• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Cyber Crime: ಪೊಲೀಸರನ್ನೂ ಬಿಡದ ವಂಚಕರು; ಸೈಬರ್ ವಂಚನೆಯಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ

Cyber Crime: ಪೊಲೀಸರನ್ನೂ ಬಿಡದ ವಂಚಕರು; ಸೈಬರ್ ವಂಚನೆಯಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸೈಬರ್ ವಂಚಕ ಕಳುಹಿಸಿದ ಲಿಂಕ್ ಓಪನ್ ಮಾಡುತ್ತಿದ್ದಂತೆ ಖಾತೆಯಲ್ಲಿದ್ದ 73 ಸಾವಿರ ರೂಪಾಯಿ ಹಣ ಮಾಯ ಆಗಿದೆ. ಭದ್ರಯ್ಯ ಅವರು ತಮ್ಮ ಎರಡು ಬ್ಯಾಂಕ್ ಖಾತೆಗಳಿಗೆ ಒಂದೇ ಮೊಬೈಲ್ ನೀಡಿದ್ದರು.

  • Share this:

ಬೆಂಗಳೂರು: ದಿನದಿಂದ ದಿನಕ್ಕೆ ಸೈಬರ್ ಅಪರಾಧಗಳ (Cyber Crime Case) ಸಂಖ್ಯೆ ಹೆಚ್ಚಾಗುತ್ತಿವೆ. ದೇಶದಲ್ಲಿ ಸೈಬರ್ ಅಪರಾಧಗಳ ಸಂಖ್ಯೆಯಲ್ಲಿ ಕರ್ನಾಟಕ (Karnataka) ಮೂರನೇ ಸ್ಥಾನದಲ್ಲಿದೆ. ಸೈಬರ್ ವಂಚನೆಯಲ್ಲಿ ಜನರು ದಿನಕ್ಕೆ ಒಂದು ಕೋಟಿಗೂ ಅಧಿಕ ಹಣ ಕಳೆದುಕೊಳ್ಳುತ್ತಿದ್ದಾರೆ. 2019-23ರ ಜನವರಿ ಅಂತ್ಯದವರೆಗಿನ ಮಾಹಿತಿಯನ್ನು ರಾಜ್ಯ ಪೊಲೀಸ್ ಇಲಾಖೆ (Karnataka Police) ನೀಡಿದೆ. ವಿಧಾನಪರಿಷತ್​ ನಲ್ಲಿ (Vidhana Parishat) ಈ ಬಗ್ಗೆ ಅಧಿಕೃತ ದಾಖಲೆಗಳನ್ನು ನೀಡಲಾಗಿದೆ. ಕಳೆದ ವರ್ಷ 363 ಕೋಟಿ ರೂಪಾಯಿಗೂ ಅಧಿಕ ವಂಚನೆ (Cheating) ಆಗಿದೆ ಎಂದು ರಾಜ್ಯ ಪೊಲೀಸ್ ಇಲಾಖೆ ಹೇಳಿದೆ. ರಾಜಧಾನಿ ಬೆಂಗಳೂರಿನ ಜನತೆಯೇ ಹೆಚ್ಚು ಸೈಬರ್ ವಂಚನೆಗೆ ಒಳಗಾಗಿದ್ದಾರೆ. ಬೆಂಗಳೂರು ಹೊರತುಪಡಿಸಿ ಮಂಡ್ಯ, ರಾಮನಗರ, ಮೈಸೂರು ಭಾಗದಲ್ಲಿ ಸೈಬರ್ ಪ್ರಕರಣಗಳು ದಾಖಲಾಗಿವೆ.


ಇದೀಗ ಬೆಂಗಳೂರಿನ ಪೊಲೀಸರೊಬ್ಬರು ಸೈಬರ್ ವಂಚನೆಗೆ ಒಳಗಾಗಿದ್ದು, 73 ಸಾವಿರ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಸಿಎಆರ್ ಪೊಲೀಸ್ ಪೇದೆ ಭದ್ರಯ್ಯ ಎಂಬವರು ಹಣ ಕಳೆದುಕೊಂಡಿದ್ದಾರೆ. ಈ ಸಂಬಂಧ ಆಗ್ನೇಯ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ಲಿಂಕ್ ಮೇಲೆ ಕ್ಲಿಕ್ ಮಾಡ್ತಿದ್ದಂತೆ ಹಣ ಮಾಯ


ಭದ್ರಯ್ಯ ಅವರಿಗೆ ಕರೆ ಮಾಡಿದ ವ್ಯಕ್ತಿಯೋರ್ವ ತನ್ನನ್ನು ಎಸ್​ಬಿಐ ಕಸ್ಟಮರ್ ಕೇರ್ ಸಿಬ್ಬಂದಿ ಎಂದು ಹೇಳಿಕೊಂಡಿದ್ದಾನೆ. ನಿಮ್ಮ ಬ್ಯಾಂಕ್ ಖಾತೆ ನಿಷ್ಕ್ರಿಯಗೊಂಡಿದ್ದು, ನಿಮ್ಮ ಪ್ಯಾನ್​ ಕಾರ್ಡ್ ನಂಬರ್ ಅಪ್​​ಡೇಟ್ ಮಾಡಬೇಕು ಎಂದು ಹೇಳಿದ್ದಾನೆ.


3rd place for karnataka in cyber crime mrq
ಸಾಂದರ್ಭಿಕ ಚಿತ್ರ


ಸೈಬರ್ ವಂಚಕ ಕಳುಹಿಸಿದ ಲಿಂಕ್ ಓಪನ್ ಮಾಡುತ್ತಿದ್ದಂತೆ ಖಾತೆಯಲ್ಲಿದ್ದ 73 ಸಾವಿರ ರೂಪಾಯಿ ಹಣ ಮಾಯ ಆಗಿದೆ. ಭದ್ರಯ್ಯ ಅವರು ತಮ್ಮ ಎರಡು ಬ್ಯಾಂಕ್ ಖಾತೆಗಳಿಗೆ ಒಂದೇ ಮೊಬೈಲ್ ನೀಡಿದ್ದರು.


ಹಣ ಮರಳಿ ಸಿಗುತ್ತಾ?


ಸೈಬರ್ ವಂಚಕರು ಉತ್ತರ ಭಾರತ ಮೂಲದವರೇ ಹೆಚ್ಚಾಗಿರುತ್ತಾರೆ. ಎಲ್ಲಾ ಹಂತದಲ್ಲಿಯೂ ತಮ್ಮ ಗುರುತನ್ನು ವಂಚಕರು ಮರೆ ಮಾಡಿರುತ್ತಾರೆ. ಹೀಗಾಗಿ ಅವರನ್ನು ಪತ್ತೆ ಹಚ್ಚೋದು ಕಷ್ಟದ ಕೆಲಸ ಆಗುತ್ತದೆ. ಕಳೆದ ವರ್ಷ ಪೊಲೀಸರು 116 ಕೋಟಿ ರೂಪಾಯಿ ರಿಕವರಿ ಮಾಡಿದ್ದಾರೆ. ಇನ್ನುಳಿದ ಹಣ ಮರಳಿಸೋದು ಕಷ್ಟ ಎಂದು ಪೊಲೀಸರು ಹೇಳುತ್ತಾರೆ.




ವಿದೇಶಗಳಿಂದಲೇ ಹಣದ ವಂಚನೆ


ರಾಜಸ್ಥಾನ, ಜಾರ್ಖಂಡ್, ಹರಿಯಾಣ ಸೇರಿದಂತೆ ಹೊರದೇಶಗಳಲ್ಲಿ ಕುಳಿತು ವಂಚನೆ ಎಸಗುತ್ತಾರೆ. ವಂಚಕರು ಬೇರೊಬ್ಬರ ಖಾತೆಗಳ ಮೂಲಕ ವಂಚನೆ ಎಸಗುತ್ತಾರೆ. ವಂಚನೆ ಬಳಿಕ ಹಣ ಬೇರೆಯವ ಖಾತೆಗೆ ವರ್ಗಾವಣೆ ಆಗುತ್ತದೆ. ಮೊದಲೇ ಆ ಖಾತೆಯನ್ನು ಹ್ಯಾಕ್ ಮಾಡಿದ್ದರಿಂದ ಕೆಲವೇ ಕ್ಷಣಗಳಲ್ಲಿ ಹಣವನ್ನು ಮತ್ತೊಂದು ಖಾತೆಗೆ ವರ್ಗಾವಣೆ ಆಗಿರುತ್ತದೆ. ಇದರಿಂದ ಇವರನ್ನ ಟ್ರೇಸ್ ಮಾಡೋದು ಅಷ್ಟು ಸುಲಭ ಆಗಿರಲ್ಲ.


ಇದನ್ನೂ ಓದಿ:  Parameshwara: ಸೈಬರ್ ಕ್ರೈಂ ಪೊಲೀಸ್​ ಠಾಣೆ ಮೆಟ್ಟಿಲೇರಿದ ಮಾಜಿ ಡಿಸಿಎಂ ಜಿ ಪರಮೇಶ್ವರ್​​ ಆಪ್ತ; ಕಾರಣವೇನು?


ಸೈಬರ್ ಕ್ರೈಂ ಅಂಕಿ-ಅಂಶ


2020: 10,738


2021: 8,132


2022: 12,551


2023: 1,325 (ಜ.31ರ ಅಂತ್ಯಕ್ಕೆ)


ಸೈಬರ್ ವಂಚನೆಯಲ್ಲಿ ಕಳೆದ ಹಣ ಮತ್ತು ಜಪ್ತಿ ಮಾಡಿದ ಹಣ ವಿವರ ಕೋಟಿ ರೂಪಾಯಿಗಳಲ್ಲಿ

ವರ್ಷಕಳೆದ ಹಣಜಪ್ತಿ ಮಾಡಿದ ಹಣ
2020105,99,55,35714,83,49,627
2021145,05,85,81025,96,33,607
2022363,11,54,443363,11,54,443
202336,63,82,7971,03,44,045


ಸೈಬರ್ ಪ್ರಕರಣಗಳ ತನಿಖೆ ಹೇಗಿರುತ್ತೆ?


ಸೈಬರ್ ಕ್ರೈಂ ಅಪರಾಧಗಳ ತನಿಖೆ ಶೇ.75ರಷ್ಟು ತನಿಖಾ ಪ್ರಕ್ರಿಯೆ ತಾಂತ್ರಿಕ ನೈಪುಣ್ಯದಿಂದ ಕೂಡಿರುತ್ತದೆ. ಆರೋಪಿಗಳು ಬಳಸಿದ ಮೊಬೈಲ್ ನಂಬರ್, ಐಪಿ ವಿಳಾಸ, ನೆಟ್​ವರ್ಕಿಂಗ್, ಲೋಕೆಶನ್ ಟ್ರೇಸ್, ಬ್ಯಾಂಕ್ ಖಾತೆಗಳ ವಿವರಗಳ ಆಧಾರದ ಮೇಲೆ ತನಿಖೆ ಸಾಗುತ್ತದೆ. ಆದರೆ ಬಹುತೇಕ ಪ್ರಕರಣಗಳಲ್ಲಿ ಈ ಎಲ್ಲಾ ದಾಖಲೆಗಳು ನಕಲಿ ಆಗಿರುತ್ತವೆ. ಇದರಿಂದ ಪೊಲೀಸರಿಗೆ ನೈಜ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ವಿಳಂಬವಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ಹೇಳುತ್ತಾರೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು