Kolar: ಪತ್ನಿ ದೂರವಾಗಲು ಕಾರಣನಾದ ಪ್ರಿಯಕರನನ್ನ ಕೊಚ್ಚಿ ಕೊಲೆಗೈದ ಗಂಡ

ಚೌಡೇಶ್ವರಿ ನಗರದ ರಸ್ತೆ ಕಡೆಗೆ ಹೊರಟಿದ್ದ ಚರಣ್ ರಾಜ್ ಮೇಲೆ , ಮನಸೋ ಇಚ್ಛೆ ದಾಳಿ ನಡೆಸಿದ್ದಾರೆ. ಇಬ್ಬರು ಮಾಸ್ಕ್ ಧರಿಸಿ ದಾಳಿ ಮಾಡಿದ್ದು, ಪ್ರಾಣ ಉಳಿಸಿಕೊಳ್ಳಲು ಕಿರುಚಾಡಿಕೊಂಡು ಓಡಿಹೋದರು, ಹಿಂಬಾಲಿಸಿದ ದುಷ್ಕರ್ಮಿಗಳು ಕತ್ತು, ಬೆನ್ನು, ಹೊಟ್ಟೆ ಭಾಗಕ್ಕೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಕೊಲೆಯಾದ ಚರಣ್ ರಾಜ್

ಕೊಲೆಯಾದ ಚರಣ್ ರಾಜ್

  • Share this:
ಕೋಲಾರ (Kolar) ನಗರದ ನಂದಿನಿ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಮದ್ಯ ಸೇವನೆ ಮಾಡಲು ಸ್ನೇಹಿತರ (Friends) ಜೊತೆಗೆ ಹೋಗಿದ್ದವನು ರಸ್ತೆಯಲ್ಲೇ ಹೆಣವಾಗಿದ್ದಾನೆ. ಕೋಲಾರ ನಗರದ ವಿಜಯನಗರ ನಿವಾಸಿ 37 ವರ್ಷದ ಚರಣ್ ರಾಜ್ ಭೀಕರವಾಗಿ ಮಾರಕಾಸ್ತ್ರಗಳಿಂದ ದಾಳಿಗೆ ಒಳಗಾಗಿ ಕೊಲೆಯಾಗಿದ್ದು (Murder), ಯೂತ್ ಕಾಂಗ್ರೆಸ್‍ನ (Congress) ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಸಕ್ರಿಯವಾಗಿ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದರು. ಬುಧವಾರ ರಾತ್ರಿ 9 ಗಂಟೆಗೆ ಕೋಲಾರದ ಟೇಕಲ್ ರಸ್ತೆಯಲ್ಲಿನ ನಂದಿನಿ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಸ್ನೇಹಿತರ ಜೊತೆಗೆ ಕುಡಿಯಲು ಹೋಗಿದ್ದ ಚರಣ್ ರಾಜ್, ಅದೇ ಬಾರ್ ಎದುರಿನ ರಸ್ತೆಯಲ್ಲಿ ಭೀಕರವಾಗಿ ಕೊಲೆಯಾಗಿದ್ದಾರೆ.

ಸ್ನೇಹಿತರಾದ ಮುನಿರಾಜು, ನವೀನ್ ರಾಜ್, ಶಂಕರ್ ಹಾಗೂ ಮೃತ ಚರಣ್ ರಾಜ್ ಕಾರ್ ಚಾಲಕ, ಮುನಿರೆಡ್ಡಿ ಎಲ್ಲರು ಒಗ್ಗೂಡಿ ಮದ್ಯ ಸೇವನೆ ಮಾಡ್ತಿದ್ದು, ಯಾವುದೊ ಪೋನ್ ಕಾಲ್ ಬಂದಾಗ ಬಾರ್ ನಿಂದ ಹೊರಹೋದ ಚರಣ್ ರಾಜ್, ಮೇಲೆ ಬೈಕ್ ನಲ್ಲಿ ಇಬ್ಬರು ವ್ಯಕ್ತಿಗಳು, ಮಚ್ಚು ಲಾಂಗಿನಿಂದ ಹಲ್ಲೆ ಮಾಡಿದ್ದಾರೆ.

ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಸಾವು

ಚೌಡೇಶ್ವರಿ ನಗರದ ರಸ್ತೆ ಕಡೆಗೆ ಹೊರಟಿದ್ದ ಚರಣ್ ರಾಜ್ ಮೇಲೆ , ಮನಸೋ ಇಚ್ಛೆ ದಾಳಿ ನಡೆಸಿದ್ದಾರೆ. ಇಬ್ಬರು ಮಾಸ್ಕ್ ಧರಿಸಿ ದಾಳಿ ಮಾಡಿದ್ದು, ಪ್ರಾಣ ಉಳಿಸಿಕೊಳ್ಳಲು ಕಿರುಚಾಡಿಕೊಂಡು ಓಡಿಹೋದರು, ಹಿಂಬಾಲಿಸಿದ ದುಷ್ಕರ್ಮಿಗಳು ಕತ್ತು, ಬೆನ್ನು, ಹೊಟ್ಟೆ ಭಾಗಕ್ಕೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಇದನ್ನೂ ಓದಿ: Udupi Love Jihad Case: ಲವ್ ಜಿಹಾದ್ ಪ್ರಕರಣದ ಪ್ರಮುಖ ಆರೋಪಿ ಅಜೀಜ್ & ಆತನ ಸೋದರ ಅರೆಸ್ಟ್

ತೀವ್ರ ರಕ್ತಸ್ರಾವದಿಂದ ಸ್ತಳದಲ್ಲೇ ಚರಣ್ ರಾಜ್ ಮೃತಪಟ್ಟಿದ್ದಾರೆ, ಘಟನೆ ನಡೆದ ಸುತ್ತಮುತ್ತಲು ಹತ್ತಾರು ಮನೆಗಳಿದ್ದು, ಯಾರೊಬ್ಬರು ಚರಣ್ ರಾಜ್ ಸಹಾಯಕ್ಕೆ ಧಾವಿಸಿಲ್ಲ. ಸ್ಥಳಕ್ಕೆ ಮೊದಲು ಕೋಲಾರ ನಗರ ಪೊಲೀಸರು ಭೇಟಿ ನೀಡಿದ್ದು, ಬಳಿಕ ಎಸ್ ಪಿ ದೇವರಾಜ್ ಮತ್ತು ಹೆಚ್ಚುವರಿ ಎಸ್ ಪಿ ಸಚಿನ್ ಘೋರ್ಪಡೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಬಾರ್ ಸಿಬ್ಬಂದಿಯನ್ನ ವಿಚಾರಣೆ ನಡೆಸಿ ಸಿಸಿಟಿವಿ ದಾಖಲೆ ಕಲೆಹಾಕಿದ ಪೊಲೀಸರು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಸ್ನೇಹಿತರನ್ನು ವಶಕ್ಕೆ ಪಡೆದು ಪೊಲೀಸರ ವಿಚಾರಣೆ

ಮೃತ ಚರಣ್ ರಾಜ್ ಸ್ನೇಹಿತ ಮುನಿರಾಜು, ನವೀನ್ ರಾಜ್ ಹಾಗು ಶಂಕರ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ, ಪೊಲೀಸರ ಬಳಿ ನಾವು ಕೊಲೆ ಮಾಡಿಲ್ಲ ಎಂದು ತಿಳಿಸಿದ್ದು, ಮೂವರನ್ನು ಪೊಲೀಸ್ ಸ್ಟೈಲ್ ನಲ್ಲೆ ವಿಚಾರಣೆ ನಡಸಿದ್ದಾರೆ.

ಯೂತ್ ಕಾಂಗ್ರೆಸ್‍ನಲ್ಲಿ ಪ್ರಧಾನ ಕಾರ್ಯದರ್ಶಿಯಾಗಿರೊ ಚರಣ್ ರಾಜ್, ರಿಯಲ್ ಎಸ್ಟೇಟ್ ಹಾಗೂ ಸಣ್ಣ ಪುಟ್ಟ ವ್ಯವಹಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಗಾಂಧೀನಗರ ಮೂಲದ ಯುವತಿಯನ್ನ ಕಳೆದ 9 ವರ್ಷದ ಹಿಂದೆ ಮದುವೆಯಾಗಿದ್ದರು. ಚರಣ್‍ರಾಜ್ ದಂಪತಿಗೆ, ಮುದ್ದಾದ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ತಾಯಿ ಲಕ್ಷ್ಮಮ್ಮ ಹಾಗೂ ತಮ್ಮ, ಹಾಗು ಪತ್ನಿ ಹಾಗು ಮಕ್ಕಳ ಜೊತೆಗೆ ವಿಜಯನಗರದಲ್ಲಿ ಚರಣ್ ರಾಜ್ ಸುಂದರವಾಗಿಯೇ ಸಂಸಾರ ಮಾಡ್ತಿದ್ದಾರೆ.

ಅಕ್ರಮ ಸಂಬಂಧ ಹೊಂದಿರುವ ಆರೋಪ

ಚರಣ್ ರಾಜ್ ಸಂಬಂಧಿ ಮೇಡಿತಂಬಹಳ್ಳಿ ಗ್ರಾಮದ ಸೊಣ್ಣಪ್ಪ ಎಂಬವರ ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿರುವ ಮಾಹಿತಿ ಲಭ್ಯವಾಗಿದೆ. ಅಕ್ರಮ ಸಂಬಂಧಿದಂದಲೇ ಪತ್ನಿ ತನ್ನಿಂದ ದೂರವಾಗಿದ್ದಾಳೆ ಎಂದು ಸೊಣ್ಣಪ್ಪ ಆರೋಪಿಸಿದ್ದನು. ಪತ್ನಿಯನ್ನು ಬಚ್ಚಿಟ್ಟಿದ್ದೀಯಾ ಎಂದು ಸೊಣ್ಣಪ್ಪ ಕೊಲೆ ಬೆದರಿಕೆ ಹಾಕಿದ್ದನು. ಫೋನ್ ಮೂಲಕ ಹಲವು ಬೆದರಿಕೆ ಹಾಕಿದ್ದ ಸೊಣ್ಣಪ್ಪ, ಮನೆಗೂ ಸಹ ಆಗಮಿಸಿ ಅವಾಜ್ ಹಾಕಿದ್ದ.

ಬೆಂಗಳೂರಿನಲ್ಲಿ ವಾಸವಾಗಿರುವ ಸೊಣ್ಣಪ್ಪನ ಪತ್ನಿ

ಮದ್ಯ ಸೇವನೆ ಮಾಡುತ್ತಿದ್ದ ಸೊಣ್ಣಪ್ಪ ಪತ್ನಿ ಜೊತೆ ಜಗಳ ಮಾಡುತ್ತಿದ್ದನು. ಇದರಿಂದ ರೋಸಿಹೋಗಿದ್ದ ಪತ್ನಿ ಪತಿಯಿಂದ ದೂರವಾಗಲು ನಿರ್ಧರಿಸಿದ್ದಳು. ಈ ವೇಳೆ ಸೊಣ್ಣಪ್ಪ ಪತ್ನಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದನು. ಈ ವೇಳೆ ಚರಣ್ ರಾಜ್ ಸೊಣ್ಣಪ್ಪನ ಪತ್ನಿಯನ್ನು ಆರೈಕೆ ಮಾಡಿದ್ದರು. ಸೊಣ್ಣಪ್ಪನ ಪತ್ನಿ ಬೆಂಗಳೂರಿನಲ್ಲಿ ವಾಸವಾಗಿದ್ದು, ಇತ್ತೀಚೆಗೆ ವಿಚ್ಛೇದನಕ್ಕೂ ಸಹ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ:  Suicide: ಸ್ನೇಹಿತನಿಗೆ ಚಿಕನ್ ತರೋಕೆ ಹೇಳಿ ಮನೆಯಲ್ಲಿ ನೇಣು ಬಿಗಿದುಕೊಂಡ ಉದ್ಯಮಿ

ಮುಸುಕು ಧರಿಸಿ ಬಂದಿದ್ದ ಹಂತಕರ ಬೈಕ್ ಅಪಘಾತ

ಪತ್ನಿ ದೂರವಾಗಿ ಡೈವೋರ್ಸ್ ನೀಡಲು, ಚರಣ್ ರಾಜ್ ಕಾರಣವೆಂದು ದ್ವೇಷ ಬೆಳೆಸಿಕೊಂಡಿದ್ದ ಸೊಣ್ಣಪ್ಪ, ಇದೇ ವಿಚಾರಕ್ಕೆ ಆತನನ್ನು ಮುಗಿಸಲು ಪ್ಲಾನ್ ಮಾಡಿದ್ದಾನೆ. ಇದಕ್ಕೆ ಸೊಣ್ಣಪ್ಪ ತಂಗಿಯ ಮಗ ಶ್ರೀಕಾಂತ್ ಸಾಥ್ ನೀಡಿದ್ದು, ಬೈಕ್‍ ನಲ್ಲಿ ಮುಖಕ್ಕೆ ಮುಸುಕು ಧರಿಸಿ ಬಂದಿದ್ದ ಹಂತಕರು ಬಾರ್‍ ನಿಂದ ಚರಣ್‍ರಾಜ್ ಹೊರಬರುತ್ತಲೇ ಅಟ್ಯಾಕ್ ಮಾಡಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ.

24 ಗಂಟೆಯಲ್ಲಿ ಆರೋಪಿಯ ಬಂಧನ

ಕೊಲೆ ಮಾಡಿ ಟೇಕಲ್ ರಸ್ತೆಯಲ್ಲಿ ಹೋಗುವಾಗ ಮದುವತ್ತಿ ಗ್ರಾಮದ ಬಳಿ ಬೈಕ್ ಕ್ಸಿಡ್ ಆಗಿ ಅಪಘಾತ ಅಗಿದೆ. ಶ್ರೀಕಾಂತ್ ಕಾಲು ಮುರಿತವಾಗಿದ್ದು, ಇಬ್ಬರು ಪ್ರಜ್ಞೆ ತಪ್ಪಿದ್ದಾರೆ. ಬೆಳಗ್ಗೆ ಸಾರ್ವಜನಿಕರು ಇಬ್ಬರನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಬೆಳಗ್ಗೆ ಆರೋಪಿ ಸೊಣ್ಣಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
Published by:Mahmadrafik K
First published: