Murugha Shri Case: 37 ವಿದ್ಯಾರ್ಥಿಗಳನ್ನು ವಸತಿ ಶಾಲೆಗಳಿಗೆ ಸ್ಥಳಾಂತರ

ಸ್ಥಳಾಂತರಗೊಂಡಿರುವ 38 ಮಕ್ಕಳ ಪೈಕಿ 10 ಮಂದಿ ಅನಾಥರಾಗಿದ್ದು, ಒಬ್ಬರಿಗೆ ತಾಯಿ ಮಾತ್ರ ಇದ್ದಾರೆ. ಹೊಸ ವಾತಾವರಣದಲ್ಲಿ ಮಕ್ಕಳು ಹೇಗೆ ಇರುತ್ತಾರೆ ಅನ್ನೋದು ಸಹ ಪೋಷಕರಿಗೆ ಚಿಂತೆಯಾಗಿದೆ.

ಮುರುಘಾ ಮಠ

ಮುರುಘಾ ಮಠ

  • Share this:
ಮುರುಘಾ ಮಠದ (Murugha Mutt) ಶಿವಮೂರ್ತಿ ಸ್ವಾಮೀಜಿ (Shivamurthy Swamiji) ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಜೈಲುಪಾಲಾಗಿದ್ದಾರೆ. ಈ ಪ್ರಕರಣದ ಬೆನ್ನಲ್ಲೇ ಮುರುಘಾ ಮಠದ ಶಿಕ್ಷಣ ಸಂಸ್ಥೆಗಳ ಮೇಲೆ ಕರಿನೆರಳು ಬಿದ್ದಿದೆ. ಇದೀಗ ಚಿತ್ರದುರ್ಗ ಮಠದ (Chitradurga Mutt) ಎರಡು ಹಾಸ್ಟೆಲ್​ಗಳಲ್ಲಿದ್ದ 37 ಬಾಲಕಿಯರನ್ನು ಸಮೀಪದ ಸರ್ಕಾರಿ ವಸತಿ ಶಾಲೆಗೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ. ಈಗಾಗಲೇ ಪ್ರಕರಣ ಸಂಬಂಧ ಶ್ರೀಗಳ ಬಂಧನವಾಗಿದ್ದರೆ, ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಮಠದಿಂದ ಬಸವ ಮತ್ತು ಅಕ್ಕಮಹಾದೇವಿ ಹೆಸರಿನಲ್ಲಿ ಎರಡು ಹಾಸ್ಟೆಲ್​ (Hostel) ಗಳನ್ನು ನಡೆಸಲಾಗುತ್ತಿದೆ. ಪ್ರಕರಣದ ಬೆನ್ನಲ್ಲೇ ಚಿತ್ರದುರ್ಗದ ಜಿಲ್ಲೆಯ ಸರ್ಕಾರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸ್ಥಳಾಂತರಿಸಲಾಗಿತ್ತು.

ಪ್ರಕರಣದ ಬೆನ್ನಲ್ಲೇ ವಸತಿ ನಿಲಯದಲ್ಲಿರುವ ಮಕ್ಕಳು ಭಯದ ವಾತಾವರಣದಲ್ಲಿದ್ದರು. ಇತ್ತ ಪೋಷಕರು ಸಹ ಆತಂಕದಲ್ಲಿರುವ ಕಾರಣ ಮಕ್ಕಳನ್ನು ಸಮೀಪದ ಸರ್ಕಾರಿ ವಸತಿ ಶಾಲೆಗಳಿಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ಬಡ ಪೋಷಕರ ಮಕ್ಕಳೇ ಇಲ್ಲಿ ಅಭ್ಯಾಸ ಮಾಡ್ತಿದ್ರು

ಮಠದ ವಸತಿ ನಿಲಯದಲ್ಲಿ ಬಳ್ಳಾರಿ, ರಾಯಚೂರು, ಕೊಪ್ಪಳ, ತುಮಕೂರು, ಬೆಂಗಳೂರು, ಬೆಳಗಾವಿ, ಬಾಗಲಕೋಟೆ, ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವಿದ್ಯಾರ್ಥಿಗಳಿದ್ದರು. ವಿವಿಧ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಹಿನ್ನೆಲೆಯಿಂದ ಬಂದವರಾಗಿದ್ದರು. ಶೈಕ್ಷಣಿಕ ವೆಚ್ಚ ಭರಿಸಲು ಸಾಧ್ಯವಾಗದ ಪೋಷಕರು ತಮ್ಮ ಮಕ್ಕಳನ್ನು ಶಿಕ್ಷಣಕ್ಕಾಗಿ ಇಲ್ಲಿಗೆ ಕರೆದುಕೊಂಡು ಬರುತ್ತಿದ್ದರು.

Murugha Math Location, Murugha Math Seer Allegation, Kannada News, Karnataka News, ಮುರುಘಾ ಮಠ ಎಲ್ಲಿದೆ?, ಮುರುಘಾ ಸ್ವಾಮೀಜಿ ಆರೋಪ, ಮುರುಘಾ ಶ್ರೀ ಹೇಳಿಕೆ, HDK ಸ್ಪೋಟಕ ಹೇಳಿಕೆ , ಮುರುಘಾ ಶ್ರೀ ಮತ್ತು ಪೋಕ್ಸೋ ಕೇಸ್ , Murugha Shri investigation, Murugha Shri Police Custody, Murugha Shir Arrest, ಪೊಲೀಸ್ ಕಸ್ಟಡಿಗೆ ಮುರುಘಾ ಶ್ರೀ, ಮುರುಘಾ ಶ್ರೀ ಅರೆಸ್ಟ್, ಮುರುಘಾ ಶ್ರೀಗಳಿಂದ ಟಿಪ್ಪು ವರ್ಣನೆ, ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ
ಮುರುಘಾಶ್ರೀ


ಸ್ಥಳಾಂತರಗೊಂಡಿರುವ 38 ಮಕ್ಕಳ ಪೈಕಿ 10 ಮಂದಿ ಅನಾಥರಾಗಿದ್ದು, ಒಬ್ಬರಿಗೆ ತಾಯಿ ಮಾತ್ರ ಇದ್ದಾರೆ. ಹೊಸ ವಾತಾವರಣದಲ್ಲಿ ಮಕ್ಕಳು ಹೇಗೆ ಇರುತ್ತಾರೆ ಅನ್ನೋದು ಸಹ ಪೋಷಕರಿಗೆ ಚಿಂತೆಯಾಗಿದೆ.

ಇದನ್ನೂ ಓದಿ:  DC Tammanna: ಸುಮಲತಾ ಬಂಡವಾಳ ನಮ್ಗೆ ಗೊತ್ತು, ಬುಡು ಬುಡುಕೆ ಮಾಡ್ಕೊಂಡು ರಾಜಕಾರಣಕ್ಕೆ ಬಂದಿಲ್ಲ: ಡಿ ಸಿ ತಮ್ಮಣ್ಣ

ಹೊಸ ಶಾಲೆ, ಹೊಸ ವಾತಾವರಣ

ಬಾಗಲಕೋಟೆ ಜಿಲ್ಲೆಯ ವಿಧವೆ ಯಲ್ಲಕ್ಕ ಎಂಬವರು ತಮ್ಮ ಮೂರು ಹೆಣ್ಣು ಮಕ್ಕಳನ್ನು ಕಳೆದ ಎಂಟು ವರ್ಷಗಳಿಂದ ಮಠದ ಶಿಕ್ಷಣ ಸಂಸ್ಥೆಯಲ್ಲಿಯೇ ಓದಿಸುತ್ತಿದ್ದಾರೆ. ಶ್ರೀಗಳ ವಿರುದ್ಧ ಪ್ರಕರಣ ದಾಖಲಾದ ಬಳಿಕ ಮಕ್ಕಳು ಭಯಗೊಂಡಿದ್ದರು. ಇದೀಗ ಮಕ್ಕಳನ್ನು ಬಾಗಲಕೋಟೆ ಸಮೀಪದ ವಸತಿ ಶಾಲೆಗೆ ಸ್ಥಳಾಂತರಿಸಲಾಗಿದೆ. ಆದ್ರೆ ಇಲ್ಲಿಯ ಹೊಸ ವಾತಾವರಣಕ್ಕೆ ಮಕ್ಕಳಿಗೆ ಹೊಂದಿಕೊಳ್ಳಲು ಕಷ್ಟವಾಗ್ತಿದೆ ಎಂದು ಹೇಳಿದ್ದಾರೆ.

ಈ ಹೊಸ ವಸತಿ ಶಾಲೆಯಲ್ಲಿ ಹಲವು ನಿಬಂಧನೆಗಳಿವೆ. ಮಕ್ಕಳಿಗೆ ಇದೊಂದು ರೀತಿಯ ಅಗ್ನಿಪರೀಕ್ಷೆ ಆಗಿದೆ. ಈಗಾಗಲೇ ಮಕ್ಕಳು ಹಲವು ತರಗತಿಗಳನ್ನು ಮಿಸ್ ಮಾಡಿಕೊಂಡಿದ್ದಾರೆ. ಮುಂದೆ ಮಕ್ಕಳ ಭವಿಷ್ಯ ಏನು ಅನ್ನೋದು ನಮಗೆ ಆತಂಕವಾಗಿದೆ ಎಂದು ಯಲ್ಲಕ್ಕ ಹೇಳುತ್ತಾರೆ.

37 girl student shifted from Murugha hostel to residential schools mrq
ಮುರುಘಾ ಮಠ


ಟಿಪ್ಪು ವರ್ಣನೆ ಮಾಡಿದ್ದಕ್ಕೆ ಈ ಪರಿಸ್ಥಿತಿ

ಶಾಸಕ ಬಸನಗೌಡ ಪಾಟೀಲ್ (BJP MLA Basanagowda Patil Yatnal) ಯತ್ನಾಳ್, ಟಿಪ್ಪು ಸುಲ್ತಾನ್​​​ನನ್ನು (Tipu Sultan) ವರ್ಣನೆ ಮಾಡಿದಕ್ಕೆ ಮುರುಘಾ ಸ್ವಾಮೀಜಿಗಳಿಗೆ ಈ ಸ್ಥಿತಿ ಬಂದಿದೆ ಎಂದರು. ಟಿಪ್ಪು ಸುಲ್ತಾನ್ ಪರವಾಗಿದ್ದರ ಪರಿಸ್ಥಿತಿ ಏನಾಗಿದೆ ಎಂದು ನೋಡಿ. ಟಿಪ್ಪು ಖಡ್ಗ ಪಡೆದ ವಿಜಯ್ ಮಲ್ಯ (Vijay Malya) ಹಾಳಾದ, ಟಿಪ್ಪು ಸಿನಿಮಾ ಮಾಡಿ ಪ್ರೂಡ್ಯೂಸರ್ ಹಾಳಾದ. ಟಿಪ್ಪು ಜಯಂತಿ ಮಾಡಿ ಸಿದ್ದರಾಮಯ್ಯ (Siddaramaiah) ಸೋತರು. ಇದೀಗ ಸ್ವಾಮೀಜಿಗಳ ಸರದಿ ಎಂದು ಹೇಳಿದರು.

ಇದನ್ನೂ ಓದಿ:  Murugha Shri: ಮುರುಘಾ ಶ್ರೀಗಳಿಗೆ ಪುರುಷತ್ವ ಪರೀಕ್ಷೆ; ಶರಣರ ಮುಂದೆ ತನಿಖಾಧಿಕಾರಿಗಳಿಂದ ಪ್ರಶ್ನೆಗಳ ಸುರಿಮಳೆ

ಚಿತ್ರದುರ್ಗ ಮದಕರಿ ನಾಯಕರು, ಒನಕೆ ಓಬವ್ವರ ನಾಡು. ಅಂತಹ ನಾಯಕರ ನಾಡಿನಲ್ಲಿರುವ ಮಠದಲ್ಲಿ ಟಿಪ್ಪುವಿನ ಪುತ್ಥಳಿ ಮಾಡಿದ್ದು‌ ತಪ್ಪು. ಮದಕರಿ ನಾಯಕರು ನೂರಾರು ಎಕರೆ ಜಮೀನು ಮಠಕ್ಕೆ ನೀಡಿದ್ದಾರೆ. ಮದಕರಿ ನಾಯಕರ ಪ್ರದೇಶದ ಮಠದಲ್ಲಿ ಟಿಪ್ಪುವಿನ ವರ್ಣನೆ ಮಾಡಬಾರದಿತ್ತು ಎಂದು ಶಾಸಕ ಯತ್ನಾಳ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
Published by:Mahmadrafik K
First published: