ಗದಗ(ಮೇ.22): ಧಾರವಾಡ (Dharawad) ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ (Rain) ಬೆಣ್ಣೆ ಮೈದುಂಬಿ ಹರಿಯುತ್ತಿದೆ. ಹೌದು ಬೆಣ್ಣೆ ಹಳ್ಳದ ಪ್ರವಾಹಕ್ಕೆ ಗದಗ (Gadag) ಜಿಲ್ಲೆ ರೋಣ ತಾಲೂಕಿನ ಯಾವಗಲ್ ಬಳಿ ನಾಲ್ವರು ಕಾರ್ಮಿಕರು ಬೆಣ್ಣೆ ಹಳ್ಳದಲ್ಲಿ ಸಿಲುಕಿಕೊಂಡಿದ್ರು. ಬೆಳ್ಳಂ ಬೆಳಗ್ಗೆ ಬಂದ ಅಪಾರ ಪ್ರಮಾಣದ ನೀರು ನೋಡು ಕಾರ್ಮಿಕರು ಕಂಗಾಲಾಗಿ ಬಿಟ್ಟಿದ್ರು. ಸೇತುವೆ ಕಾಮಗಾರಿ ಮಾಡಲು ರಾತ್ರಿ ವೇಳೆ ಹಳ್ಳದ ಪಕ್ಕದಲ್ಲಿರುವ ಸೇತುವೆ (Bridge) ಬಳಿ ಮಲಗಿದ್ರು. ಮುಂಜಾನೆ ಎದ್ದು ನೋಡಿದ್ರೆ ಬೆಣ್ಣೆ ಹಳ್ಳದ ಉಕ್ಕಿ ಹರಿಯುತ್ತಿದೆ.
ಬೆಣ್ಣೆ ಹಳ್ಳದಲ್ಲಿ ಸಿಲುಕಿದ ನಾಲ್ವರು ಕಾರ್ಮಿಕರು
ಇನ್ನು ಕಂಡ ಕಾರ್ಮಿಕರು ಎರಡು ಹಳ್ಳದ ಮಧ್ಯೆ ಇರುವ ಸೇತುವೆ ಬಳಿ ಬಂದು ನಿಂತಿದ್ದಾರೆ. ಹೌದು ಡ.ಸಾ ಹಡಗಲಿ ಗ್ರಾಮದ ಯಲ್ಲಪ್ಪ, ಅರುಣ ತಳವಾರ, ಪರಶುರಾಮ ಹಾಗೂ ಸಿದ್ದು ಅವರು ಬೆಣ್ಣೆ ಹಳ್ಳದ ಮಧ್ಯೆ ಸಿಲುಕಿಕೊಂಡಿದ್ರು.
ಹಗ್ಗದ ಮೂಲಕ ರಕ್ಷಣೆ
ತಕ್ಷಣ ಮಾಹಿತಿ ತಿಳಿದು ತಹಶಿಲ್ದಾರ ವಾಣಿ ಉಣಕಿ ಅವರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ರು. ನಂತ್ರ ರೋಣ ದಿಂದ ಅಗ್ನಿಶಾಮಕ ದಳ ಸಿಬ್ಬಂದಿಯನ್ನು ಕರೆ ತಂದ್ರು. ಅಗ್ನಿಶಾಮಕ ದಳದ ಮಂಜುನಾಥ ಮೇಲ್ಮನಿ ನೇತೃತ್ವದಲ್ಲಿ ಸಿಬ್ಬಂದಿಗಳು ಹಗ್ಗದ ಸಹಾಯ ದಿಂದ ಸೇತುವೆ ಮೂಲಕ ಕಾರ್ಮಿಕರನ್ನು ರಕ್ಷಣೆ ಮಾಡಿದ್ರು.
ರಾತ್ರಿ ಮಲಗುವವರೆಗೂ ಹೆಚ್ಚಿನ ಹರಿವು ಇರಲಿಲ್ಲ
ಕಾರ್ಮಿಕರು ಇರೋದಕ್ಕೆ ಶೆಡ್ ವ್ಯವಸ್ಥೆ ಇದೆ. ಆಹಾರ ಸಾಮಗ್ರಿಗಳ ಜೊತೆಯೆ ಕಾರ್ಮಿಕರು ತೆರಳಿದ್ರಿಂದ ಹೆಚ್ಚಿ ಸಮಸ್ಯೆಯಾಗಿರಲಿಲ್ಲ. ರಾತ್ರಿ ಊಟ ಮಾಡಿ ಮಲಗುವವರೆಗೂ ನೀರಿನ ಹರಿವು ಇರಲಿಲ್ಲ. ಆದ್ರೆ ಧಾರವಾಡ ಭಾಗದಲ್ಲಿ ರಾತ್ರಿ ಮಳೆ ಸುರಿದಿದ್ರಿಂದ ಏಕಾ ಏಕಿ ಹಳ್ಳದಲ್ಲಿ ಹರಿವು ಹೆಚ್ಚಾಗಿತ್ತು.
ಅಗ್ನಿ ಶಾಮಕ ಸಿಬ್ಬಂದಿಯನ್ನು ಕಾದು ಕುಳಿತ ಕಾರ್ಮಿಕರು
ರಕ್ಷಣಾ ಕಾರ್ಯ ತಡವಾದಲ್ಲಿ ಜೆಡಿಬಿ ಮೂಲಕವೇ ಹೊರ ಬರೋದಕ್ಕೆ ಕಾರ್ಮಿಕರು ನಿರ್ಧರಿಸಿದ್ರು. ಆದ್ರೆ, ಅಧಿಕಾರಿಗಳ ಕಾರ್ಮಿಕರನ್ನ ಸಂಪರ್ಕಿಸಿ ರಿಸ್ಕ್ ತೆಗೆದುಕೊಳ್ಳಬೇಡಿ ಅಂತಾ ಸೂಚನೆ ನೀಡಿದ್ರು. ಹೀಗಾಗಿ ಅಗ್ನಿ ಶಾಮಕ ಸಿಬ್ಬಂದಿ ಬರುವುದನ್ನ ಕಾರ್ಮಿಕರು ಕಾದು ಕೂತಿದ್ರು.
ಇದನ್ನೂ ಓದಿ: Govt Schools: ಸರ್ಕಾರಕ್ಕೂ ಬೇಡವಾಗಿದೆ ಸರ್ಕಾರಿ ಶಾಲೆ! ಕೋಲಾರದಲ್ಲಿ ದುರಸ್ತಿಗೆ ಕಾಯುತ್ತಿದೆ 1500ಕ್ಕೂ ಅಧಿಕ ಶಾಲಾ ಕೊಠಡಿ
ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸ್ತು.ರೋಪ್ ಮೂಲಕ ರಕ್ಷಣೆ ಮಾಡಬಹುದು ಅಂತಾ ಅರೆತು ಕಾರ್ಯಾಚರಣೆ ಮುಂದಾಗಿತ್ತು.ಸುಮಾರು ಅರ್ಧ ಗಂಟೆಯಲ್ಲೇ ಕಾಮಗಾರಿ ಮಾಡಿ ಮುಗಿಸಿದ್ದರು.ಎಸಿ ಅನ್ನಪೂರ್ಣ ಮುದಕಮ್ಮನವರ್, ರೋಣ ತಹಶೀಲ್ದಾರ್ ವಾಣಿ ಉಣಕಿ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಚರಣೆ ಬಗ್ಗೆ ವಿವರಣೆ ಪಡೆದ್ರು.
ಇನ್ನು ಜಿಲ್ಲೆಯ ನರಗುಂದ ತಾಲೂಕಿನ ಕುರ್ಲಗೇರಿ ಗ್ರಾಮದಲ್ಲಿಯು ಬೆಣ್ಣೆ ಹಳ್ಳ ಅವಾಂತರ ಸೃಷ್ಟಿ ಮಾಡಿದೆ. ಗ್ರಾಮದ ಹಳ್ಳದ ಸಮೀಪದಲ್ಲಿದ್ದ ಬಣವೆಗಳು ಜಲಾವೃತವಾಗಿವೆ.
ಇದನ್ನೂ ಓದಿ: Cashew Shaped Egg: ಗೋಡಂಬಿ ಆಕಾರದ ಮೊಟ್ಟೆ ಇಟ್ಟ ಕೋಳಿ, ಫೋಟೋಸ್ ವೈರಲ್
ಜನುವಾರುಗಳಿಗಾಗಿ ಸಂಗ್ರಹ ಮಾಡಿದ ಬಣವೆಗಳು ಹಾನಿಯಾಗಿವೆ. ಜಿಲ್ಲಾಡಳಿತ ಹಾನಿಯಾದ ರೈತರ ಬಣವೆಗಳಿಗೆ ಪರಿಹಾರ ನೀಡಿ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಬೇಕು ಅಂತಿದ್ದಾರೆ ಸ್ಥಳೀಯರು. ಬೆಣ್ಣೆ ಹಳ್ಳದ ಸುತ್ತಮುತ್ತಲಿನ ಗ್ರಾಮಗಳಿಗೆ ಜಿಲ್ಲಾಡಳಿತ ಹೈ ಅಲರ್ಟ್ ಘೋಷಣೆ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ