುವ ಘಟನೆ ಬೆಂಗಳೂರಿನ (Bengaluru) ಲಿಂಗಧೀರನಹಳ್ಳಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಇದೇ ಬಸ್ ನಿಲ್ದಾಣದಲ್ಲಿ ರಾತ್ರಿ ಹಾಲ್ಟ್ ಆಗಿದ್ದ, ಬಿಎಂಟಿಸಿ ಬಸ್​​ (BMTC Bus) ಬೆಂಕಿಗೆ ತುತ್ತಾಗಿದ್ದು (Fire Accident), ಅದರಲ್ಲಿ ಮಲಗಿದ್ದ ಕಂಡಕ್ಟರ್ ಸಜೀವ ದಹನ ಆಗಿದ್ದಾರೆ. ಬೆಳಗಿನ ಜಾವ 4 ರಿಂದ 5 ಘಂಟೆಯ ಸಮಯದಲ್ಲಿ ಈ ಘಟನೆ ನಡೆದಿದೆ.


ಬಳ್ಳಾರಿ ಮೂಲದ ಕಂಡಕ್ಟರ್ ಮುತ್ತಯ್ಯ ಸ್ವಾಮಿ, ಟ್ರಿಪ್ ಮುಗಿಸಿ ಲಿಂಗಧೀರನಹಳ್ಳಿಯಲ್ಲಿ ಬಸ್ ನಿಲ್ಲಿಸಿ ಅದರಲ್ಲೇ ಮಲಗಿದ್ದರು. ಆದರೆ ನಸುಕಿನ ಜಾವದ ವೇಳೆ ಬಸ್​​ನಲ್ಲಿ ಶಾರ್ಟ್​ ಸರ್ಕ್ಯೂಟ್ ಆಗಿದೆ. ಬಸ್​​ ಪೂರ್ಣ ಬೆಂಕಿ ಆವರಿಸಿದ್ದರಿಂದ ಮುತ್ತಯ್ಯ ಹೊರಬರಲು ಆಗದೆ ಅಲ್ಲೇ ಸಜೀವವಾಗಿ ಸುಟ್ಟುಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


ಇದನ್ನೂ ಓದಿ: Janardhana Reddy: ಚುನಾವಣೆ ಸಂದರ್ಭದಲ್ಲೇ ಗಣಿಧಣಿಗೆ ಸಂಕಷ್ಟ! ವಿದೇಶಗಳಲ್ಲಿ ರೆಡ್ಡಿ ಹಣದ ಮೂಲದ ಮಾಹಿತಿ ನೀಡಲು ಕೋರ್ಟ್ ಆದೇಶ


ಕೆಎ 57 ಎಫ್ 2069 ನಂಬರಿನ ಸುಮ್ಮನಹಳ್ಳಿ ಡಿಪೋವಿನ ಬಿಎಂಟಿಸಿ ಬಸ್ ನಿನ್ನೆ ಬ್ಯಾಡರಹಳ್ಳಿ ಬಳಿ ಲಿಂಗಧೀರನಹಳ್ಳಿ ಬಸ್ ನಿಲ್ದಾಣಕ್ಕೆ ಬಂದಿದೆ. ಬಸ್ ಚಾಲಕ ಪ್ರಕಾಶ್ ಎಂದಿನಂತೆ ಬಿಎಂಟಿಸಿ ಕೊಟ್ಟಿರೋ ಕೊಠಡಿಯಲ್ಲಿ ಮಲಗಿದ್ದರು. ಆದರೆ ಬಳ್ಳಾರಿ ಮೂಲದ ಮುತ್ತಯ್ಯ ಮಾತ್ರ ಬಸ್​​ನಲ್ಲೇ ಎಲ್ಲಾ ಕಿಟಕಿಗಳನ್ನ ಮುಚ್ಚಿ ಮಲಗಿದ್ದರು. ಆದರೆ ದುರಾದೃಷ್ಟವಶಾತ್ ಶಾರ್ಟ್ ಸರ್ಕ್ಯೂಟ್ ಆಗಿ ಬಸ್​ನಲ್ಲೇ ಜೀವ ಬಿಟ್ಟಿದ್ದಾರೆ. ಈ ರೀತಿ ಬೆಂಕಿಹೊತ್ತಿಕೊಳ್ಳಲು ಕಾರಣವಾದ ಅಂಶವೇನು ಅನ್ನೋದನ್ನ ಅಗ್ನಿಶಾಮಕ ಅಧಿಕಾರಿಗಳು ಪತ್ತೆಹಚ್ಚುತ್ತಿದ್ದಾರೆ.

Published by:Sumanth SN
First published: