ಬಾದಾಮಿಯ ನೆರೆ ಪೀಡಿತ ಗ್ರಾಮವನ್ನು ದತ್ತು ಪಡೆದ ಥರ್ಡ್​ ಕ್ಲಾಸ್​​ ಚಿತ್ರ ತಂಡ

ನಟಿ ರೂಪಿಕಾ, ನಟ ಜಗದೀಶ್ ಸೇರಿದಂತೆ ಚಿತ್ರ ತಂಡ ಗ್ರಾಮಸ್ಥರಿಗೆ ರಾತ್ರಿ ಊಟಕ್ಕೆಂದು ಬಾಗಲಕೋಟೆ ನಗರದ ಮಾರುಕಟ್ಟೆಯಲ್ಲಿ ಸ್ವತಃ ತರಕಾರಿ, ದವಸಧಾನ್ಯ ಖರೀದಿಸಿ ಚಿತ್ರ ತಂಡ ಅಡುಗೆ ತಯಾರಿಸಿ ಉಣಬಡಿಸಿದೆ.

ನೆರೆ ಪೀಡಿತ ಗ್ರಾಮ ಕರ್ಲಕೊಪ್ಪ

ನೆರೆ ಪೀಡಿತ ಗ್ರಾಮ ಕರ್ಲಕೊಪ್ಪ

  • Share this:
ಬಾಗಲಕೋಟೆ(ಜ.20) : ಸ್ಯಾಂಡಲ್​​​​ವುಡ್​​​ನ ಥರ್ಡ್​ ಕ್ಲಾಸ್​​ ಚಿತ್ರ ತಂಡವು ಬಾದಾಮಿ ತಾಲೂಕಿನ ನೆರೆ ಪೀಡಿತ ಕರ್ಲ ಕೊಪ್ಪ ಗ್ರಾಮವನ್ನುದತ್ತು ಪಡೆದಿದೆ.ನೆರೆಪೀಡಿತ ಸಂತ್ರಸ್ತರ ಸಮಸ್ಯೆ ಅರಿತುಕೊಳ್ಳಲು ಚಿತ್ರತಂಡ ಗ್ರಾಮ ವಾಸ್ತವ್ಯ ಹೂಡಿದೆ.

ಕರ್ಲಕೊಪ್ಪ ಗ್ರಾಮ 2005, 2009 ಹಾಗೂ 2019ರಲ್ಲಿ ಮಲಪ್ರಭಾ ನದಿಯ ಪ್ರವಾಹಕ್ಕೆ ಸಿಲುಕಿ ತತ್ತರಿಸಿ ಹೋಗಿತ್ತು, 2019ರಲ್ಲಿನ ಪ್ರವಾಹಕ್ಕೆ ಇಡೀ ಗ್ರಾಮವೇ ಮುಳುಗಿ ಆಸ್ತಿ-ಪಾಸ್ತಿ, ಶಾಲೆ ಕೊಠಡಿ ಹಾನಿಯಾಗಿವೆ. ಇದೀಗ ಥರ್ಡ್​​ ಕ್ಲಾಸ್ ಸಿನಿಮಾ ಕರ್ಲಕೊಪ್ಪ ಗ್ರಾಮ ದತ್ತು ಪಡೆದು ಶಾಲಾ ಕೊಠಡಿ ನಿರ್ಮಿಸಲು ನಿರ್ಧರಿಸಿದೆ. ಗ್ರಾಮ ದತ್ತು ಹಿನ್ನೆಲೆಯಲ್ಲಿ ಚಿತ್ರತಂಡ ಯುವ ನಟ ಜಗದೀಶ್ ಮತ್ತು ನಟಿ ರೂಪಿಕಾ ಅವರ ನೇತೃತ್ವದಲ್ಲಿ ಗ್ರಾಮ ವಾಸ್ತವ್ಯ ನಿಮಿತ್ತ ಭೇಟಿ ನೀಡಿ,ಸಂತ್ರಸ್ತರ ಸಮಸ್ಯೆಯನ್ನು ಆಲಿಸಿದರು.

ನಟಿ ರೂಪಿಕಾ ಗ್ರಾಮದ ಮಕ್ಕಳೊಂದಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಇನ್ನು ಗ್ರಾಮದ ಮಹಿಳೆಯರೊಂದಿಗೆ ಚರ್ಚೆ ನಡೆಸಿದರು. ಇತ್ತ ಮಕ್ಕಳಿಗೆ, ಗ್ರಾಮಸ್ಥರಿಗೆ ಉಣಬಡಿಸಿ ತಾವು ಸಹ ಊಟ ಮಾಡಿದ್ರು‌. ಬಳಿಕ ಶಾಲಾ ಕೊಠಡಿಯಲ್ಲಿ ಊಟ ಮಾಡಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದರು.

3RD CLASS CINEMA 1
ಗ್ರಾಮದಲ್ಲಿ ವಾಸ್ಯವ್ಯ ಮಾಡಿದ ಚಿತ್ರತಂಡ


ಕರ್ಲಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಂದು ಚಿತ್ರತಂಡದಿಂದ ಮೂರು ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಿದ್ದು, 1 ರಿಂದ7ನೇ ತರಗತಿಯವರೆಗೆ 76 ವಿದ್ಯಾರ್ಥಿಗಳು ಅಧ್ಯಾಯನ ಮಾಡ್ತಿದ್ದಾರೆ. ಪ್ರವಾಹಕ್ಕೆ 7ಕೊಠಡಿ ಪೈಕಿ 5 ಕೊಠಡಿ ಶಿಥಿಲವಾಗಿದ್ದು, ವಿದ್ಯಾರ್ಥಿಗಳು ತಾತ್ಕಾಲಿಕ ಶೆಡ್ ನಲ್ಲಿ ಕಲಿಕೆ ಮುಂದುವರೆಸಿದ್ದಾರೆ. ಇದೀಗ ಥರ್ಡ್ ಕ್ಲಾಸ್ ಚಿತ್ರ ತಂಡ 3 ನೂತನ ಕೊಠಡಿ ನಿರ್ಮಿಸಲು ಮುಂದಾಗಿದೆ. ಇನ್ನು ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯ ಶಿಥಿಲಗೊಂಡಿದ್ದ ಶಾಲಾ ಕೊಠಡಿಗಳನ್ನು ರಿಪೇರಿ ಮಾಡಿದೆ. ಥರ್ಡ್ ಕ್ಲಾಸ್ ಸಿನಿಮಾ ಬಿಡುಗಡೆಗೂ ಮುನ್ನ ನೆರೆ ಸಂತ್ರಸ್ತರ ನೆರವಿಗೆ ಮುಂದಾಗಿದೆ.

ಇದನ್ನೂ ಓದಿ : ಅಖಿಲ ಭಾರತ ಸಾಹಿತ್ಯ ಸಮ್ಮೇಳನ ವೇದಿಕೆಗೆ ಭೂಮಿ ಪೂಜೆ - ಶಾಸಕರಿಂದ ಒಂದು ತಿಂಗಳ ವೇತನದ ನೆರವು ಘೋಷಣೆ

ಇನ್ನು ನಟಿ ರೂಪಿಕಾ, ನಟ ಜಗದೀಶ್ ಸೇರಿದಂತೆ ಚಿತ್ರ ತಂಡ ಗ್ರಾಮಸ್ಥರಿಗೆ ರಾತ್ರಿ ಊಟಕ್ಕೆಂದು ಬಾಗಲಕೋಟೆ ನಗರದ ಮಾರುಕಟ್ಟೆಯಲ್ಲಿ ಸ್ವತಃ ತರಕಾರಿ, ದವಸಧಾನ್ಯ ಖರೀದಿಸಿ ಚಿತ್ರ ತಂಡ ಅಡುಗೆ ತಯಾರಿಸಿ ಉಣಬಡಿಸಿದೆ.

ಥರ್ಡ್​ ಕ್ಲಾಸ್​​ ಚಿತ್ರದ ಪೊಸ್ಟರ್​


ನೆರೆ ಪೀಡಿತ ಕರ್ಲಕೊಪ್ಪ ಗ್ರಾಮ ದತ್ತು ಪಡೆದಿರೋದಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಚಿತ್ರತಂಡ ಗ್ರಾಮ ವಾಸ್ತವ್ಯ, ಸಾಮಾಜಿಕ ಕಾರ್ಯಗಳ ಮೂಲಕ ಚಿತ್ರದ ಪ್ರಮೋಷನ್ ಗೆ ಹೆಜ್ಜೆಯಿಟ್ಟಿದ್ದು , ಫೆಬ್ರವರಿ 7ರಂದು ಬಿಡುಗಡೆಯಾಗಲಿರೋ ಥರ್ಡ್ ಕ್ಲಾಸ್ ಸಿನಿಮಾಗೆ ಯಾವ ರೀತಿ ಬೆಂಬಲ ಸಿಗುತ್ತೇ ಅಂತ ಕಾದು ನೋಡಬೇಕಿದೆ.

  (ವರದಿ : ರಾಚಪ್ಪ ಬನ್ನಿಬಿನ್ನಿ)
First published: