ಡ್ರಗ್ ಪರೇಡ್‌ನಲ್ಲಿ ಸುಟ್ಟು ಬೂದಿಯಾಯಿತು ಬರೋಬ್ಬರಿ 50 ಕೋಟಿ ಮೌಲ್ಯದ 4 ಟನ್ ಮಾದಕ ವಸ್ತು!

ರಾಜ್ಯ ರಾಜಧಾನಿ ಇಂದು ಒಂದು ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದ್ದು, ಪ್ರತಿ ವರ್ಷ ಇದೇ ರೀತಿ ವಶಪಡಿಸಿಕೊಳ್ಳಲಾದ ಮಾದಕ ವಸ್ತುಗಳನ್ನು ಸುಡಲಾಗುವುದು ಎಂದು ಐಜಿಪಿ ತಿಳಿಸಿದ್ದಾರೆ.

ಮಾದಕ ವಸ್ತುಗಳನ್ನು ಸುಡುತ್ತಿರುವುದು.

ಮಾದಕ ವಸ್ತುಗಳನ್ನು ಸುಡುತ್ತಿರುವುದು.

 • Share this:
  ಬೆಂಗಳೂರು: ದೊಡ್ಡ ದೊಡ್ಡ ಚೀಲಗಳಲ್ಲಿ ತುಂಬಿರುವ ಡ್ರಗ್ಸ್, ಡ್ರಗ್ಸ್‌ಗಳನ್ನು ಪರಿಶೀಲನೆ ಮಾಡ್ತಾ ಇರೋ ಹಿರಿಯ ಪೊಲೀಸರು, ದೊಡ್ಡ ಕಾರ್ಖಾನೆಯೊಂದರಲ್ಲಿ ಸುಟ್ಟು ಭಸ್ಮವಾಗುತ್ತಿರುವ ಟನ್‌ಗಟ್ಟಲೆ ಗಾಂಜ, ನಾವು ಇನ್ನೆಂದು ಗಾಂಜಾ ಸಾಗಾಟ, ಮಾರಾಟ, ಸೇವನೆಗೆ ಬಿಡೋದಿಲ್ಲ ಎಂದು ಪ್ರತಿಜ್ಞಾ ವಿಧಿ ಸ್ವೀಕರಿಸುತ್ತಿರುವ ಪೊಲೀಸರು. ಈ ದೃಶ್ಯಗಳು ಕಂಡು ಬಂದದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಡಾಬಸ್‌ಪೇಟೆ ಕೈಗಾರಿಕಾ ಪ್ರದೇಶದಲ್ಲಿರುವ ರಾಮ್ಕಿ ಕಾರ್ಖಾನೆಯಲ್ಲಿ.

  ಅಂತಾರಾಷ್ಟ್ರೀಯ ಮಾದಕ ವಸ್ತುಗಳ ರಹಿತ ದಿನಾಚರಣೆ ಅಂಗವಾಗಿ ಬೆಂಗಳೂರು ನಗರ ಹಾಗೂ ಕೇಂದ್ರ ವಲಯ ಪೊಲೀಸರು ಮಾದಕ ವಸ್ತುಗಳನ್ನ ಸುಡುವುದರ ಮೂಲಕ ಡ್ರಗ್ ಜಾಲಕ್ಕೆ ಕಡಿವಾಣ ಹಾಕುವ ಪ್ರತಿಜ್ಞಾ ವಿಧಿ ಸ್ವೀಕರಿಸಿದರು‌. ಹಾಗೆಯೇ ಮಾದಕ ವಸ್ತುಗಳ ವಿಲೇವಾರಿ ಸಪ್ತಾಹಕ್ಕೆ ಚಾಲನೆ ನೀಡಿದರು.

  ರಾಮ್ಕಿ ಹೆಸರಿನ ಕರ್ನಾಟಕ ವೇಸ್ಟ್ ಮ್ಯಾನೇಜ್ಮೆಂಟ್ ಪ್ರಾಜೆಕ್ಟ್ ಘಟಕದಲ್ಲಿ ಇಂದು ಬೃಹತ್ ಮೊತ್ತದ ಮಾದಕವಸ್ತುಗಳನ್ನ ಪೊಲೀಸರು ಸುಟ್ಟು ಬೂದಿಯನ್ನಾಗಿಸಿದ್ದಾರೆ. ಕಳೆದ ಒಂದು ವರ್ಷದಿಂದ ಕೇಂದ್ರ ವಲಯದ ಐದು ಎಸ್ಪಿ ಹಾಗೂ ಬೆಂಗಳೂರು ನಗರದ ಪೊಲೀಸ್ ಠಾಣ ವ್ಯಾಪ್ತಿಗಳಲ್ಲಿ 4066 ಪ್ರಕರಣಗಳ 5291 ಸಂಬಂಧ ಸುಮಾರು 4000 ಟನ್ ಮಾಧಕ ವಸ್ತುಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದರು. ಗಾಂಜಾ, ಅಫೀಮು, ಬ್ರೌನ್ ಶುಗರ್, ಹೆರಾಯಿನ್, ಚರಸ್, ಕೊಕೈನ್ ಸೇರಿದಂತೆ ಒಟ್ಟು ಹನ್ನೆರಡು ಪ್ರಕಾರದ 50.23 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಲಾಯಿತು.

  ಪ್ರತಿಜ್ಞಾ ವಿಧಿ ಬೋಧಿಸಿದ ಪ್ರವೀಣ್ ಸೂದ್

  ಡಿಜಿ ಪ್ರವೀಣ್ ಸೂದ್ ನೇತೃತ್ವದಲ್ಲಿ ಇಂದು ಮಾದಕ ವಸ್ತುಗಳನ್ನ ನಾಡಪಡಿಸಲಾಗಿದ್ದು, ಸಂಪೂರ್ಣ ತಾಂತ್ರಿಕ ಸಹಾಯದಿಂದ ಇಂದು ರಾಮ್ಕಿ ಘಟಕದಲ್ಲಿ ಡ್ರಗ್ಸ್ ನಾಶ ಮಾಡಲಾಗಿದೆ. ಇನ್ನೂ ಈ ಯೋಜನೆಯ ನಡುವೆ ಪೊಲೀಸರು ಡ್ರಗ್ ಕಂಟ್ರೋಲ್ ಮಾಡುವ ಉದ್ದೇಶದಿಂದ ಪ್ರತಿಜ್ಞ ವಿಧಿ ಸ್ವೀಕರಿಸಿದ್ದು ಐಜಿಪಿ ಪ್ರವೀಣ್ ಸೂದ್ ಪ್ರತಿಜ್ಞ ವಿಧಿ ಬೋಧಿಸಿದರು. ಡ್ರಗ್ ಕಂಟ್ರೋಲ್ ಮಾಡಲು ಸಂಪೂರ್ಣ ಶ್ರಮ ವಹಿಸಲಾಗುವುದು, ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮಾದಕ ವಸ್ತುಗಳ ನಿಯಂತ್ರಣ ಮಾಡುವ ಮೂಲಕ ಯುವಕರನ್ನ ಮಾದಕ ಜಾಲಕ್ಕೆ ಎಳೆಯುವವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಜ್ಞ ವಿಧಿ ಸ್ವೀಕರಿಸಿದರು. ಈ ಕುರಿತು ಬೆಂಗಳೂರಿನಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿ ಡ್ರಗ್ ನಿಯಂತ್ರಣಕ್ಕೆ ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಿದ್ದು, ಈ ಹಿಂದಿನ ಪ್ರಕರಣಗಳಿಗೆ ಹೀಲಿಸಿದರೆ ಸಾಕಷ್ಟು ಕಡಿವಾಣ ಹಾಕಿದ್ದೇವೆ, ಮುಂದೆ ಸಂಪೂರ್ಣ ಮಾದಕವಸ್ತು ನಿಯಂತ್ರಣ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

  ಇದನ್ನು ಓದಿ: ಗಡಿಯಲ್ಲಿ ಕೋವಿಡ್ ಟೆಸ್ಟ್ ಸ್ಥಗಿತ; ಎಗ್ಗಿಲ್ಲದೆ ರಾಜ್ಯಕ್ಕೆ ಬರುತ್ತಿರುವ ಜನ; ಕಟ್ಟೆಚ್ಚರ ವಹಿಸದ ಖಾಕಿ ಪಡೆ!

  ಒಟ್ಟಾರೆ ರಾಜ್ಯ ರಾಜಧಾನಿ ಇಂದು ಒಂದು ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದ್ದು, ಪ್ರತಿ ವರ್ಷ ಇದೇ ರೀತಿ ವಶಪಡಿಸಿಕೊಳ್ಳಲಾದ ಮಾದಕ ವಸ್ತುಗಳನ್ನು ಸುಡಲಾಗುವುದು ಎಂದು ಐಜಿಪಿ ತಿಳಿಸಿದ್ದಾರೆ. ಇತ್ತೀಚೆಗೆ ತರಕಾರಿ ಸೊಪ್ಪಿನ ರೀತಿ ಗಲ್ಲಿ ಗಲ್ಲಿಗಳಲ್ಲಿ ಗಾಂಜಾ ಸಿಗುತ್ತಿದ್ದು, ಪೊಲೀಸರು ಪ್ರತಿಜ್ಞ ವಿಧಿಯಂತೆ ಮಾದಕ ವಸ್ತುಗಳಿಗೆ ಕಡಿವಾಣ ಹಾಕಬೇಕಿದೆ.

  ನ್ಯೂಸ್ ​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಮನೆಯಿಂದ ಯಾರು ಹೊರಗೆ ಹೋಗದಂತೆ ಮುನ್ನೆಚ್ಚರಿಕೆ ವಹಿಸಿ. ಹಾಗೂ ಹೊರಗೆ ಗುಂಪುಗಳಲ್ಲಿ ಸೇರುವುದನ್ನು ಸಾಧ್ಯವದಷ್ಟು ನಿಯಂತ್ರಿಸಿ.

  • ವರದಿ : ಅಭಿಷೇಕ್ ಚಿಕ್ಕಮಾರನಹಳ್ಳಿ

  Published by:HR Ramesh
  First published: