• Home
  • »
  • News
  • »
  • state
  • »
  • Bengaluru: ಲೇಡೀಸ್​ ಟಾಯ್ಲೆಟ್​ಗೆ ನುಗ್ಗಿ ಯುವತಿಯನ್ನ ಎಳೆದಾಡಿದ; ಇಂಜಿನಿಯರಿಂಗ್ ಪದವಿ ಪಡೆದು ದುಬೈನಲ್ಲಿ ಕೆಲಸ ಮಾಡುತ್ತಿದ್ದಾತನ ಕುಕೃತ್ಯ!

Bengaluru: ಲೇಡೀಸ್​ ಟಾಯ್ಲೆಟ್​ಗೆ ನುಗ್ಗಿ ಯುವತಿಯನ್ನ ಎಳೆದಾಡಿದ; ಇಂಜಿನಿಯರಿಂಗ್ ಪದವಿ ಪಡೆದು ದುಬೈನಲ್ಲಿ ಕೆಲಸ ಮಾಡುತ್ತಿದ್ದಾತನ ಕುಕೃತ್ಯ!

ಬೆಂಗಳೂರು ಪೊಲೀಸ್

ಬೆಂಗಳೂರು ಪೊಲೀಸ್

ಆರೋಪಿ ಮೂಲತಃ ಹನುಮಂತ ನಗರದ ನಿವಾಸಿಯಾಗಿದ್ದು, 39 ವರ್ಷದ ಅಜೇಯ್​ ಕುಮಾರ್​ನನ್ನು ಬಂಧನ ಮಾಡಿದ್ದೇವೆ. ಈತ ಇಂಜಿನಿಯರ್ ಆಗಿ ದುಬೈನಲ್ಲಿ ಕೆಲಸ ಮಾಡಿದ್ದ. ಈಗ ಸಿನಿಮಾ, ಸೀರಿಯಲ್​ಗಳಲ್ಲಿ ನಟಿಸಲು ಅವಕಾಶಕ್ಕಾಗಿ ಓಡಾಡುತ್ತಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ವಿಜಯ ಕಾಲೇಜಿನ (College) ಲೇಡೀಸ್​ ಟಾಯ್ಲೆಟ್​​ಗೆ ನುಗ್ಗಿ ಯುವತಿಯನ್ನ ಎಳೆದಾಡಿದ್ದ ಆಸಾಮಿಯನ್ನ ಜಯನಗರ ಪೊಲೀಸರು (Jayanagar Police) ಬಂಧಿಸಿದ್ದಾರೆ. 42 ವರ್ಷದ ಅಜಯ್ ಕುಮಾರ್ ಎಂಬಾತನನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇನ್ನು ಆರೋಪಿ ಅದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ದುಬೈನಲ್ಲಿ (Dubai) ಇಂಜಿನಿಯ​ರ್​ ಆಗಿ ಕೆಲಸ ಮಾಡಿ ವಾಪಸ್​ ಆಗಿದ್ದನಂತೆ. ಆದರೆ ಆರೋಪಿ ಮಾನಸಿಕ ಅಸ್ವಸ್ಥನಂತಿದ್ದು (Mentally Upset), ಎಲ್ಲೇ ಊಟ ಮಾಡಿದರೂ ಬಾತ್ ರೂಮ್ ಹೊಗುವ ಅಭ್ಯಾಸವಿದೆ ಅನ್ನೋ ಮಾಹಿತಿ ಸಿಕ್ಕಿದೆ ಎಂದು ತಿಳಿದು ಬಂದಿದೆ.


ಇನ್ನು ಘಟನೆ ನಡೆದ ದಿನವೂ ಕಾಲೇಜಿನ ಪಕ್ಕದಲ್ಲೇ ಆಸಾಮಿ ಊಟ ಮಾಡಿ, ಬಾತ್ ರೂಮ್ ಹುಡುಕಾಡಿದ್ದಾನೆ. ಟಾಯ್ಲೆಟ್​ ಸಿಗದ ಹಿನ್ನೆಲೆಯಲ್ಲಿ ಲೇಡೀಸ್ ಟಾಯ್ಲೆಟ್ ಒಳಗೆ ಹೋಗಿರುವುದು ತಿಳಿದು ಬಂದಿದೆ. ಇನ್ನು, ಘಟನೆ ಕುರಿತಂತೆ ಜನವರಿ 11ರಂದು ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದರು. ಘಟನೆ ಹಿನ್ನೆಲೆ ಪ್ರಾಂಶುಪಾಲರ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದರು.


ಇದನ್ನೂ ಓದಿ: SSLC Student: ಓದಿದ್ದು ನೆನಪಿನಲ್ಲಿ ಇರುತ್ತಿಲ್ಲ ಅಂತ ಆತಂಕ; ಹಾಸ್ಟೆಲ್​ನಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿ ಸಾವಿಗೆ ಶರಣು
ಅಂದು ಕಾಲೇಜಿನ ಲೇಡೀಸ್ ಟಾಯ್ಲೆಟ್ ಒಳಗೆ ನುಗ್ಗಿದ್ದ ಆರೋಪಿ, ವಿದ್ಯಾರ್ಥಿನಿಯನ್ನು ತಳ್ಳಿ ಬಾಯಿ ಮುಚ್ಚಿ ಎಳೆದಾಡಿದ್ದಾನೆ ಎನ್ನುವ ಬಗ್ಗೆ ಪ್ರಾಂಶುಪಾಲರ ವಿರುದ್ದ ಇತರೆ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಜನವರಿ 10 ರಂದು ನಡೆದ ಘಟನೆ ಬಗ್ಗೆ ಮರುದಿನ ಪೊಲೀಸರಿಗೆ ಮಾಹಿತಿ ಸಿಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.


ಘಟನೆ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಿಸಿಪಿ ದಕ್ಷಿಣ ವಿಭಾಗ ಕೃಷ್ಣಕಾಂತ್, ಘಟನೆ ಸಂಬಂಧ ಸೆಕ್ಷನ್ 448, 504, 506  ಮತ್ತು 354 ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು.  ತನಿಖೆ ಕೈಗೊಂಡು ಓರ್ವ ಆರೋಪಿಯನ್ನು ಈಗ ಅರೆಸ್ಟ್ ಮಾಡಿದ್ದೇವೆ. ಆರೋಪಿ ಮೂಲತಃ ಹನುಮಂತ ನಗರದ ನಿವಾಸಿಯಾಗಿದ್ದು, 39 ವರ್ಷದ ಅಜೇಯ್​ ಕುಮಾರ್​ನನ್ನು ಬಂಧನ ಮಾಡಿದ್ದೇವೆ. ಈತ ಎಂಜಿನಿಯರ್ ಆಗಿ ದುಬೈನಲ್ಲಿ ಕೆಲಸ ಮಾಡಿದ್ದು, ಈಗ ಸಿನಿಮಾ, ಸೀರಿಯಲ್​ಗಳಲ್ಲಿ ನಟಿಸಲು ಅವಕಾಶಕ್ಕಾಗಿ ಓಡಾಡುತ್ತಿದ್ದಾನೆ. ಆತನ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.


ಸ್ಯಾಂಟ್ರೋ ರವಿ


ಸ್ಯಾಟ್ರೋ ರವಿ 2ನೇ ಪತ್ನಿಯನ್ನ ವಿಚಾರಣೆ ನಡೆಸಿ ಸಿಸಿಬಿ ಅಧಿಕಾರಿಗಳು


ಸ್ಯಾಂಟ್ರೋ ರವಿ ಕರ್ಮಕಾಂಡಗಳ (Santro Ravi) ತನಿಖೆ ಒಂದೊಂದಾಗಿ ಶುರುವಾಗಿದೆ‌. ಮೈಸೂರಿನಲ್ಲಿ ದಾಖಲಾದ ಪ್ರಕರಣದ ತನಿಖೆಯನ್ನ ಸಿಐಡಿ ತನಿಖೆ ಮಾಡುತ್ತಿದೆ. ಇದರ  ಜೊತೆಗೆ ಸಿಸಿಬಿ ಪೊಲೀಸರು ಹಳೇ ಪ್ರಕರಣದ ಮರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಕಳೆದ ವರ್ಷ ಕಾಟನ್ ಪೇಟೆ ಠಾಣೆಯಲ್ಲಿ (Cottonpet Police) ದಾಖಲಾದ ಸುಳ್ಳು ದರೋಡೆ ಕೇಸಲ್ಲಿ ಜೈಲು ಸೇರಿದ್ದ ಸ್ಯಾಂಟ್ರೋ ರವಿ ಪತ್ನಿ ಮತ್ತು ಆಕೆಯ ತಂಗಿಯನ್ನ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.


ಇದನ್ನೂ ಓದಿ: Bengaluru: ಟ್ರಾನ್ಸ್‌ಫಾರ್ಮರ್ ದುರಸ್ಥಿ ವೇಳೆ ಕರೆಂಟ್​ ಶಾಕ್​; ನಿಶ್ಚಿತಾರ್ಥ ಫಿಕ್ಸ್​ ಆಗಿದ್ದ ಲೈನ್​ಮ್ಯಾನ್​ ಸಾವು


ಮೈಸೂರಿನಲ್ಲಿ ಸ್ಯಾಂಟ್ರೋ ರವಿ ಪತ್ನಿ ದಾಖಲಿಸಿದ್ದ ದೂರಿನಲ್ಲಿ ಕಾಟನ್ ಪೇಟೆ ಸುಳ್ಳು ದೂರಿನ ಬಗ್ಗೆ ಉಲ್ಲೇಖ ಮಾಡಿದ್ದರು. ಈ ಆರೋಪ ಬಗ್ಗೆ ಚಾಮರಾಜಪೇಟೆ ಸಿಸಿಬಿ (CCB Bengaluru) ಕಚೇರಿಗೆ ಇಬ್ಬರನ್ನ ಕರೆಯಿಸಿ ಪೊಲೀಸರು ಹೇಳಿಕೆ ದಾಖಲಿಸಿದ್ದಾರೆ. ಇನ್ನೊಂದೆಡೆ ಸಿಐಡಿ ತನಿಖೆ ವೇಳೆ ಸ್ವಾರಸ್ಯಕರ ವಿಚಾರವೊಂದು ಬೆಳಕಿಗೆ ಬಂದಿದೆ. ಗಂಡ ವೀಗ್ ಧರಿಸುವ ವಿಚಾರ ಸ್ವತಃ ಆತನ ಪತ್ನಿಗೆ ಗೊತ್ತಿರಲಿಲ್ಲ ಎನ್ನಲಾಗಿದೆ.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು