Bengaluru ನರ್ಸ್ ಅತ್ಯಾಚಾರ ಕೇಸ್‌ನಲ್ಲಿ ಅರೆಸ್ಟ್ ಆದವರು ನಾಲ್ವರು; ಅದರಲ್ಲಿ ಒಬ್ಬ ಪೊಲೀಸನ ಮಗ!

ಬೆಂಗಳೂರಿನಲ್ಲಿ ನರ್ಸ್ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ನಾಲ್ವರನ್ನು ಬಂಧಿಸಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇನ್ನು ಬಂಧಿತರ ಪೈಕಿ ಓರ್ವ ಪೊಲೀಸರೊಬ್ಬರ ಪುತ್ರನಾಗಿದ್ದಾನೆ.

ಬಂಧಿತ ಆರೋಪಿಗಳು

ಬಂಧಿತ ಆರೋಪಿಗಳು

 • Share this:
  ಕೆಲವು ವರ್ಷಗಳ ಹಿಂದೆ ಹೆಚ್ಚಾದ ಈ ಸಾಮೂಹಿಕ ಅತ್ಯಾಚಾರದ ಪ್ರಕರಣಗಳು (Case) ಇತ್ತೀಚೆಗೆ ಸಂಪೂರ್ಣವಾಗಿ ನಿಯಂತ್ರಣದಲ್ಲಿವೆ (Control) ಎಂದು ಪೊಲೀಸರು (Police) ನಿಟ್ಟುಸಿರು ಬಿಡುತ್ತಿರುವಾಗಲೇ ಬೆಂಗಳೂರಿನಲ್ಲಿರುವ (Bengaluru) ಖಾಸಗಿ ಆಸ್ಪತ್ರೆಯೊಂದರಲ್ಲಿ (Privet Hospital) ಕೆಲಸ ಮಾಡುವಂತಹ ಒಬ್ಬ ನರ್ಸ್ (Nurse) ಮೇಲೆ ಮಾರ್ಚ್ 24 ರಂದು ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬ ಸುದ್ದಿಯು ನಗರದಲ್ಲಿ ಕಾಡ್ಗಿಚ್ಚಿನಂತೆ ಹರಡಿತ್ತು. ಈ ಸಾಮೂಹಿಕ ಅತ್ಯಾಚಾರ ಯಾರು ಎಸಗಿರಬಹುದು ಎಂದು ಕಂಡು ಹಿಡಿಯಲು ಪೊಲೀಸರು ತಮ್ಮ ತನಿಖೆಯನ್ನು ಚುರುಕುಗೊಳಿಸಿದ್ದಾಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಾಲ್ವರನ್ನು ಬಂಧಿಸಿದ್ದಾರೆ (Arrest).

   ಬಂಧಿತರಲ್ಲಿ ಓರ್ವ ಪೊಲೀಸ್ ಅಧಿಕಾರಿ ಪುತ್ರ!

  ಈ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲ್ಪಟ್ಟಂತಹ ಆರೋಪಿಗಳಲ್ಲಿ ಒಬ್ಬನಾದ ದೇವ್ ಸರೋಹಾ ಎಂಬಾತ ದೆಹಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಸುಶೀಲ್ ಸರೋಹಾ ಅವರ ಮಗ ಎಂದು ತಿಳಿದುಬಂದಿದೆ. ದೇವ್ ಸರೋಹಾ ಒಬ್ಬ ಈಜು ತರಬೇತುದಾರನಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸರೋಹಾ ಹೊರತುಪಡಿಸಿ, ಬಂಧಿಸಲ್ಪಟ್ಟಂತಹ ಇತರೆ ಆರೋಪಿಗಳನ್ನು ರಜತ್ ಸುರೇಶ್, ಯೋಗೇಶ್ ಕುಮಾರ್ ದಲಾಲ್, ಶಿವರಾಣಾ ಎಂದು ಗುರುತಿಸಲಾಗಿದೆ.

  ಮನೆಯಲ್ಲೇ ನಡೀತಾ ಸಾಮೂಹಿಕ ಅತ್ಯಾಚಾರ?

  ಇವರೆಲ್ಲರೂ 20 ವರ್ಷ ವಯಸ್ಸಿನ ಆಸುಪಾಸಿನವರಾಗಿದ್ದಾರೆ ಮತ್ತು ಇವರೆಲ್ಲರೂ ದೆಹಲಿಯ ಹತ್ತಿರವಿರುವ ಗುರುಗ್ರಾಮದಿಂದ ಬಂದವರು ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿನ ಸಂಜಯ ನಗರದ ಆರ್‌ಎಂವಿ 2ನೇ ಹಂತದಲ್ಲಿರುವ ರಜತ್ ಅವರ ಮನೆಯಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ ಎಂದು ಸುದ್ದಿ ಮಧ್ಯಮವೊಂದು ವರದಿ ಮಾಡಿತ್ತು.

  ಇದನ್ನೂ ಓದಿ: OMG... "45 ವರ್ಷದ ವರ ಬೇಕಂತೆ ಈ 23ರ ಚೆಲುವೆಗೆ"! ಹೀಗಂತ Post ಮಾಡಿದವನಿಗೆ ಈಗ 'ಮಾವನ ಮನೆ'ಯಲ್ಲಿ ಆತಿಥ್ಯ!

  ಈಜು ತರಬೇತುದಾರರ ಸಭೆಗಾಗಿ ಬಂದಿದ್ದ ಆರೋಪಿಗಳು

  ರಜತ್ ಸದಾಶಿವ ನಗರದ ಈಜುಕೊಳವೊಂದರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಉಳಿದವರೆಲ್ಲರೂ ಗುರುಗ್ರಾಮದಲ್ಲಿ ಈಜು ತರಬೇತುದಾರರಾಗಿದ್ದಾರೆ. ತರಬೇತುದಾರರ ಸಭೆಯಲ್ಲಿ ಭಾಗವಹಿಸಲು ಅವರು ನಗರಕ್ಕೆ ಬಂದಿದ್ದರು ಎಂದು ಹೇಳಲಾಗುತ್ತಿದೆ.

  ಡೇಟಿಂಗ್ ಆ್ಯಪ್‌ನಲ್ಲಿ ಸಂತ್ರಸ್ತೆಗೆ ಪರಿಚಯ

  ಮೂಲಗಳ ಪ್ರಕಾರ, ಸಂತ್ರಸ್ತೆ ಮತ್ತು ರಜತ್ ಡೇಟಿಂಗ್ ಅಪ್ಲಿಕೇಶನ್ ನಲ್ಲಿ ಪರಸ್ಪರ ಭೇಟಿ ಆಗಿದ್ದು, ರಜತ್ ಅವರು ಆ ಹುಡುಗಿಯೊಂದಿಗೆ ಸ್ನೇಹ ಬೆಳೆಸಿದ್ದಾರೆ ಮತ್ತು ಅವಳನ್ನು ಒಂದು ದಿನ ರೆಸ್ಟೋರೆಂಟ್ ಗೆ ಊಟಕ್ಕೆ ಆಹ್ವಾನಿಸಿದ್ದಾರೆ.

  ಆ ಹುಡುಗಿ ತನ್ನ ಸ್ನೇಹಿತ ಕರೆದಿದ್ದಾನೆ ಎಂದು ರೆಸ್ಟೋರೆಂಟ್ ಗೆ ಊಟಕ್ಕೆಂದು ಬಂದಾಗ, ರಜತ್ ಹಠಾತ್ತನೆ ಬೇರೆಯ ಯೋಜನೆಯನ್ನು ಹಾಕಿ ಕೊಂಡಿದ್ದಾನೆ ಮತ್ತು ಅವನು ತನ್ನ ಮನೆಗೆ ಹೋಗಿ ಊಟ ಮಾಡೋಣ ಎಂದು ಆ ಹುಡುಗಿಗೆ ಹೇಳಿದ್ದಾನೆ. ತನ್ನ ಮೂವರು ಸ್ನೇಹಿತರು ಸಹ ತನ್ನೊಂದಿಗೆ ಮನೆಯಲ್ಲಿ ಉಳಿದು ಕೊಂಡಿದ್ದಾರೆ ಎಂದು ಅವನು ತನ್ನ ಸ್ನೇಹಿತೆಗೆ ತಿಳಿಸಲಿಲ್ಲ.

  ಮನೆಗೆ ಕರೆದುಕೊಂಡು ಬಂದು ಅತ್ಯಾಚಾರ

  ಆಕೆಯನ್ನು ಮನೆಗೆ ಕರೆದುಕೊಂಡು ಬಂದು ಆಕೆಯ ಮೇಲೆ ಈ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ನಂತರ ಆ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ ಮತ್ತು ಮಾರ್ಚ್ 25 ರೊಳಗೆ ಪೊಲೀಸರು ಈ ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.

  ಬೆಂಗಳೂರಲ್ಲೇ ನೆಲೆಸಿದ್ದ ಪ್ರಮುಖ ಆರೋಪಿ

  ತನಿಖೆ ಆರೋಪಿ ರಜತ್ ಅವರನ್ನು ಹೊರತುಪಡಿಸಿ, ಇತರ ಎಲ್ಲಾ ಆರೋಪಿಗಳು ಫೆಬ್ರವರಿಯಲ್ಲಿ ಬೆಂಗಳೂರಿಗೆ ಆಗಮಿಸಿದ್ದರು ಎಂದು ಹೇಳಲಾಗುತ್ತಿದೆ ಮತ್ತು ರಜತ್ ಒಂದೆರಡು ವರ್ಷಗಳಿಂದ ಬೆಂಗಳೂರು ನಗರದಲ್ಲಿಯೇ ವಾಸಿಸುತ್ತಿದ್ದಾನೆ ಎಂದು ಹೇಳಲಾಗುತ್ತಿದೆ.

  ಅತ್ಯಾಚಾರ ಆಗಿರುವುದನ್ನು ದೃಢಪಡಿಸಿದ ರಿಪೋರ್ಟ್

  ವರದಿಗಳ ಪ್ರಕಾರ, ಈ ಸಂತ್ರಸ್ತೆ ಮೂಲತಃ ಪಶ್ಚಿಮ ಬಂಗಾಳದಿಂದ ಬಂದವರಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಸಂತ್ರಸ್ತೆ ಶುಕ್ರವಾರ ಮುಂಜಾನೆ ತನ್ನ ಸ್ನೇಹಿತರಿಗೆ ಕರೆ ಮಾಡುವ ಮೂಲಕ ಸಹಾಯವನ್ನು ಕೋರಿದಳು ಮತ್ತು ಅವರು ಮನೆಗೆ ಬಂದ ನಂತರ ಅವರನ್ನು ರಕ್ಷಿಸಲಾಯಿತು. ನಂತರ ಅವರು ಸಂಜಯನಗರ ಪೊಲೀಸರಿಗೆ ದೂರು ನೀಡಿದ್ದರು. ವರದಿಯ ಪ್ರಕಾರ, ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯು ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರವನ್ನು ದೃಢಪಡಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

  ಇದನ್ನೂ ಓದಿ: Crime News: ಕನಸಲ್ಲಿ ಧರ್ಮನಿಂದನೆ ಮಾಡಿದ್ದಕ್ಕೆ ಸಹುದ್ಯೋಗಿಯನ್ನು ಕ್ರೂರವಾಗಿ ಕೊಂದ ಮೂವರು ಶಿಕ್ಷಕಿಯರು ಅರೆಸ್ಟ್

  ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376 ಡಿ (ಸಾಮೂಹಿಕ ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.
  Published by:Annappa Achari
  First published: