ಬೆಂಗಳೂರು (ಜೂ 27): ಟ್ರಾಫಿಕ್ (Traffic) ಕಿರೀಟ ಹೊತ್ತಿರುವ ಬೆಂಗಳೂರಿಗೆ (Bengaluru) ಮತ್ತೆ ಸೇರ್ಪಡೆಯಾಗಲಿದೆ ಹೊಸ ಮೇಲ್ಸೇತುವೆಗಳು. ಸದ್ಯ ಬೆಂಗಳೂರಿನಲ್ಲಿ ಒಟ್ಟು 45 ಫ್ಲೈ ಓವರ್ ಗಳಿವೆ (Fly Over). ಇದೀಗ ಹೊಸ 4 ಮೇಲ್ಸೇತುವೆಗಳು ಹೊಸದಾಗಿ ನಿರ್ಮಾಣ ಆಗಲಿದೆ. ಹೊಸ 4 ಫ್ಲೈ ಓವರ್ ನಿರ್ಮಾಣಕ್ಕೆ ಸರ್ಕಾರದಿಂದ ಸಿಕ್ತು 404 ಕೋಟಿ ಅನುದಾನ ನೀಡಲಾಗಿದೆ. ನೂತನ ಫ್ಲೈ ಓವರ್ ನಿರ್ಮಾಣಕ್ಕೆ ಬಿಬಿಎಂಪಿ (BBMP) ಸಲ್ಲಿಸಿದ್ದ ಡಿಪಿಆರ್ ಗೆ ಸರ್ಕಾರ ಅಸ್ತು ಎಂದಿದೆ. ಇಟ್ಮಡು ಮೇಲ್ಸೇತುವೆ, ಜೆಸಿ ರಸ್ತೆ ಮೇಲ್ಸೇತುವೆ, ಸಾರಕ್ಕಿ ಮೇಲ್ಸೇತುವೆ, ವೆಸ್ಟ್ ಆಫ್ ಕಾರ್ಡ್ ರೋಡ್ ಹೊಸ ನಿರ್ಮಾಣವಾಗುತ್ತಿರುವ 4 ಫ್ಲೈ ಓವರ್ ಗಳು.
18 ತಿಂಗಳ ಅವಧಿಯಲ್ಲಿ ಕೆಲಸ ಮುಗಿಸಲು ನಿರ್ಧಾರ !
ಸರ್ಕಾರದಿಂದ ಅಮೃತ್ ನಗರೋತ್ಥಾನ ಯೋಜನೆ ಅಡಿಯಲ್ಲಿ ನಾಲ್ಕು ಮೇಲ್ಸೇತುವೆಗಳಿಗೆ ಅನುದಾನ ನೀಡಲಾಗಿದೆ. ಏಕಕಾಲಕ್ಕೆ ನಾಲ್ಕು ಮೇಲ್ಸೇತುವೆಗಳ ಕೆಲಸ ಆರಂಭವಾಗಲಿದ್ದು, 18 ತಿಂಗಳ ಅವಧಿಯಲ್ಲಿ ಪಾಲಿಕೆ ಕೆಲಸ ಮುಗಿಸುವ ಲೆಕ್ಕಾಚಾರ ಹಾಕಿಕೊಂಡಿದೆ. ಸೋಮವಾರ ಬಿಬಿಎಂಪಿ ಯೋಜನಾ ವಿಭಾಗ ಟೆಂಡರ್ ಪ್ರಕ್ರಿಯೆ ಬಗ್ಗೆ ಸಭೆ ನಡೆದಿದ್ದು, ಇದರ ಜೊತೆಗೆ ನಗರದ 7 ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲು ಬಿಬಿಎಂಪಿ ಮುಂದಾಗಿದೆ. ಅಮೃತ ನಗರೋತ್ಥಾನದ ಅಡಿಯಲ್ಲಿ ಒಟ್ಟಾರೆ 404 ಕೋಟಿ ವೆಚ್ಚದಲ್ಲಿ ಹಲವು ರಸ್ತೆಗಳು ಅಭಿವೃದ್ಧಿಯಾಗಲಿದೆ.
ಮೇಲ್ಸೇತುವೆ ಜತೆಗೆ 7 ರಸ್ತೆಗಳ ಅಭಿವೃದ್ಧಿ !
230 ಕೋಟಿ ವೆಚ್ಚದಲ್ಲಿ ಒಟ್ಟು 4 ಮೇಲ್ಸೇತುವೆಗಳ ನಿರ್ಮಾಣಕ್ಕೆ ಇಳಿದಿರುವ ಬಿಬಿಎಂಪಿ, 135 ಕೋಟಿಯಲ್ಲಿ ಆರು ರಸ್ತೆಗಳ ಅಗಲೀಕರಣ ಸೇರಿದಂತಿರುವ ಕಾಮಗಾರಿಗೆ ಮೀಸಲಿಟ್ಟಿದೆ. ಉಳಿದಂತೆ 40 ಕೋಟಿ ಅಧಿಕ ಅನುದಾನದಲ್ಲಿ ರಸ್ತೆ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಆದರೆ ಅಭಿವೃದ್ಧಿ ಪಡಿಸಲಿರುವ ರಸ್ತೆಗಳನ್ನು ಇನ್ನೂ ಪಾಲಿಕೆ ಗುರುತು ಮಾಡಿಲ್ಲ.
ಇದನ್ನೂ ಓದಿ: Siddaramaiah: ಪಾಪದ ಹಣದಲ್ಲಿ ಆಪರೇಷನ್ ಕಮಲ; ಜೆಡಿಎಸ್ಗೆ ನನ್ನನ್ನು ಕಂಡ್ರೆ ಭಯ- ಸಿದ್ದರಾಮಯ್ಯ
ಈ ಪೈಕಿ, ಕೆ.ಆರ್ ಮಾರ್ಕೆಟ್ ಫ್ಲೈ ಓವರ್ ಮಾದರಿಯಲ್ಲಿ ಜೆಸಿ ರಸ್ತೆ ಫ್ಲೈ ಓವರ್ ನಿರ್ಮಾಣವಾಗಲಿದೆ. ಅತಿ ಸಣ್ಣ ಫ್ಲೈ ಓವರ್ ಸಾರಕ್ಕಿ ಫ್ಲೈ ಓವರ್, ಆದರೆ ಅತಿ ಹೆಚ್ಚು ಬಜೆಟ್ ಇದಕ್ಕೆ ಮೀಸಲಿಡಲಾಗಿದೆ. ಅತಿ ಹೆಚ್ಚು ಸಮಯ ಕೂಡ ಸಾರಕ್ಕಿ ಮೇಲ್ಸೇತುವೆಗೆ ತಗುಲುವ ಸಾಧ್ಯತೆ ಇದೆ ಎಂದು ಬಿಬಿಎಂಪಿಯ ಯೋಜನಾ ವಿಭಾಗದ ಚೀಫ್ ಇಂಜಿನಿಯರ್ ಲೋಕೇಶ್ ತಿಳಿಸಿದ್ದಾರೆ.
ಹೊಸ ಮೇಲ್ಸೇತುವೆಗಳು ಯಾವ್ಯಾವುವು.!?
1. ಇಟ್ಮಡು ಜಂಕ್ಷನ್ ನಿಂದ ಕಾಮಾಕ್ಯ ಜಂಕ್ಷನ್ - 40.50 ಕೋಟಿಯಲ್ಲಿ ನಿರ್ಮಾಣ
2. ಬಸವೇಶ್ವರ ನಗರ ದಿಂದ ವೆಸ್ಟ್ ಆಫ್ ಕಾರ್ಡ್ ರೋಡ್ - 30.64 ಕೋಟಿ ವೆಚ್ಚದಲ್ಲಿ ನಿರ್ಮಾಣ
3. ಹಡ್ಸನ್ ಸರ್ಕಲ್ - ಮಿನರ್ವ ಸರ್ಕಲ್ ಮಾರ್ಗವಾಗಿ ಜೆಸಿ ರಸ್ತೆ (ಕಾರ್ಪೋರೇಷನ್ ಸರ್ಕಲ್) - 20.64 ಕೋಟಿಯಲ್ಲಿ ನಿರ್ಮಾಣ
4. ಕನಕಪುರ ರಸ್ತೆಯಿಂದ ಸಾರಕ್ಕಿ ಜಂಕ್ಷನ್ - 130 ಕೋಟಿ ವೆಚ್ಚದಲ್ಲಿ ನಿರ್ಮಾಣ
ಇದನ್ನೂ ಓದಿ: Belagavi: ನಮ್ಮೂರಿನ ಸ್ಮಶಾನಕ್ಕಿಲ್ಲ ದಾರಿ; ಡಿಸಿ ಕಚೇರಿಯಲ್ಲೇ ಮೃತದೇಹ ಅಂತ್ಯಕ್ರಿಯೆಗೆ ಯತ್ನ
ಬೆಂಗಳೂರು: ತಪಾಸಣೆ ನೆಪದಲ್ಲಿ ಹೊರ ರಾಜ್ಯದ ಚಾಲಕರಿಂದ ದಂಡದ ನೆಪದಲ್ಲಿ ರಶೀದಿ ನೀಡದೆ ಅಕ್ರಮವಾಗಿ ಹಣ ಪಡೆದ ಆರೋಪದಡಿ ಹಲಸೂರು ಗೇಟ್ ಸಂಚಾರಿ ಠಾಣೆಯ ಎಎಸ್ಐ ಹಾಗೂ ಹೆಡ್ಕಾನ್ಸ್ಟೇಬಲ್ ಅಮಾನತುಗೊಳಿಸಿ ಟ್ರಾಫಿಕ್ ಕಮಿಷನರ್ ಡಾ. ಬಿ.ಆರ್. ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ.
ರಸ್ತೆಗಳ ಅಭಿವೃದ್ಧಿಗೂ ಆದ್ಯತೆ
ಕೇವಲ ಮೇಲ್ಸೇತುವೆಗಳಿಗೆ ಮಾತ್ರವಲ್ಲದೇ ರಸ್ತೆಗಳ ಅಭಿವೃದ್ಧಿಗೂ ಆದ್ಯತೆ ನೀಡಿರುವ ಸರ್ಕಾರ ಅದಕ್ಕಾಗಿ ಬಿಬಿಎಂಪಿಗೆ ಸುಮಾರು 100 ಕೋಟಿ ಗೂ ಅಧಿಕ ಅನುದಾನ ನೀಡಿದೆ. ಇಷ್ಟು ಹಣ ಟೆಂಡರ್ ಶ್ಯೂರ್ ಮಾರ್ಗಸೂಚಿಯನ್ವಯ ನಗರದ ತರಳಬಾಳು ರಸ್ತೆ, ಕೆಂಪೇಗೌಡ ರಸ್ತೆ, ನಾಗರಭಾವಿ 88ಅಡಿ ರಸ್ತೆ, ಥಣಿಸಂದ್ರ ಹಾಗೂ ಇನ್ನಿತರ ರಸ್ತೆ
ಈ ಕುರಿತುಪ್ರತಿಕ್ರಿಯಿಸಿರುವ ಪಾಲಿಕೆ ಅಧಿಕಾರಿಯೊಬ್ಬರು, ಬಿಬಿಎಂಪಿ ರಸ್ತೆಗಳ ಅಭಿವೃದ್ಧಿಗೆಂದೆ ಹೆಚ್ಚುವರಿಯಾಗಿ 50ಕೋಟಿ ರು. ಅನುದಾನ ಇಟ್ಟಿದೆ. ಆದರೆ, ಯಾವ ರಸ್ತೆಗಳನ್ನು ಈವರೆಗೂ ಗುರುತಿಸಿಲ್ಲ. ಅಲ್ಲದೇ ಈ ಹಣ ಪಾದಚಾರಿ ಮಾರ್ಗದ ಅಭಿವೃದ್ಧಿ, ಜಂಕ್ಷನ್ ಗಳ ಸುಂದರೀಕರಣಕ್ಕೆ ಬಳಸಲಾಗುವುದು ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ