Kolar: ಹೂಳು ತೆಗೆಯೋ ಕೆಲಸಕ್ಕೆ ಸೈ ಎಂದ್ರು 35 ಮಹಿಳೆಯರು, ಗ್ರಾಮದ ಕೆರೆಗಳಿಗೆ ಮರುಜೀವ ಕೊಟ್ರು

ಮೂರು ತಿಂಗಳ ಒಳಗೆ, ಒಟ್ಟು ನಾಲ್ಕು ಕಾಲುವೆಗಳ ಹೂಳನ್ನು ತೆಗೆಯಲಾಯಿತು. ಹರಿಯುವ ಕಾಲುವೆಗಳ , ಗೊಟ್ಟಕೆರೆಯಲ್ಲಿ 1,200 ಮೀಟರ್ ದೂರದವರೆಗಿನ ಮತ್ತು ಹೊಸಕೆರೆಯಲ್ಲಿ 2,600 ಮೀಟರ್ ವರೆಗಿನ ಹೂಳನ್ನು ತೆಗೆದು ಹಾಕಲಾಯಿತು.

ಕೆರೆಯ ಹೂಳು ತೆಗೆದ ಮಹಿಳೆಯರು

ಕೆರೆಯ ಹೂಳು ತೆಗೆದ ಮಹಿಳೆಯರು

 • Share this:
  ಒಗ್ಗಟ್ಟಿನಲ್ಲಿ ಬಲವಿದೆ ಮತ್ತು ಎಲ್ಲಾ ಕೆಲಸಗಳಿಗೂ ಬೇರೆಯವರನ್ನು ಕಾದು ಕುಳಿತುಕೊಳ್ಳಬೇಕಾಗಿಲ್ಲ ಎಂಬುದನ್ನು ರಾಜ್ಯದ ಕೋಲಾರ ಜಿಲ್ಲೆಯ ಪಿಚಗುಂಟ್ಲಹಳ್ಳಿಯ ಮಹಿಳೆಯರು (Women) ತೋರಿಸಿಕೊಟ್ಟಿದ್ದಾರೆ. ಹೌದು, ಎನ್‍ಜಿಒ (NGO) ಒಂದರ ಸಹಾಯದಿಂದ ಪಿಚಗುಂಟ್ಲಹಳ್ಳಿಯ (Pichaguntlahalli) 35 ಜನರ ತಂಡವು ಒಗ್ಗಟ್ಟಿನ ಪರಿಶ್ರಮದಿಂದ , ಬತ್ತಿ ಹೋಗಿದ್ದ ಕೆರೆಗಳಲ್ಲಿ (Lakes) ಮತ್ತೆ ನೀರು ತುಂಬುವಂತೆ ಮಾಡಿದೆ. ಆ ತಂಡದಲ್ಲಿ ಮಹಿಳೆಯರ ಸಂಖ್ಯೆಯೇ ಅಧಿಕವಾಗಿತ್ತು ಎಂಬುವುದು ಮತ್ತೊಂದು ವಿಶೇಷ. ಈ ತಂಡವು, ಆ ಗ್ರಾಮದ (Village) ಹೊಸಕೆರೆ ಮತ್ತು ಗೊಟ್ಟಕೆರೆ ಎಂಬ ಎರಡು ಕೆರೆಗಳ ಹೂಳನ್ನು ತೆಗೆದ ಕಾರಣ, ಅಲ್ಲಿನ ಅಂತರ್ಜಲ ಮಟ್ಟ ಸುಧಾರಿಸಿದೆ. ಅಷ್ಟೇ ಅಲ್ಲ, ಗ್ರಾಮದ ರೈತರು (Farmer) ಪ್ರಸಕ್ತ ವರ್ಷದಲ್ಲಿ ಎರಡು ಬೆಳೆ ಭತ್ತ ಬೆಳೆಯುವುದು ಸಾಧ್ಯವಾಗಿದೆ. ಇದೀಗ ಆ ಗ್ರಾಮ ಮತ್ತು ಜನರ ಬದುಕು ಎರಡೂ ಕೂಡ ಹಸಿರಾಗಿದೆ.

  ಗ್ರಾಮದ ಕೆರೆಯ ಹೂಳು ತೆಗೆದು ಮಹಿಳೆಯರು

  ಈ ಗ್ರಾಮವು ಕೋಲಾರದಿಂದ ಸುಮಾರು 16 ಕಿ.ಮೀ ದೂರದಲ್ಲಿದೆ ಮತ್ತು ಅದು ಒಮಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುತ್ತದೆ. ಕೋವಿಡ್ ಸಮಯದಲ್ಲಿ ಉದ್ಯೋಗ ಅವಕಾಶಗಳು ಬತ್ತಿ ಹೋಗಿ ಲಕ್ಷಾಂತರ ಮಂದಿ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದರು. ಅದೇ ರೀತಿ ಎಲ್ಲರಂತೆ ಈ ಗ್ರಾಮದ ಜನರು ಕೂಡ ಕಾರ್ಮಿಕ ಸಂಬಂಧಿ ಉದ್ಯೋಗಗಳ ಕೊರತೆ ಎದುರಿಸಿದರು. ಗ್ರಾಮದ ಕೆರೆಯು ಕೂಡ ಬತ್ತಿ ಹೋಗಿತ್ತು.

  ಆಗ ‘ಆರೋಹಣಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ’ಯ ಸಂಸ್ಥಾಪಕ ಕಾರ್ಯದರ್ಶಿ ಎಸ್. ಆಶಾ ಅವರು, ಎರಡು ಕೆರೆಗಳಿಂದ ಫೀಡರ್ ಕಾಲುವೆಗಳನ್ನು ಕೈಯಿಂದ ತೆರವುಗೊಳಿಸುವ ಪ್ರಸ್ತಾವನೆಯನ್ನು ಇಲ್ಲಿನ ನಿವಾಸಿಗಳ ಮುಂದಿಟ್ಟರು ಮತ್ತು ಅವರಿಗೆ ಆ ಕೆಲಸಕ್ಕಾಗಿ ವೇತನವನ್ನು ಕೂಡ ನೀಡುವುದಾಗಿ ತಿಳಿಸಿದರು. ಈ ಪ್ರಸ್ತಾವನೆಯನ್ನು ಒಪ್ಪಿಕೊಂಡರೆ ಹಣ ಮತ್ತು ನೀರು ಎರಡೂ ಸಿಗುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡ ಪಿಚಗುಂಟ್ಲಹಳ್ಳಿಯ ಗ್ರಾಮಸ್ಥರು, ಅದನ್ನು ಗಂಭೀರವಾಗಿ ಪರಿಗಣಿಸಿ, ಕೆಲಸಕ್ಕೆ ಒಪ್ಪಿಗೆ ಸೂಚಿಸಿದರು.

  ಇದನ್ನೂ ಓದಿ: Mango Market: ಹಿಜಾಬ್, ಹಲಾಲ್, ಅಜಾನ್ ನಂತ್ರ ಮಾವು ಮಾರುಕಟ್ಟೆಗೆ ಕಾಲಿಟ್ಟ ವಿವಾದ: ಹಿಂದೂಗಳ ಬಳಿ ಹಣ್ಣು ಖರೀಸುವಂತೆ ಅಭಿಯಾನ

  3 ತಿಂಗಳಲ್ಲಿ 4 ಕೆರೆಗಳ ಹೂಳು ತೆಗೆಯಲಾಗಿದೆ

  ಮೂರು ತಿಂಗಳ ಒಳಗೆ, ಒಟ್ಟು ನಾಲ್ಕು ಕಾಲುವೆಗಳ ಹೂಳನ್ನು ತೆಗೆಯಲಾಯಿತು. ಹರಿಯುವ ಕಾಲುವೆಗಳ , ಗೊಟ್ಟಕೆರೆಯಲ್ಲಿ 1,200 ಮೀಟರ್ ದೂರದವರೆಗಿನ ಮತ್ತು ಹೊಸಕೆರೆಯಲ್ಲಿ 2,600 ಮೀಟರ್ ವರೆಗಿನ ಹೂಳನ್ನು ತೆಗೆದು ಹಾಕಲಾಯಿತು. ಕೋಲಾರದಲ್ಲಿ ಕಳೆದ ವರ್ಷ ಉತ್ತಮ ಮಳೆಯಾಗಿದೆ ಮತ್ತು ಮಹಿಳೆಯರು ಮಾಡಿದ ಈ ಕೆಲಸದಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ , ಗ್ರಾಮದ ಎಲ್ಲಾ 686 ನಿವಾಸಿಗಳ ಜೀವನದಲ್ಲಿ ಸುಧಾರಣೆ ಕಂಡು ಬಂದಿದೆ” ಎಂದು ಎಸ್. ಆಶಾ ಅವರು ಮಾಧ್ಯಮ ಒಂದಕ್ಕೆ ಹೇಳಿದ್ದಾರೆ.

  “ನಾವು 35 ಜನರಿಗೆ ಹೂಳು ತೆಗೆಯುವ ತರಬೇತಿ ನೀಡಿದೆವು. ಅದರಲ್ಲಿ 31 ಜನ ಮಹಿಳೆಯರು ಇದ್ದರು. ಅವರು ಕೆರೆಯ ಹೂಳು ತೆಗೆಯುವುದರ ಹಿಂದಿನ ಉದ್ದೇಶವನ್ನು ಅರ್ಥ ಮಾಡಿಕೊಂಡರು. ಈ ಕೆಲಸಕ್ಕೆ ಮಣ್ಣು ತೆಗೆಯುವ ಯಂತ್ರಗಳನ್ನು ಬಳಸಿಕೊಳ್ಳಲಾಯಿತು ಮತ್ತು ಫೀಡರ್ ಕಾಲುವೆಗಳಿಂದ ಒಟ್ಟು 4,950 ಕ್ಯೂಬಿಕ್ ಮೀಟರ್ ಮಣ್ಣನ್ನು ಹೊರತೆಗೆದು ಹಾಕಲಾಗಿದೆ” ಎಂದು ಎಸ್. ಆಶಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

  ಅಂತರ್ಜಲ ಮಟ್ಟ ಹೆಚ್ಚಳವಾಗಿದೆ

  ಅಂತರ್ಜಲ ಮಟ್ಟ ಹೆಚ್ಚಿದ್ದರಿಂದ ಬೋರ್‌ವೆಲ್‍ಗಳಲ್ಲಿ ನೀರಿನ ಪ್ರಮಾಣ ಕೂಡ ಸುಧಾರಣೆಯಾಯಿತು. ಅದರಿಂದಾಗಿ, ರೈತರಿಗೆ ಟೊಮ್ಯಾಟೋಗಳು, ಹಸಿಮೆಣಸಿನಕಾಯಿ ಮತ್ತು ಇತರ ತರಕಾರಿಗಳ ಬೆಳೆಯನ್ನು ಬೆಳೆಯಲು ಸಹಾಯವಾಯಿತು ಎನ್ನುತ್ತಾರೆ ಆಶಾ.

  ಇದನ್ನೂ ಓದಿ: Accident: ಟ್ರಾಫಿಕ್ ಕ್ಲಿಯರ್ ಮಾಡ್ತಿದ್ದ Constableಗೆ ವಾಹನ ಡಿಕ್ಕಿ, ಸಾವು: ಇತ್ತ ಬಸ್-ಕಾರ್ ಮುಖಾಮುಖಿ ಡಿಕ್ಕಿ

  ಕೆರೆಯ ಹೂಳು ತೆಗೆಯುವ ಈ ಕೆಲಸಕ್ಕೆ ರೋಟರಿ ಲೇಕ್‍ಸೈಡ್ ಕೋಲಾರ ಮತ್ತು ಬೆಂಗಳೂರಿನ ಶಾಖೆಗಳು ಅವರಿಗೆ ಬೆಂಬಲ ನೀಡಿವೆ.

  “ಕೆರೆಯಲ್ಲಿ ಸಾಕಷ್ಟು ನೀರು ಇರುವುದರಿಂದ ಇಲ್ಲಿನ ರೈತರು ಎರಡನೇ ಬಾರಿ ಭತ್ತ ಇಳುವರಿಯನ್ನು ಪಡೆದಿದ್ದಾರೆ ಮತ್ತು ಕೆರೆಯ ಕಾರಣದಿಂದ ಅದರ ಹತ್ತಿರ ಮತ್ತು ಸುತ್ತಮುತ್ತಲೂ ಇರುವ ಕುಟುಂಬಗಳು ಸ್ವಾವಲಂಬಿಗಳಾಗುತ್ತವೆ” ಎಂದು ಅಲ್ಲಿನ ಕ್ಷೇತ್ರ ಸಮನ್ವಯ ಅಧಿಕಾರಿ ನಾರಾಯಣ ಸ್ವಾಮಿ ಹೇಳಿದ್ದಾರೆ.
  Published by:Pavana HS
  First published: