ಹಾಸನ: ತಹಶೀಲ್ದಾರರ ಖಾಸಗಿ ಕಾರ್ಯಕ್ರಮ; ವಿಡಿಯೋ ಮಾಡಿದ ನಾಲ್ವರು ಬಿಜೆಪಿ ಕಾರ್ಯಕರ್ತರ ಬಂಧನ

ಚುನಾವಣೆ ಮುಗಿದ ಬಳಿಕ ಗೆಟ್ ಟುಗೆದರ್ ಪಾರ್ಟಿ ಮಾಡುತ್ತಿದ್ದೆವು. ಯಾರೋ ವಿಡಿಯೋ ಮಾಡಲು ಬಂದು ನಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆ ಮಾಡಿದರು. ಐದಾರು ಮಂದಿ ನಮ್ಮ ಮೇಲೆ ಹಲ್ಲೆಗೆ ಯತ್ನಿಸಿದರು. ಪೊಲೀಸರಿಗೆ ದೂರು ನೀಡಿ ಅವರನ್ನು ಬಂಧಿಸಿಸಿದ್ದೇನೆ. ನಾಲ್ವರ ವಿರುದ್ಧ ಎಫ್​ಐಆರ್ ದಾಖಲಿಸಿದ್ದೇನೆ ಎಂದು ಹೊಳೆನರಸೀಪುರ ತಹಶೀಲ್ದಾರ್ ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ.

ಹೊಳೆನರಸೀಪುರದ ಐಬಿ ಮುಂದೆ ಇದ್ದ ತಹಸೀಲ್ದಾರ್ ಅವರ ಕಾರು

ಹೊಳೆನರಸೀಪುರದ ಐಬಿ ಮುಂದೆ ಇದ್ದ ತಹಸೀಲ್ದಾರ್ ಅವರ ಕಾರು

 • Share this:
  ಹಾಸನ(ಅ. 05): ಹೊಳೆನರಸೀಪುರದ ಐಬಿಯಲ್ಲಿ ಹಾಸನ ಜಿಲ್ಲೆಯ ಆರು ತಹಶೀಲ್ದಾರರು ಒಟ್ಟು ಸೇರಿ ಆಯೋಜಿಸಿದ್ದ ಗೆಟ್ ಟುಗೆದರ್ ಪಾರ್ಟಿಯಲ್ಲಿ ಗಲಾಟೆ ಮಾಡಿದ ಆರೋಪದ ಮೇಲೆ ನಾಲ್ವರು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಬಿಜೆಪಿ ಹಾಸನ ಜಿಲ್ಲಾಧ್ಯಕ್ಷ ನಾಗೇಶ್ ಅವರೂ ಇದ್ಧಾರೆ. ರಾಮಣ್ಣ, ಸುನೀಲ್ ಮತ್ತು ಅಶೋಕ್ ಇತರ ಬಂಧಿತರು.

  ಹೊಳೆನರಸೀಉರ ತಹಶೀಲ್ದಾರ್ ಶ್ರೀನಿವಾಸ್ ಅವರು ತಮ್ಮ ಜಿಲ್ಲೆಯ ಸಹೋದ್ಯೋಗಿ ತಹಶೀಲ್ದಾರ್​ಗಳನ್ನು ಸೇರಿಸಿ ಪಾರ್ಟಿ ಆಯೋಜಿಸಿದ್ದರು. ಹಾಸನ, ಸಕಲೇಶಪುರ, ಅರಸೀಕೆರೆ, ಚನ್ನರಾಯಪಟ್ಟಣ ಮತ್ತು ಅರಕಲಗೂಡು ತಾಲೂಕುಗಳ ತಹಶೀಲ್ದಾರ್​ಗಳು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಪಾರ್ಟಿಯಲ್ಲಿ ಮದ್ಯಪಾನ, ಮಾಂಸಾಹಾರವೂ ಒಳಗೊಂಡಿದ್ದವು. ಖಾಸಗಿಯಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದ ವಿಡಿಯೋ ಮಾಡಲು ಬಿಜೆಪಿ ಕಾರ್ಯಕರ್ತರು ಯತ್ನಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಹಶೀಲ್ದಾರರು ಸಲ್ಲಿಸಿದ ದೂರಿನ ಮೇರೆಗೆ ಹೊಳೆನರಸೀಪುರ ಪೊಲೀಸರು ನಾಲ್ವರು ಬಿಜೆಪಿ ಕಾರ್ಯಕರ್ತರನ್ನು ಬಂಧನಕ್ಕೊಳಪಡಿಸಿದ್ದಾರೆ.

  ಇದನ್ನೂ ಓದಿ: ಯುವ ದಸರಾ ವೇದಿಕೆಯಲ್ಲೇ ನಿವೇದಿತಾ-ಚಂದನ್ ಶೆಟ್ಟಿ ನಿಶ್ಚಿತಾರ್ಥ; ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳ ಸುರಿಮಳೆ; ಉಸ್ತುವಾರಿ ಸೋಮಣ್ಣಗೂ ತರಾಟೆ

  ಚುನಾವಣೆ ಮುಗಿದ ಬಳಿಕ ಗೆಟ್ ಟುಗೆದರ್ ಪಾರ್ಟಿ ಮಾಡುತ್ತಿದ್ದೆವು. ಯಾರೋ ವಿಡಿಯೋ ಮಾಡಲು ಬಂದು ನಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆ ಮಾಡಿದರು. ಐದಾರು ಮಂದಿ ನಮ್ಮ ಮೇಲೆ ಹಲ್ಲೆಗೆ ಯತ್ನಿಸಿದರು. ಪೊಲೀಸರಿಗೆ ದೂರು ನೀಡಿ ಅವರನ್ನು ಬಂಧಿಸಿಸಿದ್ದೇನೆ. ನಾಲ್ವರ ವಿರುದ್ಧ ಎಫ್​ಐಆರ್ ದಾಖಲಿಸಿದ್ದೇನೆ ಎಂದು ಹೊಳೆನರಸೀಪುರ ತಹಶೀಲ್ದಾರ್ ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ.

  (ವರದಿ: ಡಿಎಂಜಿ ಹಳ್ಳಿ ಅಶೋಕ್)

  ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
  First published: